ವಿಷಯಕ್ಕೆ ಹೋಗು

ಲೋಕಪಾವನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೋಕಪಾವನಿ ನದಿ ಕಾವೇರಿಯ ಪ್ರಮುಖ ಉಪನದಿಯಾಗಿದೆ, ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕು, ಹೊಣಕೆರೆ ಹೋಬಳಿಯ ಬೋಗಾದಿ ಸಮೀಪದ ಕಳ್ಳಿಗುಂದಿ ಗ್ರಾಮಕ್ಕೆ ಹೊಂದಿಕೊಂಡ್ಡಿರುವ ಅರಣ್ಯದ ಇಳಿಜಾರು ಪ್ರದೇಶವನ್ನು ಲೋಕಪಾವನಿ ನದಿಯ ಉಗಮ ಸ್ಥಾನವೆಂದು ಗುರುತಿಸಲಾಗಿದೆ. ಮಳೆಗಾಲದಷ್ಟೇ ಉಕ್ಕಿ ಹರಿಯುವ ಈ ನದಿ ಸುಖಧರೆ, ತಟ್ಟೆಕೆರೆ, ಆಯಿತನಹಳ್ಳಿ ಗ್ರಾಮಗಳ ಅಸು ಪಾಸಿನಲ್ಲಿ ಹರಿದು,ಕರಿಕ್ಯಾತನಹಳ್ಳಿ ಗ್ರಾಮದಿಂದ 600 ಮೀಟರ್ ದೂರದಲ್ಲಿ 12 ಅಡಿ ಎತ್ತರದಿಂದ ದುಮುಕಿ ನಯನ ಮನೋಹರ ಜಲಪಾತವನು ನಿರ್ಮಿಸಿದ್ದು, ಈ ಜಲಪಾತಕ್ಕೆ ಮೊಸಳೆ ಗುಂಡಿ ಜಲಪಾತವೆಂದು ಕರೆಯುತ್ತಾರೆ. ಇಲ್ಲಿಂದ ನೂರು ಮೀಟರ್ ಸಾಗಿದ ಕೂಡಲೇ, ಬೆಟ್ಟದ ಸಾಲಿನಿಂದ ಹರಿದು ಬರುವ ನೀರಿನ ಹರಿವು ಸಿಳ್ಳೆ ಹಳ್ಳ ಎಂಬ ಹೆಸರಿನಲ್ಲಿ ಲೋಕಪಾವನಿಯನ್ನು ಸೇರಿಕೊಳ್ಳುತ್ತದೆ. ಇಲ್ಲಿಂದ ಮುಂದೆ ತನ್ನ ಹರಿವನ್ನು ಹೆಚ್ಚಿಸಿಕೊಳ್ಳುವ ಈ ನದಿಗೆ ಉಯ್ಯನಹಳ್ಳಿ ಗ್ರಾಮದ ಸಮೀಪ ಆಣೆಕಟ್ಟನ್ನು ನಿರ್ಮಿಸಿದ್ದು. ಇದೇ ಜಾಗಕ್ಕೆ.. ಹಿಂಡಸಹಳ್ಳಿ ಗ್ರಾಮದ ಅರಣ್ಯ ಪ್ರದೇಶದಿಂದ ಹರಿದು ಬರುವ ಸಣ್ಣ ಹೊಳೆಯೊಂದು ತೆಂಕಲ ಹಳ್ಳ ಎಂಬ ಹೆಸರಿನಲ್ಲಿ ಸೇರಿಕೊಳ್ಳುತ್ತದೆ.. ಈ ಆಣೆಕಟ್ಟಿನಲ್ಲಿ ಸಂಗ್ರಹ ವಾಗುವ ನೀರು, ಸುತ್ತ ಮುತ್ತಲಿನ ಗ್ರಾಮಗಳ ಸುಮಾರು 80 ಎಕ್ಟೇರ್ ಪ್ರದೇಶದ ಭತ್ತದ ಬೆಳೆಗೆ ಸಹಕಾರಿಯಾಗಿದ್ದು ವರ್ಷಕ್ಕೆ ಎರಡು ಬೆಳೆಗೆ ನಿರೋದಗಿಸುತ್ತದೆ.. ಈ ಉಯ್ಯನಹಳ್ಳಿ ಅಣೆಕಟ್ಟನ್ನು ಆಯಿತನಹಳ್ಳಿ ಗ್ರಾಮದ ಅಂದಿನ ನಂಬರ್ ಒನ್ ಕಾಂಟಾಕ್ಟರ್ ನಂಜಮೇಸ್ತ್ರಿ ನೇತೃತ್ವದಲ್ಲಿ ನಿರ್ಮಾಣ ವಾಗಿದೆ. ಈ ಅಣೆಕಟ್ಟಿನಿಂದ ಒಂದು ಹೆಗ್ಗಾವಲೆ ಮೂಲಕ ನೀರಿನ ಹರಿವಿಗೆ ವ್ಯವಸ್ಥೆ ಮಾಡಿದ್ದು ಆ ನೀರು ನಾಗಮಂಗಲ ನಗರದ ಸೂಳೆಕೆರೆ, ಅಮ್ಮನ ಕಟ್ಟೆ ಕೆರೆಗಳನ್ನು ತುಂಬಿಸಿ, ಅಲ್ಲಿಂದ ಮುಂದೆ ಜೊತೆಯಾಗುವ ಸಣ್ಣ ಸಣ್ಣ ನೀರಿನ ಹರಿವುಗಳನ್ನು ಕೂಡಿಕೊಂಡು, ಶಿoಸಾ ನದಿಯನ್ನು ಸೇರಿಕೊಳ್ಳುತ್ತದೆ. ಇನ್ನೂ ಉಯ್ಯನ ಹಳ್ಳಿ ಅಣ್ಣೆ ತುಂಬಿದ ನಂತರ ಮುಂದೆ ಹರಿಯುತ್ತ ಸಾಗುವ ಲೋಕಪಾವನಿಗೆ ಅಲ್ಪಹಳ್ಳಿ ಗ್ರಾಮದ ಬಳಿ ಮತ್ತೊಂದು ಆಣೆಕಟ್ಟು ನಿರ್ಮಿಸಿದ್ದು,ಸುಮಾರು 70 ಎಕ್ಟೇರ್ ಪ್ರದೇಶದ ಭತ್ತದ ಬೆಳೆಗೆ ನಿರೋದಗಿಸುತ್ತದೆ. ಹಾಗೆ ಮುಂದೆ ಸಾಗುವ ಈ ನದಿಯ ತಪ್ಪಲಿನಲ್ಲಿರುವ ಸೋಮನಹಳ್ಳಿಯ ಬಳಿ ಗಂಗೆ-ಗೌರಿ ಇಬ್ಬರೂ ಸೌಮ್ಯಕೇಶ್ವರಿ ಮತ್ತು ಕೊಟ್ಟೆ ಮಾರಮ್ಮ ಎಂಬ ಹೆಸರಿನಲ್ಲಿ ಶಕ್ತಿ ದೇವತೆಗಳಾಗಿ ನೆಲೆಸಿದ್ದು,ಅಖಂಡ ಭಕ್ತ ಸಮೋಹವನ್ನು ಹೊಂದಿರುವ ದೇವತೆಗಳಾಗಿದ್ದಾರೆ. ಹಾಗೆ ಮುಂದೆ ಸಾಗುವ ಲೋಕಪಾವನಿಗೆ,ಹೊಣಕೆರೆ ಸಮೀಪದ ಕೌಡಹಳ್ಳಿ ಮತ್ತು ಭೂ ಸಮುದ್ರ ಗ್ರಾಮದ ಬಳಿ ಮತ್ತೊಂದು ಆಣೆಕಟ್ಟು ನಿರ್ಮಿಸಲಾಗಿದೆ.ಹಾಗೆ ಮುಂದಕ್ಕೆ ಹರಿದು ಗಂಗವಾಡಿ, ಆನಕುಪ್ಪೆ.. ಶಂಭುನಹಳ್ಳಿ. ಸಂಗಾಪುರದ ಸಣ್ಣ ಪುಟ್ಟ ಹಳ್ಳ ಕೊಳ್ಳಗಳನ್ನು ಅಪ್ಪಿಕೊಳ್ಳುತ್ತ, ಕೆರೆ, ಕಟ್ಟೆಗಳನ್ನು ತುಂಬಿಸುತ್ತದೆ. ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕಿನ ಹಲವು ಹಳ್ಳಿಗಳ ರೈತರು ಬೇಸಾಯಕ್ಕೆ ಇದೇ ನೀರನ್ನು ಅವಲಂಬಿಸಿದ್ದಾರೆ. ಜನಜಾನುವಾರುಗಳ ಕುಡಿಯುವ ನೀರಿಗೂ ಇದೇ ಮೂಲವಾಗಿತ್ತು. ಜನರ ಆರ್ಥಿಕ ಸ್ಥಿತಿಯೂ ಈ ನದಿಯಲ್ಲಿ ಹರಿವು ನೀರಿನ ಪ್ರಮಾಣವನ್ನು ಆಧರಿಸಿತ್ತು. ನದಿ ನೀರು ಅವಲಂಬಿತ ರೈತರು ತರಕಾರಿ, ತೆಂಗು, ಹುರುಳಿ, ತಗಣಿ, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದರು. ನಾಗಮಂಗಲ ತಾಲೂಕಿನ ಹಲವು ಹಳ್ಳಿಗಳಲ್ಲದೆ,ಪಾಂಡವಪುರ ತಾಲೂಕಿನ ಕಾಳೇನಹಳ್ಳಿ, ವದೇಸಮುದ್ರ, ಕುರಹಟ್ಟಿ, ನುಗ್ಗಹಳ್ಳಿ, ಕನಗನಮರಡಿ, ಚಿಕ್ಕಮರಳಿ, ಪಟ್ಟಸೋಮನಹಳ್ಳಿ, ಚಿಕ್ಕಬ್ಯಾಡರಹಳ್ಳಿ, ತಾಳಶಾಸನ ಶ್ರೀರಂಗಪಟ್ಟಣ ತಾಲೂಕಿನ ಚಿನ್ನಗಿರಿಕೊಪ್ಪಲು, ಕೂಡಲಕುಪ್ಪೆ, ನೆಲ್ಲಮನೆ, ಎಂ.ಶಟ್ಟಹಳ್ಳಿ ಗ್ರಾಮದ ರೈತರು ನದಿಗೆ ಪಂಪ್‌ಸೆಟ್‌ ಹಾಕಿಕೊಂಡು ಬೇಸಾಯ ಮಾಡುತ್ತಿದ್ದರು. ಈಗ ನದಿ ಬತ್ತಿರುವುದರಿಂದ ಈ ಭಾಗದ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ನೀರಿಲ್ಲದ ಕಾರಣ ಬೆಳೆ ಬೆಳೆಯದ ಜಮೀನುಗಳು ತೆಕ್ಕಲು ಬಿದ್ದಿವೆ. ರೈತರು ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ಎದುರಾಗಿದೆ. ಇದರಿಂದ ರೈತರ ಆರ್ಥಿಕ ಸ್ಥಿತಿಯೂ ಬುಡ ಮೇಲಾಗಿದೆ.ಈ ಲೋಕಪಾವನಿ ನದಿಗೆ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಬಳಿ 1964ರಲ್ಲಿ ಚೆಕ್‌ ಡ್ಯಾಂ ನಿರ್ಮಿಸಲಾಗಿದ್ದು, 100 ಕ್ಯೂಸೆಕ್‌ ನೀರನ್ನು ಸಮೀಪದಲ್ಲೇ ಹಾದು ಹೋಗಿರುವ ಸಿಡಿಎಸ್‌ ನಾಲೆಗೆ ಹರಿಯ ಬಿಟ್ಟು ಆ ನೀರಿನ ಮೂಲಕ ಸುಮಾರು 500 ಎಕ್ಟೇರ್‌ಗೂ ಹೆಚ್ಚು ಭೂಪ್ರದೇಶಕ್ಕೆ ನೀರುಣಿಸಲಾಗುತ್ತಿತ್ತು. ಮುಂದಕ್ಕೆ ಹರಿಯುತ್ತ, ಕಿರಂಗೂರಿನ ಮೂಲಕ ಹರಿದು ಕರೀಘಟ್ಟದ ಬಳಿ ಕಾವೇರಿ ನದಿಯನ್ನು ಸೇರಿಕೊಳ್ಳುವುದರ ಮೂಲಕ ಕೊನೆಗೂಳ್ಳುತ್ತದೆ. ಮಳೆಗಾಲದಲ್ಲಿ ಉಕ್ಕರಿಯುತ್ತಿದ ಈ ನದಿ ಸುಮಾರು ಹದಿನೈದು ವರ್ಷಗಳಿಂದಿಚೆಗೆ ಮಳೆಯ ಅಭಾವದಿಂದಾಗಿ ಬತ್ತಿಹೋಗಿದೆ.