ಲೆಗ್ಗಿಂಗ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೆಗ್ಗಿಂಗ್ ಗಳು ಹಲವಾರುರೀತಿಯ ಕಾಲಿನ ಹೊದಿಕೆಯನ್ನು ಉಲ್ಲೇಖಿಸುತ್ತವೆ. 1960 ರದಶಕದಆಧುನಿಕ ಬಳಕೆಯಿಂದ ಕಾಲುಗಳ ಮೇಲೆ ಧರಿಸುವ ಸ್ಥಿತಿಸ್ಥಾಪಕ ನಿಕಟವಾದ ಉಡುಪುಗಳನ್ನು ಮಹಿಳೆಯರ ಲೆಗ್‍ವಾರ್ಮ್‍ಗಳು ಅಥವಾ ಬಿಗಿಯುಡುಪುಗಳು ಎಂದುಉಲ್ಲೇಖಿಸಲಾಗಿದೆ.ಸಾಮಾನ್ಯವಾಗಿಇದು ಬಟ್ಟೆ ಅಥವಾ ತೊಗಲಿನಿಂದ ಮಾಡಲ್ಪಟ್ಟಿದೆ.ಅದು ಕಾಲಿನ ಸುತ್ತಲೂ ಕಣಕಾಲಿನವರೆಗೆ ಮುಚ್ಚಲ್ಪಡುತ್ತದೆ.19 ನೇ ಶತಮಾನದಲ್ಲಿ ಲೆಗ್ಗಿಂಗ್ಸ್ ಗಳು ಜಾಕೆಟ್‍ಜೊತೆಗೆ ಸರಿಹೊಂದುತ್ತಿದ್ದವು.ಹಾಗೆಯೇ ಚರ್ಮದ ಹಾಗು ಉಣ್ಣೆಯಿಂದ ಮಾಡಿದ ಲೆಗ್ ಹೊದಿಕೆಗಳನ್ನು ಸೈನಿಕರು ಆ ಕಾಲದಲ್ಲಿಧರಿಸುವುದು ವಾಡಿಕೆಯಾಗಿತ್ತು.ಲೆಗ್ಗಿಂಗ್ಸ್ ಗಳು 1960 ರದಶಕದಲ್ಲಿ ಮಹಿಳೆಯರ ಪ್ರಮುಖ ವಸ್ತ್ರ ಶೈಲಿಯಾಗಿ ರೂಪುಗೊಂಡಿತು.ನೃತ್ಯಗಾರರೂ ಸಹ ಇದನ್ನುಉಪಯೋಗಿಸಲು ಪ್ರಾರಂಭಿಸಿದರು. ಲಿಕ್ರಾ ಸಿಂಥೆಟಿಕ್ ಫೈಬರ್‍ಅನ್ನು ಇದರ ತಯಾರಿಕೆಯಲ್ಲಿ ಅಳವಡಿಸುವುದರಿಂದ ಅಂತೆಯೇಏರೋಬಿಕ್ಸ್ ಜನಪ್ರೀಯತೆಕೂಡ ಹೆಚ್ಚಾಗುವುದರೊಂದಿಗೆ ಲೆಗ್ಗಿಂಗ್ಸ್ ಗಳ ಜನಪ್ರೀಯತೆ ಹೆಚ್ಚಾಗುತ್ತ ಸಾಗಿತು. 1970-80 ರದಶಕದಲ್ಲಿ ಲೆಗ್ಗಿಂಗ್ ಗಳು ತಮ್ಮ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡವು. ಇಷ್ಟೇ ಅಲ್ಲದೆಅಂತಿಮವಾಗಿ ಸ್ಟ್ರೀಟ್ ವೇರ್‍ಗೆ ದಾರಿ ಮಾಡಿಕೊಟ್ಟವು. ಇವುಗಳು 2010 ರ ನಂತರ ಕ್ರೀಡಾಕೂಟಗಳಲ್ಲೂ ಬಳಕೆಯಾಗಲಾರಂಭಿಸಿದವು. ವಿವಿಧ ಸ್ಪರ್ಧೆಗಳಲ್ಲಿ ಲೆಗ್ಗಿಂಗ್ ಧರಿಸಿ ಮಹಿಳೆಯರು ಭಾಗವಹಿಸಲು ಪ್ರಾರಂಭಿಸಿದರು. ಯುನೈಟೆಡ್ ಸ್ಟೇಟ್‍ನಲ್ಲಿಇದೊಂದು ವಿವಾದಾತ್ಮಕ ಸಾಮಾಜಿಕರೂಢಿಯಾಗಿ ಮಾರ್ಪಾಡಾಯಿತು.[೧]

ಇತಿಹಾಸ[ಬದಲಾಯಿಸಿ]

ಸ್ಥಳೀಯ ಅಮೇರಿಕನ್ನರಲ್ಲಿ ವಿವಿದ ಹೆಸರುಗಳಿಂದ ಇದು ಗುರುತಿಸಲ್ಪಡುತ್ತಿತ್ತು.ಶತಮಾನಗಳಿಂದಲೂ ಪುರುಷ ಹಾಗು ಮಹಿಳೆಯರಿಂದ ಉಷ್ಣತೆ ಮತ್ತುರಕ್ಷಣೆಗಾಗಿ ಧರಿಸುತ್ತಿದ್ದರು. 13 ರಿಂದ 16 ನೇಯ ಶತಮಾನದವರೆಗೆ ಯುರೋಪಿನಲ್ಲಿ ಪುರುಷರು ಧರಿಸುವ ಪ್ರತ್ಯೇಕ ಮೆದುಗೊಳವೆ ಲೆಗ್ಗಿಂಗ್ ಗಳ ಒಂದು ರೂಪವಾಗಿದ್ದು , ಸ್ಕಾಟಿಶ್ ಹೈಲ್ಯಾಂಡ್ಸ್ ನದ್ದಾಗಿರುತ್ತದೆ. ಬಸ್ಕಿನ್ ಚರ್ಮದ ಪ್ರತ್ಯೇಕ ಲೆಗ್ಗಿಂಗ್ ಗಳನ್ನು ಕೆಲವು ಸ್ಥಳೀಯ ಅಮೇರಿಕನ್ನರು ಧರಿಸುತ್ತಿದ್ದರು.ಇವುಗಳನ್ನು ಕೆಲವು ಲಾಂಗ್ ಹಂಟರ್ಸ್, ಫ್ರೆಂಚ್ ತುಪ್ಪಳದ ಟ್ರ್ಯಾಪ್‍ಗಳು ಮತ್ತು ನಂತರ ಪರ್ವತ ಪುರುಷರು ಅಳವಡಿಸಿಕೊಂಡರು.ಬಸ್ಕಿನ್ ಲೆಗ್ಗಿಂಗ್ ಗಳು ಹೆಚ್ಚಾಗಿ ಚರ್ಮದಿಂದ ತಯಾರಾದವುಗಳಾಗಿರುತ್ತಿದ್ದವು.ಆದರೆಇಂದು ಸಾಮಾನ್ಯವಾಗಿ ಬಳಸುವ ಲೆಗ್ಗಿಂಗ್‍ಗಳು ಹೊಳಪಿನ ಕಾಟನ್ ಹಾಗು ಉಣ್ಣೆಯಿಂದ ತಯಾರಿಸಲ್ಪಟ್ಟಿದ್ದಾಗಿದೆ.ಇದನ್ನುಕೌಬಾಯ್ಸ್ ಗಳು ಸವಾರಿಗೆ ಧರಿಸುತ್ತಿದ್ದರು.ಬೇಟೆಗಾರರು ಸಹ ಬಸ್ಕಿನ್ ಲೆಗ್ಗಿಂಗ್ ಗಳನ್ನು ಕಾಡಿನಲ್ಲಿಕೀಟ ಮತ್ತು ಹಾವುಗಳಿಂದ ರಕ್ಷಿಸಿಕೊಳ್ಳಲು ಉಪಯೋಗಿಸುತ್ತಿದ್ದರು. ಅನೇಕ ಪ್ರದೇಶಗಳಲ್ಲಿ ಮುಖ್ಯವಾಗಿರಷ್ಯಾಅಥವಾ ಕೊರಿಯಾಗಳಂತಹ ದೇಶಗಳಲ್ಲಿ ಪುರುಷರು ಹಾಗು ಮಹಿಳೆಯರು ಉಣ್ಣೆಯ ಲೆಗ್ಗಿಂಗ್ ಗಳನ್ನು ಆಧುನಿಕಕಾಲದಲ್ಲೂ ಧರಿಸುವುದನ್ನು ಮುಂದುವರೆಸಿದರು.ಉಷ್ಣತೆ ಹೆಚ್ಚಾದಾಗ ಬರೀ ಹೊರಪದರವನ್ನಷ್ಟೇ ಧರಿಸುತ್ತಿದ್ದರು.19 ನೇ ಶತಮಾನದ ಮಧ್ಯಭಾಗದಲ್ಲಿ ಮಹಿಳೆಯರು ಹಾಗು ಹುಡುಗಿಯರು ಧರಿಸುತ್ತಿದ್ದ ಲಿನಿನ್ ಪ್ಯಾಂಟ್‍ಲೆಟ್‍ಗಳು ಲೆಗ್ಗಿಂಗ್‍ನದ್ದೇಒಂದು ಸ್ವರೂಪವಾಗಿತ್ತು.ಅವು ಎರಡು ಪ್ರತ್ಯೇಕ ಉಡುಪುಗಳಾಗಿದ್ದವು.ಲೆಗ್ಗಿಂಗ್ ಗಳು 1960 ರದಶಕದಲ್ಲಿ ಫ್ಯಾಶನ್ನಿನಒಂದು ಭಾಗವಾಗಿ ಹೋಯಿತು.ಜಗತ್ತಿನಾದ್ಯಂತಇದುತನ್ನಛಾಪನ್ನು ಮೂಡಿಸಿತು. ಲೆಗ್ಗಿಂಗ್ ಗಳು ಕ್ಯಾಪ್ರಿ ಪ್ಯಾಂಟ್ಗಳಿಗೆ ಸಮಾನವಾದವುಗಳಾದರೂ ಸಹ ಸ್ವಲ್ಪ ಬಿಗಿಯಾಗಿರುತ್ತವೆ.

ಸೇನಾ ಬಳಕೆ[ಬದಲಾಯಿಸಿ]

19ನೇ ಶತಮಾನದಉತ್ತರಾರ್ಧದಿಂದ ವಿವಿಧ ರಾಷ್ಟ್ರಗಳ ಸೈನಿಕರು, ವಿಶೇಷವಾಗಿ ಪದಾತಿ ದಳಗಳು ತಮ್ಮ ಕಾಳುಗಳನ್ನು ರಕ್ಷಿಸಿಕೊಳ್ಳಲು ಲೆಗ್ಗಿಂಗ್ ಗಳನ್ನು ಧರಿಸಿದ್ದರು.ಕೊಳಕು ಮಣ್ಣು ಹಾಗು ಧೂಳನ್ನು ತಮ್ಮ ಶೂ ಇಒಳಕ್ಕೆ ಪ್ರವೇಶಿಸದಂತೆ ತಡೆಯಲು ಲೆಗ್ಗಿಂಗ್ ಗಳನ್ನು ಬಳಸುತ್ತಿದ್ದರು.ಮೊದ ಮೊದಲಿಗೆ ಲೆಗ್ಗಿಂಗ್ ಗಳೆಂದರೆ ದಪ್ಪ ಕಟ್ಟುಗಳಂತೆ ಕಾಣುವಉಣ್ನೆಯಿಂದ ತಯಾರಿಸಿದ ಪ್ಯಾಂಟುಗಳಾಗಿದ್ದವು.ನಂತರ ಕೆಲವು ಸೇನೆಗಳು ಲೆಗ್ಗಿಂಗ್ ಗಳಿಗೆ ಬಕಲ್ಗಳು ಹಾಗು ಗುಂಡಿಯನ್ನು ಜೋಡಿಸಿದವು.ನಂತರಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯೋಧರ ಬಳಿ ಉನ್ನತಜಂಪ್ ಬೂಟುಗಳು ಉಪಯೋಗಿಸಲ್ಪಡಲು ಆರಂಭವಾದ ನಂತರ ಲೆಗ್ಗಿಂಗ್ ಗಳು ಮರೆಯಾಗಲಾರಂಭಿಸಿದವು.ಅದಾಗ್ಯೂಯುನೈಟೆಡ್ ಸ್ಟೇಟ್ಸ್ ಮರೈನ್‍ಕಾಪ್ಸ್ ಯುದ್ಧದುದ್ದಕ್ಕೂ ಲೆಗ್ಗಿಂಗ್ಸ್‍ಅನ್ನು ಮುಂದುವರಿಸಿಕೊಂಡು ಬಂದವು.ಕೊರಿಯಾ ಹಾಗು ಚೀನಾದ ಸೇನಾಪಡೆಗಳೂ ಇದನ್ನು ಉಳಿಸಿಕೊಂಡು ಬಂದವು.ಹಾಗಾಗಿಯೇ ಅವರನ್ನುಯೆಲ್ಲೋ ಲೆಗ್ ಪಡೆಗಳೆಂದು ಉಲ್ಲೇಖಿಸಲಾಗಿದೆ.ಸೇನೆಯಲ್ಲಿ ಬಳಕೆಯಾಗುತ್ತಿದ್ದ ಲೆಗ್ಗಿಂಗ್ ಗಳು ಸಾಮಾನ್ಯವಾಗಿ ಪೇಟೆಂಟ್‍ಚರ್ಮದಿಂದ ತಯಾರಿಸಲ್ಪಡುತ್ತಿತ್ತು.[೨]

ಆಧುನಿಕ ಫ್ಯಾಶನ್[ಬದಲಾಯಿಸಿ]

ಸಾಮಾನ್ಯವಾಗಿ ನೈಲಾನ್-ಲಿಕ್ರಾ ಮಿಶ್ರಣದಿಂದ (90% ನೈಲಾನ್, 10% ಲಿಕ್ರಾ) ತಯಾರಿಸಲ್ಪಡುವ ಲೆಗ್ಗಿಂಗ್ ಗಳನ್ನು ವ್ಯಾಯಾಮದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಧರಿಸಲಾಗುತ್ತದೆ.ಈ ನೈಲಾನ್ ಲಿಕ್ರಾ ಲೆಗ್ಗಿಂಗ್ ಗಳನ್ನು ಬಿಗಿಯುಡುಪು ಎಂದೂ ಕರೆಯಲಾಗುತ್ತದೆ.ಕೆಲವರು ಇದನ್ನು ಅಥ್ಲೆಟಿಕ್ ಉಡುಗೆಗಳಾಗಿಯೂ ಉಪಯೋಗಿಸಲು ಪ್ರಾರಂಭಿಸಿದ್ದಾರೆ.ಇತ್ತೀಚೆಗೆ ಹತ್ತಿ-ಲಿಕ್ರಾಅಥವಾ ಹತ್ತಿ-ಪಾಲಿಯೆಸ್ಟರ್-ಲಿಕ್ರಾ ಸಂಯೋಜನೆಯಿಂದ ಮಾಡಿದ ಲೆಗ್ಗಿಂಗ್ ಗಳನ್ನು ಫ್ಯಾಶನ್ನಾಗಿ ಧರಿಸಲಾಗುತ್ತದೆ.ಕಾಟನ್-ಲಿಕ್ರಾ ಲೆಗ್ಗಿಂಗ್ ಗಳು ಅನೇಕ ಬಣ್ಣಗಳು, ಮುದ್ರಿತ ವಿನ್ಯಾಸಗಳಲ್ಲಿ ಲಭ್ಯವಿದೆ.ಆದರೆಕಪ್ಪು ಹಾಗು ಬೂದು ಬಣ್ಣದ ವಿವಿಧಛಾಯೆಯ ಲೆಗ್ಗಿಂಗ್ ಗಳನ್ನು ಹೆಚ್ಚಾಗಿ ಧರಿಸುತ್ತಾರೆ.ಅಪಾರದರ್ಶಕವಾದ ಲೆಗ್ಗಿಂಗ್ಸ್ ಗಳು ಸಹ ಮಹಿಳೆಯರ ನೆಚ್ಚಿನಆಯ್ಕೆಯಾಗಿದೆ.ಸ್ಕರ್ಟ್ ಗಳ ಜೊತೆಗೆ ಧರಿಸುತ್ತಾರೆ.ಮಿನಿ ಸ್ಕರ್ಟ್‍ಗಳೊಂದಿಗೆ ಲೆಗ್ಗಿಂಗ್ಸ್‍ ಧರಿಸುವುದುಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಹದಿಹರೆಯದವರಷ್ಟೇಅಲ್ಲ ಎಲ್ಲ ವಯಸ್ಸಿನವರೂ ಕೂಡಧರಿಸಲು ಆರಂಭಿಸಿದ್ದಾರೆ.[೩] 2005 ರಿಂದ ಲೆಗ್ಗಿಂಗ್ ಗಳು ಹೆಚ್ಚಿನ ಫ್ಯಾಶನ್ ಆಗಿ ಮಾರ್ಪಾಡು ಹೊಂದಿ ಮುಖ್ಯವಾಗಿ ಇಂಡೀ ಸಂಸ್ಕತಿಯಲ್ಲಿ ತನ್ನ ಪುನರಾಗಮನವನ್ನು ಮಾಡಿತು.ಇದರ ಪರಿಣಾಮವಾಗಿ ಈಗ ಲೆಗ್ಗಿಂಗ್ ಗಳು ಚಿತ್ರಗಳಲ್ಲೂ ಬಳಕೆಯಲ್ಲಿ ಬರಲು ಪ್ರಾರಂಭವಾಗಿದೆ.ಲೆಗ್ಗಿಂಗ್‍ಕೂಡ ಶಾರ್ಟ್ ಸೈಜಿನಲ್ಲಿ ಬರಲು ಆರಂಭವಾಗಿದೆ.ಪ್ರಮುಖವಾಗಿ ಈ ಶಾರ್ಟ್ ಲೆಗ್ಗಿಂಗ್ ಗಳು ಸ್ಕರ್ಟ್ ನ ಅಡಿಯಲ್ಲಿ ಬಳಸುವ ಫ್ಯಾಶನ್‍ ಐಟಮ್ ಆಗಿ ಪ್ರಸಿದ್ಧಿಯನ್ನು ಪಡೆದಿವೆ. ಇದು ಮಹಿಳೆಯರ ದೇಹ ಪ್ರದರ್ಶನವನ್ನೂತಡೆಯುವಲ್ಲಿ ಸಫಲವಾಯಿತು.ಬಿಗಿಯಾದ ಪ್ಯಾಂಟ್ ಗಳ ಪರ್ಯಾಯವಾಗಿ ಲೆಗ್ಗಿಂಗ್ ಗಳು ತಮ್ಮ ಸ್ತಾನವನ್ನು ಭದ್ರಗೊಳಿಸುತ್ತಲಿವೆ.

ಉಲ್ಲೇಖಗಳು[ಬದಲಾಯಿಸಿ]

  1. http://www.chinadaily.com.cn/lifestyle/2007-01/22/content_789289.htm
  2. https://www.merriam-webster.com/words-at-play/athleisure-words-were-watching
  3. http://fortune.com/2017/03/27/yoga-pants-feminist-fashion-trend/