ವಿಷಯಕ್ಕೆ ಹೋಗು

ಲೀಲಾ ಪ್ರಕಾಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಗ ಮೈಸೂರಿನ 'ಜ.ಎಸ್‌.ಎಸ್ ಆಯುರ್ವೇದೀಯ ಮಹಾವಿದ್ಯಾಲಯ,' ದಲ್ಲಿ ಹಿರಿಯ ಸಂಸ್ಕೃತ ಉಪನ್ಯಾಸಕಿಯಾಗಿರುವ ಲೇಖಕಿ, ಡಾ. ಕೆ. ಲೀಲಾ ಪ್ರಕಾಶ್ ಅವರು ಮನಸ್‌ಶಾಸ್ತ್ರವನ್ನು ಐಚ್ಛಿಕವಾಗಿ ತೆಗೆದುಕೊಂಡು ತಮ್ಮ ಬಿ.ಏ ಪದವಿ ಪರೀಕ್ಷೆಯಲ್ಲಿ ಏಳನೇ ರ್‍ಯಾಂಕ್‌ನ್ನೂ, ಎಂ.ಎ ನಲ್ಲಿ ಎರಡು ಚಿನ್ನದ ಪದಕಗಳನ್ನೂ, ನಗದು ಬಹುಮಾನವನ್ನೂ ಗಳಿಸಿ ಉತ್ತೀರ್ಣರಾದವರು. ಇವರು ಸಂಸ್ಕೃತದಲ್ಲಿ 'ರುದ್ರಟನ ಅಲಂಕಾರಶಾಸ್ತ್ರದ ಅಧ್ಯಯನ,' ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದರು. ಇದಕ್ಕಾಗಿ ಮಂಡಿಸಿದ ಇವರ ಸ೦ಪ್ರಬಂಧ ಶಿಕಾಗಾದ ಪ್ರಸಿದ್ಧ ಸಂಸ್ಕೃತ ವಿದ್ವಾಂಸ, 'ಪ್ರೊ. ಶೆಲ್ಡನ್ ಪೋಲಾಕ್,' ಅವರಿಂದ ಮೆಚ್ಚುಗೆ ಪಡೆಯಿತು. 'ಡಾ.ಕೆ ಕೃಷ್ಣಮೂರ್ತಿಗಳ ಚಿನ್ನದ ಪದಕ,' ಮತ್ತು 'ಸಿ.ಆರ್. ನರಸಿಂಹ ಶಾಸ್ತ್ರಿಗಳ ಪಾರಿತೋಷಕ,' ವನ್ನೂ ಅದು ಗಳಿಸಿತು.

2008 ರ, ೫ ನೇ, 'ಶಿಕಾಗೋ-ವಿಶ್ವಕನ್ನಡ ಸಮ್ಮೇಳನ,' ದಲ್ಲಿ, ಡಾ. ಲೀಲಾರವರ ಪ್ರಬಂಧವನ್ನು ಮಂಡಿಸಲಾಗಿತ್ತು

[ಬದಲಾಯಿಸಿ]

ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಡಾ. ಕೆ ಕೃಷ್ಣಮೂರ್ತಿಗಳ ಮಗಳಾದ ಇವರು, ತಮ್ಮ ತಂದೆಯವರ ಹೆಸರಿನಲ್ಲಿ ಒಂದು ಸಂಶೋಧನ ಪ್ರತಿಷ್ಠಾನವನ್ನು ಸ್ಥಾಪಿಸಿ, ಆಸಕ್ತರ ಸಂಸ್ಕೃತದ ಅಧ್ಯಯನಕ್ಕೆ ಸೂಕ್ತ ವಾತಾವರಣವನ್ನು ಮೈಸೂರಿನಲ್ಲಿ ಕಲ್ಪಿಸಲು ತೊಡಗಿದ್ದಾರೆ. ಡಾ.ಲೀಲಾ ಅವರ ಅನೇಕ ಸಂಶೋಧನ ವಿಮರ್ಶಾ ಲೇಖನಗಳು ನಿಯತ ಕಾಲಿಕಗಳಲ್ಲಿ, ಸಂಭಾವನಾ ಗ್ರಂಥಗಳಲ್ಲಿ ಪ್ರಕಟಗೊಂಡಿವೆ. 2008 ರ ಶಿಕಾಗೋ ವಿಶ್ವಕನ್ನಡ ಸಮ್ಮೇಳನದಲ್ಲಿ ಇವರ ಪ್ರಬಂಧ, ಸಂಕಲನ ‘ವಸ್ತುವೈವಿಧ್ಯ' ಮತ್ತು ಸಂಸ್ಕೃತ ಕಾವ್ಯಗಳ ಸಿಂಹಾವಲೋಕನ ‘ಕವಿ ಕಾವ್ಯ ವಿವೇಚನೆ' ಪುಸ್ತಕಗಳೊಂದಿಗೆ ಈ ಕಥಾ ಸಂಕಲನ ‘ಅನಿವಾಸಿ ಹಾಗೂ ಇತರ ಕಥೆಗಳು' ಸಹ ವಿಶ್ವಾರ್ಪಣೆಗೊಂಡಿತು.

ಪುಸ್ತಕ ವಿವರ:

  • 'ಅನಿವಾಸಿ ಹಾಗೂ ಇತರ ಕಥೆಗಳು' ಲೇಖಕಿ: ಡಾ| ಲೀಲಾ ಪ್ರಕಾಶ್; ವಿದ್ಯುತ್ ಪ್ರಕಾಶನ, ಪುಟಗಳು 14+104]