ಲೀಲಾಧರ್ ಬೈಕಂಪಾಡಿ

ವಿಕಿಪೀಡಿಯ ಇಂದ
Jump to navigation Jump to search

ಲೀಲಾಧರ್ ಬೈಕಂಪಾಡಿಯವರು [೧] ಸುಮಾರು ೨ ದಶಕಗಳಿಂದ ಬೆಹ್ರೈನ್ ನಲ್ಲಿ ಕೆಲಸಮಾಡುತ್ತಿದ್ದಾರೆ. ಅವರು ಒಬ್ಬ ಸಮರ್ಥ ಸಂಘಟಕ, ಸಮಾಜ ಸೇವಾ ಕಾರ್ಯಕರ್ತ, ಪ್ರಶಸ್ತಿ ವಿಜೇತ, ರಂಗ ಕಲಾವಿದ, ಯುವ ಸಾಹಿತಿ, ಸಮಾಜಮುಖಿ ಚಿಂತನೆಯ ತಥಾ ಪ್ರಗತಿಪರ ವಿಚಾರಧಾರೆಯ ಯುವ ಸಾಮಾಜಿಕ ಮುಂದಾಳುವಾಗಿ ನಾಡಿನ ಮತ್ತು ಹೊರನಾಡಿನ ತುಳು ಕನ್ನಡಿಗರು ಹಾಗೂ ಭಾರತೀಯರ ಮಧ್ಯೆ ಬಹಳವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ

ವಿದ್ಯಾಭ್ಯಾಸ[ಬದಲಾಯಿಸಿ]

ದಕ್ಷಿಣ ಕನ್ನಡದ ಮಂಗಳೂರು, ಮುಂಬಯಿ, ಬೆಂಗಳೂರಿನಲ್ಲಿ ಎಮ್.ಕಾಮ್ ಮತ್ತು ಎಮ್.ಬಿ.ಎ ಪದವಿಗಳನ್ನು ಗಳಿಸಿದರು. ಸುಮಾರು ೧೮ ವರ್ಷಗಳಿಂದ ಯುನೈಟೆಡ್ ಕಿಂಗ್ಡಮ್ ಹಾಗೂ ಬೆಹ್ತರೇನ್ ನಲ್ಲಿ ತಮ್ಮ ಬಿಜಿನೆಸ್ ಗಾಗಿ ವಾಸಮಾಡುತ್ತಿದ್ದಾರೆ. ಕರ್ನಾಟಕ ಸರಕಾರದ ಅಧೀನ ಸ್ವಾಯತ್ತ ಸಂಸ್ಥೆಯಾದ 'ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ'ಯ ನಿರ್ದೇಶನ ಮತ್ತು ಸಹಕಾರದೊಂದಿಗೆ ಬಹ್ರೈನ್ ನೆಲದಲ್ಲಿ ಅನಿವಾಸಿ ಕನ್ನಡಿಗರ ಹಿತರಕ್ಷಣೆ ಮತ್ತು ಕಲ್ಯಾಣಕ್ಕಾಗಿ ನಿರ್ದಿಷ್ಟವಾದ ಕಾನೂನುಬದ್ಧ ಕಾರ್ಯವ್ಯಾಪ್ತಿ ಮತ್ತು ಅಧಿಕಾರಗಳೊಂದಿಗೆ ಸೇವೆ ಸಲ್ಲಿಸುತ್ತಿದೆ. ಈಗ ಇದರ ಶಾಖಾ ದರ್ಜೆಯ ನೂತನ ಅಧಿಕೃತ ಸೇವಾ ಸಂಸ್ಥೆ 'ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ - ಬಹ್ರೈನ್' ಇದರ ಅಧ್ಯಕ್ಷರಾಗಿ ,[೨] ಅನಿವಾಸಿ ಭಾರತೀಯ, ಪ್ರಶಸ್ತಿ ವಿಜೇತ ಸಾಮಾಜಿಕ ಕಾರ್ಯಕರ್ತ, ತುಳು, ಕನ್ನಡ ಸಮುದಾಯದ ಮುಂದಾಳು ಲೀಲಾಧರ್ ಬೈಕಂಪಾಡಿಯವರು ನೇಮಕಗೊಂಡಿದ್ದಾರೆ.

೨೦೧೬ ರ (AKKA) ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ[ಬದಲಾಯಿಸಿ]

 1. ೨೦೧೬ ರಲ್ಲಿ ಅಮೆರಿಕದ ಅಟ್ಲಾಂಟಿಕ್ ನಗರದ ಕನ್ವೆಂಶನ್ ಸೆಂಟರ್ ನಲ್ಲಿ ೩ ದಿನಗಳ ಕಾಲ ಆಯೋಜಿಸಲ್ಪಟ್ಟ 'ಅಕ್ಕಾ ವಿಶ್ವ ಕನ್ನಡಿಗರ ಸಮ್ಮೇಳನ'[೩]ದಲ್ಲಿ ಪಾಲ್ಗೊಂಡಿದ್ದರು.

ಬಹ್ರೈನ್ ನಲ್ಲಿ[ಬದಲಾಯಿಸಿ]

 1. ಇಂಡಿಯನ್ ಕ್ಲಬ್,
 2. ಕರ್ನಾಟಕ ಸೋಶಿಯಲ್ ಕ್ಲಬ್,
 3. ಮಹಾರಾಷ್ಟ್ರ ಕಲ್ಚರಲ್ ಸೊಸೈಟಿ,
 4. ಮೊಗವೀರ್ಸ್ ಬಹ್ರೈನ್ ಮುಂತಾದ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.
 5. ನಾಡು ಮತ್ತು ಹೊರನಾಡಿನಲ್ಲಿ ಕೆಲವು ಸಾಮಾಜಿಕ ಸಂಘಟನೆಗಳ ಸ್ಥಾಪನೆಯ ರೂವಾರಿಯೂ ಆಗಿದ್ದಾರೆ.
 6. ತನ್ನದೇ ಸಂಯೋಜಕತ್ವದ ಕಾಂಚನ್ ಪ್ರತಿಷ್ಠಾನದ ಮೂಲಕವೂ, ವೈವಿಧ್ಯಮಯ ಜನಪರ ಸೇವೆ ಮತ್ತು ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ

ಲೀಲಾಧರ್ ಬೈಕಂಪಾಡಿಯವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

 1. ರಾಷ್ಟ್ರೀಯ ಭೂಷಣ ಪ್ರಶಸ್ತಿ,
 2. ಸಮಾಜ ರತ್ನ ಪ್ರಶಸ್ತಿ,
 3. ರಾಷ್ಟ್ರೀಯ ಏಕತಾ ಪ್ರಶಸ್ತಿ,
 4. ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ,
 5. ಕರ್ನಾಟಕ ಸೌರಭ ಪ್ರಶಸ್ತಿ,
 6. ಸೃಷ್ಟಿ ಕಲಾಶ್ರೀ ಪ್ರಶಸ್ತಿ,
 7. ಮುಂಬೈ ವೀಶ್ವವಿದ್ಯಾಲಯದ ಸ್ವರ್ಣ ಪದಕ ಗೌರವ ಪುರಸ್ಕಾರ,
 8. 'ಪ್ರೈಡ್ ಆಫ್ ಏಷ್ಯಾ ಅಂತಾರಾಷ್ಟ್ರೀಯ ಪ್ರಶಸ್ತಿ', ಏಷ್ಯಾ ಅಂತಾರಾಷ್ಟ್ರೀಯ ಪ್ರಶಸ್ತಿ, ಬ್ಯಾಂಕಾಕ್ ನಗರದಲ್ಲಿ ಜರುಗಿದ ಗ್ಲೋಬಲ್ ಅಚಿವರ್ಸ್ ಫಂಡೇಷನ್ ಶೃಮ್ಗ ಸಭೆಯಲ್ಲಿ ಪ್ರದಾನಮಾಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

 1. en.wikipedia.org/wiki/Baikampady
 2. ಕನ್ನಡಿಗ ವರ್ಲ್ಡ್, ಏಪ್ರಿಲ್ ೨೬, ೨೦೧೮-ಗಲ್ಫ್ ರಿಪೋರ್ಟರ್, ಪ್ರತಿಷ್ಠಿತ ಅನಿವಾಸಿ ಭಾರತೀಯ ಸಮಿತಿ ಬಹ್ರೈನ ಅಧ್ಯಕ್ಷರಾಗಿ ಲೀಲಾಧರ್ ಬೈಕಂಪಾಡಿ ನೇಮಕ
 3. www.kemmannu.comಕೆಮ್ಮಣ್ಣು ನ್ಯೂಸ್ ವರ್ಕ್]