ವಿಷಯಕ್ಕೆ ಹೋಗು

ಲಿಂಕಿಂಗ್ ರೋಡ್ ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಿಂಕಿಂಗ್ ರೋಡ್ [] ಎನ್ನುವ ಹೆಸರಿನ ಜನಪ್ರಿಯ ಶಾಪಿಂಗ್ ತಾಣಕ್ಕೆ ಮುಂಬಯಿ ಮಹಾಪಾಲಿಕೆಯವರು ವಿಠಲ್ ಭಾಯ್ ಪಟೇಲ್ ರೋಡ್ ಎಂದು ಹೆಸರಿಟ್ಟಿದ್ದಾರೆ. ಆದರೆ ಅಲ್ಲಿನ ನಿವಾಸಿಗಳಿಗೆ ಹಿಂದಿನ ಹೆಸರೇ ಪ್ರಿಯ. ಮೊದಲಿದ್ದ ನಿಜವಾದ ಹೆಸರು ದಾದಾಭಾಯ್ ನವರೋಜಿ ರಸ್ತೆ ಎಂದು. ಮುಂಬಯಿನ ಬಾಂದ್ರ ಟಾಕೀಸ್ ನಿಂದ ಶಾಂತಿ ಆಶ್ರಮಕ್ಕೆ ಹೋಗಬೇಕಾದರೆ ಲಿಂಕಿಂಗ್ ರೋಡ್ ಮುಖಾಂತರವೇ ಹೋಗಬೇಕು. ಲಿಂಕಿಂಗ್ ರೋಡ್ ಶಾಪಿಂಗ್ ಮಾಡಲು ಹೇಳಿಮಾಡಿಸಿದ ತಾಣವಾಗಿದೆ. ರಾಷ್ಟ್ರದ ಎಲ್ಲೆಲ್ಲಿಂದ ಗ್ರಾಹಕರು ಗುಂಪುಗುಂಪಾಗಿ ಪದಾರ್ಥಗಳನ್ನು ಶಾಪಿಂಗ್ ಮಾಡಲು ಜನ ಬರುತ್ತಾರೆ. ಥಾಣೆ-ಡೊಂಬಿವಲಿ ಬೆಲ್ಟ್, ಭಿವಂಡಿ-ಡೊಂಬಿವಲಿ ಬೆಲ್ಟ್, ಲಿಂಕಿಂಗ್ ರೋಡ್ ಕೊನೆಗೆ ಶಾಪಿಂಗ್ ಮಾಡಲು ಹೋಗುತ್ತಾರೆ. ಈ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಬ್ರಾಂಡ್‍ಗಳೆಲ್ಲಾ ಯಾವುದು ಬೇಕಾದರೂ ಸಿಗುತ್ತದೆ. ಗ್ರಾಹಕರ ಕಿಸೆಯ ಶಕ್ತಿಗೆ ಅನುಗುಣವಾಗಿ ಬೇಕಾದರೆ ಕಳಪೆಗುಣಮಟ್ಟದ ನಕಲಿ ಚೈನೀಸ್ ಪದಾರ್ಥಗಳು ಸಿಗುತ್ತದೆ.

ಇತಿಹಾಸ

[ಬದಲಾಯಿಸಿ]

ಸುಮಾರು ೪೦ ರ ದಶಕದಲ್ಲಿ ದೂರದ ಬಾಂದ್ರ-ಜುಹು ತಲುಪಲು, ಲಿಂಕಿಂಗ್ ರೋಡ್ ಕೆಲವೇ ಮೊದಲನೆಯ ಸಂಪರ್ಕ ರಸ್ತೆಯಾಗಿತ್ತು. ಹಾಗೆಯೇ ಅತಿ ಪುರಾತನ ದಾದಾಭಾಯ್ ನವರೋಜಿ ರಸ್ತೆ ಜನರಿಗೆ ಪರಿಚಯವಿತ್ತು. ಸಾಂತಾಕೃಝ್ ನಲ್ಲಿ ಸುಪ್ರಸಿದ್ಧ ಆರ್ಯ ಸಮಾಜ್ ಮಂದಿರ್ ಇದೆ. ಕಡೆಯಲ್ಲಿ ಜುಹು ಉದ್ಯಾನ್ ಇದೆ. ಅಲ್ಲಿ ಒಂದು ಏರೋಪ್ಲೇನ್ ಮಾದರಿಯ ಒಂದು ಇತ್ತು. ದಾರಿಯುದ್ದಕ್ಕೂ ಒಳ್ಳೆಯ ಬಿಜಿನೆಸ್ ಮಳಿಗೆಗಳ ಸಾಲೇ ಇದೆ. ಡಿಪಾರ್ಟ್ಮೆಂಟಲ್ ಸ್ಟೋರ್ಸ್, ಬ್ರಾಂಡ್ ವಸ್ತುಗಳು, ರಸ್ತೆಯಲ್ಲಿ ಮಾರುವ ಗಾಡಿಗಳು, ಇತರೆ ಬಟ್ಟೆ ಅಂಗಡಿಗಳು, ಬಟ್ಟೆ ವ್ಯಾಪಾರ ಹೆಚ್ಚಾಗಿ ಆಗುತ್ತದೆ. ರಸ್ತೆಯ್ದ್ದಕ್ಕೂ ಹರಡಿರುವ ಕೆಫೆ ಮತ್ತು ರೆಸ್ಟಾರೆಂಟ್ ಗಳು, ರಸ್ತೆಯುದ್ದಕ್ಕೂ ಮನೆಮಾಡಿವೆ. ರಸ್ತೆ ೫ ಕಡೆಗಳಿಂದ ಕಾಣಿಸಿಕೊಳ್ಳುತ್ತದೆ. ಹಿಂದೂಸ್ತಾನ್ ಪೆಟ್ರೋಲಿಯಮ್ ಪಂಪ್ ಸ್ಟೇಷನ್ ಬಳಿ, ಎಸ್.ವಿ.ರೋಡ್, ಬಾಂದ್ರ ಸ್ಟೇಷನ್ ರೋಡ್, ಟರ್ನರ್ ರೋಡ್, ಮತ್ತು ಲಿಂಕಿಂಗ್ ರೋಡ್. ಈ ಕ್ರಾಸ್ ರೋಡ್ ನಿಂದ ಎಚ್.ಪಿ.ಪೆಟ್ರೋಲ್ ಪಂಪ್ ಮತ್ತು ಬ್ಯಾಂಕ್ ಆಫ್ ಬರೋಡಾ ಸಿಗುತ್ತವೆ. ಲಿಂಕಿಂಗ್ ರೋಡ್ ನಲ್ಲಿ ಹಾಗೆ ಉತ್ತರಕ್ಕೆ ಮುಂದುಹೋದರೆ, ಶೀತಲ್ ಸಮುದ್ರ ಡಬಲ್ ಬುಲ್ ಜೀನ್ಸ್ ಶಾಪ್ ಸಿಗುತ್ತವೆ.

ಹಲವಾರು ಬಗೆಯ ವಸ್ತುಗಳು

[ಬದಲಾಯಿಸಿ]

ಫರ್ನೀಚರ್ ವಾಲ ಶಾಪ್ ಗಳ ದೊಡ್ಡ ಸಾಲು, ಮತ್ತೊಂದು ಕ್ರಾಸ್ ರೋಡ್ ಬರುವುದರೊಳಗೆ, ಇಲ್ಲೇ ಭಾರತ್ ಪೆಟ್ರೋಲಿಯಂ ಪಂಪ್ ಕಾಣಿಸುತ್ತದೆ. ಬಲಕ್ಕೆ ತಿರುಗಿದರೆ ಎರಡೂ ರಸ್ತೆ ಸೇರುವ ಜಾಗದಲ್ಲಿ ಮುಂದೆ ನೇರವಾಗಿ ಹೋದರೆ, ಎಸ್.ವಿ.ರೋಡ್ ದಾಟಿ, ಗೈಟಿ, ಗಾಲಾಕ್ಸಿ, ಚಿನೆಮ, ಎಡಕ್ಕೆ ಎನ್‍ಫೀಲ್ಡ್ ಶೋರೂಮ್ ಇದೆ.ಮತ್ತು ಭಾರ್ಗವಸ್ ಮ್ಯೂಸಿಕ್ ಶಾಪ್ ಉಪನಗರದಲ್ಲಿ ಇದೊಂದು ಅಂಗಡಿಯಲ್ಲಿ ಅತ್ಯುತ್ತಮವಾದ ಮ್ಯೂಸಿಕ್ ಇನ್ಸ್ಟ್ರುಮೆಂಟ್ಸ್ ಸಿಗುತ್ತದೆ. ಮುಂದೆ ವಾಟರ್ ಫೀಲ್ಡ್ ರೋಡ್ ಸಿಗುತ್ತದೆ. ಝೆನ್ಝಿ ಮತ್ತು ಗಾಸ್ ಶೋರೂಂ ಬಲಕ್ಕೆ, ಎಡಕ್ಕೆ ರೆಡ್ ಬಾಕ್ಸ್ ರೆಸ್ಟಾರೆಂಟ್ ಇವೆ. ಅದೇ ರಸ್ತೆಯಲ್ಲಿ ಮುಂದೆ ಸಾಗಿದರೆ, ದಕ್ಷಿಣದಕಡೆಗೆ ಸಿಐಜೊ ರೆಸ್ಟಾರೆಂಟ್ ಕಾಣಿಸುತ್ತದೆ. ಪೆರ್ರಿ ಕ್ರಾಸ್ ರೋಡ್ ಕೊನೆಯದು. ಆರ್. ಡಿ. ಕಾಲೇಜ್ ಶಾಪಿಂಗ್ ಏರಿಯ, ಮೊದಲ ೫೦ ಮೀ ದೂರದಲ್ಲಿ ಎಡಭಾಗದಲ್ಲಿ ಮಹಿಳೆಯರ ಬಟ್ಟೆ ಮಕ್ಕಳ ಮತ್ತು ಶೂಸ್, ಮೆಟ್ರೊ, ಆಡಿದಾಸ್, ವ್ಯಾನ್ ಹ್ಯುಸೆನ್, ಮೆಕ್ಡೊನಾಲ್ಡ್ಸ್ ಮೊದಲಾದ ಅಂತಾರಾಷ್ಟ್ರಿಯ ಬ್ರಾಂಡ್ ಮಳಿಗೆಗಳು. ಕೀಫ್ ಸಿ ಮುಖಾಂತರ ಸುಮಾರು ೨೦೦ ಮೀ ಖಾರ್ ಹತ್ತಿರದ ಎಮ್.ಟಿ.ಎನ್.ಎಲ್ ವರೆಗೆ ಮುಂದೆ ಹೋದರೆ, ೩ ಆಡಿದಾಸ್ ಶೂ ಶಾಪ್ ಗಳಲ್ಲಿ ಒಂದು ಕಾಣಿಸುತ್ತದೆ. ರೇಮಾಂಡ್, ಪ್ರೊಲಿನ್, ಮತ್ತು ಫಿಲ ಶೋರೂಮ್ಸ್ ಸಿಗುತ್ತದೆ. ಹೆಸರಾಂತ ;ರಹೇಜಾ ಕನ್ಸ್ಟ್ರಕ್ಸನ್ಸ್; ಇದೆ. ಬಾಂದ್ರಾ ಮತ್ತು ಖಾರ್ ನಡುವಿನ ಸಂದಿಸುವ ರಸ್ತೆ ಮುಂದೆ ಸಾಗಿದರೆ,

  • ನೈಕ್,
  • ರೀಬಾಕ್,ಶೋರೂಮ್
  • ಮುಫ್ತಿ ಶೋರೂಂ
  • ಡಾಕರ್ಸ್ ಶೋರೂಮ್,
  • ಆಕ್ಸಿಸ್ ಬ್ಯಾಂಕ್,
  • ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್
  • ಲ್ಯುಯಿಸ್ ಫಿಲಿಪ್
  • ಸಿಟಿಬ್ಯಾಂಕ್,
  • ವಿಲ್ಲಿಸ್
  • ಲೈಫ಼್ ಸ್ಟೈಲ್ ಡಾಚ್ ಬ್ಯಾಂಕ್,
  • ಜಿಕೆಜಿ ಆಪ್ಟಿಕಲ್ಸ್,ಸ್ಪೆಕ್ಟಾಕಲ್ಸ್ ಶೊರೂಂ,
  • ಓಸಿಮ್ ಶೋರೂಂ
  • ಲ್ಯುಯಿಸ್, ಸ್ಪೈಕರ್,ಗಳಿವೆ.

ಬಗೆ ಬಗೆಯ ದಿನಬಳಕೆಯ ಫ್ಯಾಶನ್ ವಸ್ತುಗಳು

[ಬದಲಾಯಿಸಿ]

ಲಿಂಕ್ ರೋಡ್ ಜೊತೆಗೆ ಉದ್ದಕ್ಕೆ ಸಾಂತಾಕೃಝ್ ಕಡೆ ಸಾಗಿದರೆ, ಅಲ್ಲಿ ೪ ರೋಡುಗಳು ಸೇರುವ ಜಾಗವಿದೆ.

  • ಉತ್ತರದಲ್ಲಿ ಮನೆಗಳು ಸಿಗುತ್ತವೆ.
  • ಬಲಕ್ಕೆ ಎಸ್.ವಿ.ರೋಡ್
  • ಎಡಕ್ಕೆ ಏರ್ ಇಂಡಿಯ ಪಾರ್ಕ್, ಮಾಡೆಲ್ಮ್ ಮುಂದೆ ಹಾಗೆ
  • ಜುಹು ಲಾಂಗ್ ಮುಖಾಂತರ
  • ಸನ್ ಎನ್.ಸ್ಯಾಂಡ್ ಹೋಟೆಲ್ ಕಡೆ ಹೋಗಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Shoppers' paradise Linking Road fast losing its shops