ಲಾಲ್ ಬಾಗಿನ ಹೂವಿನ ಪ್ರದರ್ಶನ

ವಿಕಿಪೀಡಿಯ ಇಂದ
Jump to navigation Jump to search

ಲಾಲ್ ಬಾಗಿನ ಹೂವಿನ ಪ್ರದರ್ಶನ ಲಾಲ್ ಬಾಗ್ ಅಥವಾ ಲಾಲ್ ಬಾಗ್ ಸಸ್ಯ ತೋಟ, ಅಂದರೆ ಆಂಗ್ಲ ದಲ್ಲಿ "ಕೆಂಪು ತೋಟ" ಎಂದರ್ಥ. ಲಾಲ್ ಬಾಗ್ ನನ್ನು ಮೊದಲ ಬಾರಿ ಶುರು ಮಾಡಿದ ಗೌರವ ಮೈಸೂರಿನ ರಾಜ ಹೈದರಾಲಿಗೆ ಸಲ್ಲು ತ್ತದೆ. ಹೈದರಾಲಿತಯ ನಂತರ ಮೊಘಲರ ಆದೇಶದ ಮೇರೆಗೆ ಆತನ ಮಗ ಟಿಪ್ಪು ಸುಲ್ತಾನನು ಅದನ್ನು ಪೂರ್ಣಗೊಳಿಸಿದ. ಇಲ್ಲಿನ ಪ್ರಸಿದ್ದ ಗಾಜಿನ ಮನೆಯಲ್ಲಿ ಪ್ರತಿ ವರ್ಷ ಹೂವಿನ ಪ್ರದರ್ಶನ ನಡೆಯುತ್ತದೆ. ಲಾಲ್ ಬಾಗ್ ಭಾರತದಲ್ಲಿಯೇ ಅತಿ ಹೆಚ್ಚು ಬಗೆಯ ಸಸ್ಯ ಸಂಕುಲವನ್ನು ಒಳಗೊಂಡಿದೆ ಮತ್ತು ಬೆಂಗಳೂರಿನ ಪ್ರಖ್ಯಾತ ಪ್ರವಾಸ ತಾಣಗಳಲ್ಲಿ ಒಂದು.

ಲಾಲ್ ಬಾಗಿನಲ್ಲಿ ಹೂವಿನ ಪ್ರದರ್ಶನವನ್ನು ಪ್ರತಿ ವರ್ಷ ರಾಷ್ಟ್ರಿಯ ಹಬ್ಬಗಳಾದ ಸ್ವತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಗಳಂದು ಏರ್ಪಡಿಸಲಾಗುತ್ತದೆ. ಈ ಪದ್ಧತಿಯನ್ನು ಹಲವಾರು ವರ್ಷಗಳಿಂದ ಅನುಸರಿಸಲಾಗುತ್ತಿದೆ. ಆಗಸ್ಟ್ ೨೦೧೦ ಸ್ವತಂತ್ರ ದಿನಾಚರಣೆಯ ಪ್ರಯುಕ್ತ "ಇಂಡಿಯ ಗೇಟ್"ಹಾಗು ವಿವಿದ ತರಹದ ಹೂಗಳಿಂದ ಪ್ರಾಣಿಗಳ ಪ್ರತಿಮೆಗಳನ್ನು ಮಾಡಲಾಗಿತ್ತು.ರಾಜ್ಯದ ಎಲ್ಲಾ ಕಡೆಗಳಿಂದ ತರಿಸಿದ ಸುಮಾರು ಐದು ಸಾವಿರ ವಿವಿದ ತರಹದ ಹೂಗಳಿಂದ ಮಾಡಲಾಗಿದ್ದ "ಇಂಡಿಯ ಗೇಟ್" ಹೆಚ್ಚು ಆಕರ್ಷಣಿಯವಗಿತ್ತು.