ಲಾಲ್ಗುಳಿ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾಲ್ಗುಳಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ೧೩ ಕಿ.ಮೀ ದೂರದಲ್ಲಿದೆ. ಕಾಳಿ ನದಿಗೆ ಬೊಮ್ಮನಹಳ್ಳಿಯ ಬಳಿ ಅಣೆಕಟ್ಟೆಯನ್ನು ಕಟ್ಟುವ ಮೊದಲು ಇದು ನಿತ್ಯ ಜಲಧಾರೆಯಾಗಿತ್ತು. ಅಣೆಕಟ್ಟೆ ಬಂದ ಮೇಲೆ ಇದಕ್ಕೆ ಹರಿದು ಬರುವ ನೀರು ನಿಂತಿದೆ. ಈ ಜಲಪಾತವು ಮಳೆಗಾಲದಲ್ಲಿ ಮಾತ್ರ ಸ್ವಲ್ಪ ದಿನಗಳು ನೋಡಲು ಸಿಗಬಹುದು.