ಲಾರೆನ್ಸ್‌ ಪಿಯರ್ಸಾಲ್ ಜ್ಯಾಕ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾರೆನ್ಸ್‌ ಪಿಯರ್ಸಾಲ್ ಜ್ಯಾಕ್ಸ್‌ ( 1860-1955) ಬ್ರಿಟನ್ನಿನ ಯೂನಿಟೇರಿಯನ್ ಪಂಥದ ಮತಭೋಧಕ, ಶಿಕ್ಷಣಶಾಸ್ತ್ರಜ್ಞ ಹಾಗೂ ಪತ್ರಿಕಾ ಸಂಪಾದಕ.

ಬದುಕು[ಬದಲಾಯಿಸಿ]

ಹುಟ್ಟಿದ್ದು ಇಂಗ್ಲೆಂಡಿನ ನಾಟಿಂಗ್‍ಹಮ್‍ನಲ್ಲಿ. ನಾಟಿಂಗ್‍ಹಮ್ ವಿಶ್ವವಿದ್ಯಾಲಯ ಶಾಲೆಯಲ್ಲೂ ಲಂಡನ್, ಗಾಟಿಂಗೆನ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯಗಳಲ್ಲೂ ವಿದ್ಯಾಭ್ಯಾಸ ಮಾಡಿದ. 1887ರಲ್ಲಿ ಈತ ಸುವಿಖ್ಯಾತ ಇಂಗ್ಲೀಷ್ ವಿಮರ್ಶಕ ಸ್ಟಾಫರ್ಡ್ ಬ್ರೂಕ್‍ಗೆ ಲಂಡನಿನ ಬೆಡ್‍ಫರ್ಡ್ ಚೇಪಲಿನಲ್ಲಿ ಸಹಾಯಕನಾಗಿ ನೇಮಕಗೊಂಡ. 1889ರಲ್ಲಿ ಬ್ರೂಕನ ಮಗಳಾದ ಸೆಸಿಲ್ ಆರೀವಿಯಾಳನ್ನು ಮದುವೆಯಾದ. ಮುಂದೆ ಲಿವರ್‍ಪೂಲ್ ಹಾಗೂ ಬರ್ಮಿಂಗ್‍ಹಮ್‍ಗಳಲ್ಲಿ ಯೂನಿಟೇರಿಯನ್ ಚರ್ಚುಗಳಲ್ಲಿ ಮಿನಿಸ್ಟರ್ ದರ್ಜೆಯ ಮತೋಪ ದೇಶಕನಾಗಿ ಕೆಲಸಮಾಡಿದ. 1903ರಿಂದ 1915ರ ವರೆಗೆ ಮ್ಯಾಂಚೆಸ್ಟರ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿದ್ದುದಲ್ಲದೆ ಅದೇ ಕಾಲೇಜಿನ ಡೀನ್ ಆಗಿಯೂ ಅಲ್ಲಿಯ ವಿದ್ಯಾರ್ಥಿ ವಸತಿಗೃಹದ ವಾರ್ಡನ್ ಆಗಿಯೂ ಸೇವೆಸಲ್ಲಿಸಿದ. 1915 ರಿಂದ 1931 ರ ವರೆಗೆ ಮ್ಯಾಂಚೆಸ್ಟರ್ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದ. 1902 ರಲ್ಲಿ ಸ್ಥಾಪಿತವಾದ ಹಿಬರ್ಟ್ ಜರ್ನಲ್ ಎಂಬ ಹೆಸರಾಂತ ಪತ್ರಿಕೆಗೆ ಪ್ರಥಮ ಸಂಪಾದಕನಾಗಿ 45 ವರ್ಷ ದುಡಿದ.

ಬರೆದ ಗ್ರಂಥಗಳು[ಬದಲಾಯಿಸಿ]

ಈತ ಬರೆದ ಹಲವು ಗ್ರಂಥಗಳಿವು: 1 ಆಲ್ ಮೆನ್ ಆರ್ ಘೋಸ್ಟ್ಸ್ (1913); ಫ್ರಮ್ ದಿ ಹ್ಯೂಮನ್ ಎಂಡ್ (1916); 3. ಫಿಲಾಸಫರ್ಸ್ ಇನ್ಟ್ರಬಲ್ (1916); 4 ಲೈಫ್ ಅಂಡ್ ಲೆಟರ್ಸ್ ಆಫ್ ಸ್ಟಾಫರ್ಡ್ ಬ್ರೂಕ್: ಎರಡು ಸಂಪುಟಗಳು (1917); 5 ಫ್ರಮ್ ಅಥಾರಿಟಿ ಟು ಫ್ರೀಡಮ್ (1920); 6. ಲೆಜೆಂಡ್ಸ್ ಆಫ್ ಸ್ಮೋಕ್‍ಓವರ್ (1921); 7 ದಿ ಚಾಲೆಂಜ್ ಆಫ್ ಲೈಫ್ (1924); 8 ದಿ ಫೇಯ್‍ತ್ ಆಫ್ ಎ ವರ್ಕರ್ (1925); 9 ಹಿರೋಸ್ ಆಫ್ ಸ್ಮೋಕ್‍ಓವರ್ (1926); 10 ಕನ್‍ಸ್ಟ್ರಕ್ಟಿವ್ ಸಿಟಿಜóನ್ಷಿಪ್ (1927); 11 ಮೈ ನೇಬರ್ ದಿ ಯೂನಿವರ್ಸ್ (1928); 12 ದಿ ಇನ್ನರ್ ಸೆಂಟಿನಲ್ (1930); 13 ದಿ ಎಜ್ಯುಕೇಷನ್ ಆಫ್ ದಿ ಹೋಲ್ ಮ್ಯಾನ್ (1931); 14 ಎಜ್ಯುಕೇಷನ್ ಥ್ರೂ ರಿಕ್ರಿಯೇಷನ್ (1932); 15 ಮೈ ಅಮೆರಿಕನ್ ಫ್ರೆಂಡ್ಸ (1933); 16 ಎಲೆಮೆಂಟರಿ ರಿಲಿಜನ್ (1934); 17 ರಿವೋಲ್ಟ್ ಎಗೆನ್ಸ್ಟ್ ಮೆಕ್ಯಾನಿಸಮ್ (1934); 18 ಕೋ ಆಪರೇಷನ್ ಆರ ಕೊಅರ್ಷನ್ (1938); 19 ದಿ ಸ್ಟಾರಮ್ ಸೋರ್ಡ್ (1938); 20 ದಿ ಲಾಸ್ಟ್ ಲೆಜೆಂಡ್ ಆಫ್ ಸ್ಮೋಕ್‍ಓವರ್ (1939); 21 ಕನ್‍ಸ್ಟ್ರಕ್ಷನ್ ನೌ (1942), 22 ದಿ ಕನ್‍ಫೆಷನ್ ಆಫ್ ಎನ್ ಆಕ್ಟೋಜಿನೇರಿಯನ್ (1942).