ಲಲಿತಾದೇವಿ ಶಕ್ತಿಪೀಠ
'ಉತ್ತರ ಪ್ರದೇಶ'ದ 'ಅಲಹಾಬಾದ್ ನ 'ತೀರ್ಥರಾಜ್ ಪ್ರಯಾಗ್' ನಲ್ಲಿ 'ಲಲಿತಾದೇವಿ ಶಕ್ತಿ ಪೀಠ', ಭಾರತದ, ೫೧ ಪ್ರಮುಖ ಶಕ್ತಿ ಪೀಠಗಳಲ್ಲೊಂದು, ಪುರಾಣದಲ್ಲಿ ವರ್ಣಿಸಿರುವಂತೆ, ಮಾತಾ ಸತಿ, ತನ್ನ ತಂದೆ ಪ್ರಜಾಪತಿ ದಕ್ಷನ ಯಜ್ಞದಲ್ಲಿ ನಿರ್ಲಕ್ಷಳಾದ ಬಳಿಕ, 'ಯೋಗಾಗ್ನಿ ದ್ವಾರ' ತನ್ನ ಶರೀರವನ್ನು ಭಸ್ಮೀಭೂತ ಮಾಡಿದಳೊ, ಆಗ ಭಗವಾನ್ ಶಂಕರನು, ಅತ್ಯಂತ ಕ್ರೋಧಿತರಾದರು. ಸತಿದೇವಿಯ, ನಿರ್ಜೀವ ದೇಹವನ್ನು ಭೋಲೇನಾಥನು, ಹೆಗಲಮೇಲೆ ಹೊತ್ತುಕೊಂಡು ಬ್ರಹ್ಮಾಂಡದಲ್ಲಿ ಬ್ರಮಣ ಮಾಡತೊಡಗಿದರು. ಆ ಸಮಯದಲ್ಲಿ ತಾಂಡವ ನೃತ್ಯವನ್ನೂ ಮಾಡಿದನು. ಆ ಸಮಯದಲ್ಲಿ ಮಹಾವಿಷ್ಣುವು, ಪ್ರಳಯವನ್ನು ತಪ್ಪಿಸಲು, ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ೫೧ ಭಾಗವಾಗಿ ವಿಭಕ್ತ ಮಾಡಿದನು. ಹಾಗಾಗಿ, ಪ್ರಯಾಗದಲ್ಲಿ ತಾಯಿಯ ಕೈಬೆರಳು ಬಿದ್ದಿದೆ. ಮಾತಾ ಸತೀದೇವಿಯು ಇಲ್ಲೇ ಶಕ್ತಿಪೀಠದ ರೂಪದಲ್ಲಿ ಹಾಗೂ ಭಗವಾನ್ ಭೋಲೇನಾಥ್ ಭವ ಭೈರವ್ ರೂಪದಲ್ಲಿ ಪ್ರತಿಶ್ಠಿಯಾಗಿದ್ದಾರೆ. ಪೀಠರಾಜನೆಂಬ ಹೆಸರಿದೆ. ನವರಾತ್ರಿಯ ಸಮಯದಲ್ಲಿ ಈ ಸ್ಥಳದಲ್ಲಿ 'ಭವ್ಯ ಮೇಲ' ಜರುಗುತ್ತದೆ. ಸಾವಿರಾರು ಶರ್ದ್ಧಾಳುಗಳು ಅತ್ಯಂತ ಶ್ರದ್ಧೆ ಭಕ್ತಿಗಳಿಂದ ಹರ್ಷೋಲ್ಲಾಸಗಳಿಂದ ಭಾಗಿಗಳಾಗುತ್ತಾರೆ. ದೇವಿಯ ಆರಾಧನೆ ಮಹತ್ವದ್ದು.