ವಿಷಯಕ್ಕೆ ಹೋಗು

ಲತಾಗೃಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲತಾಗೃಹವು ಲಂಬವಾದ ಕಂಬಗಳನ್ನು ಹೊಂದಿರುವ ನೆರಳಿರುವ ನಡೆದಾರಿ, ನಡುವಣಂಕ ಅಥವಾ ಕುಳಿತುಕೊಳ್ಳುವ ಪ್ರದೇಶವನ್ನು ರೂಪಿಸುವ ಒಂದು ಹೊರಾಂಗಣ ಉದ್ಯಾನ ವೈಶಿಷ್ಟ್ಯವಾಗಿದೆ. ಈ ಕಂಬಗಳು ಸಾಮಾನ್ಯವಾಗಿ ಅಡ್ಡತೊಲೆಗಳು ಮತ್ತು ಗಟ್ಟಿಮುಟ್ಟಾದ ತೆರೆದ ಜಾಲರಿಗೆ ಆಧಾರ ಒದಗಿಸುತ್ತವೆ, ಮತ್ತು ಇವುಗಳ ಮೇಲೆ ಮರದಂಥ ಬಳ್ಳಿಗಳನ್ನು ಬೇಕಾದ ಆಕಾರ ತಾಳುವಂತೆ ಹಬ್ಬಿಸಲಾಗುತ್ತದೆ.[] ಮೊಗಸಾಲೆಯ ಬಗೆಯಾಗಿ, ಇದು ಒಂದು ಕಟ್ಟಡದ ವಿಸ್ತರಣೆಯೂ ಆಗಿರಬಹುದು ಅಥವಾ ತೆರೆದ ಮಾಳಿಗೆಗೆ ರಕ್ಷಣೆಯಾಗಿ ಅಥವಾ ಚಾವಣಿ ಕಟ್ಟಡಗಳ ನಡುವಿನ ಸಂಪರ್ಕವಾಗಿ ಕಾರ್ಯನಿರ್ವಹಿಸಬಹುದು. ಲತಾಗೃಹಗಳು ಒಂದು ಕಟ್ಟಡದ ಬಾಗಿಲಿನಿಂದ ಪ್ರತ್ಯೇಕ ಮಾಳಿಗೆ ಅಥವಾ ಕೊಳದಂತಹ ತೆರೆದ ಉದ್ಯಾನ ವೈಶಿಷ್ಟ್ಯಕ್ಕೆ ವಿಸ್ತರಿಸಬಹುದು. ಮುಕ್ತವಾಗಿ ನಿಂತಿರುವ ಲತಾಗೃಹಗಳು, ಅಂದರೆ ಮನೆ ಅಥವಾ ಇತರ ರಚನೆಗೆ ಸಂಪರ್ಕ ಹೊಂದಿರದ ರಚನೆಗಳು ಗಾಳಿ ಮತ್ತು ಸೂರ್ಯನ ತಿಳಿ ಬೆಳಕಿಗೆ ಅವಕಾಶ ಕೊಡುವ, ಆದರೆ ಸೂರ್ಯನ ನೇರ ಬೆಳಕಿನ ತೀಕ್ಷ್ಣ ಪ್ರಕಾಶದಿಂದ ರಕ್ಷಣೆ ನೀಡುವ ಕೂಡುವಂಥ ಪ್ರದೇಶವನ್ನು ಒದಗಿಸುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. "Which Pergola Is Right for You?". Fox News (in ಅಮೆರಿಕನ್ ಇಂಗ್ಲಿಷ್). 2016-03-17. Retrieved 2018-09-10.
"https://kn.wikipedia.org/w/index.php?title=ಲತಾಗೃಹ&oldid=888969" ಇಂದ ಪಡೆಯಲ್ಪಟ್ಟಿದೆ