ವಿಷಯಕ್ಕೆ ಹೋಗು

ಲಘುತಮ ಸಾಮಾನ್ಯ ಅಪವರ್ತ್ಯ (ಲ.ಸಾ.ಅ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಮೇಲ್ಕಂಡ ನಕ್ಷೆಯಲ್ಲಿ ೨,೩,೪,೫ ಮತ್ತು ೭ ರ ಸಂಯೋಜನೆಯನ್ನು ತೋರಿಸುತ್ತಿದೆ.
ಉದಾಹರಣೆಗೆ ಕಾರ್ಡ್ ಆಟದಲ್ಲಿ ಕಾರ್ಡ್ ಗಳನ್ನು ಕನಿಷ್ಠ ೬೦ ರಂತೆಯಾದರು ಪ್ರತಿ ೫ ಆಟಗಾರರಿಗೆ ಹಂಚಬೇಕು. ಸಂಖ್ಯೆ ೬೦ ೭ ನ್ನು ಬಿಟ್ಟು ೨,೩,೪,೫ ರ ಛೇದಕದಲ್ಲಿ ಬರುತ್ತದೆ .

ಕೊಟ್ಟ ಸ೦ಖ್ಯಗಳ ನಡುವಿನ ಲಘು ಸಾಮಾನ್ಯ ಗುಣಕವನ್ನು ಲಘುತಮ ಸಾಮಾನ್ಯ ಅಪವರ್ತ್ಯ (ಲ.ಸಾ.ಅ) , ಆಂಗ್ಲಬಾಷೆಯಲ್ಲಿ ಎಲ್.ಸಿ.ಎಂ (LCM) ಎನ್ನುತ್ತಾರೆ.

ಉದಾಹರಣೆ:

   ೪ ಮತ್ತು ೬ ರ ಲ.ಸಾ.ಅ  :-
   ೪ ರ ಅಪವರ್ತ್ಯಗಳು:-೪,೮,೧೨,೧೬,೨೦,೨೪,೨೮,೩೨,೩೬,೪೦
   ೬ ರ ಅಪವರ್ತ್ಯಗಳು  :-೬,೧೨,೧೮,೨೪,೩೦,೩೬,೪೨,೪೮,೫೪,೬೦
   ೪ ಮತ್ತು ೬ ಸಂಖ್ಯೆಗಳ ಸಾಮಾನ್ಯ ಅಪವರ್ತ್ಯಗಳು :-೧೨,೨೪,೩೬..... 
   ಮೇಲ್ಕಂಡ ೪ ಮತ್ತು ೬ರ ಸಾಮಾನ್ಯ ಅಪವರ್ತ್ಯಗಳಲ್ಲಿ  ಚಿಕ್ಕ ಸಂಖ್ಯೆ ೧೨,ಇದನ್ನೇ ಲಘುತಮ  ಸಾಮಾನ್ಯ ಅಪವರ್ತ್ಯ ಎಂದು ಕರೆಯುತ್ತೇವೆ. 

ಲ.ಸಾ.ಅ ದ ಬಳಕೆ:

[ಬದಲಾಯಿಸಿ]
೧) ಇಬ್ಬರು ವ್ಯಾಪಾರರಿದ್ದಾರೆ ಅವರಲ್ಲಿ ಒಬ್ಬ ಪುಸ್ತಕವನ್ನು ರೂ ೪ ರಂತೆ ಮಾರುತ್ತಿದ್ದಾನೆ ಮತ್ತೊಬ್ಬ ವ್ಯಾಪಾರಿ ಲೇಖನಿ ಯನ್ನು ರೂ ೬ ರಂತೆ ಮಾರುತಿದ್ದಾನೆ ಎಂದುಕೊಳ್ಳೊಣ.ಹಾಗಾದರೆ ಲೇಖನಿ ಮಾರುವವನು  ಮತ್ತು  ಪುಸ್ತಕ ಮಾರುವವನು  ಎಷ್ಟು  ಕನಿಷ್ಟ ವಸ್ತುಗಳನ್ನು ಮಾರಿದಾಗ ಅವರಿಬ್ಬರ  ಬಳಿಯ ಹಣ ಒ೦ದೇ ಆಗುವುದು.
   ೪ ಮತ್ತು ೬ ರ ಲ.ಸಾ.ಅ :-
   ೪ ರ ಅಪವರ್ತ್ಯಗಳು:-೪,೮,೧೨,೧೬,೨೦,೨೪,೨೮,೩೨,೩೬,೪೦
   ೬ ರ ಅಪವರ್ತ್ಯಗಳು  :-೬,೧೨,೧೮,೨೪,೩೦,೩೬,೪೨,೪೮,೫೪,೬೦
   ೪ ಮತ್ತು ೬ ಸಂಖ್ಯೆಗಳ ಸಾಮಾನ್ಯ ಅಪವರ್ತ್ಯಗಳು :-೧೨,೨೪,೩೬.....
   ೪ ಮತ್ತು ೬ ರ ಲಘುತಮ  ಸಾಮಾನ್ಯ ಅಪವರ್ತ್ಯ ೧೨. 
ಪಟ್ಟಿಯ ರೂಪದಲ್ಲಿ
ಬೆಲೆಗಳು
ಲೇಖನಿ ೪ ೧೨ ೧೬ ೨೦
ಪುಸ್ತಕ ೬ ೧೨ ೧೮ ೨೪ ೩೦
ಪುಸ್ತಕ  ಮಾರುವವನ ಹಾಗು ಲೇಖನಿ  ಮಾರುವವನ ಬಳಿಯ ಹಣ ಒ೦ದೇ ಆಗಬೇಕಾದರೆ. ಪುಸ್ತಕ  ಮಾರುವವನು ಕನಿಷ್ಟ ೨ ಪುಸ್ತಕ  ಮಾರಬೇಕು.ಲೇಖನಿ  ಮಾರುವವನು ಕನಿಷ್ಟ ೩ ಲೇಖನಿ  ಮಾರಬೇಕು.ಆಗ ಇಬ್ಬರ  ಬಳಿಯೂ  ರೂ12 ಇರುತದೆ.

೨) ೩ ಗಂಟೆಗಳು ಪ್ರತಿ ೨ ಸೆಕೆಂಡು,೪ ಸೆಕೆಂಡು ಮತ್ತು ೬ ಸೆಕೆಂಡುಗಳಿಗೆ ಬಡಿದುಕೊಳ್ಳುತ್ತವೆ ಹಾಗಾದರೆ ೩೦ ನಿಮಿಷದಲ್ಲಿ ಎಷ್ಟುಬಾರಿ ಅವುಗಳು ಒಟ್ಟಿಗೆ ಬಡಿದುಕೊಳ್ಳುತ್ತವೆ.?

ಪರಿಹಾರ
ಗಂಟೆಗಳು
ಗಂಟೆ ೧:- ೨ಸೆ ೧೦ ೧೨
ಗಂಟೆ ೨:- ೪ಸೆ ೧೨ ೧೬ ೨೦ ೨೪
ಗಂಟೆ ೩:- ೬ಸೆ ೧೨ ೧೮ ೨೪ ೩೦ ೩೬

೩ ಗಂಟೆಗಳು ಪ್ರತಿ ೧೨ ಸೆಕೆಂಡುಗಳಿಗೆ ಒಟ್ಟಿಗೆ ಬಡಿದುಕೊಳ್ಳುತ್ತವೆ. ಹಾಗಾದರೆ ೩ ಗಂಟೆಗಳು ೩೦ ನಿಮಿಷದಲ್ಲಿ ೧೫೦ ಬಾರಿ ಒಟ್ಟಿಗೆ ಬಡಿದುಕೊಳ್ಳುತ್ತವೆ.