ವಿಷಯಕ್ಕೆ ಹೋಗು

ಲಖ್ಮಿ ಚಂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂಡಿತ್ ಲಖ್ಮಿ ಚಂದ್ ಎಂದು ಹೆಸರಾದ ದಾದಾ ಲಖ್ಮಿ ಚಂದ್, ಹರಿಯಾಣವಿ ಭಾಷೆಯ ಭಾರತೀಯ ಕವಿ. ಅವರಿಗೆ ಪಂಡಿತ ಎಂಬ ಬಿರುದು ನೀಡಲಾಯಿತು. ಇವರು ಹರಿಯಾಣದ ಕಾಳಿದಾಸರೆಂದು ಪ್ರಸಿದ್ದಿಯಾಗಿದ್ದರು. ಅವರಿಗೆ ಹರಿಯಾಣವಿ ಸಂಗೀತ ಪ್ರಕಾರದ ರಾಗ್ನಿ ಮತ್ತು ಸಾಂಗ್‌ನ 'ಸೂರ್ಯ ಕವಿ' ಎಂಬ ಬಿರುದನ್ನು ನೀಡಲಾಗಿದೆ. ಗೌರವಾರ್ಥವಾಗಿ ಅವರನ್ನು ಜನಪ್ರಿಯವಾಗಿ 'ದಾದಾ ಲಕ್ಷ್ಮೀ ಚಂದ್' ಎಂದು ಕರೆಯಲಾಗುತ್ತದೆ. ಅವರ ಕವನಗಳು ಮೌಲ್ಯಗಳು ಮತ್ತು ಸಂದೇಶಗಳನ್ನು ಹೊಂದಿರುವ ಹಾಡುಗಳಿಂದ ತುಂಬಿದೆ. ಇದರಿಂದಾಗಿ ಅವರು ಹರಿಯಾಣದಲ್ಲಿ ಗೌರವ ದೊರೆಯಿತು.[] []

ಆರಂಭಿಕ ಜೀವನ

[ಬದಲಾಯಿಸಿ]

ಲಖ್ಮಿ ಚಂದ್ ಅವರು ಹರಿಯಾಣದ ಸೋನೆಪತ್ ಜಿಲ್ಲೆಯ ಜಂತಿ ಕಲಾನ್‌ ಗ್ರಾಮದ ಗೌರ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. [] ಅವರ ತಂದೆ ಒಬ್ಬ ಸಾಮಾನ್ಯ ರೈತ. ಅವರು ಕಲಾ ಕ್ಷೇತ್ರಕ್ಕೆ ಬರುವಾಗ ಕುಟುಂಬದ ವಿರೋಧವನ್ನು ಎದುರಿಸಬೆಕಾಯಿತು. ಅವರನ್ನು ಎಲ್ಲರು ಅನಕ್ಷರಸ್ಥ ಎಂದು ಕರೆಯುತ್ತಿದ್ದರು, ಆದರೆ ನಂತರದಲ್ಲಿ ಅವರು ಹರಿಯಾಣವಿ ಭಾಷೆಯ ಶ್ರೇಷ್ಠ ಕವಿ ಎಂದು ಹೆಸರು ಗಳಿಸಿದ್ದಾರೆ.

ಅವರು ತಮ್ಮ ಕೃತಿ ರಾಗಿಣಿಯಲ್ಲಿ ಉತ್ತಮ ನೀತಿಗಳೊಂದಿಗೆ ವಿವಿಧ ಕಥೆಗಳನ್ನು ರಚಿಸಿದ್ದಾರೆ, ಹಾಗೂ ಸಾಂಗ್ ಎಂಬ ನಾಟಕಳ ಮೂಲಕ ಉತ್ತಮ ಜೀವನಶೈಲಿಯಲ್ಲಿ ಬದುಕಲು ಸಂದೇಶಗಳನ್ನು ನೀಡಿದ್ದಾರೆ. ಮಾತೃಭಾಷೆಯಲ್ಲಿ ಸಾಂಗ್‍ನ ತನ್ನ ವಿವಿಧ ನಟನೆಯ ಮೂಲಕ ಜನರನ್ನು ರಂಜಿಸುತ್ತಿದ್ದರು. ಅವರ ಜನಪ್ರಿಯವಾದ ಕೃತಿ ಲಕ್ಷ್ಮೀಚಂದ್ ಕಾ ಬ್ರಹ್ಮಜ್ಞಾನ್. ಇದನ್ನು ಅವರ ಮರಣದ ನಂತರ ವಿವಿಧ ಹರ್ಯಾಣ್ವಿ ಕಲಾವಿದರು ಹಾಡಿದ್ದಾರೆ.

ಬರಹಗಳು

[ಬದಲಾಯಿಸಿ]

ಅವರ ಬರಹಗಳು ಹರಿಯಾಣದ ಸಮಕಾಲೀನ ಸಂಸ್ಕೃತಿ ಮತ್ತು ಸಮಾಜದ ಮೇಲೆ ಗಮನಾರ್ಹ ಪ್ರಭಾವವನ್ನು ಹೊಂದಿವೆ. ವಾರ್ಷಿಕವಾಗಿ, ಹರಿಯಾಣ ಕಲಾ ಪರಿಷತ್ತು ಹರಿಯಾಣವಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಜನರಿಗೆ ಪಂಡಿತ್ ಲಕ್ಷ್ಮೀ ಚಂದ್ ಪ್ರಶಸ್ತಿಯನ್ನು ನೀಡುತ್ತದೆ. ಲಕ್ಷ್ಮೀಚಂದ್ ಈ ಕೆಳಗಿನ ಸಾಂಗ್ ಅಥವಾ ಸ್ವಂಗ್‍ಗಳನ್ನು ರಚಿಸಿದ್ದಾರೆ.

  1. ರಾಜಾ ಹರಿಶ್ಚಂದರ್
  2. ಶಾಹಿ ಲಕಧರ್
  3. ಜ್ಞಾನಿ ಚೋರ್
  4. ಸೇಠ್ ತಾರಾಚಂದ್
  5. ಸತ್ಯವಾನ್ ಸಾವಿತ್ರಿ
  6. ಹೀರ್ ರಾಂಝಾ
  7. ಚಾಪ್ ಸಿಂಗ್ ಸೋಮಾವತಿ
  8. ರಾಜಾ ಗೋಪಿಚಂದ್
  9. ಭೂಪ್ ಪುರಂಜನ್
  10. ಮೀರಾ ಬಾಯಿ
  11. ಭಗತ್ ಪುರನ್ಮಲ್
  12. ಹಿರಮಲ್ ಜಮಾಲ್
  13. ರಘುಬೀರ್ ಧರ್ಮಕೌರ್
  14. ಚಂದೇರ್ ಕಿರಣ್

ಉಲ್ಲೇಖಗಳು

[ಬದಲಾಯಿಸಿ]
  1. Sharma, S D (30 May 2008). "Saang fest gets off to majestic start". The Tribune India. Retrieved 26 November 2013.
  2. Malik, B S (21 January 2011). "Pandit Lakhmi Chand remembered". The Tribune India. Retrieved 26 November 2013.
  3. Chowdhry, Prem (2007). Contentious Marriages, Eloping Couples: Gender, Caste, and Patriarchy in Northern India (in ಇಂಗ್ಲಿಷ್). Oxford University Press. ISBN 978-0-19-568499-5.