ಲಕ್ಷ್ಮೀ ಬಾಯಿ
ಕನ್ನಡ ನೆಲದಲ್ಲಿ ಮೈದಾಳಿದ ಮೂಕಿ ಚಿತ್ರಗಳ ತಯಾರಿಕ ಸಂಸ್ಥೆ "ಸೂರ್ಯ ಫಿಲಂಸ್ ' ಈ ಸಂಸ್ಥೆ ನಿರ್ಮಿಸಿದ ಮೂಕಿ ಚಿತ್ರಗಳಲ್ಲಿ ಅಭಿನಯಿಸಿ ಆ ಕಾಲದಲ್ಲಿಯೇ ಸ್ಟಾರ್ ಆಗಿ ಮೆರೆದವರು ನಟಿ ಲಕ್ಷ್ಮೀ ಬಾಯಿ.
ಬೆಂಗಳೂರು ಗ್ರಾಮಾಂತರ ಪ್ರದೇಶವಾದ ಹೊಸೂರು ತಾಲೂಕಿನ ಮತ್ತೀಕೆರೆಯಲ್ಲಿ ೧೯೧೮ರಲ್ಲಿ ಜನಿಸಿದರು.ತಂದೆ ಹನುಮಂತಪ್ಪ,ಆಯಿ ತಾಯಮ್ಮ,ಇನ್ನೊಬ್ಬ ಪ್ರಿದ್ದ ಅಭಿನೀತ್ರಿ ಕಮಲಾಬಾಯಿ ಇವರ ಸಹೋದರಿ,ಸೈನಿಕರಾಗಿದ್ದ ತಂದೆ ಮೊದಲ ಮಹಾಯುದ್ದದಲ್ಲಿ ಮೃತರಾದಾಗ ಅಕ್ಕ ತಂಗಿಯರು ಕಷ್ಟಕ್ಕೆ ಸಿಲುಕಿದರು.ತಾಯಿ ಮಿಡ್ ವೈಫ್ ಆಗಿ ಕೆಲಸ ಮಾಡುತ್ತಾ ಮಕ್ಕಳನ್ನು ಸಾಕಿದರು.ಆರ್ಕಾಟ್ ಶ್ರಿನಿವಾಚರ್ ಬೀದಿಯಲ್ಲಿದ್ದ ಸಿದ್ದಕಟ್ಟೆ ಪ್ರೌಡ ಶಾಲೆಯಲ್ಲಿ ಓದುತ್ತಿರುವಾಗ ನಾಟಕದ ರಿಹರ್ಸಲ್ ನೋಡಲು ಆಸೆಪಟ್ಟಾಗ ಮುಖ್ಯೋಪಾದ್ಯಾಯರು ಗದರಿದರು.ಈ ಘಟನೆ ಲಕ್ಷ್ಮೀ ಬಾಯಿಯವರ ಮೇಲೆ ಅಪಾರ ಪರಿಣಾಮ ಬೀರಿ ಕಲಾವಿದೆಯಾಗಲು ಛಲ ತೊಟ್ಟರು.ಆ ಹೊತ್ತಿಗೆ ಅವರ ಮನೆ ಬಳೇಪೇಟೆಗೆ ಬದಲಾಯಿತು.ಅಲ್ಲಿ ಎದುರು ಮನೆಯಲ್ಲಿ ಮೂಕಿ ಚಿತ್ರಗಳ ತಾರೆ ಕೃಷ್ಣಾಬಾಯಿ ವಾಸಿಸುತ್ತಿದ್ದರು.ಅವರ ಪರಿಚಯ ಮಾಡಿಕೊಂಡು ಸೂರ್ಯ ಫಿಲಂ ಸ್ಟುಡಿಯೋ ಮುಕ್ಯಸ್ಥ ದೇಸಾಯಿ ಅವರ ಸಲಹೆಯಂತೆ ನಟಿಸಲು ಒಪ್ಪಿಕೊಂಡರೂ ತಾಯಿ ಚಿತ್ರಕ್ಕೆ ಸೇರಿಸಲು ಒಪ್ಪಲಿಲ್ಲ,ಕೊನೆಗೆ ತಿಂಗಳಿಗೆ ೨೫೦ ರೂಪಾಯಿ ಸಂಬಳ ಇರಲು ಮನೆ ಕೊಡುತ್ತೇನೆ ಎಂದಾಗ ಬಡತನದ ಬಾಳಿಗೆ ಅದು ಅನಿವಾರ್ಯವಾಗಿತ್ತು.
ಹೀಗೆ ಲಕ್ಷ್ಮಿ ಬಾಯಿ "ರಾಜ ಹೃದಯ"ಚಿತ್ರದ ನಾಯಕಿಯಾದರು."ಚಾಯ್ಸ್ ಆಫ್ ಎ ಬ್ರೈಡ್ ","ದೇವಿ ಖಡ್ಗ ",ರಾಧೇಶ್ಯಾಮ್ ",ರಾಜ್ ಪ್ರಪಂಚ್","ಧೂಮಕೇತು"",ಕಿಶೋರಿ" ,"ರಣದೀರ್ " ಮುಂತಾದ ಹದಿನೆಂಟು ಮೂಕಿ ಚಿತ್ರಗಳ ನಾಯಕಿಯಾದರು ಲಕ್ಷ್ಮೀ ಬಾಯಿ,ಇವರಿಗೆ ಮೊದಲಿನಿಂದಲೂ ನಾಟಕಗಳೆಂದರೆ ಇಷ್ಟ ,ಹೀಗೆ ನಾಟಕ ನೋಡಲು ಶಿವಾನಂದ ಥಿಯೇಟರ್ಗೆ ಗುಬ್ಬಿ ಕಂಪೆನಿಯ ನಾಟಕ ನೋಡಲು ಹೋದಾಗ ಸುಬ್ಬಯ್ಯ ನಾಯ್ಡು ಅವರ ಅಭಿನಯ ಕಂಡು ಮೆಚಿದರು.ಮುಂದೆ ಕನ್ನಡದ ಮೊದಲ ವಾಕ್ಚಿತ್ರ "ಸತೀ ಸುಲೋಚನ"ಸಿದ್ದವಾಗುತ್ತಿದ್ದಾಗ ನಾಯಕಿ ಪಾತ್ರ ಸಿಗಲಿಲ್ಲ ಎಂದು ನಿರಾಶರಾಗಿದ್ದ ಇವರನ್ನು ಸುಬ್ಬಯ್ಯ ನಾಯ್ಡು ಮಂಡೋದರಿ ಪಾತ್ರಕ್ಕೆ ಒಪ್ಪಿಸಿದರು.ಈ ಒಡನಾಟ ಮುಂದೆ ನಾಯ್ಡು ಅವರ ಬಾಲ ಸಂಗಾತಿಯಾಗಲು ಕಾರಣವಾಯಿತು. ಸುಬ್ಬಯ್ಯ ನಾಯ್ಡು ಮುಂದೆ "ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ"ಕಟ್ಟಿದಾಗ ಲಕ್ಷ್ಮೀ ಬಾಯಿ ಮುಕ್ಯ ಪಾತ್ರ ವಹಿಸಿದ್ದರು.
೧೯೪೧ರಲ್ಲಿ ನಾಗೇಂದ್ರರಾಯರು "ವಸಂತಸೇನಾ"ಚಿತ್ರ ನಿರ್ಮಿಸಿದಾಗ ಲಕ್ಷ್ಮೀ ಬಾಯಿ ವಸಂತಸೇನೆಯಾಗಿ ಅಮೋಘ ಅಭಿನಯ ನೀಡಿದರು,ಹೀಗಿದ್ದರೂ ವಾಕ್ಚಿತ್ರಯುಗ ಆರಂಭವಾದಾಗ ಆದ ಬದಲಾವಣೆಗಳು ಇವರಿಗೆ ಇಷ್ಟವಾಗಲಿಲ್ಲ.ರಂಗಭೂಮಿಯಲ್ಲಿಯೇ ತಮ್ಮನ್ನು ಹೆಚ್ಹಾಗಿ ತೊಡಗಿಸಿಕೊಂಡರು.ಸುಬ್ಬಯ್ಯ ನಾಯ್ಡು ಮುಂದೆ ೧೯೫೮ರಲ್ಲಿ "ಭಕ್ತ ಪ್ರಹ್ಲಾದ"ನಿರ್ಮಿಸಿದಾಗ ಕಾಯಾದು ಪಾತ್ರ ನಿರ್ವಹಿಸಿದರು.ರಂಗ ಭೂಮಿಗೆ ವೈಭವದ ಯುಗವನ್ನು ನೀಡಿದ ಲಕ್ಷ್ಮೀ ಬಾಯಿ ಸುಬ್ಬಯ್ಯ ನಾಯ್ಡು ನಿದನದ ನಂತರ ಬಣ್ಣ ಹಚ್ಚಲಿಲ್ಲ.ತಮ್ಮ ಮುಂದಿನ ಬದುಕನ್ನು ತೆರೆ ಮರೆಯಲ್ಲಿಯೇ ಕಳೆದ ಇವರು ೧೯೮೧ರ ಅಕ್ಟೋಬರ್ ೧೮ರನ್ದು ಇಹಲೋಕವನ್ನು ತೊರೆದರು.ಅಮೋಘ ನಾಯಕಿ,ಸುಮಧುರ ಗಾಯಕಿಯಾಗಿದ್ದ ಲಕ್ಷ್ಮೀ ಬಾಯಿ ಕನ್ನಡಿಗರೆಲ್ಲರೂ ನೆನಪಿಡಬೇಕಾದ ನಟಿ."ನಮನ"