ವಿಷಯಕ್ಕೆ ಹೋಗು

ರೋಹಿತ್ ಭಾಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಹಿತ್ ಭಾಕರ್
— ಬ್ಯಾಡ್ಮಿಂಟನ್‌ ಆಟಗಾರ —
೨೦೦೭ ರಲ್ಲಿ ಭಾಕರ್
ವೈಯುಕ್ತಿಕ ಮಾಹಿತಿ
ಹುಟ್ಟು (1984-10-26) ೨೬ ಅಕ್ಟೋಬರ್ ೧೯೮೪ (ವಯಸ್ಸು ೪೦)
ದೇಶ ಭಾರತ

ರೋಹಿತ್ ಭಾಕರ್ (ಜನನ ೨೬ ಅಕ್ಟೋಬರ್ ೧೯೮೪) ಒಬ್ಬ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು. ಇವರು ಶ್ರವಣ ದೋಷ ಹೊಂದಿದ್ದರು.

ಹಿನ್ನೆಲೆ

[ಬದಲಾಯಿಸಿ]

ರೋಹಿತ್ ಭಾಕರ್ ಹುಟ್ಟಿನಿಂದಲೇ ಕಿವುಡ ಮತ್ತು ಮಾತನಾಡಲು ಅಸಮರ್ಥರಾಗಿದ್ದರು. ಇವರು ಭಿವಾನಿ ನಗರದವರು. ಪ್ರಸ್ತುತ ಭಿವಾನಿ ನಗರದಲ್ಲಿ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತಿದ್ದಾರೆ. ಇವರು HVPNL[] ನ ಉದ್ಯೋಗಿ. ೧೯೯೭ ರಲ್ಲಿ ತಮ್ಮ ಪ್ರಥಮ ಡೆಫ್ಲಿಂಪಿಕ್ ಈವೆಂಟ್‌ನಲ್ಲಿನ ಮಾಡಿದ ಸಾಧನೆಗೆ ಇವರು ''ಅಸಾಧಾರಣ ಸಾಧನೆಗಳನ್ನು ಮಾಡುವ ಬಾಲ ಕಲಾವಿದ''ರಿಗೆ ದೊರೆಯುವ ಭಾರತ ರಾಷ್ಟ್ರೀಯ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಪಡೆದರು. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿನ ಅವರ ಪ್ರಯತ್ನಗಳಿಗಾಗಿ ಅವರು ಅರ್ಜುನ ಪ್ರಶಸ್ತಿಯನ್ನು ಸಹ ಪಡೆದರು. []

ವೃತ್ತಿ

[ಬದಲಾಯಿಸಿ]

ರೋಹಿತ್ ಕೇವಲ ಹನ್ನೆರಡನೆಯ ವಯಸ್ಸಿನಲ್ಲಿ ೧೯೯೭ ರ ಬೇಸಿಗೆ ಡೆಫ್ಲಿಂಪಿಕ್‌ಗೆ ಪಾದಾರ್ಪಣೆ ಮಾಡಿದರು. ರಾಜೀವ್ ಬಗ್ಗಾ ಜೊತೆ ಆಡಿದ ಮಿಕ್ಸೆಡ್ ಡಬಲ್ ನಲ್ಲಿ ಚಿನ್ನದ ಪದಕವನ್ನು ಗೆದ್ದರು [] . ಈ ಸಾಧನೆಯು ಅವರನ್ನು ಡೆಫ್ಲಿಂಪಿಕ್ ಇತಿಹಾಸದಲ್ಲಿ (೧೨ ವರ್ಷ, ೮ ತಿಂಗಳು ಮತ್ತು ೧೨ ದಿನಗಳ) ಅತ್ಯಂತ ಕಿರಿಯ ಪುರುಷ ಪದಕ ವಿಜೇತರನ್ನಾಗಿ ಮಾಡಿತು. ಡೆಫ್ಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಚಿನ್ನದ ಪದಕ ವಿಜೇತರಾದರು. []

ಇದಲ್ಲದೆ ರೋಹಿತ್ ಭಾಕರ್ 2005 ರ ಬೇಸಿಗೆ ಡೆಫ್ಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಮತ್ತು ಮಿಕ್ಸೆಡ್ ಡಬಲ್ ನಲ್ಲಿ ಕಂಚಿನ ಪದಕಗಳನ್ನು ಪಡೆದರು. [] []


ಇವರನ್ನು ಡೆಫ್ಲಿಂಪಿಕ್ಸ್‌ನಲ್ಲಿ ೧೨ ಚಿನ್ನದ ಪದಕಗಳನ್ನು ಗೆದ್ದ ಭಾರತದ ಮತ್ತೊಬ್ಬ ಕಿವುಡ ಬ್ಯಾಡ್ಮಿಂಟನ್ ಆಟಗಾರ ರಾಜೀವ್ ಬಗ್ಗಾ ಅವರೊಂದಿಗೆ ಹೋಲಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Sixth Sense: The Rohit Bhaker story". hindustantimes.com/ (in ಇಂಗ್ಲಿಷ್). 2005-05-08. Retrieved 2017-12-24.
  2. "Rohit Bhaker, Badminton Player Receiving the Arjuna award from Pratibha Devisingh Patil, President of India (Pratibha Patil) in New Delhi, India". Getty Images (in ಅಮೆರಿಕನ್ ಇಂಗ್ಲಿಷ್). Retrieved 2017-12-24.
  3. "Badminton team | 1997 Summer Deaflympics". www.deaflympics.com (in ಇಂಗ್ಲಿಷ್). Archived from the original on 2017-10-16. Retrieved 2017-12-24.
  4. "Records in Deaflympics | Deaflympics". www.deaflympics.com (in ಇಂಗ್ಲಿಷ್). Archived from the original on 2017-08-31. Retrieved 2017-12-24.
  5. "Badminton men's singles | 2005 Summer Deaflympics". www.deaflympics.com (in ಇಂಗ್ಲಿಷ್). Archived from the original on 2017-12-24. Retrieved 2017-12-24.
  6. "Badminton mixed team| 2005 Summer Deaflympics". www.deaflympics.com (in ಇಂಗ್ಲಿಷ್). Archived from the original on 2017-10-16. Retrieved 2017-12-24.