ರೋಮಾನ್ ಯಾಕಬ್‌ಸನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರೋಮಾನ್ ಓಸೀಪವಿಚ್ ಯಾಕಬ್‌ಸನ್, (ರಷ್ಯಾದ ಭಾಷೆ, Роман Осипович Якобсон), (೧೧ ಅಕ್ಟೋಬರ್ ೧೮೯೬ – ೧೮ ಜುಲೈ ೧೯೮೨) ಸ್ವರೂಪವಾದಿ (ಫಾರ್ಮಲಿಜಮ್) ಪಂಥಕ್ಕೆ ಸಂಬಂಧಿತರಾಗಿದ್ದ ರಷ್ಯಾದ ಒಬ್ಬ ಭಾಷಾವಿಜ್ಞಾನಿ ಮತ್ತು ಸಾಹಿತ್ಯ ವಿಮರ್ಶಕರಾಗಿದ್ದರು. ಅವರು ಭಾಷೆ, ಕಾವ್ಯ, ಮತ್ತು ಕಲೆರಚನಾತ್ಮಕ ವಿಷ್ಲೇಷಣೆಯ ಬೆಳವಣಿಗೆಯನ್ನು ಆರಂಭಿಸುವ ಮೂಲಕ ೨೦ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಭಾಷಾವಿಜ್ಞಾನಿಗಳ ಪೈಕಿ ಒಬ್ಬರೆನಿಸಿದರು.