ವಿಷಯಕ್ಕೆ ಹೋಗು

ರೋಜರ್ ಆಸ್ಕಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಜರ್ ಆಸ್ಕಮ್
Sketch of Roger Ascham
Bornc. 1515
Died30 December 1568 (aged c. 53)
NationalityEnglish
Occupation(s)scholar, didactic writer
Notable workThe Schoolmaster

ರೋಜರ್ ಆಸ್ಕಮ್ (1515-68). ಇಂಗ್ಲೆಂಡ್ ದೇಶದ ವಿದ್ವಾಂಸ, ಶಿಕ್ಷಣಶಾಸ್ತ್ರಜ್ಞ. ರಾಜಕುಮಾರಿ ಎಲಿಜಬೆತ್‍ಳ ಗುರು. ರಾಣಿ ಮೇರಿಗೆ ಲ್ಯಾಟಿನ್ ಕಾರ್ಯದರ್ಶಿಯಾಗೂ ಕೆಲಸಮಾಡಿದ. ಅಡಕವಾದ ಬಿಗಿಯಾದ ಶೈಲಿಗೆ ಹೆಸರಾಗಿದ್ದಾನೆ. ಟ್ಯಾಕ್ಸೊಫಿಲಸ್ ಮತ್ತು ದಿ ಸ್ಕೂಲ್ಮಾಸ್ಟರ್ ಇವನ ಮುಖ್ಯ ಕೃತಿಗಳು. ಮೊದಲ ಪುಸ್ತಕ ಬಿಲ್ವಿದ್ಯೆಯನ್ನೂ ಎರಡನೆಯದು ಲ್ಯಾಟಿನ್ ಭಾಷಾಬೋಧನೆಯನ್ನೂ ಕುರಿತಾಗಿವೆ. ಕೇಂಬ್ರಿಜ್ ವಿಮರ್ಶಾಪಂಥಕ್ಕೆ ಸೇರಿದ ಈತ ಬರಿಯ ಪಾಂಡಿತ್ಯಪುರ್ಣ ಶಬ್ದಗಳ ಬಳಕೆಯನ್ನು ವಿರೋಧಿಸಿದ. ಇವನ ಶೈಲಿ ಲ್ಯಾಟಿನ್ ಪದಸಂಯೋಜನೆಯ ಪ್ರಭಾವಕ್ಕೆ ಒಳಗಾದುದರಿಂದ ಸ್ವಲ್ಪ ಜಟಿಲವಾಗಿದೆ. ಆದರೂ ಪ್ರಾಚೀನ ಬರೆಹಗಾರರ-ಮುಖ್ಯವಾಗಿ ಸಿಸಿರೊ ಮತ್ತು ಸೆನೆಕರ ಶೈಲಿಯ - ಶಿಸ್ತು ಕಾಣುತ್ತದೆ. ಆದರೆ ಶೈಲಿಯಲ್ಲಿ ಇವನದು ವಾಸ್ತವಿಕತೆಯ ಪರಮಾವಧಿ.ಅದು ಅತ್ಯಂತ ಸರಳ, ನಿರಾಡಂಬರ. ಸ್ಕೂಲ್‍ಮಾಸ್ಟರ್ಸ್‍ನಲ್ಲಿ ತೀಕ್ಷ್ಣವಾದ ವಿಮರ್ಶೆಯೂ ಉಂಟು. ಹಳೆಯ ಸಂಪ್ರದಾಯದ ಇಂಗ್ಲಿಷ್ ಗದ್ಯರೀತಿಯನ್ನು ಪ್ರಾರಂಭಿಸಿದವರಲ್ಲಿ, ಶುದ್ಧವಾಗಿರಬೇಕೆಂದು ಶ್ರಮಿಸಿದವರಲ್ಲಿ ಈತನೂ ಒಬ್ಬ. ಇವನಿಗೆ ಇಂಗ್ಲಿಷ್ ಭಾಷೆಯಲ್ಲಿ ನೈಜವಾದ ಅಭಿಮಾನವಿತ್ತು. ಪ್ರಾರಂಭದಲ್ಲಿ ಮುಖ್ಯವಾದ ಪತ್ರಗಳನ್ನು ಲ್ಯಾಟಿನ್ ಭಾಷೆಯಲ್ಲಿ ಬರೆಯುತ್ತಿದ್ದವ ತನ್ನ ಜರ್ಮನಿಯ ಪ್ರವಾಸದ ಅನುಭವಗಳನ್ನು ಮಿತ್ರರಿಗೆ ಇಂಗ್ಲಿಷ್ ಭಾಷೆಯಲ್ಲಿ ನಿರೂಪಿಸಿದ. ಇಂಗ್ಲಿಷರಿಗಾಗಿ ಇಂಗ್ಲಿಷ್ ಭಾಷೆಯಲ್ಲಿ ಇಂಗ್ಲಿಷ್ ವಸ್ತುವನ್ನು ರೂಪಿಸುವ ಬಯಕೆಯನ್ನು ಟ್ಯಾಕ್ಸೊಫಿಲಸ್ನಲ್ಲಿ ವ್ಯಕ್ತಪಡಿಸಿದ್ದಾನೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: