ರೈಕ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಡ ಅಪರಿಚಿತ ಬಂಡಿ ಚಾಲಕನಾಗಿದ್ದ ರೈಕ್ವನು ಛಾಂದೋಗ್ಯ ಉಪನಿಷತ್‍ನ ನಾಲ್ಕನೇ ಅಧ್ಯಾಯದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಅದರಲ್ಲಿ ಅರಿಯಬಲ್ಲ ಮತ್ತು ಅರಿಯಲು ಅಗತ್ಯವಿರುವ ಅದು ಅವನಿಗೆ ತಿಳಿದಿತ್ತು, ಈ ಎಲ್ಲವೂ ಯಾವುದರಿಂದ ಹುಟ್ಟಿತ್ತೋ ಆ ಅದು ಅವನಿಗೆ ತಿಳಿದಿತ್ತು ಎಂದು ಗೊತ್ತಾಗುತ್ತದೆ. ಭೂಮಿ, ಸ್ವರ್ಗ, ಜಲ, ಅಂತರಿಕ್ಷ ಮತ್ತು ವಾಯು ಎಲ್ಲ ವಸ್ತುಗಳ ಸ್ತರಶ್ರೇಣಿಗಳು ಎಂದು ಅನುಕ್ರಮವಾಗಿ ಅಭಿಪ್ರಾಯಹೊಂದಿದ್ದ ಉದ್ದಾಲಕ, ಪ್ರಚಿಂಶಾಲ, ಬುದಿಲ, ಸರ್ಕರಕ್ಷಯ ಮತ್ತು ಇಂದ್ರದ್ಯುಮ್ನರ ಜೊತೆಗೆ ರೈಕ್ವನು ಉಪನಿಷತ್ತುಗಳ ಅಗ್ರಗಣ್ಯ ವಿಶ್ವವೈಜ್ಞಾನಿಕ ಮತ್ತು ಮನೋವೈಜ್ಞಾನಿಕ ತತ್ವಜ್ಞಾನಿಗಳಲ್ಲಿ ಒಬ್ಬನಾಗಿದ್ದನು. ಅವನು ರಾಜ ಜನಶ್ರುತಿಗೆ ಸಂವರ್ಗ ವಿದ್ಯೆಯನ್ನು ತಿಳಿಸಿದನು.

"https://kn.wikipedia.org/w/index.php?title=ರೈಕ್ವ&oldid=407235" ಇಂದ ಪಡೆಯಲ್ಪಟ್ಟಿದೆ