ರೂಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಲಾಲ್ ಅದ್-ದೀನ್ ಮಹಮ್ಮದ್ ಬಾಲ್ಖಿ (ಪರ್ಷಿಯನ್: جلالالدین محمد بلخى) (೩೦ ಸೆಪ್ಟೆಂಬರ್ ೧೨೦೭ - ೧೭ ಡಿಸೆಂಬರ್ ೧೨೭೩ ) ಇವರು ಜಲಾಲ್ ಅದ್-ದೀನ್ ಮಹಮ್ಮದ್ ರೂಮಿ (جلالالدین محمد رومی) ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದು , ಇಂಗ್ಲೀಷ್ ಮಾತನಾಡುವ ಪ್ರದೇಶಗಳಲ್ಲಿ ರೂಮಿಎಂದೇ ಹೆಚ್ಚು ಜನಪ್ರಿಯವಾಗಿರುವರು. , ಇವರು ಕ್ರಿ. ಶ. ೧೩ನೇ ಶತಮಾನಪರ್ಷಿಯದ ಕವಿ, ನ್ಯಾಯಾಧೀಶ, ತತ್ವಶಾಸ್ತ್ರಜ್ಞ, ಮತ್ತು ಸೂಫಿ ಮಿಸ್ಟಿಕ್ . ಇರಾನಿಯನ್ನರು, ಟರ್ಕೀ ಜನರು , ಆಫ್ಘನ್ನರು, ತಾಜಿಕ್ ಜನರು, ಮತ್ತು ಇತರೆ ಮಧ್ಯ ಏಷ್ಯದ ಮುಸ್ಲಿಮರು ಅಷ್ಟೇ ಅಲ್ಲದೆ ಭಾರತೀಯ ಉಪಖಂಡದ ಮುಸ್ಲಿಮರು ಇವರ ಆಧ್ಯಾತ್ಮಿಕ ವಿಚಾರಧಾರೆಯನ್ನು ಕಳೆದ ಏಳು ಶತಮಾನಗಳ ಅವಧಿಯಲಿ ಮೆಚ್ಚಿಕೊಂಡಿದ್ದಾರೆ. ರೂಮಿ ಅವರ ಮಹತ್ವವು ರಾಷ್ಟ್ರೀಯ ಮತ್ತು ಜನಾಂಗೀಯ ಗಡಿಗಳನ್ನು ಮೀರುವಂಥದು ಎಂದು ಪರಿಗಣಿಸಲಾಗಿದೆ. ಅವರ ಕವಿತೆಗಳನ್ನು ವಿಶ್ವದ ಅನೇಕ ಭಾಷೆಗಳಲ್ಲಿ ವಿವಿಧ ಶೈಲಿಗಳಲ್ಲಿ ಭಾಷಾಂತರಿಸಲಾಗಿದೆ. ೨೦೦೭ರಲ್ಲಿ ಅವರನ್ನು "ಅಮೇರಿಕಾದಲ್ಲಿ ಅತ್ಯಂತ ಜನಪ್ರಿಯ ಕವಿ." ಎಂದು ಬಣ್ಣಿಸಲಾಯಿತು.

"https://kn.wikipedia.org/w/index.php?title=ರೂಮಿ&oldid=923673" ಇಂದ ಪಡೆಯಲ್ಪಟ್ಟಿದೆ