ರೂಬಿ ಲೇಸರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಂಡದ ರೂಪದಲ್ಲಿರುವ ಕೆಂಪು ಹರಳನ್ನು ಬೆಳಕಿನ ಪ್ರವರ್ಧನೆಗೆ ಬಳಸುವುದರಿಂದ ಇದಕ್ಕೆ ರೂಬಿ ಲೇಸರ್ ಎಂದು ಹೆಸರು . ಕ್ಲಿನಾನ್ ಅನಿಲವಿರುವ ಗಾಜಿನ ನಳಿಕೆಯಿಂದ ರೂಬಿ ದಂಡವನ್ನು ಸುತ್ತಿರುತ್ತಾರೆ . ಕ್ಲಿನಾನ್ ಅನಿಲ ವಿದ್ಯುತ್ ಆಕಾರದಿಂದ ಉತ್ತೇಜನಗೊಂಡು ಪ್ರಖರ ಬೆಳಕನ್ನು ಹೊರ ಸೂಸುತ್ತದೆ . ಈ ಬೆಳಕನ್ನು ಹೀರುವ ರೂಬಿ ಹರಳಿನ ಪರಮಾಣುಗಳು ಒಂದೇ ಮಟ್ಟಕ್ಕೆ ಉತ್ತೇಜನಗೊಳ್ಳುತ್ತದೆ. ಎಲ್ಲಾ ಉತ್ತೇಜಿತ ಪರಮಾಣುಗಳು ಬೆಳಕನ್ನು ಹೊರಸೂಸಿ ಸಹಜ ಸ್ಥಿತಿಗೆ ಮರಳುವಂತೆ ಯಾವುದೋ ಒಂದು ಫೋಟಾನ್ ಮಾಡುತ್ತದೆ. ಆಗ ಬೆಳಕು ಉತ್ಸರ್ಜನೆಯಾಗುತ್ತದೆ . ಇದುವೇ ಪ್ರಚೋದಿತ ಉತ್ಸರ್ಜನೆ . ಹರಳಿನ ತುದಿಗಳಲ್ಲಿ ಅಳವಡಿಸಿರುವ ಅರೆಲೇಪಿತ ಕನ್ನಡಿಗಳಿಂದ ಬೆಳಕು ಅನೇಕ ಬಾರಿ ಪ್ರತಿಪಲನಗೊಳ್ಳುತ್ತದೆ. ಆಗ ಬೆಳಕಿನ ಫೋಟಾನ್ ಗಳು , ಇತರ ಉತ್ತೇಜಿತ ಪರಮಾಣುಗಳೆಲ್ಲವು ಬೆಳಕನ್ನು ಹೊರಸೋಸುವಂತೆ ಮಾಡುತ್ತವೆ. ಹೀಗೆ ಪ್ರವರ್ಧಿಸಿದ ಬೆಳಕು ಅರೆಲೇಪಿತ ಕನ್ನಡಿಯ ಮೂಲಕ ಉಜ್ವಲ ವಿಕವರ್ಣಿಯ ಲೇಸರ್ ಬೆಳಕಿನ ರೂಪದಲ್ಲಿ ಹೊರ ಹೊಮ್ಮುತ್ತದೆ. ಬೆಳಕಿನ ಪ್ರಚೋದಿತ ಉತ್ಸರ್ಜನೆ ಬಗ್ಗೆ ೧೮೧೭ ರಲ್ಲಿ ಐನ್ ಸ್ಟೈನ್ ತಿಳಿಸಿದ್ದರು. ೧೯೫೦ ರಲ್ಲಿ ಅಮೇರಿಕಾದ ಟಾನ್ಸೆ ಮತ್ತು ಚೌಲೋ ಹಾಗೂ ರಷ್ಯದ ಬಾಸೋವ್ ಮತ್ತು ಪ್ರಖರೋವ್ ಲೇಸರ್ ಬಗ್ಗೆ ಸಂಶೋಧನೆ ನಡೆಸಿದರು . ೧೯೬೦ ರ ದಶಕದಲ್ಲಿ ಲೇಸರ್ ರೂಪ ತಾಳಿತು.ಮೊತ್ತಮೊದಲ ರೂಬಿ ಲೇಸರ್ ಅಮೆರಿಕ ವಿಜ್ಞಾನಿ ಥಿಯೋಡೋರ್ ಎಂ . ಮೈಮನ್ ರವರ ಪರಿಶ್ರಮದಿಂದ ಕಾರ್ಯ ರೂಪಕ್ಕೆ ಬಂದಿತು . ರೇಡಿಯೋ ತರಂಗಳಿಗೆ ಹೋಲಿಸಿದರೆ ಬೆಳಕಿನ ಆವೃತ್ತಿ ಹೆಚ್ಚು . ಆದ್ದರಿಂದ ಒಮ್ಮೆಲೇ ಸಾವಿರಾರು ಸಂಜ್ಞೆ ಗಳನ್ನು ಕೊಂಡೊಯ್ಯಬಲ್ಲ ಅದರ ಸಾಮರ್ಥ್ಯವೂ ಹೆಚ್ಚು . ಟೆಲಿವಿಷನ್ ಮತ್ತು ಇತರ ಸಂಪರ್ಕ ಸಾಧನಗಳಲ್ಲಿ ಲೇಸರ್ ಬಳಕೆ ಹೆಚ್ಚಾಗಲು ಇದೇ ಕಾರಣ . ಲೇಸರ್ ಬೆಳಕನ್ನು ಒಂದೆಡೆ ಕೇಂದ್ರೀಕರಿಸಿ ಉಷ್ಣತೆ ಹೆಚ್ಚಿಸಬಹುದು . ಇದರಿಂದ ಅತಿ ಗಡಸು ವಸ್ತುಗಳನ್ನೂ ಕರಗಿಸಬಹುದು . ಅತಿ ಸೂಕ್ಷ್ಮ ರಂಧ್ರಗಳನ್ನು ಕೊರೆಯಬಹುದು . ವೈದ್ಯಕೀಯ ಕ್ಷೇತ್ರದಲ್ಲಂತೂ ಲೇಸರ್ ಬಹು ಉಪಯೋಗಿ . ದಂತ ವೈದ್ಯರು ದಂತ ಚಿಕಿತ್ಸೆಯಲ್ಲಿ ಲೇಸರ್ ಬಳಸುತ್ತಾರೆ . ರಕ್ತರಹಿತ ಶಸ್ತ್ರ ಚಿಕಿತ್ಸೆಗಾಗಿ ಲೇಸರ್ ಉಪಯುಕ್ತವೆನಿಸಿದೆ .