ರಿನೋರಿಯ ನಿಕೋಲಿಫೆರ
ರಿನೋರಿಯ ನಿಕೋಲಿಫೆರ | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | R. niccolifera
|
Binomial name | |
Rinorea niccolifera |
ರಿನೋರಿಯ ನಿಕೋಲಿಫೆರ ಹೊಸದಾಗಿ ಪತ್ತೆಯಾದ ಗಿಡ.ಇದನ್ನು ಫಿಲಿಫೈನ್ಸ್‍ನ ಲುಜಾನ್ ಎಂಬಲ್ಲಿ ೨೦೧೪ರಲ್ಲಿ ಪತ್ತೆ ಮಾಡಲಾಯಿತು.[೧]
ಮುನ್ನುಡಿ
[ಬದಲಾಯಿಸಿ]ಹೊಸದಾಗಿ ಪತ್ತೆಯಾದ ಸಸ್ಯದ ಎಲೆಗಳು ನಿಕ್ಕಲ್ ಮೆಟಲ್ನನ್ನು ಬೆರಗುಗೊಳಿಸುವ ಮಟ್ಟದಲ್ಲಿ ಸಂಗ್ರಹಿಸುತ್ತವೆ.[೨] ತೂಕದ 18,000 ಪಿಪಿಎಂ ಸಾಂದ್ರತೆಗಳನ್ನು ಹೊಂದಿದ್ದು, ಒಣಗಿದ ಎಲೆಗಳಿಂದ ಸುಮಾರು 2% ನಿಕಲ್ ಮಾಡುವುದಾಗಿ ಅಳತೆ ಮಾಡಲಾಗಿದೆ. ಬಹುತೇಕ ಸಸ್ಯಗಳು ಆ ಮಟ್ಟವನ್ನು ಒಂದು ಸಾವಿರದಷ್ಟು ತಾಳಿದಾಗ ಸಾಯುತ್ತವೆ.
ನಿಕಲ್ ಭರಿತ ಮಣ್ಣಿನಲ್ಲಿ ಬೆಳೆಯುವ ಜಾತಿಗಳು ಕೂಡ ಲೋಹದ ಹಯ್ಪರ್ಅಕ್ಯುಮುಲೋಸ ಸಾಮರ್ಥ್ಯವನ್ನು ಹೊಂದಿವೆ.ಇದೇ ರೀತಿಯ 500 ಜಾತಿಯ ಗಿಡಗಳು ಒಂದು ಲೋಹ ಅಥವಾ ಇನ್ನೊಂದನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸುತ್ತವೆ.
ಹಯ್ಪರ್ಅಕ್ಯುಮುಲೇಟರ್ಸ್ ಸಂಬಂಧಿತ ಕುಟುಂಬಗಳ ಉದ್ದಕ್ಕೂ ಸಾಮಾನ್ಯ ಲಕ್ಷಣ ಎಂದರೆ ಅವು ಹಾನಿಯಾಗದಂತೆ ನಿಕಲ್ನನ್ನು ಹಿಡಿದಿಡುತ್ತವೆ,ಎಲೆಗಳು ಬೇರುಗಳಿಂದ ಲೋಹವನ್ನು ಚಲಿಸುವ ಸಾಮರ್ಥ್ಯವನ್ನು ಹೊಂದಿವೆ. ಲೋಹದ ಎಲೆಗಳನ್ನು ತಿನ್ನುವ ಪ್ರಾಣಿಗಳನ್ನು ನಿಲ್ಲಿಸಲು ಇದು ಒಂದು ಮಾರ್ಗವೆಂದು ಭಾವಿಸಬಹುದು.
ಗುಣಗಳು
[ಬದಲಾಯಿಸಿ]ರಿನೋರಿಯ ನಿಕೋಲಿಫೆರ ಪಟ್ಟಿಗೆ ಹೊಸ ಪ್ರವೇಶ, ಫಿಲಿಪ್ಪೀನ್ಸ್ ವಿಶ್ವವಿದ್ಯಾಲಯದ ಏಢ್ವಿನೋ ಫರ್ನಾಂಡೊ ಮತ್ತು ಮೆಲ್ಬರ್ನ್ ವಿಶ್ವವಿದ್ಯಾಲಯದ ಡಾ ಅಗಸ್ಟೀನ್ ಡೊರೊನಿಲ್ಲ ಇದನ್ನು ಕಂಡುಹಿಡಿದರು ಮತ್ತು ಇದನ್ನು ಫಯ್ಟೊಕೀಸ್ನಲ್ಲಿ ವಿವರಿಸಲಾಗಿದೆ.ಇದು 8 ಮೀ ಎತ್ತರದವರೆಗೆ ಬೆಳೆಯುವ ಒಂದು ಉಷ್ಣವಲಯದ ಅರಣ್ಯ ಪೊದೆಸಸ್ಯ.ಇದುವರೆಗೆ ಉತ್ತರ ಪಶ್ಚಿಮ ಲುಜಾನ್ನ ಸಣ್ಣ ವಿಭಾಗದಲ್ಲಿ ಮಾತ್ರ ಕಂಡುಬಂದಿದೆ. ಸೀಮಿತ ಮಾದರಿ ನೀಡಿದಾಗ ವಿವಿಧ ಮಣ್ಣುಗಳಲ್ಲಿ ಇನ್ನೂ ಹೆಚ್ಚು ನಿಕಲ್ ತೆಗೆದುಕೊಳ್ಳಳು ಸಾಧ್ಯ.
ಹಯ್ಪರ್ಅಕ್ಯುಮುಲೇಟರ್ಸ್ಗಳು ಸಾಮಾನ್ಯ ಲೋಹವಾದ ನಿಕಲ್ಗೆ ರುಚಿ ಹೊಂದಿರುತ್ತವೆ.ಬೆರಳೆಣಿಕೆಯಷ್ಟು ಎಲೆಗಳು ಆರ್ ನಿಕೋಲಿಫೆರಗಿಂತ ಹೆಚ್ಚು ಪ್ರಮಾಣದಲ್ಲಿ ಸಂಗ್ರಹಿಸಬಹುದು.ಆದರೆ ಅದರ ಸಾಮರ್ಥ್ಯದ ಹತ್ತರಷ್ಟು ಕಡಿಮೆ ಇರುವ ಕೆಲವು ಸಸ್ಯಗಳನ್ನು ಹಯ್ಪರ್ಅಕ್ಯುಮುಲೇಟರ್ಸ್ಗಳಾಗಿ ಪಟ್ಟಿಮಾಡಲಾಗಿದೆ.
ಉಪಯೋಗಗಳು
[ಬದಲಾಯಿಸಿ]ಹಯ್ಪರ್ಅಕ್ಯುಮುಲೇಟರ್ ಸಸ್ಯಗಳು ಹಸಿರು ತಂತ್ರಜ್ಞಾನಗಳ ಅಭಿವೃದ್ಧಿಗೆ ಅತ್ಯುತ್ತಮ ವಿಭವವನ್ನು ಹೊಂದಿವೆ, ಉದಾಹರಣೆಗೆ, 'ಫೈಟೊರೆಮಿಡಿಯೇಶನ್' ಮತ್ತು 'ಫೈಟೊಮಯ್ನಿಂಗ್' ಎಂದು ಡೊರೊನಿಲ್ಲ ಹೇಳುತ್ತಾರೆ.'ಫೈಟೊರೆಮಿಡಿಯೇಶನ್' ಎಂದರೆ ಸಸ್ಯಗಳನ್ನು ಬಳಸಿ ಮಣ್ಣಿನಿಂದ ಲೋಹವನ್ನು ಎಲೆಗಳ ಮೂಲಕ ಸಂಗ್ರಹಿಸಿ ಮಣ್ಣನ್ನು ಶುದ್ಧೀಕರಿಸುವುದು. ಲೋಹವನ್ನು ಮಣ್ಣಿನಿಂದ ತೆಗೆದುಹಾಕುವುದಕ್ಕಿಂತ ಎಲೆಗಳನ್ನು ತೆಗೆದುಹಾಕುವುದು ಸುಲಭ.'ಫೈಟೊಮಯ್ನಿಂಗ್' ಎಂದರೇ ನಮಗೆ ಬೇಕಾದ ಲೋಹವನ್ನು, ಗಿಡಗಳ ಮೂಲಕ ಸಂಗ್ರಹಿಸುವುದು.ಇತರ ವಿಧಾನಗಳು ಆರ್ಥಿಕವಾಗಿ ಹಾಗು ನೈಸರ್ಗಿಕವಾಗಿ ಪರಿಸರಕ್ಕೆ ಸೂಕ್ತವಲ್ಲ.ಲೋಹದಿಂದ ಕಲುಷಿತವಾದ ಮಣ್ಣಿನ ಫೈಟೊರೆಮಿಡಿಯೇಶನ್ ಶೈಶವಾವಸ್ಥೆಯಲ್ಲಿದೆ ಆದರೆ ಫೈಟೊಮಯ್ನಿಂಗ್ ಇನ್ನೂ ಸೈದ್ಧಾಂತಿಕ ಸಂದರ್ಭದಲ್ಲಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ doi:10.3897/phytokeys.37.7136
This citation will be automatically completed in the next few minutes. You can jump the queue or expand by hand - ↑ "New Species of Metal-eating Plant Discovered". Astrobiology.com. 2014-05-09. Retrieved 2014-05-10.