ರಿಚರ್ಡ್ ಗ್ಯಾರಿ ಬ್ರಾಟಿಗಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಿಚರ್ಡ್ ಗ್ಯಾರಿ ಬ್ರಾಟಿಗಾನ್
ಜನನಜನವರಿ ೩೦, ೧೯೩೫
ಟಕೋಮಾ, ವಾಷಿಂಗ್ಟನ್, ಯುನೈಟೆಡ್ ಸ್ಟೇಟ್ಸ್
ಮರಣಸೆಪ್ಟೆಂಬರ್ ೧೬, ೧೯೮೪
ಬೊಲಿನ್ಸ್, ಕ್ಯಾಲಿಫೋರ್ನಿಯ, ಯುನೈಟೆಡ್ ಸ್ಟೇಟ್ಸ್
ವೃತ್ತಿಕಾದಂಬರಿಕಾರ, ಕವಿ, ಸಣ್ಣ ಕಥೆಗಾರ
ರಾಷ್ಟ್ರೀಯತೆಅಮೆರಿಕನ್
ಪ್ರಕಾರ/ಶೈಲಿಹಾಸ್ಯ, ಭಾವನಾತ್ಮಕ

ಪ್ರಭಾವಗಳು
  • ವಿಲಿಯಂ ಕಾರ್ಲೋಸ್ ವಿಲಿಯಂಸ್, ಎಮಿಲಿ ಡಿಕಿನ್ಸನ್, ಜ್ಯಾಕ್ ಕೆರೌವಕ್, ಅರ್ನೆಸ್ಟ್ ಹೆಮಿಂಗ್ವೇ

ಪ್ರಭಾವಿತರು
  • ಹರುಕಿ ಮುರಾಕಮಿ, ಡಾನ್ ಕಾರ್ಪೆಂಟರ್, ಬೆನ್ ಮೈಯರ್ಸ್

ರಿಚರ್ಡ್ ಗ್ಯಾರಿ ಬ್ರಾಟಿಗಾನ್, ಅಮೆರಿಕದ ಒಬ್ಬ ಕಾದಂಬರಿಕಾರ, ಕವಿ, ಮತ್ತು ಸಣ್ಣ ಕಥೆಗಾರ. ಆತನ ಕೃತಿಗಳು ಕಪ್ಪು ಹಾಸ್ಯ, ಅಣಕ ಹಾಗೂ ವಿಡಂಬನೆಯಿಂದ ಕೂಡಿವೆ. ಅವರ ೧೯೬೭ರ ಟ್ರೌಟ್ ಫೀಶಿಂಗ್ ಇನ್ ಅಮೆರಿಕ ಎಂಬ ಕಾದಂಬರಿಗೆ ಪ್ರಸಿದ್ಧರಾಗಿದ್ದಾರೆ. ಬ್ರಾಟಿಗಾನ್ ೧೯೩೫ರಲ್ಲಿ ಟಕೋಮಾ, ವಾಷಿಂಗ್ಟನ್ನಲ್ಲಿ ಜನಿಸಿದರು.[೧] ಅವರು ಬಡತನದಲ್ಲಿ ಬೆಳೆದರು, ಅವರ ತಾಯಿ ಹಿಟ್ಟಿನಲ್ಲಿ ಇದ್ದ ಇಲಿ ಪಿಕ್ಕೆಗೆಗಳನ್ನು ಜರಡಿಹಿಡಿದು ಅದ್ದರಿಂದ ಪ್ಯಾನ್ಕೇಕ್ಗಳನ್ನು ಮಾಡುತ್ತಿದ್ದ ಬಗ್ಗೆ ಬ್ರಾಟಿಗಾನ್ ತಮ್ಮ ಮಗಳಿಗೆ ಕಥೆಗಳನ್ನು ಹೇಳುತ್ತಿದ್ದರು. ಸೆಪ್ಟೆಂಬರ್ ೧೨, ೧೯೫೦ರಂದು, ಬ್ರಾಟಿಗಾನ್ ವುಡ್ರೋ ವಿಲ್ಸನ್ ಜೂನಿಯರ್ ಹೈಸ್ಕೂಲ್ ಇಂದ ಪದವೀಧರರಾಗಿದ್ದು ನಂತರ ಯುಜೀನ್ ಹೈಸ್ಕೂಲ್ ಸೇರಿದರು. ಅವರು ತಮ್ಮ ಪ್ರೌಢಶಾಲಾ ಪತ್ರಿಕೆ, ಯುಜೀನ್ ಹೈಸ್ಕೂಲ್ ನ್ಯೂಸ್ಗೆ ಬರೆಯುತ್ತಿದರು. ಅವರು ತಮ್ಮ ಶಾಲೆಯ ಬ್ಯಾಸ್ಕೆಟ್ಬಾಲ್ ತಂಡದಲ್ಲಿ ಆಡಿದ್ದರು ಮತ್ತು ಅವರ ಪದವೀಧರನಾಗುವ ಹೊತ್ತಿಗೆ ೬ ಅಡಿ ೪ ಇಂಚ್ ಎತ್ತರಕ್ಕೆ ಬೆಳೆದಿದ್ದರು. ಡಿಸೆಂಬರ್ ೨೪, ೧೯೫೨ರಂದು ಅವರ ಮೊದಲ ಪ್ರಕಟವಾದ ಕವಿತೆ, ಲೈಟ್, ಶಾಲೆಯ ದಿನಪತ್ರಿಕೆಯಲ್ಲಿ ಕಾಣಿಸಿಕೊಂಡಿತು. ನಂತರ, ೧೯೫೫ರ ಡಿಸೆಂಬರ್ ೨೪ರಂದು ಒರೆಗಾನ್ ರಾಜ್ಯ ಆಸ್ಪತ್ರೆಗೆ ಸೇರಿಸಲಾಯಿತು, ಅಲ್ಲಿ ಬ್ರಾಟಿಗಾನ್‌ರವರಿಗೆ ಸಂಶಯಗ್ರಸ್ತ ಸ್ಕಿಜೋಫ್ರೇನಿಯಾ ಮತ್ತು ಮಾನಸಿಕ ಖಿನ್ನತೆ ಇದೆ ಎಂದು ಗುರುತಿಸಲಾಯಿತು. ಫೆಬ್ರವರಿ ೧೯, ೧೯೫೬ರಂದು ಬ್ರಾಟಿಗಾನ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿದರು.

ವೃತ್ತಿ[ಬದಲಾಯಿಸಿ]

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ, ಬ್ರಾಟಿಗಾನ್, ಒಬ್ಬ ಬರಹಗಾರನಾಗಿ ಸ್ಥಾಪಿಸಿಕೊಳಲು ಪ್ರಯತ್ನಿಸಿದ್ದರು. ಅವರು ತಮ್ಮ ಕವನಗಳನ್ನು, ಕವಿತೆ ಕ್ಲಬ್ಗಳಲ್ಲಿ ಮತ್ತು ಬೀದಿಗಳಲ್ಲಿ ಪ್ರದರ್ಶನ ನೀಡುವುದಕ್ಕೆ ಹೆಸರುವಾಸಿಯಾಗಿದ್ದರು. ೧೯೫೬ರ ಆರಂಭದಲ್ಲಿ ಬ್ರಾಟಿಗಾನ್ ಮೂರು ಪುಟದ ಹಸ್ತಪ್ರತಿ ಟೈಪ್ ಮಾಡಿ ಪ್ರಕಟಣೆಗೆ ಮ್ಯಾಕ್ಮಿಲನ್ ಕಂಪನಿಗೆ ಕಳುಹಿಸಿದರು. ಮೇ ೧೦,೧೯೫೬ರ ಒಂದು ಪತ್ರದಲ್ಲಿ, ಮ್ಯಾಕ್ಮಿಲನ್ ಕಂಪನಿ ಆ ಹಸ್ತಪ್ರತಿಯನ್ನು ಪ್ರಕಟಿಸಲು ಒಪ್ಪದೆ ತಿರಸ್ಕರಿಸಿದರು. ೧೯೫೭ರಲ್ಲಿ ಬ್ರಾಟಿಗಾನ್ ದ ರಿಟರ್ನ್ ಅಫ್ ದ ರಿವರ್ಸ್ ಎಂಬ ಏಕ ಕವಿತೆಯನ್ನು ಮೊದಲ ಕವನ ಪುಸ್ತಕವಾಗಿ ಪ್ರಕಟಿಸಲಾಯಿತು. ನಂತರ ಕಾವ್ಯದ ಎರಡು ಸಂಗ್ರಹಗಳನ್ನು: ಗೆಲಿಲೀ ಹಿಚ್ಹೈಕರ್ (೧೯೫೮), ಮಾರ್ಬಲ್ ಟೀ (೧೯೫೯) ಕೂಡ ಪ್ರಕಟಣೆಮಾಡಲಾಯಿತು. ೧೯೬೧ ರ ಬೇಸಿಗೆಯಲ್ಲಿ, ಅವರ ಪತ್ನಿ ಮತ್ತು ಮಗಳೊಂದಿಗೆ, ದಕ್ಷಿಣ ಇದಾಹೊದಲ್ಲಿ ಮೊಕ್ಕಾಂ ಮಾಡುವ ಸಂದರ್ಭದಲ್ಲಿ, ಬ್ರಾಟಿಗಾನ್ ತಮ್ಮ ದ ಕಾನ್ಫೆಡರೇಟ್ ಜನರಲ್ ಅಫ್ ಬಿಗ್ ಸುರ್ ಮತ್ತು ಟ್ರೌಟ್ ಫೀಶಿಂಗ್ ಇನ್ ಅಮೆರಿಕ ಕಾದಂಬರಿಗಳನ್ನು ಪೂರ್ಣಗೊಳಿಸಿದರು. ದ ಕಾನ್ಫೆಡರೇಟ್ ಜನರಲ್ ಅಫ್ ಬಿಗ್ ಸುರ್ ಮೊದಲ ಬಾರಿ ಪುಸ್ತಕವಾಗಿ ಪ್ರಕಟಣೆಯಾದ ಕಾದಂಬರಿಯು, ಅದು ವಿಮರ್ಶಾತ್ಮಕ ಅಥವಾ ವಾಣಿಜ್ಯ ಯಶಸ್ಸನ್ನು ಕಾಣಲಿಲ್ಲ. ಆದರೆ ಟ್ರೌಟ್ ಫಿಶಿಂಗ್ ಇನ್ ಅಮೆರಿಕ ಕಾದಂಬರಿ ೧೯೬೭ರಲ್ಲಿ ಪ್ರಕಟಣೆಯಾದಾಗ, ಅದು ವಿಶ್ವಾದ್ಯಂತ ಸುಮಾರು ೪ ಮಿಲಿಯನ್ ಪ್ರತಿಗಳು ಮಾರಾಟವಾಗಿ, ಬ್ರಾಟಿಗಾನ್ ಅಂತಾರಾಷ್ಟ್ರೀಯವಾಗಿ ಖ್ಯಾತಿಯಾದರು.[೨]

ವೈಯಕ್ತಿಕ ಜೀವನ[ಬದಲಾಯಿಸಿ]

ಜೂನ್ ೮, ೧೯೫೭ರಂದು ಬ್ರಾಟಿಗಾನ್ ರೆನೋ, ನೆವಾಡಾದಲ್ಲಿ ವರ್ಜೀನಿಯಾ ಡೀಯೋನೆ ಆಲ್ಡರ್‌ನ ಮದುವೆಯಾದರು. ೨೫ ಮಾರ್ಚ್ ೧೯೬೦ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಲ್ನಾತೆ ಎಲಿಜಬೆತ್ ಬ್ರಾಟಿಗಾನ್, ಅವರಿಬ್ಬರ ಮಗಳಾಗಿ ಹುಟ್ಟಿದಳು. ಬ್ರಾಟಿಗಾನ್‌ನ ಮಧ್ಯದ ಮತ್ತು ಖಿನ್ನತೆಯ ಕಾರಣಗಳಿಂದ ಅವರು ನಿಂದನೆ ಹೆಚ್ಚಾಗಿ ಮಾಡುತ್ತಿದ್ದರಿಂದ , ೨೪ ಡಿಸೆಂಬರ್ ೧೯೬೨ರಂದು ಆಲ್ಡರ್ ಬ್ರಾಟಿಗಾನ್‌‍ರವರ ಜೊತೆ ತಮ್ಮ ಸಂಬಂಧವನ್ನು ಕೊನೆಗೊಳಿಸಿದರು, ಆದರೆ ೨೮ ಜುಲೈ ೧೯೭೦ರಂದೆ ಆವರಿಗೆ ವಿಚ್ಛೇದನದ ಅಂತಿಮ ನಿರ್ಣಯ ಸಿಕ್ಕಿದ್ದು. ಬ್ರಾಟಿಗಾನ್ ಬೇರ್ಪಟ್ಟ ನಂತರವೂ ಸ್ಯಾನ್ ಫ್ರಾನ್ಸಿಸ್ಕೋದಲ್ಲೇ ವಾಸಿಸುತ್ತಿದ್ದರು. ಬ್ರಾಟಿಗಾನ್ ಜಪಾನೀ ಸಂಜಾತ ಅಕ್ಕಿಕ್ಕೊ ಯೋಶೀಮುರಾದೊಂದಿಗೆ ಡಿಸೆಂಬರ್ ೧, ೧೯೭೭ರಂದು ಮರುಮದುವೆಯಾದರು. ಅವರಿಬ್ಬರು ಎರಡು ವರ್ಷಗಳ ಕಾಲ, ಪೈನ್ ಕ್ರೀಕ್, ಪಾರ್ಕ್ ಕೌಂಟಿ, ಮೊಂಟಾನಾದಲ್ಲಿ ನೆಲೆಸಿದರು. ಬ್ರಾಟಿಗಾನ್ ಮತ್ತು ಯೋಶೀಮುರಾ ೧೯೮೦ರಲ್ಲಿ ವಿಚ್ಛೇದನ ಪಡೆದರು. ೧೯೮೧ ರಿಂದ ೧೯೮೨ರವರೆಗೂ ಬ್ರಾಟಿಗನ್ ಸ್ಯಾನ್ ಫ್ರಾನ್ಸಿಸ್ಕೋದ, ಮಾರ್ಸಿಯಾ ಕ್ಲೇದೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದರು. ಬ್ರಾಟಿಗಾನ್ ತಮ್ಮ ಯೌವನವನ್ನು ಆಲ್ಕೊಹಾಲ್ಯುಕ್ತವಾಗಿ ಹಾಗೂ ಹತಾಶೆಯಲ್ಲೇ ಕಳೆದರು. ಅವರ ಮಗಳ ಪ್ರಕಾರ, ಅವರು ಅನೇಕವೇಳೆ ತಮ್ಮ ಸಾವಿನ ಮುಂಚೆ, ದಶಕಕ್ಕೂ ಹೆಚ್ಚು ಕಾಲ ಆತ್ಮಹತ್ಯೆಗೆ ಪ್ರಯತ್ನಿಸಿದರು ಎಂದು ಹೇಳಿದ್ದರಂತೆ. ೧೯೮೪ರಂದು ಬ್ರಾಟಿಗಾನ್ ತಾನು ಸಂಪಾದಿಸಿದ್ದ ಹಣದಿಂದ ಒಂದು ದೊಡ್ಡ, ಹಳೆಯ ಬಂಗ್ಲೋದಲ್ಲಿ ಒಂಟಿ ಜೀವನ ನಡೆಸುತ್ತಿದ್ದರು. ಅವರು ತಲೆಗೆ ಸ್ವಯಂಕೃತ ೪೪ ಮ್ಯಾಗ್ನಮ್ ಬಂದೂಕಿನ ಗುಂಡು ತಗುಲಿದ ಗಾಯದಿಂದ ನಿಧನಗೊಂಡರು. ಅಕ್ಟೋಬರ್ ೨೫, ೧೯೮೪ರಂದು, ಅವರ ಕೊಳೆತ ದೇಹವನ್ನು, ಸ್ನೇಹಿತ ಮತ್ತು ಖಾಸಗಿ ತನಿಖೆದಾರ ರಾಬರ್ಟ್ ಯ್ನಚ್ ಪತ್ತೆಹಚ್ಚಿದರು. ಅವರ ಮನೆಯ ಮಹಡಿಯ ಕೋಣೆಯಿಂದ ಪೆಸಿಫಿಕ್ ಸಾಗರವನ್ನು ಕಾಣಬಲ್ಲ ದೊಡ್ಡ ಕಿಟಕಿಯ ಬಳಿ ಅವರ ದೇಹವನ್ನು ಪತ್ತೆಹಚ್ಚಿದರು. ದೇಹದ ಕೊಳೆಯುವಿಕೆಯಿಂದಾಗಿ, ೧೯೮೪ ಸೆಪ್ಟೆಂಬರ್ ೧೬ರಂದು ಬ್ರಾಟಿಗಾನ್ ಒಂದು ತಿಂಗಳ ಮುಂಚೆಯೇ ಸತ್ತಿದ್ದರು ಎಂದು ಊಹಿಸಲಾಗಿದೆ. ಅವರ ಸಾವಿನ ನಂತರ ಎರಡು ವರ್ಷಗಳಾದ ಮೇಲೆ ಎಲಿಜಬೆತ್ ಎಂಬ ಮೊಮ್ಮಗು ಹುಟ್ಟಿದಳು.

ಪರಂಪರೆ[ಬದಲಾಯಿಸಿ]

ಹಲವಾರು ಲೇಖಕರು ಬ್ರಾಟಿಗಾನ್‌ನರವರಿಂದ ಪ್ರಭಾವಿತರಾಗಿದ್ದಾಗಿ ಹೇಳಿದ್ದಾರೆ. ಬ್ರಾಟಿಗಾನ್ ತಮ್ಮ ಕಾದಂಬರಿ ದಾ ಅಬರ್ಷನ್ರಲ್ಲಿ ಯೋಚಿಸಿರುವಂತೆ ಅಪ್ರಕಟಿತ ಕೃತಿಗಳ ಗ್ರಂಥಾಲಯವನ್ನು ಬರ್ಲಿಂಗ್ಟನ್, ವೆರ್ಮಾಂಟ್‌ನಲ್ಲಿ ಇದ್ದ ಬ್ರಾಟಿಗಾನ್ ಗ್ರಂಥಾಲಯದಲ್ಲಿ ಇಟ್ಟಿದ್ದರು. ಆದರೆ ೧೯೯೫ರಂದು ಫ್ಲೆಚರ್ ಉಚಿತ ಗ್ರಂಥಾಲಯಕ್ಕೆ ಕಳುಹಿಸಿ, ಅದು ಅಲ್ಲೇ ೨೦೦೫ ತನಕ ಇತ್ತು. ೨೦೧೦ರಲ್ಲಿ ಲ್ನಾತೆ ಬ್ರಾಟಿಗಾನ್ ಮತ್ತು ವ್ಯಾಂಕೋವರ್, ವಾಷಿಂಗ್ಟನ್, ಕ್ಲಾರ್ಕ್ ಕೌಂಟಿ ಹಿಸ್ಟಾರಿಕಲ್ ಮ್ಯೂಸಿಯಂ ನಡುವೆ ಒಪ್ಪಂದವಾಗಿದ್ದ ಕಾರಣ ಬ್ರಾಟಿಗಾನ್ ಗ್ರಂಥಾಲಯವನ್ನು ಮ್ಯೂಸಿಯಂಗೆ ಸೇರಿಸಲಾಯಿತ್ತು. ಖಂಖ್ವಟ್ ಮರಿನಗ್ಯು ಎಂಬ ಒಂದು ಸಾಹಿತ್ಯಿಕ ಪತ್ರಿಕೆಯನ್ನು ರಾಕ್ಫೋರ್ಡ್, ಇಲಿನಾಯ್ಸ್‌ನಲ್ಲಿ ಬ್ರಾಟಿಗಾನ್‌ರ ನೆನಪಿನಲ್ಲಿ ಪ್ರಕಟಿಸಲಾಯಿತ್ತು. ಮಾರ್ಚ ೧೯೯೪ರಲ್ಲಿ ಕಾರ್ಪಿಂಟೇರಿಯಾ, ಕ್ಯಾಲಿಫೋರ್ನಿಯಾದ ಪೀಟರ್ ಈಸ್ಟ್ಮನ್ ಜೂನಿಯರ್ ಎಂಬ ಹದಿಹರೆಯದ ಹುಡುಗ ತನ್ನ ಹೆಸರನ್ನು ಟ್ರೌಟ್ ಫಿಶಿಂಗ್ ಇನ್ ಅಮೆರಿಕ ಎಂದು ಬದಲಾಹಿಸಿಕೊಂಡ.

ಬ್ರಾಟಿಗಾನ್ ಗ್ರಂಥಾಲಯ
  • ಕಂಕ್ವಟ ಮರೈನ ಎಂಬ ಸಾಹಿತ್ಯಿಕ ಪತ್ರಿಕೆ ಬಾಟಿಗನ್‌ನ ನೆನಪಿನಲ್ಲಿ ಪ್ರಕಟಿಸಲಾಗಿದೆ.
  • ಸ್ಲಟಪಿಟರ್ ಎಂಬ ಲಂಡನ್ ಮೂಲದ ನಿರ್ಮಾಣ ಸಂಸ್ಥೆಯು ಬ್ರಾಟಿಗಾನ್ ಬುಕ್ ಕ್ಲಬ್ ಎಂಬ ಅಂತಾರಾಷ್ಟ್ರೀಯ ಸೃಜನಶೀಲ ಸಮಾಜವನ್ನು ಪ್ರಾರಂಭಿಸಿದರು. ಅವರು ಬ್ರಾಟಿಗನ್ ಮತ್ತು ಅವರ ಕೃತಿಗಳನ್ನು ಸೃಜನಶೀಲ ಕಲಿಕೆಗೆ ಉಪಯೋಗಿಸುತ್ತಾರೆ.
  • ಯು ಕಾನ್ಟ್ ಕ್ಯಾಚ್ ಡೆತ್ ಪುಸ್ತಕದಲ್ಲಿ ಲ್ನಾತೆ ಎಲಿಜಬೆತ್ ಬ್ರಾಟಿಗಾನ್‌ ತನ್ನ ತಂದೆಯ ನೆನಪುಗಳನ್ನು ವಿವರಿಸಿದ್ದಾರೆ.
  • ಬಿ-ಫ್ಲವರ್ ಎಂಬ ಒಂದು ಸಂಗೀತ ವಾದ್ಯ ತಮ್ಮ ಹೆಸರನ್ನು ರಿಚರ್ಡ್ ಬ್ರಾಟಿಗಾನ್‌ನ ನೆನಪಿನಲ್ಲಿ ಇಟ್ಟುಕೊಂಡಿದ್ದರೆ.
  • ಆಡಮ್ ಕರ್ಟಿಸ್ ಎಂಬ ಸಾಕ್ಷ್ಯಚಿತ್ರ ತಯಾರಕನೊಬ್ಬ ಆಲ್ ವಚ್ಡ್ ಒವರ್ ಬೈ ಮಶಿನ್ಸ್ ಆಫ್ ಲವಿಂಗ್ ಗ್ರೆಸ್ ಕಂಪ್ಯೂಟರ್‌ಗಳ ಪರಿಣಾಮಗಳ ಬಗ್ಗೆ ಸರಣಿ ಚಲನಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://www.poemhunter.com/richard-brautigan/
  2. "ಆರ್ಕೈವ್ ನಕಲು". Archived from the original on 2008-03-25. Retrieved 2015-11-06.