ರಿಚರ್ಡ್ ಎಫ್. ಹೆಕ್, ಎಚಿ ನೆಗಿಶಿ ಹಾಗೂ ಅಕಿರಾ ಸುಝುಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Noble (1).jpg
'ಪ್ರೊ. ರಿಚರ್ಡ್ ಎಫ್. ಹೆಕ್, ಪ್ರೊ. ಎಚಿ ನೆಗಿಶಿ ಹಾಗೂ ಪ್ರೊ. ಅಕಿರಾ ಸುಝುಕಿ'

ಪ್ರೊ. Richard Fred Heck (born August 15,1931), ಪ್ರೊ. Ei-ichi Negishi, (born July 14, 1935) ಮತ್ತು, ಪ್ರೊ.Akira Suzuki (born September 12, 1930) 'ವಿದ್ಯುನ್ಮಾನ' ಹಾಗೂ 'ಔಷಧಿ ತಯಾರಿಕೆ'ಯಲ್ಲಿ ಬಳಕೆಯಾಗುವ ರಾಸಾಯನಿಕ ವಿಧಾನವೊಂದನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ, ಅಂದರೆ, 'ಅರ್ಗಾನಿಕ್‌ ವ್ಯವಸ್ಥೆಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಪಲ್ಲೇಡಿಯಂ'ನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ, "೨೦೧೦ ರ ಸಾಲಿನ ರಸಾಯನ ಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ"ಯನ್ನು ಅಮೆರಿಕದ "ಪ್ರೊ. ರಿಚರ್ಡ್‌ ಎಫ್. ಹೆಕ್‌ ಹಾಗೂ, ಪ್ರೊ. ಎಚಿ ನೆಗಿಶಿ ಮತ್ತು ಜಪಾನಿನ ಸಂಶೋಧಕರಾದ "ಪ್ರೊ. ಅಕಿರಾ ಸುಝುಕಿ" ಯವರು, ಪ್ರಶಸ್ತಿಯ '೧.೫ ಮಿಲಿಯನ್ ಡಾಲರ್ ಹಣ'ವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. "ಸ್ಟಾಕ್‌ಹೋಮ್‌" ನ, "ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸ್‌," ಹೇಳಿಕೆಯ ಪ್ರಕಾರ, ಈ ಮೂವರೂ ನೋಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪದ್ಧತಿಯಲ್ಲಿ ಬಳಸಲಾಗುವ 'ಇಂಗಾಲ', 'ನಿಸರ್ಗದಲ್ಲಿ ದೊರೆಯುವ ಇಂಗಾಲದ ಅಣುಗಳಷ್ಟೇ ಕ್ಲಿಷ್ಟಪ್ರಕಾರದವಾಗಿವೆ'.

ಪ್ರೊ. ರಿಚರ್ಡ್ ಎಫ್ ಹೆಕ್[ಬದಲಾಯಿಸಿ]

೧೯೩೧ ರಲ್ಲಿ ಜನ್ಮಿಸಿದ, 'ಪ್ರೊ. ರಿಚರ್ಡ್ ಹೆಕ್' ರವರು, ಅಮೆರಿಕ ಸಂಯುಕ್ತಸಂಸ್ಥಾನದ "ಡೆಲವೆರ್ ವಿಶ್ವವಿದ್ಯಾಲಯ ದ ಎಮಿರಿಟಸ್ ಪ್ರೊಫೆಸರ್" ಆಗಿ ಕೆಲಸಮಾಡುತ್ತಿದ್ದರು.

ಪ್ರೊ. ಎಚಿ ನೆಗಿಶಿ[ಬದಲಾಯಿಸಿ]

'ಪ್ರೊ. ಎಚಿ ನೆಗಿಶಿ'ಯವರು, ಜುಲೈ,೧೪, ೧೯೩೫ ರಲ್ಲಿ ಜಪಾನ್ ನ "ಚಾಂಗ್ ಚುನ್" ಲ್ಲಿ ಜನಿಸಿದರು. ಆಗ ಅದು ಜಪಾನ್ ದೇಶದ ಆಧಿಪತ್ಯದಲ್ಲಿದ್ದ, 'ಮಂಚುಕೋ'ವಲಯದ ರಾಜಧಾನಿಯಾಗಿತ್ತು. ಈಗ ಅದು ಚೈನದ 'ಜಿಲಿನ್' ನ ರಾಜಧಾನಿಯಾಗಿದೆ. ೧೯೫೮ ರಲ್ಲಿ ಟೋಕಿಯೋ ವಿಶ್ವವಿದ್ಯಾಲಯದ ಪದವಿಗಳಿಸಿದರು. 'ತೇಜಿನ್'ನಲ್ಲಿ ತರಪೇತಿಪಡೆದರು. ಆದರೆ ಅವರ ವೃತ್ತಿಜೀವನವೆಲ್ಲಾ 'ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯ'ದಲ್ಲೇ ಕಳೆದರು. ೧೯೬೩ ರಲ್ಲಿ ಅವರು ಅಮೆರಿಕಕ್ಕೆ ಹೋಗಿ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದಲ್ಲಿ 'ಪಿ.ಎಚ್.ಡಿ ಪದವಿ',ಯನ್ನು 'ಪ್ರೊ. ಅಲೆನ್ ಆರ್. ಡೆ'ರವರ ಹತ್ತಿರ ಕೆಲಸಮಾಡಿ ಗಳಿಸಿದರು. ೧೯೬೬ ರಲ್ಲಿ 'ಪರ್ಡ್ಯೂ ವಿಶ್ವವಿದ್ಯಾಲಯ' ದಲ್ಲಿ ಪದವಿ ನಂತರದ, ಸಂಶೋಧಕರಾಗಿ, ಕೆಲಸಮಾಡಿ, ೧೯೬೮ ರಲ್ಲಿ ಸಹಾಯಕ ಪ್ರಾಧ್ಯಾಪಕರಾದರು, ನೋಬೆಲ್ ಪ್ರಶಸ್ತಿವಿಜೇತ 'ಹರ್ಬರ್ಟ್ ಸಿ. ಬ್ರೌನ್' ರೊಟ್ಟಿಗೆ ಕೆಲಸಮಾಡಿದರು. ೧೯೭೨ ರಲ್ಲಿ, 'ಸಿರಾಕ್ಯುಸ್ ವಿಶ್ವವಿದ್ಯಾಲಯ'ದಲ್ಲಿ, ಸಹಾಯಕ ಪ್ರಾಧ್ಯಾಪಕ-ವೃತ್ತಿಗೆ ಸೇರಿದರು. ೧೯೭೯ ರಲ್ಲಿ ಪ್ರಾಧ್ಯಾಪಕರಾಗಿ ಬಡ್ತಿಪಡೆದರು. ನಂತರ ಅದೇ ವರ್ಷದಲ್ಲಿ ಅವರು 'ಪರ್ಡ್ಯೂ ವಿಶ್ವವಿದ್ಯ್ಆಲಯಕ್ಕೆ ಮತ್ತಿ ಹೋಗಿ ಸೇರಿಕೊಂಡರು. ಸನ್ ೨೦೦೦ ನಲ್ಲಿ, 'ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ'ಯ ವತಿಯಿಂದ, 'ಸರ್ ಎಡ್ವರ್ಡ್ ಫ್ರಾಂಕ್ ಲ್ಯಾಂಡ್ ಪ್ರಶಸ್ತಿ'ಯನ್ನು ಗಳಿಸಿದರು. 'ಸನ್ ೨೦೧೦ ರಲ್ಲಿ (organopalladium chemistry) ವಿಭಾಗದಲ್ಲಿ, 'ರಸಾಯನ ಶಾಸ್ತ್ರದ ನೋಬೆಲ್ ಪಾರಿತೋಷಕ'ವನ್ನು ಗಳಿಸಿದ್ದಾರೆ. ಸದ್ಯದಲ್ಲಿ ಅವರು, ಅಮೆರಿಕ ಸಂಯುಕ್ತಸಂಸ್ಥಾನದ 'ಇಂಡಿಯಾನಾ ರಾಜ್ಯದ ಲಫಯೆಟ್' ನಲ್ಲಿರುವ, "ಪರ್ಡ್ಯೂ ವಿಶ್ವವಿದ್ಯಾಲಯ" ದಲ್ಲಿ ಕಾರ್ಯರಥರಾಗಿದ್ದಾರೆ. [ಬದಲಾಯಿಸಿ]

ಪ್ರೊ. ಅಕಿರಾ ಸುಝುಕಿ[ಬದಲಾಯಿಸಿ]

೧೯೩೦ ರಲ್ಲಿ ಜನಿಸಿದ, 'ಪ್ರೊ. ಅಕಿರಾ ಸುಝುಕಿ'ಯವರು, ಜಪಾನ್ ದೇಶದ 'ಸಪ್ಪರೋ' ನಲ್ಲಿರುವ "ಹೊಕೈಡೋ ವಿಶ್ವವಿದ್ಯಾಲಯ"ದಲ್ಲಿ ಎಮಿರೆಟರ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.