ರಾಹುಕಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಜ್ಯೋತಿಷದ ಪ್ರಕಾರ, ರಾಹುಕಾಲವು ಯಾವುದೇ ಹೊಸ ಅಪಾಯದ ಕಾರ್ಯಕ್ಕೆ ಅಮಂಗಳಕರವೆಂದು ಪರಿಗಣಿಸಲಾದ ಪ್ರತಿದಿನ ಬರುವ ಒಂದು ನಿರ್ದಿಷ್ಟ ಸಮಯಾವಧಿ.

ವಿವರಣೆ[ಬದಲಾಯಿಸಿ]

ಹಿಂದೂ ವಿಜ್ಞಾನದಲ್ಲಿ, ರಾಹುಕಾಲವು ದಿನದ ೮ ವಿಭಾಗಗಳಲ್ಲಿ ಒಂದು ಮತ್ತು ಉಪದ್ರವಕಾರಿಯಾದ ರಾಹುವಿನೊಂದಿಗೆ ಸಂಬಂಧಿತವಾದ ಕಾರಣ ಅಮಂಗಳಕರ ಅವಧಿಯೆಂದು ಪರಿಗಣಿತವಾಗಿದೆ. ಒಂದು ನಿರ್ದಿಷ್ಟ ಸ್ಥಳದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಒಟ್ಟು ಸಮಯವನ್ನು ತೆಗೆದುಕೊಂಡು ಆ ಸಮಯಾವಧಿಯನ್ನು ೮ ರಿಂದ ಭಾಗಿಸಿ ವಿಭಾಗಗಳನ್ನು ಲೆಕ್ಕಮಾಡಲಾಗುತ್ತದೆ. ಹಿಂದೂ ಪಂಚಾಂಗಗಳಲ್ಲಿ ಖಗೋಳಶಾಸ್ತ್ರೀಯವಾಗಿ, ನಿರಂತರ ಬದಲಾಗುವ ಗ್ರಹ ವಿನ್ಯಾಸಗಳ ಕಾರಣ ಪ್ರತಿದಿನದ ಮಂಗಳಕರವಾದ ಸಮಯವು ಒಂದೇ ಹೊತ್ತಿನಲ್ಲಿ ಬರುವುದಿಲ್ಲ. ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಮತ್ತು ವಿಷಘಾತಿ ಸಮಯಾವಧಿಗಳನ್ನು ವಿಶೇಷವಾಗಿ ಅಶುಭ ಅಥವಾ ಅಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಪ್ರತಿದಿನ ಈ ರಾಹುಕಾಲವು ಸುಮಾರು ೯೦ ನಿಮಿಷ ಇರುತ್ತದೆ, ಆದರೆ ಈ ಅವಧಿಯು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಸಮಯದ ಉದ್ದದ ಪ್ರಕಾರ ಬದಲಾಗುತ್ತದೆ.

"https://kn.wikipedia.org/w/index.php?title=ರಾಹುಕಾಲ&oldid=913518" ಇಂದ ಪಡೆಯಲ್ಪಟ್ಟಿದೆ