ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅಥವಾ ನೀಟ್ ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜ್‍ಗಳಲ್ಲಿ ಯಾವುದೇ ಪದವಿ ವೈದ್ಯಕೀಯ ಕೋರ್ಸ್ (ಎಮ್‍ಬಿಬಿಎಸ್/ ದಂತವೈದ್ಯಕೀಯ ಕೋರ್ಸ್ - ಬಿಡಿಎಸ್) ಅಥವಾ ಸ್ನಾತಕೋತ್ತರ ಕೋರ್ಸ್ (ಎಮ್‍ಡಿ, ಎಮ್‌ಎಸ್) ಅಭ್ಯಸಿಸಲು ಬಯಸುವ ವಿದ್ಯಾರ್ಥಿಗಳಿಗೆ ಭಾರತದಲ್ಲಿನ ಒಂದು ಪ್ರವೇಶ ಪರೀಕ್ಷೆ. ಎಮ್‍ಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ ಗಳಿಗಾಗಿ ನೀಟ್-ಯುಜಿ (ಪದವಿಪೂರ್ವ) ಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‍ಸಿ) ನಡೆಸಿಕೊಡುತ್ತದೆ. ಅಖಿಲ ಭಾರತ ಪ್ರಿ ಮೆಡಿಕಲ್ ಟೆಸ್ಟ್ (ಎಐಪಿಎಮ್‍ಟಿ) ಮತ್ತು ರಾಜ್ಯಗಳು ಅಥವಾ ಕಾಲೇಜ್‍ಗಳು ನಡೆಸಿಕೊಡುವ ಎಲ್ಲ ಪ್ರತ್ಯೇಕ ಎಮ್‍ಬಿಬಿಎಸ್ ಪರೀಕ್ಷೆಗಳ ಬದಲಾಗಿ ನೀಟ್-ಯುಜಿ ೨೦೧೩ರಲ್ಲಿ ಬಂದಿತು. ಆದರೆ, ಅನೇಕ ಕಾಲೇಜ್‍ಗಳು ಮತ್ತು ಸಂಸ್ಥೆಗಳು ತಡೆಯಾಜ್ಞೆ ತೆಗೆದುಕೊಂಡು ತಮ್ಮ ಎಮ್‍ಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್ ಗಳಿಗೆ ಪ್ರವೇಶಕ್ಕಾಗಿ ಖಾಸಗಿ ಪರೀಕ್ಷೆಗಳನ್ನು ನಡೆಸಿದ್ದರು. ನೀಟ್ ೨೦೧೭ ಪ್ರವೇಶ ಪರೀಕ್ಷೆಯು ಮೇ ೭ ೨೦೧೭ ರಂದು ನಡೆಯಿತು.

ಎಐಐಎಮ್‍ಎಸ್, ನವ ದೆಹಲಿಯ ಪದವಿಪೂರ್ವ ಕೋರ್ಸ್‌ಗಳು, ಚಂಡೀಗಢ್‍ನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಜವಾಹರ್‍ಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜಿಪ್‍ಮರ್) ಗಳನ್ನು ಪ್ರತ್ಯೇಕ ಕಾನೂನುಗಳಿಂದ ರಚಿಸಲಾಗಿದ್ದರಿಂದ ನೀಟ್‍ನ ವ್ಯಾಪ್ತಿಯ ಹೊರಗಿವೆ.[೧]

ಇತಿಹಾಸ[ಬದಲಾಯಿಸಿ]

ನೀಟ್ ಅನ್ನು ೨೦೧೨ ರಿಂದ ನಡೆಸಬೇಕೆಂದು ಮೊದಲು ಪ್ರಸ್ತಾಪಿಸಲಾಗಿತ್ತು.[೨] ಆದರೆ, ಹಲವು ಕಾರಣಗಳಿಗಾಗಿ, ಸಿಬಿಎಸ್‍ಇ ಹಾಗೂ ಭಾರತದ ವೈದ್ಯಕೀಯ ಪರಿಷತ್ತು ನೀಟ್ ಅನ್ನು ಒಂದು ವರ್ಷ ಮುಂದೂಡಿದವು. ಭಾರತ ಸರ್ಕಾರವು ಪರೀಕ್ಷೆಯನ್ನು ಘೋಷಿಸಿತು ಮತ್ತು ಮೊದಲ ಸಲ ಪರೀಕ್ಷೆಯನ್ನು ಪದವಿಪೂರ್ವ ಹಾಗೂ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳು ಎರಡಕ್ಕೂ ಪ್ರವೇಶ ಅರಸುವ ವಿದ್ಯಾರ್ಥಿಗಳಿಗಾಗಿ ೫ ಮೇ ೨೦೧೩ ರಂದು ಭಾರತದಾದ್ಯಂತ ನಡೆಸಲಾಯಿತು. ೧೮ ಜುಲೈ ೨೦೧೩ ರಂದು, ಸರ್ವೋಚ್ಚ ನ್ಯಾಯಾಲಯವು ೧೧೫ ಅಹವಾಲುಗಳ ಪರ ತೀರ್ಮಾನ ಕೊಟ್ಟಿತು ಮತ್ತು ನೀಟ್ ಪರೀಕ್ಷೆಯನ್ನು ರದ್ದುಮಾಡಿ ಎಮ್‍ಸಿಐ ಕಾಲೇಜ್‍ಗಳು ನಡೆಸುವ ಪ್ರವೇಶ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವಂತಿಲ್ಲ ಎಂದು ಘೋಷಿಸಿತು.

ಆದರೆ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ತಮ್ಮ ಮುಂಚಿನ ತೀರ್ಪನ್ನು ಹಿಂಪಡೆದು ಕೇಂದ್ರ ಸರ್ಕಾರ ಹಾಗೂ ಎಮ್‍ಸಿಐಗೆ ಪರೀಕ್ಷೆ ನಡೆಸಲು ಅನುಮತಿ ಕೊಟ್ಟ ನಂತರ ನೀಟ್ ಪರೀಕ್ಷೆಯನ್ನು ಎಪ್ರಿಲ್ ೧೧ ೨೦೧೬ರಂದು ಪುನಃ ಆರಂಭಿಸಲಾಯಿತು.

ಭಾರತದ ವೈದ್ಯಕೀಯ ಪರಿಷತ್ತು ೨೦೧೨ರಲ್ಲಿ ನೀಟ್-ಯುಜಿ ಪರೀಕ್ಷೆಯನ್ನು ಪರಿಚಯಿಸುವುದಾಗಿ ಘೋಷಿಸಿದ ನಂತರ, ಆಂಧ್ರ ಪ್ರದೇಶ, ಕರ್ನಾಟಕ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು, ಎಮ್‍ಸಿಐ ಪ್ರಸ್ತಾಪಿಸಿದ ಪಠ್ಯಕ್ರಮ ಹಾಗೂ ತಮ್ಮ ರಾಜ್ಯದ ಪಠ್ಯಕ್ರಮಗಳಲ್ಲಿ ಅಗಾಧ ವ್ಯತ್ಯಾಸವಿದೆ ಎಂದು ಹೇಳಿ, ಬದಲಾವಣೆಯನ್ನು ಬಲವಾಗಿ ವಿರೋಧಿಸಿದವು. ನೀಟ್ ೨೦೧೬ ಅನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಡೆಸಲಾಯಿತಾದರೂ, ೨೦೧೭ರಿಂದ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತಮಿಳು, ತೆಲುಗು, ಮರಾಠಿ, ಬಂಗಾಳಿ, ಅಸ್ಸಾಮೀ, ಗುಜರಾತಿ ಭಾಷೆಗಳಲ್ಲಿ ಬರೆಯಬಹುದು ಎಂದು ಘೋಷಿಸಲಾಗಿದೆ. ಕನ್ನಡ ಹಾಗೂ ಒಡಿಯಾ ಭಾಷೆಗಳನ್ನು ಪಟ್ಟಿಗೆ ಸೇರಿಸಲಾಗಿದೆ, ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಒಂಭತ್ತು ಭಾರತೀಯ ಭಾಷೆಗಳು ಹಾಗೂ ಇಂಗ್ಲಿಷ್‍ನಲ್ಲಿ ಬರೆಯಬಹುದು.

ಉಲ್ಲೇಖಗಳು[ಬದಲಾಯಿಸಿ]

  1. http://entrance.icbse.com/neet/
  2. "NEET UG Likely to be Held in May 2012". careermitra.com. 26 September 2011. Archived from the original on 15 ಸೆಪ್ಟೆಂಬರ್ 2012. Retrieved 20 ಜೂನ್ 2017.

[೧] Neet Counselling 2022 Dates

  1. Neet Counselling 2022 Dates