ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ.), ಕುಪ್ಪಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ.), ಕುಪ್ಪಳಿ[ಬದಲಾಯಿಸಿ]

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವನ್ನು 1992ರಲ್ಲಿ ಕರ್ನಾಟಕ ಸರ್ಕಾರವುಸ್ಥಾಪಿಸಿತು. ಸಾಹಿತಿಗಳು, ಕುವೆಂಪು ಅಭಿಮಾನಿಗಳು, ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಸ್ಥಳೀಯ ಪ್ರಮುಖರು ಇದರ ಸದಸ್ಯರಾಗಿರುವರು. ಪ್ರತಿಷ್ಠಾನ ಕೈಗೊಂಡ ಮೊದಲ ಕೆಲಸ ಶಿಥಿಲಾವಸ್ಥೆಯಲ್ಲಿದ್ದ ಕವಿಮನೆಯ ನವೀಕರಣ. ಮೂಲ ಮನೆಯ ವಿನ್ಯಾಸ ಹಾಗೂ ಸೊಗಸಿಗೆ ಚ್ಯುತಿ ಬರದಂತೆ ಇಡೀ ಮನೆಯನ್ನು ಸಜ್ಜುಗೊಳಿಸಿ, ಮನೆಯನ್ನು ಒಳಗೊಂಡಂತೆ ಒಂದು ವಸ್ತುಸಂಗ್ರಹಾಲಯವಾಗಿ ಇಡಲಾಗಿದೆ. ಕವಿಗೆ ಸ್ಫೂರ್ತಿ ನೀಡಿದ ಸ್ಥಳ ಕವಿಶೈಲದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಿರುತ್ತದೆ. ಕವಿಯ ಜನ್ಮಶತಮಾನೋತ್ಸವ ಭವನದ ನಿರ್ಮಾಣದ ಮೂಲಕ ಪ್ರವಾಸಿಗರ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲಾಗಿದೆ. ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವವರಿಗೆ ಸ್ಥಳಾವಕಾಶ ಕೊಡುವ ವ್ಯವಸ್ಥೆ ಇರುತ್ತದೆ. ಕವಿಮನೆಯಲ್ಲಿ ಕವಿಯ ಎಲ್ಲ ಕೃತಿಗಳು ಸಿಗುವಂತೆ ಮಾರಾಟ ಮಳಿಗೆಯನ್ನು ತೆರೆಯಲಾಗಿದೆ. ಅಲ್ಲದೆ ಕುವೆಂಪು ಸಂಚಾರಿ ವಾಹನದ ಮೂಲಕ ಕುವೆಂಪು ಕೃತಿಗಳನ್ನು ರಿಯಾಯಿತಿ ದರದಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತದೆ. ಪ್ರತಿವರ್ಷ ಕವಿಮನೆಗೆ 1 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ

ಶ್ರೀ ಎಂ.ಸಿ.ನರೇಂದ್ರ ಅವರ ಆರ್ಥಿಕ ನೆರವಿನಿಂದ ಕುವೆಂಪು ರಾಷ್ಟ್ರೀಯ ಪುರಸ್ಕಾರ ಎಂಬ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ ಪ್ರತಿವರ್ಷ ಭಾರತದ ಖ್ಯಾತ ಲೇಖಕರೋರ್ವರನ್ನ ಆಯ್ಕೆ ಮಾಡಿ ಗೌರವಿಸಲಾಗುವುದು. ಪ್ರಶಸ್ತಿ ಮೊತ್ತ 5 ಲಕ್ಷ ರೂಗಳು. ಕುವೆಂಪು ಸಾಹಿತ್ಯ ಮತ್ತು ಸಂದೇಶ ಕುರಿತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಶಿಬಿರಗಳನ್ನು ನಡೆಸಿಕೊಂಡು ಮುಂದಿನ ಜನಾಂಗಕ್ಕೆ ಅವರ ಪರಿಚಯವನ್ನು ಮಾಡಿಕೊಡುವುದು ಹಾಗೂ ಕುಪ್ಪಳಿಯನ್ನು ಒಂದು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸುವುದು ಪ್ರತಿಷ್ಠಾನದ ಮುಖ್ಯ ಉದ್ದೇಶವಾಗಿರುತ್ತದೆ. ಕುವೆಂಪು ಅವರು ಹುಟ್ಟಿ ಬೆಳೆದ, ಅವರಿಗೆ ಚೈತನ್ಯದ ಚಿಲುಮೆಯಾಗಿದ್ದ, ಮಲೆನಾಡಿನ ಕುಪ್ಪಳಿಯಲ್ಲಿ, ಕವಿಯ ಸ್ಮೃತಿಯನ್ನು ಹಸಿರಾಗಿ ಇರಿಸಲು ಮತ್ತು ಕವಿಯ ಸಾಹಿತ್ಯಪ್ರಚಾರದ ದೃಷ್ಟಿಯಿಂದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸ್ಥಾಪನೆಯಾಗಿದೆ. 1992ರಲ್ಲಿ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್. ಬಂಗಾರಪ್ಪನವರು, ಪ್ರೋತ್ಸಾಹದಿಂದ ರಚನೆಯಾದ ಪ್ರತಿಷ್ಠಾನದಲ್ಲಿ ನಾಡೋಜ ದೇ. ಜವರೇಗೌಡರ ಅಧ್ಯಕ್ಷತೆಯಲ್ಲಿ ಶ್ರೀ ಡಿ.ಬಿ. ಚಂದ್ರೇಗೌಡ, ಶ್ರೀ ಕಾಗೋಡು ತಿಮ್ಮಪ್ಪ, ನಾಡೋಜ ಕಮಲಾ ಹಂಪನಾ ಮತ್ತು ಪ್ರೊ. ಹಂಪನಾ ಅವರು ಸ್ಥಾಪಕ ಟ್ರಸ್ಟಿಗಳಾಗಿ ಕೆಲಸ ನಿರ್ವಹಿಸಿದ್ದಾರೆ. ನಂತರ ಜಸ್ಟೀಸ್ ಎನ್.ಡಿ. ವೆಂಕಟೇಶ್ ಅವರು ಅಧ್ಯಕ್ಷರಾಗಿರಾಗಿದ್ದರು. ನಡುವೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಶ್ರೀ ವೈ.ಕೆ. ಮುದ್ದುಕೃಷ್ಣ ಕೆಲವು ಕಾಲ ಅಧ್ಯಕ್ಷರಾಗಿದ್ದರು. ಪ್ರಸ್ತುತ ನಾಡೋಜ ಹಂಪನಾ ಅವರು ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಕಾರ್ಯದರ್ಶಿಗಳಾಗಿ ಪ್ರೊ. ಎಚ್.ಜಿ. ಲಕ್ಕಪ್ಪಗೌಡ, ಡಾ|| ಎಚ್.ಡಿ. ಚಂದ್ರಪ್ಪಗೌಡ ಅವರುಗಳು ಕಾರ್ಯನಿರ್ವಹಿಸಿದ್ದು. ಪ್ರಸ್ತುತ 1998ರಿಂದ ಶ್ರೀ ಕಡಿದಾಳ್ ಪ್ರಕಾಶ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾರಂಭದಲ್ಲಿ ಖಜಾಂಚಿಗಳಾಗಿ ಶ್ರೀ ಕೋಳಾವರ ಕೆ.ಟಿ. ನಾರಾಯಣಮೂರ್ತಿಯವರಿದ್ದರು. ಪ್ರಸ್ತುತ ಶ್ರೀ ದೇವಂಗಿ ಮನುದೇವ್ ಅವರು ಖಜಾಂಚಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾರಂಭದಿಂದಲೂ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ಪದನಿಮಿತ್ತ ಉಪಾಧ್ಯಕ್ಷರಾಗಿಯೂ, ಶಿವಮೊಗ್ಗಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಪದನಿಮಿತ್ತ ಕಾರ್ಯದರ್ಶಿಗಳಾಗಿಯೂ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳು ವಿಶೇಷ ಆಹ್ವಾನಿತರಾಗಿಯೂ ಪ್ರತಿಷ್ಠಾನಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಜೊತೆಯಲ್ಲಿ, ಸಾಹಿತ್ಯ-ಸಾಮಾಜಿಕ ಕ್ಷೇತ್ರದ ಸಾಧಕಕರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಪ್ರತಿಷ್ಠಾನದ ಸದಸ್ಯರುಗಳಾಗಿ ಕೆಲಸ ಮಾಡುತ್ತಿರುತ್ತಾರೆ. ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಪ್ರತಿಷ್ಠಾನದ ಹೊರಗಿದ್ದರೂ, ಅದರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುತ್ತಾರೆ. ಪ್ರಸ್ತುತ, ಪ್ರತಿಷ್ಠಾನದ ಅಧ್ಯಕ್ಷರಾಗಿ ನಾಡೋಜ ಪ್ರೊ. ಹಂಪನಾ, ಸಮಕಾರ್ಯದರ್ಶಿಗಳಾಗಿ ಶ್ರೀ ಕಡಿದಾಳ್ ಪ್ರಕಾಶ್, ಖಜಾಂಚಿಯಾಗಿ ಶ್ರೀ ದೇವಂಗಿ ಮನುದೇವ್ ಮತ್ತು ಸದಸ್ಯರಾಗಿ ಡಾ. ಜಿ.ಕೆ. ರಮೇಶ್ ಹಾಗೂ ಡಾ. ಸಬೀಹಾ ಭೂಮಿಗೌಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಷ್ಠಾನವು, ಕವಿಮನೆ, ಕವಿಶೈಲ, ತೇಜಸ್ವಿ ಸ್ಮಾರಕ ಮತ್ತು ಹಿರಿಕೊಡಿಗೆಯ ಕುವೆಂಪು ಜನ್ಮಸ್ಥಳ ಸ್ಮಾರಕಗಳ ಜೊತೆಯಲ್ಲಿ, ಕುವೆಂಪು ಶತಮಾನೋತ್ಸವ ಭವನ (ಹೇಮಾಂಗಣ), ಸಭಾಭವನ, ಕಲಾಗ್ಯಾಲರಿ ನಿರ್ಮಾಣ ಮತ್ತು ನಿರ್ವಹಣೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ನಾಡಿನ ಹೊರ-ಒಳಗೆ ಕುವೆಂಪು ಸಾಹಿತ್ಯ ಪ್ರಚಾರ ಮತ್ತು ಪುಸ್ತಕಗಳ ಪ್ರಕಟಣೆಯಲ್ಲಿಯೂ ಪ್ರತಿಷ್ಠಾನ ದಾಖಲಾರ್ಹ ಸಾಧನೆಯನ್ನು ಮಾಡಿರುತ್ತದೆ.

ಧ್ಯೇಯೋದ್ಧೇಶಗಳು[ಬದಲಾಯಿಸಿ]

  • ಕವಿಮನೆಯ ಸ್ವಾಧೀನ – ಜೀರ್ಣೋದ್ಧಾರ ಮಾಡಿ, ಕುವೆಂಪು ಸಾಹಿತ್ಯ ಪರಿಸರವನ್ನು, ಕುವೆಂಪು ಅವರನ್ನು, ಅವರ ಸಾಧನೆಗಳನ್ನು ಪರಿಚಯಿಸುವ ವಸ್ತುಸಂಗ್ರಹಾಲಯವನ್ನಾಗಿಸಿ, ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುವುದು.
  • ಕವಿ ಬಳಸಿದ ವಸ್ತುಗಳು, ಕವಿಯ ಎಲ್ಲ ಕಾಲದ ಪೋಟೊಗಳು, ಪಡೆದ ಪ್ರಶಸ್ತಿ ಗೌರವಗಳು, ಅವರ ಎಲ್ಲ ಕೃತಿಗಳ ಪ್ರಥಮಾವೃತ್ತಿಯ ಮತ್ತು ಇತ್ತೀಚಿನ ಆವೃತ್ತಿಯ ಪ್ರತಿಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ ಪ್ರದರ್ಶನಕ್ಕೆ ಇಡುವುದು.
  • ಕವಿಯನ್ನು ರೂಪಿಸಿದ ಮಲೆನಾಡನ್ನು ಪರಿಚಯಿಸುವ ಹಲವಾರು ಕಲಾಕೃತಿಗಳು, ವಸ್ತುಗಳು ಸಂಗ್ರಹಿಸಿ ಪ್ರದರ್ಶನಕ್ಕಿಡುವುದು
  • ಕವಿಯ ಎಲ್ಲ ಕೃತಿಗಳನ್ನೂ ಮಾರಾಟಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳುವುದು.
  • ಕವಿಯ ಅಂತಿಮ ಸಂಸ್ಕಾರ ನಡೆದ ಕವಿಶೈಲದಲ್ಲಿ ಸ್ಮಾರಕ ನಿರ್ಮಾಣ ಮತ್ತು ನಿರ್ವಹಣೆ.
  • ಶತಮಾನೋತ್ಸವ ಭವನದ ನಿರ್ಮಾಣ ಮಾಡುವುದು ಮತ್ತು ಅದನ್ನು ಸಾಹಿತ್ಯಕ ಕಾರ್ಯಕ್ರಮಗಳಿಗಾಗಿ ಪರಿಣಾಮಕಾರಿ ಸದ್ಬಳಕೆಯಾಗುವಂತೆ ನಿರ್ವಹಿಸುವುದು.
  • ಕುವೆಂಪು ಸಾಹಿತ್ಯ ಪ್ರಚಾರ ಮತ್ತು ಪುಸ್ತಕ ಪ್ರಕಟಣೆ, ಇತ್ಯಾದಿ…
ಚಿತ್ರ:Artifacts Kuppali.jpg

ಹೆಜ್ಜೆ ಗುರುತುಗಳು[ಬದಲಾಯಿಸಿ]

ಕವಿಮನೆಯನ್ನು ಸ್ವಾಧೀನಕ್ಕೆ ಪಡೆದು, ಜೀರ್ಣೋದ್ಧಾರ ಮಾಡಿ ವಸ್ತುಸಂಗ್ರಹಾಲಯವನ್ನಾಗಿಸಲಾಗಿದೆ. ಕುವೆಂಪು ಸಾಹಿತ್ಯ ಪರಿಸರವನ್ನು, ಕುವೆಂಪು ಅವರನ್ನು, ಅವರ ಸಾಧನೆಗಳನ್ನು ಪರಿಚಯಿಸುವ ಕೇಂದ್ರವನ್ನಾಗಿ ರೂಪಿಸಲಾಗಿದೆ. ಕವಿ ಬಳಸಿದ ವಸ್ತುಗಳು, ಕವಿಯ ಎಲ್ಲ ಕಾಲದ ಪೋಟೊಗಳು, ಪಡೆದ ಪ್ರಶಸ್ತಿ ಗೌರವಗಳು, ಅವರ ಎಲ್ಲ ಕೃತಿಗಳ ಪ್ರಥಮಾವೃತ್ತಿಯ ಮತ್ತು ಇತ್ತೀಚಿನ ಆವೃತ್ತಿಯ ಪ್ರತಿಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಸಂರಕ್ಷಿಸಿ ಪ್ರದರ್ಶನಕ್ಕಿಡಲಾಗಿದೆ. ಕವಿಯನ್ನು ರೂಪಿಸಿದ ಮಲೆನಾಡನ್ನು ಪರಿಚಯಿಸುವ ಹಲವಾರು ಕಲಾಕೃತಿಗಳು, ವಸ್ತುಗಳು ಸಂಗ್ರಹಿಸಿ ಪ್ರದರ್ಶಿಸಲಾಗಿದೆ. ಕವಿಮನೆಯಲ್ಲಿ ಕವಿಯ ಮತ್ತು ಪ್ರತಿಷ್ಠಾನದ ಪ್ರಕಟಣೆಗಳ ಮಾರಾಟಕ್ಕೆ ಹಾಗೂ ಸಂಚಾರಿ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ವ್ಯವಸ್ಥೆ ಮಾಡಲಾಗಿದೆ. ಕವಿಶೈಲದಲ್ಲಿ ಸ್ಮಾರಕ ನಿರ್ಮಾಣ ಮತ್ತು ನಿರ್ವಹಣೆ. ಶತಮಾನೋತ್ಸವ ಭವನದ ನಿರ್ಮಾಣ ಮತ್ತು ಸಮರ್ಪಕ ನಿರ್ವಹಣೆ ಕುವೆಂಪು ಸಾಹಿತ್ಯ ಪ್ರಚಾರ ಮತ್ತು ಪುಸ್ತಕ ಪ್ರಕಟಣೆ. ಅಖಿಲ ಭಾರತ ಮಟ್ಟದಲ್ಲಿ ವಾರ್ಷಿಕವಾಗಿ ಒಂದೊಂದು ಭಾಷೆಯ ಒಬ್ಬ ಸಾಹಿತಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನಕ್ಕೆ ವ್ಯವಸ್ಥೆ ಕಲಾಗ್ಯಾಲರಿ ನಿರ್ಮಾಣ ಮತ್ತು ನಿರ್ವಹಣೆ. ಕುವೆಂಪು ಜನ್ಮಸ್ಥಳ ಸ್ಮಾರಕ, ಹಿರೆಕೊಡಿಗೆಯ ಜೀರ್ಣೋದ್ಧಾರ ಮತ್ತು ನಿರ್ವಹಣೆ ತೇಜಸ್ವಿ ಸ್ಮಾರಕದ ನಿರ್ಮಾಣ ಮತ್ತು ನಿರ್ವಹಣೆ ಕಲಾಗ್ಯಾಲರಿ ತೇಜಸಸ್ವಿಯವರ ಹಕ್ಕಿ ಚಿತ್ರಗಳ ಪ್ರದರ್ಶನ ಗ್ಯಾಲರಿ ಇತ್ಯಾದಿ…