ರಾಯಲ್ ಆಂಟೇರಿಯೊ ಮ್ಯೂಸಿಯೆಮ್, ಟೊರಾಂಟೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
East-facing façade of the Royal Ontario Museum, built in 1933.

ಕೆನಡಾ ದೇಶದ ಪ್ರತಿಷ್ಠೆಯ ಸಂಕೇತವಾದ ರಾಯಲ್ ಆಂಟೇರಿಯೊ ಮ್ಯೂಸಿಯೆಮ್, ದೇಶದ ಅತಿದೊಡ್ಡ 'ವಿಶ್ವ ಸಾಂಸ್ಕೃತಿ' ಮತ್ತು 'ಪ್ರಾಕೃತಿಕ ವನಸಂಪತ್ತ'ನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಮಾಧ್ಯಮವಾಗಿ ಹೊರಹೊಮ್ಮಿದೆ.ಇಲ್ಲಿನ ವಿಶೇಷತೆಗಳಲ್ಲೊಂದಾದ ಡೈನಾಸೋರ್ಗ್ಯಾಲರಿ ವಿಶ್ವದ ಆಸಕ್ತರನ್ನು ಸೆಳೆಯುತ್ತಿದೆ. ಕೆನಡಾದ ಆದಿ ನಿವಾಸಿಗಳು, ಪುರಾತನ ಇಜಿಪ್ಟ್ ಜನ, ಜನಬಳಕೆಯ ಉಪಕರಣಗಳು, ಮುತ್ತು, ರತ್ನ ಹವಳ, ಖನಿಜಗಳು, ಪ್ರಾಣಿ-ಸಸ್ಯಗಳ ಅಗಣಿತ ವಿವಿಧತೆಗಳು ದಾಖಲಿಸಲು ಯೋಗ್ಯವಾಗಿದ್ದು, ಅಧ್ಯಯನಕ್ಕೆ ಎಡೆಮಾಡಿಕೊಟ್ಟಿವೆ. ಆರು ದಶಲಕ್ಷಕ್ಕೂ ಹೆಚ್ಚಿನ ವಸ್ತುಗಳನ್ನು ಮತ್ತು ನಲವತ್ತು ಚಿತ್ರಶಾಲೆಗಳನ್ನು ಹೊಂದಿರುವ ವಿಶ್ವದ ಸಂಸ್ಕೃತಿಯ ಮತ್ತು ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹಾಲಯ. ಇದರ ವಿವಿಧ ಸಂಗ್ರಹಣೆಗಳು ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿದೆ. ಇಲ್ಲಿನ ಕೆಲವು ವಸ್ತುಗಳು ಡೈನೋಸಾರ್ಗಳು ಮತ್ತು ಖನಿಜಗಳು. ಕೆಲವು ಗಮನಾರ್ಹ ಉಲ್ಕೆಗಳ ಸಂಗ್ರಹಣೆಗಳನ್ನು ಕೂಡ ಹೊಂದಿದೆ. ಹತ್ತಿರದ ಪೂರ್ವದ ಮತ್ತು ಆಫ್ರಿಕಾದ ಕಲೆ, ಪೂರ್ವ ಏಷ್ಯಾ, ಯುರೋಪಿನ ಇತಿಹಾಸವನ್ನು ಮತ್ತು ಕೆನಡದ ಇತಿಹಾಸದ ಕಲೆಗಳನ್ನು ಹೊಂದಿದೆ.