ರಾಯಚೂರು ಶೇಷಗಿರಿದಾಸ
ರಾಯಚೂರು ಶೇಷಗಿರಿದಾಸರು, ಒಬ್ಬ ಸಂಗೀತಗಾರರು, ಹಾಗೂ ಸಂಗೀತ ನಿರ್ದೇಶಕರು. ಸುಗಮ ಸಂಗೀತ, ಭಕ್ತಿ ಸಂಗೀತ, ದಾಸವಾಣಿ, ವಚನವಾಣಿ, ಹಿಂದಿ ಭಜನ್, ಮರಾಠಿ ಅಭಂಗ್, ಜಾನಪದಗೀತೆ, ಅಲ್ಲದೇ ತಮಿಳು, ತೆಲುಗುಭಾಷೆಗಳಲ್ಲಿಯೂ ಹಾಡುತ್ತಾರೆ.
ಸಂಕ್ಷಿಪ್ತ ಪರಿಚಯ
[ಬದಲಾಯಿಸಿ]ತಂದೆ, ಶ್ರೀ ಗೋವಿಂದ ದಾಸರು.ತಾಯಿ,ಶ್ರೀಮತಿ ಜಯಶ್ರೀ ದಾಸರು. ಹರಿದಾಸ ಪರಂಪರೆಯ ಕೌಟುಂಬಿಕ ಹಿನ್ನೆಲೆಯಲ್ಲಿ ಬಂದ ಶ್ರೀ ಅಸ್ಕಿಹಾಳ ಗೋವಿಂದ ದಾಸರ,ಮೊಮ್ಮಗ.
ವಿದ್ಯಾಭ್ಯಾಸ
[ಬದಲಾಯಿಸಿ]ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ. ಸಂಗೀತಾಭ್ಯಾಸ:ಹಿಂದೂಸ್ತಾನಿ ಗಾಯನದಲ್ಲಿ ಸೀನಿಯರ್ ಹಾಗೂ ವಿದ್ವತ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ. ಅವರ ಸಂಗೀತ ಗುರುಗಳು, ಶ್ರೀ ಮುಕುಂದ ಗೋರೆ ಹಾಗೂ ಶ್ರೀ ವಿ.ಎಂ. ಜೋಶಿ.
ವಿಶೇಷ ಕಾರ್ಯಕ್ರಮಗಳು
[ಬದಲಾಯಿಸಿ]- ಹಂಪಿ ಅಂತರಾಷ್ಟ್ರೀಯ ಉತ್ಸವ
- ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಸುಗಮ ಸಂಗೀತ
- ತಿರುಪತಿ ಬ್ರಹ್ಮೋತ್ಸವದಲ್ಲಿ ಭಕ್ತಿ ಸಂಗೀತ
- ಧರ್ಮಸ್ಥಳ ನವರಾತ್ರಿ ಉತ್ಸವದಲ್ಲಿ ಭಕ್ತಿ ಸಂಗೀತ
- ಸುಗಮ ಸಂಗೀತ ಸಮ್ಮೇಳನದಲ್ಲಿ ಸುಗಮ ಸಂಗೀತ
- ರಾಷ್ಟ್ರೀಯ ದಾಸ ಸಂತ ಸಮ್ಮೇಳನ ಪಂಡರಾಪುರ
- ಕನಕ ಪುರಂದರ - ಬಸವ - ಷರೀಫ ಉತ್ಸವ ಬಾಗಲಕೋಟೆ
- ಶ್ರೀ ಕೃಷ್ಣ ಮಠ ಉಡುಪಿ ಸೇರಿದಂತೆ ಸೇಲಂ, ಮುಂಬಯಿ, ದೆಹಲಿ,
- ಚನ್ನೈ, ಪೂನಾ, ಬದರಿ, ಹರಿದ್ವಾರ, ಕೊಲ್ಲಾಪುರ, ಕೊಯಮತ್ತೂರು,
- ರಾಮೇಶ್ವರಂ, ಹೀಗೆ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ,
- ತಮಿಳುನಾಡು, ದೆಹಲಿ, ಉತ್ತರಾಂಚಲ್ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಒಟ್ಟು ಕಾರ್ಯಕ್ರಮಗಳು:ದೇಶ ವಿದೇಶಗಳಲ್ಲಿ ಈವರೆಗೂ ೧೫೦೦ ಕ್ಕೂ ಹೆಚ್ಚು.
ವಿದೇಶ ಕಾರ್ಯಕ್ರಮಗಳು
[ಬದಲಾಯಿಸಿ]- ೨೦೦೫ ಮಾರ್ಚಿನಲ್ಲಿ ಇನ್ಫೋಸಿಸ್ ಫೌಂಡೇಶನ್ ಹಾಗೂ ಭಾರತೀಯ ವಿದ್ಯಾಭವನ ಸಂಸ್ಥೆಗಳು ಜಂಟಿಯಾಗಿ ಲಂಡನ್‌ನಲ್ಲಿ ಇವರ ಕಾರ್ಯಕ್ರಮ ಏರ್ಪಡಿಸಿದವು.
- ೨೦೦೭ ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್ ಕನ್ನಡ ಸಂಘದ ವತಿಯಿಂದ
- ೨೦೦೭ ಸೆಪ್ಟೆಂಬರ್‌ನಲ್ಲಿ ಮಲೇಷಿಯಾ ಕನ್ನಡ ಸಂಘದಿಂದ ಕಾರ್ಯಕ್ರಮ
- ೨೦೦೮ ಫೆಬ್ರವರಿಯಲ್ಲಿ ಖತಾರ್ ಕನ್ನಡ ಸಂಘದಿಂದ ಕಾರ್ಯಕ್ರಮ.
- ೨೦೦೮ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್, ಸಿಡ್ನಿ, ಕ್ಯಾನ್‌ಬೆರಾಗಳಲ್ಲಿ ಯಶಸ್ವಿ ಕಾರ್ಯಕ್ರಮ.
- ೨೦೦೮ ಸೆಪ್ಟೆಂಬರ್‌ನಲ್ಲಿ ಎರಡನೇ ಭಾರಿ ನ್ಯೂಜಿಲೆಂಡಿನಲ್ಲಿ ಕಾರ್ಯಕ್ರಮ.
- ೨೦೧೦ ಅಮೇರಿಕದ ಅಕ್ಕ ಸಮ್ಮೇಳನದಲ್ಲಿ ಕಾರ್ಯಕ್ರಮ. ಹಾಗೂ ಅಮೇರಿಕದ ಬೇರೆ ಬೇರೆ ಪ್ರದೇಶಗಳಲ್ಲಿ ೩೦ಕ್ಕೂ ಅಧಿಕ ಕಾರ್ಯಕ್ರಮಗಳು.
ಬಿರುದು ಪ್ರಶಸ್ತಿಗಳು
[ಬದಲಾಯಿಸಿ]- ಆರ್ಯಭಟ ಸಂಸ್ಥೆಯಿಂದ-‘ಆರ್ಯಭಟ ಪ್ರಶಸ್ತಿ’
- ಹೊಂಬಾಳೆ ಪ್ರತಿಭಾ ರಂಗದಿಂದ-‘ಸ್ವರ ಮಂದಾರ’ ಪ್ರಶಸ್ತಿ
- ವ್ಯಾಸ ಮಧ್ವ ಸಂಶೋಧನಾ ಕೇಂದ್ರದಿಂದ-‘ಹರಿದಾಸ ಶ್ರೀ’ ಪ್ರಶಸ್ತಿ
- ವ್ಯಾಸರಾಜ ಮಠದಿಂದ-‘ಸಂಗೀತ ಶಿರೋಮಣಿ’ ಪ್ರಶಸ್ತಿ
- ಕಲಾ ವಿಕಾಸ ಪರಿಷತ್ ನಿಂದ-‘ಭಕ್ತಿ ಸಂಗೀತ ವಿದ್ವಾನ್’ ಪ್ರಶಸ್ತಿ
- ರಾಷ್ಟ್ರೀಯ ರತ್ನ ಪ್ರಶಸ್ತಿ ಇತ್ಯಾದಿ
ಸಂಘಟನೆ
[ಬದಲಾಯಿಸಿ]೧) ರಾಯಚೂರಿನ ಶೃತಿ ಸಾಹಿತ್ಯ ಮೇಳದ ಕಾರ್ಯದರ್ಶಿಯಾಗಿ, ೨) ಬೆಂಗಳೂರಿನ ಹರಿದಾಸ ಸೇವಾ ಇಂಟರ್ ನ್ಯಾಷನಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ೩) ಹರಿದಾಸ ಸಂಗೀತ-ಸಾಹಿತ್ಯೋತ್ಸವ ಸಮಿತಿ, ಮೈಸೂರರಿನ ಗೌರವಾಧ್ಯಕ್ಷರಾಗಿ, ೪) ಹರಿದಾಸ ಸೇವಾ ಪ್ರತಿಷ್ಠಾನದ ಹುಬ್ಬಳ್ಳಿ ಇದರ ಗೌರವಾಧ್ಯಕ್ಷರಾಗಿ, ೫) ಇಂದಿರೇಶ ಪ್ರತಿಷ್ಠಾನ ಗಂಗಾವತಿ ಇದರ ಗೌರವ ಸಲಹೆಗಾರರಾಗಿ ರಾಜ್ಯಾದ್ಯಂತ ಹಲವಾರು ಸಾಂಸ್ಕೃತಿಕ, ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ, ಸಂಸ್ಕೃತಿಯ ಸೇವೆ ಮಾಡುತ್ತಿದ್ದಾರೆ.
ತರಬೇತಿ ಶಿಬಿರ
[ಬದಲಾಯಿಸಿ]ಸುಗಮ ಸಂಗೀತ ತರಬೇತಿ ಶಿಬಿರ
[ಬದಲಾಯಿಸಿ]ಹರಿದಾಸ ಗಾಯನ ತರಬೇತಿ ಶಿಬಿರ ವಿಶೇಷವಾಗಿ ೧೦ ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಈ ತರಬೇತಿಗಳನ್ನು ರಾಜ್ಯದ ಹಲವಾರು ಭಾಗಗಳಲ್ಲಿ ಏರ್ಪಡಿಸಿ, ತನ್ಮೂಲಕ ಮಕ್ಕಳಲ್ಲಿ ಸಂಗೀತದ, ಸಾಹಿತ್ಯದ ಸದಭಿರುಚಿಯನ್ನು ಮೂಡಿಸುತ್ತಿದ್ದಾರೆ.
ಧ್ವನಿಸುರುಳಿಗಳು ಹಾಗೂ ಸಿಡಿಗಳು
[ಬದಲಾಯಿಸಿ]ಈವರೆಗೆ ಇವರು ಹಾಡಿದ ೧೦೦ಕ್ಕೂ ಹೆಚ್ಚು ಧ್ವನಿ ಸುರುಳಿಗಳು ಬಿಡುಗಡೆಯಾಗಿದೆ. ಅದರಲ್ಲಿ ಕಾಯೋ ಕಾವೇರಿ ಗಂಗ, ಹನುಮಂತ, ದಯಮಾಡಿ ಸಲಹಯ್ಯ, ರಂಗವಿಠಲ, ಮುದ್ದುರಂಗ, ನಿನ್ನ ಒಲುಮೆಯಿಂದ ಮುಂತಾದವು ತುಂಬಾ ಜನಪ್ರಿಯತೆಯನ್ನು ಪಡೆದಿದೆ.
ಸಂಗೀತ ನಿರ್ದೇಶನ
[ಬದಲಾಯಿಸಿ]- ಸಮೂಹಗಾನ ಸಂಗೀತ ನಿರ್ದೇಶನದಲ್ಲಿ ತುಂಬಾ ಆಸಕ್ತಿ ಹೊಂದಿರುವ ಶೇಷಗಿರಿದಾಸರು ನಿರ್ದೇಶಿಸಿದ ಸಮೂಹಗಾನ ತಂಡ, ರಾಜ್ಯದ ಹಲವಾರು
ಕಡೆ ಕಾರ್ಯಕ್ರಮ ನೀಡಿದೆ.
- ಈವರೆಗೆ ಸುಮಾರು ೧೦೦೦ಕ್ಕೂ ಹೆಚ್ಚು ಕೃತಿಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
- ಸುಮಾರು ೨೦ಕ್ಕೂ ಹೆಚ್ಚು ಧ್ವನಿ ಸುರುಳಿಗಳಿಗೆ ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ.
- ಇವರು ನಿರ್ದೇಶಿಸಿದ ವಾದ್ಯ ಸಂಗೀತ ನ್ಯೂಜಿಲೆಂಡ್‌ನ, ಟಿ.ವಿ.ವಾಹಿನಿಯೊಂದು ತನ್ನ ಆರಂಭದ ಶೀರ್ಷಿಕೆ ಸಂಗೀತವಾಗಿ ಬಳಸಿಕೊಂಡಿದೆ.
ಪ್ರಕಟಣೆ
[ಬದಲಾಯಿಸಿ]- ಉತ್ತಮ ಲೇಖಕರಾಗಿರುವ ಶೇಷಗಿರಿದಾಸ್ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ.[೧]
- ಇವರು ಸಂಪಾದಿಸಿದ ಅಂದರೆ ೭೫ಕ್ಕೂ ಹೆಚ್ಚು ಹರಿದಾಸರು ರಚಿಸಿದ ೪೦೦ಕ್ಕೂ ಹೆಚ್ಚು ಕೃತಿಗಳಿರುವ ‘ಹನುಮಂತ ಹನುಮಂತ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅಲ್ಲದೇ ಅದು ಅತ್ಯಂತ ಜನಪ್ರೀಯತೆ ಪಡೆದಿದೆ.