ರಾಮೇಶ್ವರ.ಎ.ಕೆ
ಗೋಚರ
ಎ.ಕೆ.ರಾಮೇಶ್ವರರು ಮಕ್ಕಳ ಸಾಹಿತಿಗಳಲ್ಲಿ ಪ್ರಮುಖರು. ಮಕ್ಕಳಿಗಾಗಿಯೇ ಹಲವಾರು ಕೃತಿಗಳನ್ನು ರಚಿಸಿದ ಕೀರ್ತಿ ಇವರದು.
ಪರಿಚಯ
[ಬದಲಾಯಿಸಿ]೧೯೩೪ ಮೇ ೨ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದದಾಮಟ್ಟಿಯಲ್ಲಿ ಹುಟ್ಟಿದ ಎ.ಕೆ.ರಾಮೇಶ್ವರ ಅವರು ಗುಲಬರ್ಗಾ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಬಂದಿದದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮೇಶ್ವರ ಅವರು ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು. ಮಕ್ಕಳಿಗಾಗಿ ಸುಮಾರು ಹತ್ತು ಗ್ರಂಥಗಳನ್ನು ರಚಿಸಿರುವ ಇವರು ಜಾನಪದ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಸರಳ ಜೀವನ ನಡೆಸುವ ಎ.ಕೆ.ರಾಮೇಶ್ವರ ಅವರು ಹಳ್ಳಿಗಳತ್ತ ಆಕರ್ಷಿತರಾಗಿ ಜನಪದರ ಕಲೆ,ಸಾಹಿತ್ಯ, ಸಂಪ್ರಾದ್ಯಗಳನ್ನೆಲ್ಲ ತೆರೆದ ಕಣ್ಣಿನಿಂದ ಪರಿವೀಕ್ಷಿಸಿದರು: ಫಲವಾಗಿ ನಾಲ್ಕಾರು ಕೃತಿಗಳನ್ನು ಜನಪದ ಸಾಹಿತ್ಯಕ್ಕೆ ನೀಡಿದ್ದಾರೆ.
ಕೃತಿಗಳು
[ಬದಲಾಯಿಸಿ]- ೧೯೮೪ರಲ್ಲಿ ಪ್ರಕಟಗೊಂಡ ಹಣಚಿಬಟ್ಟಿನ ಕೈ ಎಂಬ ಇವರ ಕೃತಿ ಜಾನಪದ ವಿಷಯಗಳಿಗೆ ಸಂಬಂಧಿಸಿದ ಎಂಟು ಲೇಖನಗಳನ್ನು ಹೊಂದಿದೆ.
- ಜಾನಪದರು ಕಂಡ ಸಾಕ್ಷರತೆ, ಜಾನಪದ ಸಾಹಿತ್ಯದಲ್ಲಿ ಕೌಟುಂಬಿಕ ಕಲ್ಪನೆ.
- ಜಾನಪದ ವಾದ್ಯಗಳು
- ಜಾನಪದ ವೇಷಭೂಷಣಗಳು
- ಒಗಟುಗಳು,
- ಶಿಶುಪ್ರಾಸಗಳು
- ಜಾನಪದ ಋಷಿಯೊಡನೆ ಕಳೆದ ದಿನಗಳು
ಉಲ್ಲೇಖ
[ಬದಲಾಯಿಸಿ] ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |