ವಿಷಯಕ್ಕೆ ಹೋಗು

ರಾಮನ ಸೇತುವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ರಾಮನ ಸೇತುವೆ ಅಥವಾ ಆಡಮ್ ನ ಸೇತುವೆಭಾರತಕ್ಕೂ ಸಿಲೋನಿಗೂ ಮಧ್ಯೆ ಸುಮಾರು ೩೬ ಕಿ.ಮೀ. ಉದ್ದದ, ಆಳವಿಲ್ಲದ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಚಿಪ್ಪಿನಂಥ ಮರಳುಗಲ್ಲುಗಳನ್ನೊಳಗೊಂಡಿರುವ ಕಿರಿದಾದ, ಅರ್ಧ ಮುಳುಗಿರುವ ಒಡ್ಡು. ಈ ಪ್ರದೇಶದ ಕೆಲವು ಕಡೆಗಳಲ್ಲಿ ನೀರಿನ ಆಳ ೩೦ ಅಡಿ ಗಳಷ್ಟಿದ್ದು ಅಲ್ಲಲ್ಲೇ ಅನೇಕ ಸಣ್ಣ ಸಣ್ಣ ದ್ವೀಪಗಳೂ ಕಾಣಿಸಿಕೊಂಡಿದೆ. ಇವುಗಳಲ್ಲೊಂದಾಗಿರುವ ಕ್ರುಸಡೈ ದ್ವೀಪ[೧] ಪಾಂಬನ್ ದ್ವೀಪದ ಕುಟಿಕಲ್ ತುದಿಯಿಂದ ದಕ್ಷಿಣದಲ್ಲಿದ್ದು ಉಪಯುಕ್ತ ವೈಜ್ಞಾನಿಕ ವೀಕ್ಷಣಾ ಕೇಂದ್ರವಾಗಿದೆ. ನೀರಿನಿಂದ ಸುತ್ತುವರಿಯಲ್ಪಟ್ಟಿದ್ದರೂ ಸೇತುವೆ ಯಾವುದೇ ದೊಡ್ಡ ದೋಣಿ ಸಂಚಾರಕ್ಕೂ ಯೋಗ್ಯವಲ್ಲ. ಆದ್ದರಿಂದ ಕೊಲಂಬೋದಿಂದ ಮದರಾಸಿಗೆ ಹೋಗುವ ಹಡಗುಗಳು ಸಿಲೋನ್ ದ್ವೀಪದ ಪೂರ್ವ ತೀರವನ್ನು ಬಳಸಬೇಕಾಗುತ್ತದೆ.

ಧನುಷ್ಕೋಡಿಯಲ್ಲಿನ ಭಾರತದ ರೈಲು ಅಂತಿಮ ನಿಲ್ದಾಣ ಮತ್ತು ತಲೈಮನ್ನಾರಿನಲ್ಲಿನ[೨] ಸಿಲೋನ್ ಸರಕಾರದ ರೈಲು ಅಂತಿಮ ನಿಲ್ದಾಣಗಳ ನಡುವೆ ರೈಲು ವಿಭಾಗದ ದೋಣಿ ಸಂಚಾರದ ವ್ಯವಸ್ಥೆ ಇದೆ. ತಲೈಮನ್ನಾರ್ ಜಲವಿಭಾಗದ ಒಂದು ಭಾಗವಾಗಿರುವ ಮನ್ನಾರ್ ದ್ವೀಪದಲ್ಲಿದೆ. ಮನ್ನಾರ್ ದ್ವೀಪ ಮತ್ತು ಸಿಲೋನಿನ ಮುಖ್ಯ ಭೂಭಾಗದ ನಡುವೆ ಒಂದು ಕಿರಿದಾದ ಕಾಲುವೆ ಇದೆ. ಇದಕ್ಕೆ ಅಡ್ಡಲಾಗಿ ಒಂದು ರಸ್ತೆ ಮತ್ತು ರೈಲು ಸೇತುವೆಗಳನ್ನು ನಿರ್ಮಿಸಲಾಗಿದೆ. ಈ ಸೇತುವೆಯ ನಿರ್ಮಾಣದಿಂದಾಗಿ ಮನ್ನಾರ್ ಪಟ್ಟಣ ಬೆಳೆಯಲು ಅವಕಾಶವಿದೆ. ಮುಖ್ಯ ದ್ವೀಪದಲ್ಲಿ ರೋಮನ್ನರ ಕಾಲದಲ್ಲಿ ಬಹಳ ಮುಖ್ಯವೆನಿಸಿದ್ದ ಮನ್‍ತೈ (ಈಗ ಇದನ್ನು ಮನ್‍ಟೊಟಾ ಎನ್ನುತ್ತಾರೆ) ಎಂಬ ಒಂದು ಪುರಾತನ ಬಂದರು ಮತ್ತು ವ್ಯಾಪಾರಸ್ಥಳವಿದೆ. ಪ್ರಸಿದ್ಧ ಹಣ್ಣಿನ ತೀರಪ್ರದೇಶ ಮನ್ನಾರಿನ ದಕ್ಷಿಣ ಭಾಗದಲ್ಲಿದೆ.

ರಾಮನ ಸೈನ್ಯವೆಲ್ಲವೂ ಸಮುದ್ರವನ್ನು ದಾಟಿ, ರಾವಣನೊಡನೆ ಯುದ್ಧಮಾಡಿ ಸೀತೆಯನ್ನು ಅವನಿಂದ ಬಿಡಿಸಿಕೊಂಡು ಬರಲು ಸಹಾಯವಾಗುವಂತೆ ಹನುಮಂತ ಈ ಸೇತುವೆಯನ್ನು ಕಟ್ಟಿಸಿದನೆಂದು ನಂಬಿಕೆ. ಆದ್ದರಿಂದ ಇದಕ್ಕೆ ರಾಮನ ಸೇತುವೆ ಎಂಬ ಹೆಸರಿದೆ. [೩] [೪]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-04-17. Retrieved 2016-10-20.
  2. https://www.makemytrip.com/blog/talaimannar
  3. http://www.srilanka.travel/adam's-bridge
  4. https://www.britannica.com/place/Adams-Bridge