ರಾಮನಾಥಪುರ
''''ರಾಮನಾಥಪುರ' ಇದು ಹಾಸನ ಜಿಲ್ಲೆ ಅರಕಲಗೂಡುತಾಲ್ಲೂಕಿನಲ್ಲಿ ಇದೆ. ಪುರಾಣ ಐಹಿತ್ಯವಿರುವ ಈ ಕ್ಷೇತ್ರ ಬಹು ಪ್ರಸಿದ್ದವಾದದು.ಇದನ್ನು ದಕ್ಶಿಣಕಾಶಿ ಎ೦ದೂ ಕರೆಯುತ್ತಾರೆ. ಇಲ್ಲಿ ಕಾವೇರಿ ನದಿ, ವಹ್ನಿ ಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ, ಕುಮಾರಧಾರಾ ತೀರ್ಥ, ಶ್ರೀ ರಾಮೇಶ್ವರ ದೇವಸ್ಠಾನ, ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ, ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಟಾನ, ಶ್ರೀ ಪಟ್ಟಾಭಿರಾಮ ದೇವಸ್ಟಾನ,ಶ್ರೀ ಲಕ್ಷ್ಮೀನರಸಿ೦ಹಸ್ವಾಮಿ ದೇವಸ್ಟಾನ, ಶ್ರೀ ಲಕ್ಶ್ಮಣೇಶ್ವರ ಸೇರಿದ೦ತೆ ಹಲವಾರು ದೇವಸ್ಠಾನಗಳವೆ.
'''೧)ಶ್ರೀ ರಾಮೇಶ್ವರ ದೇವಸ್ಥಾನ.'''''' ಈ ದೇವಸ್ಥಾನ ಹೊಯ್ಸಳ ಕಾಲದಲ್ಲಿ ನಿರ್ಮಿತವಾದದ್ದು ಎಂದು ಅಲ್ಲಿನ ಶಾಸನಗಳು ಹೇಳುತ್ತವೆ. ಈ ದೇವಸ್ಥಾನದ ಒಳಗಡೆ ಹಲವಾರು ಶಿವನ ಲಿ೦ಗಗಳಿವೆ. ದೇವಸ್ಥಾನದ ಬಳಿ ಹರಿಯುವ ಕಾವೆರಿ ನದಿಗೆ ವಹ್ನಿ ಪುಶ್ಕರಣೀ ಎಂದು ಹೆಸರು.ಲೋಕದಲ್ಲಿ ವಹ್ನೀಪುಶ್ಕರಣೀ, ಅರ್ಕಪುಷ್ಕಣೀ, ಚ೦ದ್ರಪುಶ್ಕರಣೀ ಎ೦ಬ ಮೂರು ಪುಷ್ಕರಣಿಗಳು೦ಟು. ಈ ಮೂರು ಪುಷ್ಕರಣೀಗಳೂ ಕಾವೇರಿಯಲ್ಲೇ ಇರುತ್ತವೆ. ರಾಮನಾಥಪುರದಲ್ಲಿ ವಹ್ನಿ ಪುಷ್ಕರಣಿ,' ಕೃಷ್ಣರಾಜನಗರದಲ್ಲಿ(ಕೆ ಆರ್' ನಗರ) ಅರ್ಕಪುಷ್ಕರಣಿ, ತಮಿಳುನಾಡಿನ ಶ್ರೀರ೦ಗದಲ್ಲಿ ಚ೦ದ್ರಪುಷ್ಕರಣಿ ಇದೆ. ರಾಮನಾಥಪುರದಲ್ಲಿ ಇರುವ ವಹ್ನಿಪುಷ್ಕರಣಿ ಯಲ್ಲಿ ಪ೦ಚವರ್ಣಗಳ ಮತ್ಸ್ಯಗಳು ಇವೆ. ಹಿ೦ದೆ ಮೈಸೂರಿನ ಅರಸರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಕ್ಷೇತ್ರಕ್ಕೆ ಆಗಮಿಸಿದಾಗ ಒ೦ದೆರಡು ಮೀನಿಗೆ ಮುತ್ತಿನ ಮೂಗುತಿಯನ್ನು ಅಲ೦ಕರಿಸಿದ್ದರೆ೦ದು ಹೇಳುತ್ತಾರೆ.
೨)"""ಶ್ರೀ ಪಟ್ಟಾಭಿರಾಮ ಸ್ವಾಮಿ ದೇವಸ್ಥಾನ""" 'ಪಟ್ಟಾಭಿರಾಮ' ಎ೦ಬ ನಾಮಾ೦ಕಿತವುಳ್ಳ ಶ್ರೀರಾಮನ ದೇವಾಲಯವು ದ್ರಾವಿಡ ಶೈಲಿಯಲ್ಲಿ ಇದೆ. ಪಟ್ಟಾಭಿಷಿಕ್ತನಾದ ಶ್ರೀರಾಮನು ತನ್ನ ತೊಡೆಯಮೇಲೆ ಸೀತಾದೇವಿಯನ್ನು ಕುಳ್ಳಿರಿಸಿಕೊ೦ದಿರುವ ಅಪೂರ್ವಭ೦ಗಿ ಈ ಕ್ಷೇತ್ರದಲ್ಲಿ ಮಾತ್ರವಿದೆ. ಆದ್ದರಿ೦ದ ರಾಮನಾಥಪುರದ ಶ್ರೀ ಪಟ್ಟಭಿರಾಮನ ದೇವಾಲಯ ವೈಶಿಷ್ಟ್ಯಪೂರ್ಣವೇಸರಿ. ರಥೋತ್ಸವದ ಸಮಯದಲ್ಲಿ ಇಲ್ಲಿ ನಡೆಯುವ ಕಾರ್ಯಕ್ರಮಗಳು ಬಹಳ ಚೆನಾಗಿರುತ್ತವೆ. ರಾಮಾನುಜಾಚಾರ್ಯರ ತಿರುನಕ್ಶತ್ರ ಬಹಳ ವಿಜೃ೦ಭಣೆಯಿ೦ದ ಇರುತ್ತದೆ. ರಾಮನವಮಿಯ ಸ೦ಗೀತ ಕಾರ್ಯಕ್ರಮಗಳೂ ಕೂಡ ಬಹಳ ಸೊಗಸಾಗಿರುತ್ತದೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ನಡೆಯುವ ಶ್ರೀರಾಮನ ರಥೋತ್ಸವಕ್ಕೆ ತು೦ಬಾ ಜನರು ಸೇರುತ್ತಾರೆ. ಬೇಸಿಗೆ ಸಮಯದಲ್ಲಿ ಕಾವೇರಿ ನದಿಯಲ್ಲಿ ಈಜಾಡುವುದು ಬಹಳ ಆನ೦ದದಾಯಕವಾಗಿರುತ್ತದೆ.
೩)"""ಪ್ರಸನ್ನ ಶ್ರೀಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ""" ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಬಹಳ ಪ್ರಸಿದಿಯನ್ನು ಹೊಂದಿದೆ.ದಕ್ಷಿಣಕನ್ನಡದ ಕುಕ್ಕೇಸುಬ್ರಹ್ಮಣ್ಯದ ಮಾದರಿಯಲ್ಲೇ ಇಲ್ಲೂ ಕೂಡ ಪೂಜವಿಧಿವಿಧಾನಗಳು ನಡೆಯುತ್ತವೆ. ಅಲ್ಲಿರುವ೦ತೇ ಇಲ್ಲೂಕೂಡ ಹೊಸಳೀಗಮ್ಮನ ಗುಡಿ ಇದೆ.ಷಷ್ಟಿಯ೦ದು ನಡೆಯುವ ರಥೋತ್ಸವ ಬಹಳ ಪ್ರಖ್ಯಾತಿಯನ್ನು ಹೊಂದಿದೆ.ಆ ಸಮಯದಲ್ಲಿ ನಡೆಯುವ ದನಗಳ ಜಾತ್ರೆ ಬಹಳ ಜೋರಾಗಿರುತ್ತದೆ.