ರಾಮಕೃಷ್ಣ ಕಾಟುಕುಕ್ಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Ramakrishna katukukke 004.JPG
'ಮುಂಬಯಿನ ಮೈಸೂರ್ ಅಸೋಸಿಯೇಷನ್' ನಲ್ಲಿ ಶ್ರೀ.ಕಾಟುಕುಕ್ಕೆ ಮತ್ತು ವೃಂದದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ'
ಚಿತ್ರ:Ramakrishna katukukke 009.JPG
'ಶ್ರೀಮತಿ.ಪ್ರಫುಲ್ಲ ಉರುವಲ್, ಶ್ರೀ.ಆರ್.ಕಾಟುಕುಕ್ಕೆಯವರಿಗೆ,ಪುಷ್ಪಗುಚ್ಛವನ್ನು ಕೊಡುತ್ತಿದ್ದಾರೆ'

ಯುವ ದಾಸಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, kಕೇರಳ ರಾಜ್ಯದ ಕಾಸರುಗೋಡು ಜಿಲ್ಲೆಯ ಕಾಟುಕುಕ್ಕೆ ಗ್ರಾಮನಿವಾಸಿ. ಗಡಿನಾಡು ಕನ್ನಡಿಗ. ಸರಳ ಸಜ್ಜನಿಕೆಯ ವ್ಯಕ್ತಿತ್ವದ 'ಕಾಟುಕುಕ್ಕೆ'ಯವರು, ಬಾಲ್ಯದಿಂದಲೂ ಕನ್ನಡದಲ್ಲಿ ದೇವರ ಭಜನೆ, ಮತ್ತು ಶಾಸ್ತ್ರೀಯ ಸಂಗೀತದ ಬಗ್ಗೆ ತೀವ್ರವಾದ ಆಸಕ್ತಿಯನ್ನು ಹೊಂದಿದ್ದಾರೆ.

ಜನನ ಮತ್ತು ಪರಿವಾರ[ಬದಲಾಯಿಸಿ]

ರಾಮಕೃಷ್ಣರ ತಂದೆ, ಕಾಟುಕುಕ್ಕೆ ನಾರಾಯಣ ರಾವ್, ತಾಯಿ ರತ್ನಾವತಿ ರಾವ್ ಪತ್ನಿ,ಉಮಾರಾವ್ ಆದಿತ್ಯ, ಕವನ ಎಂಬ ಇಬ್ಬರು ಮಕ್ಕಳು. ಭಜನೆ ಮತ್ತು ಶಾಸ್ತ್ರೀಯ ಸಂಗೀತದಲ್ಲಿ ಪರಮಾಸಕ್ತಿ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನು ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮ ರಿಂದ ಕಲಿತರು. ಯೋಗೀಶ್ ಶರ್ಮರವರು, ಮಂಗಳೂರು ಆಕಾಶವಾಣಿಯ ’ಬಿ ಗ್ರೇಡ್’ ಕಲಾವಿದ. ರಾಜ್ಯ ಹೊರರಾಜ್ಯ, ಮುಂಬಯಿಮಹಾನಗರದಲ್ಲೂ ದಾಸ ಸಂಕೀರ್ತನೆ, ಭಕ್ತಿಗಾನ ರಸಮಂಜರಿ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟು ಕಲಾರಸಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ೨೫೦ ಕ್ಕೂ ಹೆಚ್ಚು ದಾಸರ ಪದಗಳಿಗೆ ಸ್ವರಸಂಯೋಜಿಸಿ ಹಾಡಿ ಸುಮಾರು ೧೫೦ ಕ್ಕೂ ಮಿಗಿಲಾಗಿ ದಾಸರ ಪದಗಳಿಗೆ ಹಾಗೂ ಭಕ್ತಿಗೀತೆಗಳ ಧ್ವನಿ ಸುರುಳಿಗಳು ಬಿಡುಗದೆಗೊಂದು ಕನ್ನಡ ನಾಡಿನಾದ್ಯಂತ ಮನೆಮತಾಗಿದ್ದಾರೆ. ಇವರು ಹಾಡಿದ ’ತಿರುಪತಿ ವೆಂಕಟರಮಣ’ ಮತ್ತು ’ಕಣ್ಣಿನೊಳಗೆ ನೋಡು’ ಸಿಡಿ ಕ್ಯಾಸೆಟ್ ಗಳು ತಲಾ ೨ ಲಕ್ಷಕ್ಕೂ ಅಧಿಕ ಮಾರಾಟವಾಗಿ ದಾಖಲೆ ಸೃಷ್ಟಿಸಿವೆ.

ವೃತ್ತಿಜೀವನ[ಬದಲಾಯಿಸಿ]

'ರಾಮಕೃಷ್ಣ ಕಾಟುಕುಕ್ಕೆ', 'ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಾಲಯ'ದಲ್ಲಿ ಉದ್ಯೋಗದಲ್ಲಿದ್ದರು. ಇದು ಕೇರಳದ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತದೆ. 'ಶ್ರೀ ತಿರುಮಲ ದೇವಸ್ಥಾನಕ್ಕೆ ಆಹ್ವಾನಿತ ಗಾಯಕ'ರಾಗಿ , 'ಶ್ರೀ ಧರ್ಮಸ್ಥಳ ಭಜನಾ ಕಮ್ಮಟದ ಭಜನಾ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿ'ಯಾಗಿದ್ದಾರೆ. ಈ ಕಾರ್ಯಗಳ ಮಧ್ಯೆ 'ಶ್ರೀಪುರುಂದರದಾಸ ಆರಾಧನಾ ಮಹೋತ್ಸವ ಸಮಿತಿ' ರಚಿಸಿ ನಿಷ್ಠೆಯಿಂದ ಆರಾಧನೋತ್ಸವ ನಡೆಸಿ ಸತತ ಭಜನೆ, ಕೀರ್ತನೆ, ಸತ್ಸಂಗಗಳ ಮೂಲಕ ನಾಡಿನ ಜನರ ದೈವಿಕ ಚೈತನ್ಯವೃದ್ಧಿಗೆ ಪ್ರೇರಕರಾಗಿದ್ದಾರೆ.

ದಾಸನಾಗು ವಿಶೇಷನಾಗು[ಬದಲಾಯಿಸಿ]

ಎಂಬ ನುಡಿಯಿಂದ ಪ್ರೇರಿತರಾಗಿ ಗಡಿನಾಡು-ಕರಾವಳಿ ಪ್ರದೇಶಗಳ ನಾನಾ ಊರುಗಳ ಮನೆ, ಮಠ, ಮಂದಿರಗಳ ೧೫೦ ಕ್ಕೂ ಹೆಚ್ಚು ಕೇಂದ್ರಗಳಲ್ಲಿ ’ದಾಸ ಸಂಕೀರ್ತನಾಯಾತ್ರೆ’ ಯ ಅಭಿಯಾನವನ್ನು ನಡೆಸಿ ಸಾಂಪ್ರದಾಯಿಕ ಭಜನೆ ಹಾಘೂ ಹರಿದಾಸ ಸಾಹಿತ್ಯ ಪ್ರಚಾರ ಪಡಿಸಿ ಯಶಸ್ವಿಯಾಗಿದ್ದಾರೆ. ಈ ಅಭಿಯಾನವನ್ನು ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. 'ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್' ನ ಯೋಜನೆಯನ್ನು ಕಾಸರಗೋಡು ಜಿಲ್ಲೆಯ ೧೦ ಕನ್ನಡ ಶಾಲೆಗಳಲ್ಲಿ ೬೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಜನಾತರಪೇತಿ ನೀಡುವ ಮೂಲಕ ಮನೆ-ಮನಕೆ ಹರಿಭಜನಾ ಸಾಹಿತ್ಯ ಸಂಸ್ಕೃತಿಯನ್ನು ಬಿತ್ತರಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಇದುವರೆವಿಗೂ'ಕಾಟುಕುಕ್ಕೆ'ಯವರು ಒಂದು ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ದಾಸ ಸಂಕೀರ್ತನೆ,ಹಾಗೂ ಭಕ್ತಿಗಾನ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಸರಳ ಗಾಯನಶೈಲಿ,ಇವರ ವೈಶಿಷ್ಠ್ಯತೆಗಳಲ್ಲೊಂದು.

  • ಕೇರಳ ರಾಜ್ಯ ದಾಸ ಸಾಹಿತ್ಯ ಸಮ್ಮೇಳನದ ಗೌರವ ಪ್ರಶಸ್ತಿ
  • ಕನ್ನಡ ಪಯಸ್ವಿನಿ-೨೦೦೯ ಪ್ರಶಸ್ತಿ

ಮುಂಬಯಿನ ಮೈಸೂರ್ ಅಸೋಸಿಯೇಷನ್ ನಲ್ಲಿ[ಬದಲಾಯಿಸಿ]

'ಕನ್ನಡ ಕಲಾಕೇಂದ್ರ ಮುಂಬಯಿ' ಹಾಗೂ 'ಮೈಸೂರ್ ಅಸೋಸಿಯೇಷನ್' ಇವರ ಸಂಯುಕ್ತ ಆಶ್ರಯದಲ್ಲಿ 'ರಾಮಕೃಷ್ಣ ಕಾಟುಕುಕ್ಕೆ'ಯವರು ೨೦೧೧ ರ ಡಿಸೆಂಬರ್,೧೮,ರವಿವಾರ ಸಂಜೆ, 'ಭಕ್ತಿ ಸಂಗೀತ ಕಾರ್ಯಕ್ರಮ'ವನ್ನು ನಡೆಸಿಕೊಟ್ಟರು.'ಕಾಟುಕುಕ್ಕೆ'ಯವರು ಹಾಡಿದ, ಭಜನೆಗಳು ಹಾಗೂ ದಾಸರ ಕೀರ್ತನೆಗಳಲ್ಲಿ 'ತಿರುಪತಿ ವೆಂಕಟರಮಣ' ಹಾಗೂ 'ಕಣ್ಣಿನಲಿ ನೋಡು' ಗೀತೆಗಳು ಸಂಗೀತ ಪ್ರೇಮಿಗಳಿಗೆ ಬಹಳ ಮುದಕೊಟ್ಟವು. ಅನೇಕರು ಇನ್ನೂ ಸ್ವಲ್ಪಕಾಲ ತಮ್ಮ ಒಲವಿನ ಭಜನೆಗಳನ್ನು ಆಲಿಸಲು ತೀವ್ರ ಉತ್ಸುಕರಾಗಿದ್ದರು. ಆದರೆ ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ.

ಬಿಡುಗಡೆಗೊಂಡ ಧ್ವನಿ ಸುರಳಿಗಳ ಪಟ್ಟಿ[ಬದಲಾಯಿಸಿ]

  • ಧರ್ಮಕ್ಕೆ ಕೈಬಾರದೀಕಾಲ(ತಿರುಪತಿ ವೆಂಕಟರಮಣ)
  • ಕಣ್ಣಿನೊಳಗೆ ನೋಡು (ಹುಟ್ಟಿದೇಳು ದಿವಸದಲಿ)
  • ದಾಸ ನಮನ (ಭಜನಾ ಶೈಲಿಯ ಗೀತೆಗಳು)
  • ಗೋಪಿಯ ಭಾಗ್ಯವಿದು (ಹಣ್ಣು ತಾ ಬೆಣ್ಣೆ ತಾ)
  • ಕರುಣಾಸಾಗರ ಶ್ರೀಹರಿ (ಜಯ ಜಯ ಕೃಷ್ಣ)