ರಾಬರ್ಟ್ ಹೆರಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಬರ್ಟ್ ಹೆರಿಕ್
Robert Herrick, 1904 illustration based on Hesperides impression
ಜನನbaptised (೧೫೯೧-೦೮-೨೪)೨೪ ಆಗಸ್ಟ್ ೧೫೯೧
Cheapside, ಲಂಡನ್, England
ಮರಣburied 15 October 1674(1674-10-15) (aged 83)
Dean Prior, Devon, England
ವೃತ್ತಿPoet and cleric

ರಾಬರ್ಟ್ ಹೆರಿಕ್ ೨೪-೦೮-೧೫೯೧ ರಂದು ಲಂಡನಿನ್ನಲ್ಲಿ ಜನಿಸಿದನು. ಇವನ ತಂದೆ ನಿಕೊಲಸ್ ಹೆರಿಕ್ ಹಾಗೂ ತಾಯಿ ಜೂಲಿಯ ಸ್ಟೋನ್.ರಾಬರ್ಟ್ ಹೆರಿಕ್ ಒಂದು ವರುಶದ ಮಗುವಿರುವಾಗಲೆ ಇವನ ತಂದೆ ತೀರಿಕೊಂಡರು.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಹೆರಿಕ್ ತನ್ನ ೨೨ನೇ ವಯಸಿನಲ್ಲಿ ಮೆಟ್ರೀಕೂಲೇಶನ್ ಶಿಕ್ಷಣವನ್ನು ಸೆಂಟ್.ಜಾನ್ ಕಾಲೇಜಿನಲ್ಲಿ ಮುಗಿಸಿದನು. ಇವನು ತನ್ನ ಶಿಕ್ಶಣ ಅವಧಿಯಲ್ಲಿಯೇ 'ಉದಯೊನ್ಮುಖ ಕವಿ' ಯಾಗಿ ಹೊರಹೊಮ್ಮುತ್ತಾನೆ. ಇವನ ಸಮಕಾಲೀನ ಕವಿಗಳೆಂದರೆ ಜಾರ್ಜ್ ಹರ್ಬರ್ಟ್,ಸರ್ ಜಾನ್ ಸಕ್ಲಿಂಗ್ ಮುಂತಾದವರು. ರಾಬರ್ಟ್ ಹೆರಿಕ್ ಕೆವಿಲಿಯರ್ ಕವಿಗಳ ಗುಂಪಿಗೆ ಸೇರುತ್ತಾನೆ. ಕೆವಿಲಿಯರ್ ಕವಿಗಳು ಎಂದರೆ ಆಂಗ್ಲ ನಾಗರೀಕ ಯುದ್ದದಲ್ಲಿ ದೊರೆ ಮೊದಲನೇ ಚಾರ್ಲ್ಸ್ ಇವನಿಗೆ ಬೆಂಬಲ ನೀಡಿದ ಕವಿಗಳನ್ನ ಕೆವಿಲಿಯರ್ ಕವಿಗಳು ಎಂದು ಕರೆಯುತ್ತಾರೆ. ಈ ರೀತಿ ಬೆಂಬಲ ನೀಡಿದಂತಹ ಕವಿಗಳಲ್ಲಿ ರಾಬರ್ಟ್ ಹೆರಿಕ್ಕ್ ಸಹ ಒಬ್ಬನು ಆದ್ದರಿಂದ ಇವನನ್ನು ಕೆವಿಲಿಯರ್ ಕವಿ ಎಂದು ಕರೆಯುತ್ತಾರೆ. ರಾಬರ್ಟ್ ಹೆರಿಕ್ 'ಸನ್ಸ್ ಆಫ ಬೆನ್' ಸದಸ್ಯರಲ್ಲಿ ಪ್ರಮುಖನಾದವನು.ಹೆರಿಕ್ ಬೆನ್ ಜಾನ್ಸನ್‍ನಿಂದ ಹೆಚ್ಛು ಪ್ರಭಾವಕ್ಕೆ ಒಳಗಾಗುತ್ತಾನೆ ಹಾಗೂ ಇವನು ಬೆನ್ ಜಾನ್ಸನ್ ಮಾದರಿಯನ್ನು ಮತ್ತು ಕ್ಲಾಸಿಕಲ್ ರೊಮನ್ ಬರಹಗಾರರನ್ನು ಹೆಚ್ಛು ಅನುಸರಿಸುತ್ತಿದ್ದನು.

ಸಾಹಿತ್ಯ ರಚನೆ[ಬದಲಾಯಿಸಿ]

ರಾಬರ್ಟ್ ಹೆರಿಕ್ ಸುಮಾರು ೨೫೦೦ ಕ್ಕೂ ಹೆಚ್ಛು ಪದ್ಯಗಳನ್ನು ಬರೆದಿದ್ದಾನೆ.ಇವನ ಪ್ರಮುಖ ಎರಡು ಪದ್ಯಕೋಟಿಗಳೆಂದರೆ 'ನೊಬೆಲ್ ನಂಬರ್ಸ್' ಇದು ೧೬೪೭ರಲ್ಲಿ ಪ್ರಕಟಗೊಳ್ಳುತ್ತದೆ ಮತ್ತು 'ಹೆಸ್ಪಿರಿಡಸ್' ಇದು ೧೬೪೮ ರಲ್ಲಿ ಪ್ರಕಟಗೊಳ್ಳೂತ್ತದೆ. ಇವೆರಡೂ ಕೂಡ ಸಣ್ಣ ಪದ್ಯಗಳ ಸಂಗ್ರಹ ಪುಸ್ತಕಗಳು. ಹೆರಿಕ್ ಭಾವನೆಗಳಿಂದ ಕೂಡಿದಂತಹ ಕವಿ. ಇವನು ಹೆಚ್ಛಾಗಿ ಪ್ರೀತಿಯ ಬಗ್ಗೆ ಬರೆದಂತಹ ಪದ್ಯಗಳು ಪ್ರಸಿದ್ಧಿಗೊಂಡಿವೆ. ಪ್ರೀತಿಯೂ ಶ್ರೀಮಂತವಾದುದು ಹಾಗೂ ವೈವಿದ್ಯಮಯವಾದುದು ಎಂದು ಇವನ ಪ್ರಮುಖ ಪದ್ಯಗಳಾದ 'ಚೆರ್ರಿ ರೈಪ್', 'ಡಿಲೈಟ್ ಇನ್ ಡಿಸ್ಆರ್ಡರ್', ಮತ್ತು ಜೂಲಿಯನ್ ಕ್ಲಾತ್ಸ್ ಮೂಲಕ ತಿಳಿಯಬಹುದಾಗಿದೆ. ಹೆರಿಕ್ ನ ಪದ್ಯಗಳ ಪ್ರಮುಖ ಸಂದೇಶವೆಂದರೆ ಜೀವನ ಬಹಳ ಸರಳವಾದುದು, ಪ್ರಪಂಚ ಬಹಳ ಸುಂದರವಾಗಿದೆ,ಪ್ರೀತಿ ವೈಭವಯುತವಾದುದು,ಈ ನಮ್ಮ ಜೀವನದ ಕಡಿಮೆ ಸಮಯವನ್ನು ಬಹಳ ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು.

ನಿಧನ[ಬದಲಾಯಿಸಿ]

ಹೆರಿಕ್ ತನ್ನ ೮೩ನೇ ವಯಸ್ಸಿನಲ್ಲಿ ೧೫-೧೦-೧೬೭೪ ರಂದು ವಿಧಿವಶನಾದನು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ರಾಬರ್ಟ್ ಹೆರಿಕ್]]