ರಾಬರ್ಟ್ ಫಾಸ್ಟರ್ ಪ್ರಶಸ್ತಿ

ವಿಕಿಪೀಡಿಯ ಇಂದ
Jump to navigation Jump to search

ಅಮೆರಿಕದ ಪ್ರತಿಷ್ಠಿತ ಬೇಲರ್ ವಿಶ್ವವಿದ್ಯಾಲಯ ಪ್ರಾಯೋಜಿಸುವ ಸುಪ್ರಸಿದ್ಧ ರಾಬರ್ಟ್ ಫಾಸ್ಟರ್ ಪ್ರಶಸ್ತಿ. 'ರಾಬರ್ಟ್ ಫಾಸ್ಟರ್ ಚೆರ್ರಿ' ಎಂಬ ವಿಜ್ಞಾನಾಸಕ್ತ ಅಧಿಕಾರಿ ಬೇಲಾರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರನ್ನು ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುವ ಪದ್ಧತಿಯನ್ನು ಆರಂಭಮಾಡಿದರು. ೧೯೨೯ ರಲ್ಲಿ ರಾಬರ್ಟ್ ಫಾಸ್ಟರ್ ಚೆರ್ರಿಯವರು ಎ ಬಿ ಪದವಿ ಗಳಿಸಿದರು. ೧೯೩೨ ಬೆಲರ್ ಲಾ ಸ್ಕೂಲ್ ಗೆ ಭರ್ತಿಯಾದರು ಮಾರನೆಯ ವರ್ಷವೇ ಟೆಕ್ಸಾಸ್ ಸ್ಟೇಟ್ ಬಾರ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆ ಸಮಯದಲ್ಲಿ ಅವರಿಗೆ ಮಾರ್ಗದರ್ಶ ಮಾಡಿದ ಗುರುಗಳು ಅವರಿಗೆ ಬಲು ಪ್ರಿಯರಾದರು. ತಮ್ಮ ಜೀವನದಲ್ಲಿ ಪರಿವರ್ತನೆಯನ್ನು ತಂದ ಸುಂದರ ವರ್ಷಗಳನ್ನು ಅವರು ಮರೆಯಲಿಲ್ಲ ಆ ಖುಷಿಯಿಂದ ಅವರು ಒಂದು ದೊಡ್ಡ ಎಸ್ಟೇಟ್ ನಲ್ಲಿ ಚೆರ್ರಿ ಅವಾರ್ಡ್ ಪ್ರೊಗ್ರಾಮ್ ಶುರುಮಾಡಿದರು. ಒಳ್ಳೆಯ ಉತ್ಕೃಷ್ಟ ಬೋಧಕರನ್ನು ಗುರುತಿಸಿ, ಅವರಿಂದ ಬೇಲರ್ ನಲ್ಲಿ ಓದುವ ಛಾತ್ರರಿಗೆ ಪಾಠ ಹೇಳಿಕೊಡುವ ಏರ್ಪಾಡು ಮಾಡುವ ಮನಸ್ಸಾಯಿತು. ಹೀಗೆ ಚಿಕ್ಕದಾಗಿ ೧೯೯೧ ರಲ್ಲಿ ಪ್ರಾರಂಭಿಕ ಇನಾಗ್ಯುರಲ್ ಅವಾರ್ಡ್ ಆರಂಭ ವಾಗಿ ಈಗ ಅದು ಎರಡು ವರ್ಷಕ್ಕೊಮ್ಮೆ ಜರುಗುತ್ತಿದೆ. ಬೇಲಾರ್ ಒಂದು ಸುಪ್ರಸಿದ್ಧ ಖಾಸಗಿ ಕ್ರಿಶ್ಚಿಯನ್ ವಿಶ್ವವಿದ್ಯಾಲಯ. ಒಟ್ಟಾರೆ ೧೫ ಸಾವಿರ ವಿದ್ಯಾರ್ಥಿಗಳಿಗೆ ಅಂತರರಾಷ್ಟೀಯಮಟ್ಟದ ವಿದ್ಯಾಸಂಸ್ಥೆಯೆಂದು ಹೆಸರಾಗಿದೆ. ಇಲ್ಲಿ 'ಇಂಟರ್ ಡಿಸಿಪ್ಲಿನರಿ ಸಂಶೋಧನೆಗಳಿಗೆ ವಿಪುಲವಾದ ಅವಕಾಶ'ಗಳಿವೆ. ಇದಲ್ಲದೆ ಒಳ್ಳೆಯ ಹೆಸರುವಾಸಿಯಾದ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿನ ಬೋಧಕವರ್ಗ ಬಹಳ ಉನ್ನತಮಟ್ಟದ್ದೆಂದು ರಾಷ್ಟ್ರದಾದ್ಯಂತ ದಾಖಲಾಗಿದೆ.