ರಾಧಾ ಯಾದವ್
'ರಾಧಾ ಪ್ರಕಾಶ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಎಡಗೈ ಲೆಗ್ ಸ್ಪಿನ್ ಬೌಲರ್ . ದೇಶಿ ಕ್ರಿಕೆಟ್‍ನಲ್ಲಿ ಮುಂಬೈ, ಬರೋಡ ಹಾಗು ಪಶ್ಚಿಮ ವಲಯ ಕ್ರಿಕೆಟ್ ತಂಡಗಳಿಗೆ ಆಡುತ್ತಾರೆ.[೧]
ಆರಂಭಿಕ ಜೀವನ
[ಬದಲಾಯಿಸಿ]ರಾಧಾ ಯಾದವ್ ರವರು ಏಪ್ರಿಲ್ ೨೧, ೨೦೦೦ರಂದು ಮುಂಬೈನಲ್ಲಿ ಜನಿಸಿದರು. ಇವರ ತಂದೆ ಓಂ ಪ್ರಕಾಶ್ ಓರ್ವ ತರಕಾರಿ ವ್ಯಾಪಾರಿ. ಇವರ ತಂದೆಗೆ ಹಲವಾರು ತೊಂದರೆಗಳಿದ್ದರು, ಮಗಳ ಕ್ರಿಕೆಟ್ ಆಟಕ್ಕೆ ಯಾವುದೆ ತರಹದ ತೊಂದರೆಗಳು ಆಗದಂತೆ ನೋಡಿಕೊಳ್ಳುತ್ತಾರೆ. ಇವರು ತಮ್ಮ ಏಳನೇ ತಿಂಗಳಿಗೆ ಜನಿಸಿದ್ದರು. ಮೊದಲಿಗೆ ೧೨ನೇ ವಯಸ್ಸಿನಲ್ಲಿ, ಮುಂಬೈನ ಬೊರವಿಲಿಯ ಶಿವಸೇನೆ ಮೈದಾನದಲ್ಲಿ ಪ್ರಫುಲ್ ನಾಯ್ಕ ರವರ ಮಾರ್ಗದರ್ಶನದಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು.ಇವರ ಮನೆಯಲ್ಲಿ ಆರ್ಥಿಕ ಕಷ್ಟವಿದ್ದ ಕಾರಣ ಇವರ ಕೋಚ್ ಪ್ರಫುಲ್ ಇವರ ಕ್ರಿಕೆಟ್‍ನ ಕರ್ಚ್ಚನ್ನು ಭರಿಸಿದರು. ನಂತರ ರಾಧಾರನ್ನು ಆನಂದಿಬಾಯಿ ದಾಮೋದರ್ ಕಾಲೆ ವಿದ್ಯಾಲಯಕ್ಕೆ ಸೇರಿಸಿದರು. ಹೀಗೆ ಇವರ ಶಿಕ್ಷಣದ ಜೊತೆಗೆ ಕ್ರಿಕೆಟ್ ಆಟವನ್ನೂ ಮುಂದುವರೆಸಿದ್ದಾರೆ.[೨][೩]
ವೃತ್ತಿ ಜೀವನ
[ಬದಲಾಯಿಸಿ]ಪ್ರಥಮ ದರ್ಜೆ ಕ್ರಿಕೆಟ್
[ಬದಲಾಯಿಸಿ]ದೇಶಿ ಕ್ರಿಕೆಟ್‍ನಲ್ಲಿ ಮುಂಬೈ, ಬರೋಡ ಹಾಗು ಪಶ್ಚಿಮ ವಲಯ ಕ್ರಿಕೆಟ್ ತಂಡಗಳಿಗೆ ಆಡುತ್ತಾರೆ.[೪]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಫೆಬ್ರವರಿ ೧೩, ೨೦೧೮ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿರುದ್ದ ನಡೆದ ಸರಣಿಯ ೦೧ನೇ ಟಿ-೨೦ ಪಂದ್ಯದ ಮೂಲಕ ಮಾನ್ಸಿ ಜೋಶಿ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಇಲ್ಲಿವರೆಗು ಕೇವಲ ಟಿ-೨೦ ಮಾತ್ರ ಆಡಿರುವ ಇವರು, ಇದೇ ಮಾದರಿಯಲ್ಲಿ ೨೦ಕ್ಕೂ ಹೆಚ್ಚು ವಿಕೇಟ್‍ಗಳನ್ನು ಪಡೆದಿದ್ದಾರೆ.[೫]
ಪಂದ್ಯಗಳು
[ಬದಲಾಯಿಸಿ]- ಟಿ-೨೦ ಕ್ರಿಕೆಟ್ : ೧೭ ಪಂದ್ಯಗಳು[೬]
ವಿಕೇಟ್‍ಗಳು
[ಬದಲಾಯಿಸಿ]- ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೨೧
ಉಲ್ಲೇಖಗಳು
[ಬದಲಾಯಿಸಿ]- ↑ https://www.cricbuzz.com/profiles/13533/radha-yadav
- ↑ https://www.mid-day.com/articles/radha-yadav-mumbai-vegetable-vendors-daughter-becomes-india-cricketer/19239199
- ↑ https://www.news18.com/cricketnext/profile/radha-yadav/68441.html
- ↑ https://www.sportskeeda.com/player/radha-yadav
- ↑ http://www.espncricinfo.com/series/18087/scorecard/1123206/south-africa-women-vs-india-women-1st-t20i-ind-w-in-sa-2017-18
- ↑ http://www.espncricinfo.com/india/content/player/960737.html