ವಿಷಯಕ್ಕೆ ಹೋಗು

ರಾತ್ರಿರಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾತ್ರಿರಾಣಿ ಸೊಲನೇಸಿಯೀ (ಆಲೂಗಡ್ಡೆ ಕುಟುಂಬ) ಸಸ್ಯ ಕುಟುಂಬದಲ್ಲಿನ ಸೆಸ್ಟ್ರಮ್‍ನ ಒಂದು ಪ್ರಜಾತಿ. ಇದು ವೆಸ್ಟ್ ಇಂಡೀಸ್‍ಗೆ ಸ್ಥಳೀಯವಾಗಿದೆ, ಆದರೆ ದಕ್ಷಿಣ ಏಷ್ಯಾದಲ್ಲಿ ದೇಶೀಕರಿಸಲ್ಪಟ್ಟಿದೆ.[]

ವಿವರಣೆ

[ಬದಲಾಯಿಸಿ]

ರಾತ್ರಿರಾಣಿಯು ಮರದಂಥ ನಿತ್ಯಹರಿದ್ವರ್ಣ ಪೊದೆಯಾಗಿದ್ದು ೪ ಮೀ.ವರೆಗೆ ಎತ್ತರವಿರುತ್ತದೆ. ಹೂವುಗಳು ಹಸಿರು ಬಿಳಿ ಬಣ್ಣ ಹೊಂದಿರುತ್ತವೆ, ಮತ್ತು ತೆಳ್ಳನೆಯ ಕೊಳವೆಯಾಕಾರದ ೨-೨.೫ ಸೆ.ಮೀ. ಉದ್ದದ ಎಸಳು ಇರುತ್ತದೆ, ಮತ್ತು ರಾತ್ರಿಯಲ್ಲಿ ತೆರೆದುಕೊಂಡಾಗ ಐದು ಕಿರಿದಾದ ಹಾಲೆಗಳಿರುತ್ತವೆ. ರಾತ್ರಿಯ ವೇಳೆ ಪ್ರಬಲವಾದ, ಸಿಹಿ ಸುಗಂಧ ಬಿಡುಗಡೆಯಾಗುತ್ತದೆ.

ಬೇಸಾಯ

[ಬದಲಾಯಿಸಿ]

ರಾತ್ರಿರಾಣಿಯನ್ನು ಉಪೋಷ್ಣವಲಯದ ಪ್ರದೇಶಗಳಲ್ಲಿ ರಾತ್ರಿಯಲ್ಲಿ ಭಾರೀ ಸುಗಂಧ ಬೀರುವ ಅದರ ಹೂವುಗಳಿಗಾಗಿ ಅಲಂಕಾರಿಕ ಸಸ್ಯವಾಗಿ ಬೆಳೆಸಲಾಗುತ್ತದೆ. ಇದು ಹಗುರ ಹಾಗೂ ಮರಳನ್ನು ಹೊಂದಿರುವ ಸಾಧಾರಣದಿಂದ ತೇವದ ಮಣ್ಣಿನಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತದೆ.

ಅತಿಕ್ರಮಣಶೀಲ ಸಾಮರ್ಥ್ಯ

[ಬದಲಾಯಿಸಿ]

ರಾತ್ರಿರಾಣಿಯು ಆಸ್ಟ್ರೇಲಿಯಾ, ನ್ಯೂ ಜ಼ೀಲಂಡ್, ದಕ್ಷಿಣ ಆಫ಼್ರಿಕಾ, ದಕ್ಷಿಣ ಚೀನಾ ಮತ್ತು ಅತ್ಯಂತ ದಕ್ಷಿಣದ ಅಮೇರಿಕ ಸೇರಿದಂತೆ ವಿಶ್ವದಾದ್ಯಂತದ ಉಷ್ಣ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ವ್ಯಾಪಕವಾಗಿ ದೇಶೀಕರಣಗೊಂಡಿದೆ ಮತ್ತು ಇದನ್ನು ನಿರ್ಮೂಲ ಮಾಡುವುದು ಕಠಿಣವಾಗಿದೆ. ಕೆಲವು ದೇಶಗಳಲ್ಲಿ ಇದನ್ನು ಕಳೆಯೆಂದು ವರ್ಗೀಕರಿಸಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Hortus Third Cornell University, Western Garden Book 2007 Ed