ರಾಣೇಬೆನ್ನೂರು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
{{#if:|
{{{official_name}}}
Ranebennur City Municipal Council
ರಾಣೇಬೆನ್ನೂರು is located in Karnataka
ರಾಣೇಬೆನ್ನೂರು
ರೇಖಾಂಶ: 14°37′00″N 75°37′00″E / 14.6167°N 75.6167°E / 14.6167; 75.6167Coordinates: 14°37′00″N 75°37′00″E / 14.6167°N 75.6167°E / 14.6167; 75.6167
ದೇಶ  India
ರಾಜ್ಯ ಕರ್ನಾಟಕ
ಜಿಲ್ಲೆ ಹಾವೇರಿ
ವಿಸ್ತೀರ್ಣ
 - ಒಟ್ಟು ೪೨.೩೨ ಚದರ ಕಿಮಿ (೧೬.೩ ಚದರ ಮೈಲಿ)
ಎತ್ತರ ೬೦೪ ಮೀ (೧,೯೮೨ ಅಡಿ)
ಜನಸಂಖ್ಯೆ (2011)[೧]
 - ಒಟ್ಟು ೧,೦೬,೩೬೫
 - ಸಾಂದ್ರತೆ ೨,೧೧೭.೬೩/ಚದರ ಕಿಮಿ (೫,೪೮೪.೬/ಚದರ ಮೈಲಿ)
{{{language}}} {{{ಭಾಷೆ}}}
ಪಿನ್ 581 115
ದೂರವಾಣಿ ಕೋಡ್ 08373
ಅಂತರ್ಜಾಲ ತಾಣ: www.ranebennurcity.gov.in

ಕೃಷ್ಣಮೃಗ ಅಭಯಾರಣ್ಯ[ಬದಲಾಯಿಸಿ]

  • ಇದು ಹಾವೇರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಸಾಮಾನ್ಯವಾಗಿ ರಾಣೇಬೆನ್ನೂರು ತಾಲ್ಲೂಕನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಗುರಿತಿಸಲಾಗುತ್ತಿದೆ. ಇಲ್ಲಿನ ತುಂಗಭದ್ರ ನದಿಯು ತಾಲ್ಲೂಕಿನ ಸಂಪತ್ತು. ಇಲ್ಲಿನ

ಕೃಷ್ಣಮೃಗ ಅಭಯಾರಣ್ಯ ಏಷ್ಯಾ ಖಂಡದಲ್ಲೇ ಪ್ರಸಿದ್ದವಾಗಿದೆ. ರಾಣೇಬೆನ್ನೂರ ಇದು ವ್ಯಾಪಾರಕ್ಕೆ ಪ್ರಸಿದ್ದವಾದ ಊರು ಎಂದು ಹೇಳಬಹುದಾಗಿದೆ ಇಲ್ಲಿ ಎಲ್ಲಾ ರೀತಿಯ ವಸ್ತುಗಳು ದೊರೆಯುತ್ತವೆ.

  • ರಾಣೇಬೆನ್ನೂರಿನ ಕಪ್ಪುಜಿಂಕೆ (ಕರಿಚಿಗರೆ) ಅಥವಾ ಕೃಷ್ಣಮೃಗಗಳ ಅಭಯಾರಣ್ಯವು ೧೯೭೪ ರಲ್ಲಿ ವನ್ಯಪ್ರಾಣಿ ಧಾಮವೆಂದು ಸಾರಲ್ಪಟ್ಟಿತು. ಈ ಅಭಯಾರಣ್ಯದ ಅರಣ್ಯಕ್ಷೇತ್ರವು ಉತ್ತರ ಅಕ್ಷಾಂಶ ೧೪ ೩೩’ ರಿಂದ ೧೪ ೪೭’ ರ ವರೆಗೆ ಪೂರ್ವ ರೇಖಾಂಶ ೭೫ ೩೨’ ರಿಂದ ೭೫ ೫೧’ ರ ವರೆಗೆ ವಿಸ್ತರಿಸಿದ್ದು, ಒಟ್ಟು ೧೧೯.೮೯ ಚ.ಕಿ.ಮೀ. (೧೨೦೦೦ ಹೆ) ಪ್ರದೇಶ ಹೊಂದಿದೆ. ಈ “ವನ್ಯಪ್ರಾಣಿಧಾಮ” ವು ರಾಣೇಬೆನ್ನೂರಿನಿಂದ ೦೪ ಕಿ.ಮೀ. ದೂರದಲ್ಲಿದೆ. ಈ ಅಭಯಾರಣ್ಯ ಏರುತಗ್ಗುಗಳನ್ನೊಳಗೊಂಡ ಪ್ರದೇಶಗಳನ್ನು ಒಳಗೊಂಡಿದ್ದು, ಅತೀ ಎತ್ತರದ ಜಾಗವು ಸಮುದ್ರಮಟ್ಟದಿಂದ ಸುಮಾರು ೭೦೦ ಕಿ.ಮೀ.ಗಳಷ್ಟು ಎತ್ತರವಿದೆ. ಇಲ್ಲಿ ಕೆಲವು ಸಣ್ಣ ಹಳ್ಳಗಳು ಹರಿಯುತ್ತಲಿದ್ದು, ಅವುಗಳು ಬೇಸಿಗೆಯಲ್ಲಿ ಬತ್ತಿಹೋಗುತ್ತವೆ. ಸವೆತವು ಈ ಪ್ರದೇಶದಲ್ಲಿ ಹೆಚ್ಚಾಗಿದೆ. ಆದುದರಿಂದ ೧೯೫೬ ರಿಂದ ಬೋಳಾದ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಸ್ಥಳೀಯ ನೀಲಗಿರಿ ಸಸ್ಯಗಳ ಪ್ಲಾಂಟೇಶನ್ ಬೆಳೆಸಲು ಆಧ್ಯತೆ ನೀಡಲಾಗಿದೆ. ಇಲ್ಲಿ ಕೃಷ್ಣ ಮೃಗಗಳಲ್ಲದೆ ತೋಳಗಳು, ಕಾಡುಹಂದಿ ಮತ್ತು ನವಿಲುಗಳು ಹೇರಳವಾಗಿ ಕಾಣಸಿಗುತ್ತವೆ.
  • ವಿಶ್ವದಲ್ಲಿ ಹೆಚ್ಚು ಕಾಣಸಿಗದೇ ಇರುವಂತಹ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಈ ಅಭಯಾರಣ್ಯದಲ್ಲಿ ಕಂಡು ಬರುವುದು.

ಕುರಿ ಉಣ್ಣೆಯ ಸಹಕಾರಿ ಸಂಘ[ಬದಲಾಯಿಸಿ]

  • ಮಹಾತ್ಮಾ ಗಾಂಧಿಯ ಶಿಷ್ಯಕೋಟಿಯಲ್ಲಿ ಒಬ್ಬರಾಗಿದ್ದ ಹಾವೇರಿ ಜಿಲ್ಲೆಯ ಸಂಗೂರಿನ ಕರಿಯಪ್ಪ ನೀಲಪ್ಪ ಯರೇಶೀಮಿ ಅವರ ನೇತೃತ್ವದಲ್ಲಿ ರಚನೆಯಾಗಿರುವ ರಾಣೆಬೆನ್ನೂರಿನ ಕುರುಬರ ಕುರಿ ಉಣ್ಣೆಯ ಔದ್ಯೋಗಿಕ ಬೆಳವಣಿಗೆಯ ಸಹಕಾರಿ ಸಂಘ ೧೯೪೨ ರಲ್ಲಿ ಸ್ಥಾಪಿತವಾಗಿದ್ದು ೨೦೧೭ಕ್ಕೆ ತನ್ನ ಸ್ಥಾಪನೆಯ 75ನೇ ವರ್ಷ ಆಚರಿಸುತ್ತಿದೆ.

ಮಹಿಳೆಯರಿಗೆ,ಪುರುಷ ಸದಸ್ಯರಿಗೆ ಉದ್ಯೋಗ[ಬದಲಾಯಿಸಿ]

  • ಅಖಂಡ ಧಾರವಾಡ ಜಿಲ್ಲೆಯ (ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳು) ಉಣ್ಣೆ ನೇಕಾರರ, ಕುರಿಗಾರರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯನ್ನು ದೃಷ್ಟಿಕೋನವನ್ನು ಇಟ್ಟುಕೊಂಡು ಸ್ಥಾಪಿಸಲಾಗಿರುವ ಈ ಸಂಘ ಕುರಿಗಾರರ ಏಳಿಗೆಗೆ ಅವಿರತ ಶ್ರಮಿಸುತ್ತಿದೆ. ಕುರಿ ಸಾಕಾಣಿಕೆದಾರರಿಗೆ ಉಣ್ಣೆ ನೂಲುವ ಮಹಿಳೆಯರಿಗೆ, ಕಂಬಳಿ ನೇಯುವ ಪುರುಷ ಸದಸ್ಯರಿಗೆ ಉದ್ಯೋಗ ನೀಡಿ ಅವರ ಆರ್ಥಿಕ ಮಟ್ಟ ಸುಧಾರಿಸಲು ಸಹಾಯಕವಾಗಿದೆ.
  • ಸಂಘದಲ್ಲಿ ಒಟ್ಟು 4758 ಸದಸ್ಯರಿದ್ದಾರೆ. ಈ ಪೈಕಿ ಪುರುಷರು 3470, ಮಹಿಳೆಯರು 1288. ಕೈಮಗ್ಗ ಮತ್ತು ಜವಳಿ ಇಲಾಖೆಯ ಧನ ಸಹಾಯದಿಂದ 3 ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಕಟ್ಟಡಗಳನ್ನು ನಿರ್ಮಿಸಿದ್ದು, ಅದರಲ್ಲಿ 100 ಮಗ್ಗಗಳನ್ನು ಹಾಗೂ ಸಂಘದ ಸದಸ್ಯರ ಮನೆಗಳಲ್ಲಿ 280 ಮಗ್ಗಗಳನ್ನು ಅಳವಡಿಸಿಕೊಂಡು ನೇಯ್ಗೆ ಮತ್ತು ಉತ್ಪಾದನೆ ಮೂಲಕ ಒಟ್ಟು 1520 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.
  • 1959ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರು ರಾಣೆಬೆನ್ನೂರಿನಲ್ಲಿ ಸಂಘದ ಮುಖ್ಯ ಕಚೇರಿಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರಯ. 1961ರಲ್ಲಿ ಕೇಂದ್ರ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರು ಉದ್ಘಾಟಿಸಿದ ಈ ಸಂಘದ ಬೆಳ್ಳಿ ಹಬ್ಬವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1966ರಲ್ಲಿ ಉದ್ಘಾಟಿಸಿದ್ದರು.
  • ಸಂಘವು ನೇಕಾರ ಸದಸ್ಯರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ, ಸರ್ಕಾರದಿಂದ ಬಂಡವಾಳವನ್ನು ಕ್ರೊಢೀಕರಿಸಿ ಯೋಜನೆಗಳನ್ನು ತಂದು ಕುರುಬರ ಕುರಿ ಉಣ್ಣೆಯ ಔದ್ಯೋಗಿಕ ಬೆಳವಣಿಗೆಗೆ ಸಹಕಾರಿ ಸಂಘವು ಸಮಾಜದ ಜನರ ಜೀವನಾಡಿಯಾಗಿದೆ.
  • ಕುರಿ ಪೋಷಣೆ, ನೇಕಾರರ ಹಿತಕಾಯುವುದು ಸಂಘದ ಮುಖ್ಯ ಉದ್ದೇಶವಾಗಿದೆ. ಸಂಘದಿಂದ ಉಣ್ಣೆ ಖರೀದಿಸಿ ಸದಸ್ಯರಿಂದ ಕಂಬಳಿ ತಯಾರಿಸಲಾಗುತ್ತಿದೆ.[೨]

ಉಲ್ಲೇಖಗಳು[ಬದಲಾಯಿಸಿ]