ರಾಜನಹಳ್ಳಿ ಹನುಮಂತಪ್ಪ ಛತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜನಹಳ್ಳಿ ಹನುಮಂತಪ್ಪ ಛತ್ರ ಇದು ದಾವಣಗೆರೆ ನಗರದಲ್ಲಿರುವ ಉಚಿತ ಛತ್ರ. ಈ ಛತ್ರವನ್ನು ಮದುವೆ, ಮುಂಜಿವೆ ಮೊದಲಾದ ಸಮಾರಂಭಗಳಿಗೆ ಯಾವುದೇ ಧರ್ಮ ಜಾತಿಗಳ ಭೇದಭಾವವಿಲ್ಲದೇ ನೀಡಲಾಗುತ್ತದೆ, ಬರೀ ವಿದ್ಯುಚ್ಛಕ್ತಿಯ ಶುಲ್ಕವನ್ನು ಮಾತ್ರ ಪಡೆಯಲಾಗುತ್ತದೆ. ಈ ಸಂಪ್ರದಾಯವು ಕಳೆದ ೬೦ವರ್ಷಗಳಿಂದ ನಡೆದುಕೊಂಡು ಬಂದಿದೆ.

ಹಿನ್ನೆಲೆ[ಬದಲಾಯಿಸಿ]

೧೭ನೇಯ ಶತಮಾನದಿಂದಲೂ ದಾವಣಗೆರೆ ವಾಣಿಜ್ಯ ನಗರವಾಗಿದೆ. ಇಲ್ಲಿನ ವ್ಯಾಪಾರಸ್ಥರು ದೂರದ ಊರಿನ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸುತ್ತಿದ್ದರು. ಅನೇಕ ವರ್ಷಗಳ ಕಾಲ ಹೀಗೇ ವ್ಯಾಪಾರಕ್ಕೆ ಬಂದ ವರ್ತಕರಿಗೆ ಹಾಗೂ ಸರಕುಗಳನ್ನು ತಂದ ರೈತರಿಗೆ ರಾತ್ರಿ ತಂಗಲು ಯಾವುದೇ ವ್ಯವಸ್ಥೆಯಿರಲಿಲ್ಲ. ಸ್ವತಃ ವ್ಯಾಪಾರಸ್ಥರಾಗಿದ್ದ ರಾಜನಹಳ್ಳಿ ಮನೆತನದ ಹನುಮಂತಪ್ಪನವರಿಗೆ ವರ್ತಕರ ಮತ್ತು ರೈತರ ಪರದಾಟ ಚೆನ್ನಾಗಿ ತಿಳಿದುದಾಗಿತ್ತು. ಈ ಪರದಾಟವನ್ನು ಹೋಗಲಾಡಿಸಲು ೧೯೪೦ರ ದಶಕದ ಕೊನೆಯಲ್ಲಿ ಹನುಮಂತಪ್ಪನವರು ಪುಣೆ-ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯ ಮೇಲೆ ಒಂದು ಧರ್ಮ ಛತ್ರವನ್ನು ನಿರ್ಮಿಸಿದರು. ಇದು ಉಚಿತ ಧರ್ಮಛತ್ರವಾಗಿತ್ತು.

ಮದುವೆ ಛತ್ರವಾಗಿ ಮಾರ್ಪಾಡು[ಬದಲಾಯಿಸಿ]

ದಾವಣಗೆರೆ ನಗರವು ಬೆಳೆದಂತೆಲ್ಲ ಹೊಸ ಕಾರ್ಖಾನೆಗಳು ಪ್ರಾರಂಭವಾದವು, ಹೊಸ ಶಿಕ್ಷಣ ಸಂಸ್ಥೆಗಳು ಹುಟ್ಟಿದವು ಇದರಿಂದ ಹೊಸ ವಸತಿ ಗೃಹಗಳು ಕೂಡ ಹುಟ್ಟಿದವು. ಕಾಲಕ್ರಮೇಣ ಹನುಮಂತಪ್ಪನವರ ಧರ್ಮ ಛತ್ರವನ್ನು ಉಚಿತ ತಂಗುದಾಣದ ಬದಲಾಗಿ ಮದುವೆಯಂತಹ ಮಂಗಲ ಕಾರ್ಯಗಳ ಛತ್ರವನ್ನಾಗಿ ಬದಲಾಯಿಸಲಾಯಿತು. ಆದರೂ ಛತ್ರವೂ ಉಚಿತವೆ ಉಳಿಯಿತು. ಈ ಛತ್ರದಲ್ಲಿ ೫೦೦ಜನರು ಕುಳಿತು ಊಟಮಾಡಬಹುದಾದ ಕೋಣೆ, ಮಲಗಲು ದೊಡ್ಡ ಕೋಣೆಗಳು ಮತ್ತು ವಾಹನ ನಿಲುಗಡೆಗೆ ವಿಶಾಲವಾದ ಸ್ಥಳಗಳಿವೆ. ಇಷ್ಟಾದರೂ ಈ ಛತ್ರದಲ್ಲಿ ಮದುವೆಯ ಕಾರ್ಯಕ್ಕೆ ಕೇವಲ ಕೆಲವು ನೂರು ರೂಪಾಯುಇಗಳು ಖರ್ಚಾಗುತ್ತವೆ. ವಿದ್ಯುತ್ ಎಷ್ಟು ಉಪಯೋಗಿಸುತ್ತಾರೋ ಅಷ್ಟರ ಖರ್ಚನ್ನು ಮಾತ್ರ ಪಡೆಯಲಾಗುತ್ತದೆ, ಇದರಿಂದ ಸಾವಿರಾರು ಬಡ ಕುಟುಂಬಗಳು ಕೇವಲ ೫೦೦ ರಿಂದ ೭೦೦ ರೂ ವಿನಿಯೋಗಿಸಿ ಮದುವೆಯನ್ನು ಮಾಡಿ ಧನ್ಯರಾಗಿದ್ದಾರೆ.

ವಿಸ್ತರಣೆ[ಬದಲಾಯಿಸಿ]

ಕಾಲದ ಬದಲಾವಣೆಗೆ ಅನುಸಾರವಾಗಿ ನಗರದಲ್ಲಿ ಅನೇಕ ಸುಸಜ್ಜಿತ ಮತ್ತು ಆಧುನಿಕ ಮದುವೆ ಛತ್ರಗಳು ನಿರ್ಮಾಣವಾಗಿವೆ, ಇವುಗಳ ದಿನ್ ಬಾಡಿಗೆ ೨೫,೦೦೦-೭೫,೦೦೦ರೂಗಳು. ಅನೇಕ ಜನರು ಇವಕ್ಕೆ ಮರುಳಾದರೂ ಹನುಮಂತಪ್ಪನವರ ಛತ್ರಕ್ಕೆ ಬೇಡಿಕೆ ಕುಂದಿಲ್ಲ. ಇಗ್ಗ್ಯೂ ಛತ್ರವೂ ೬ತಿಂಗಳವರೆಗೆ ಕಾಯ್ದಿರಿಸಲ್ಪಟ್ಟಿರುತ್ತದೆ. ರಾಜನಹಳ್ಳಿ ಮನೆತನದವರು ಚಿಕ್ಕ ಸಮಾರಂಭಗಳಿಗೆ ಅನುವಾಗಲೂ ಬದಿಯಲ್ಲಿ ಮತ್ತೊಂದು ಚಿಕ್ಕ ಸಭಾಗೃಹವನ್ನು ನಿರ್ಮಿಸಿದ್ದಾರೆ. ಅಲ್ಲದೇ ಮತ್ತೊಂದು ಹೊಸ ಛತ್ರದ ಕಾರ್ಯವು ಭರದಿಂದ ಸಾಗಿದೆ. ಇವುಗಳು ಕೂಡ ಉಚಿತ.

ರಾಜನಹಳ್ಳಿ ಮನೆತನ ಮತ್ತು ದಾನ[ಬದಲಾಯಿಸಿ]

ಬಾಹ್ಯ ಸಂಪರ್ಕ[ಬದಲಾಯಿಸಿ]

ರಾಜನಹಳ್ಳಿ ಹನುಮಂತಪ್ಪ ಛತ್ರದ ಬಗ್ಗೆ ಡೆಕ್ಕನ್-ಹೆರಾಲ್ಡ್ ಲೇಖನ