ರಾಜಧರ್ಮ
ರಾಜಧರ್ಮ ಎಂದರೆ ಆಡಳಿತಗಾರರ ಕರ್ತವ್ಯ. ರಾಜಧರ್ಮವು ಶೌರ್ಯದ ಪರಿಕಲ್ಪನೆ ಮತ್ತು ಕ್ಷತ್ರಿಯ ಧರ್ಮದೊಂದಿಗೆ ಆಂತರಿಕವಾಗಿ ಹೆಣೆದುಕೊಂಡಿತ್ತು.
ಮತ್ತೊಂದು ವ್ಯಾಖ್ಯಾನದಲ್ಲಿ, ರಾಜಧರ್ಮವು ಒಬ್ಬ ವ್ಯಕ್ತಿಗೆ ತನ್ನ ಕೆಲಸದ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಅಧ್ಯಾತ್ಮವನ್ನು ಸೇರಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಲು ಮುಂದುವರಿಯುತ್ತದೆ. ಈ ವಿಚಾರಗಳು ಧಾರ್ಮಿಕ ಕರ್ತವ್ಯಗಳ ಸಾಂಪ್ರದಾಯಿಕ ಅಥವಾ ಪಾರಂಪರಿಕ ಮೌಲ್ಯಗಳು ಮತ್ತು ದೂರದೃಷ್ಟಿಗಳ ಮೇಲೆ ಗಮನ ಕೊಡುವುದಿಲ್ಲ, ಬದಲು ವಿಶ್ವ ಮಾರುಕಟ್ಟೆಯಲ್ಲಿ ಪರಿಣಾಮಕಾರಿ ಸ್ಪರ್ಧಾಳುವಾಗಲು ಒಬ್ಬನಿಗೆ ಬೇಕಾದ ತಂತ್ರಗಳ ಮೇಲೆ ಗಮನ ಹರಿಸುತ್ತವೆ. ಅಧ್ಯಾತ್ಮಿಕ ಆಯಾಮವು ಆಂತರಿಕ ಬಲದ ಮರುಹುಟ್ಟನ್ನು ನಿರ್ದೇಶಿಸುತ್ತದೆ. ಇದು ಅನಿಸಬಹುದಾದ ಮತ್ತು ಅನುಭವಿಸಬಹುದಾದ ಆದರೆ ಅಳೆಯಲಾಗದ ಒಂದು ಸೂಕ್ಷ್ಮತೆ. ಇದು ವ್ಯಕ್ತಿಯನ್ನು ಪಾರಿಸರಿಕ ಎಳೆದಾಟ-ಕಚ್ಚಾಟ ಮತ್ತು ಅಸ್ತಿತ್ವವಾದದ ಒತ್ತಡವನ್ನು ನಿಭಾಯಿಸಲು ಸಿದ್ಧಗೊಳಿಸುತ್ತದೆ. ಇದು ವ್ಯಕ್ತಿಗೆ ತನ್ನ ಸಾರ್ವಜನಿಕ ಮತ್ತು ಖಾಸಗಿ ಮುಖಭಾವದ ನಡುವೆ ಯಾವುದೇ ವಾಸ್ತವ ಅಂತರವಿರದಂತೆ ಸ್ವಾಭಾವಿಕವಾಗಿ ಸುಖ ವ್ಯಕ್ತಿಯಾಗಲು ನೆರವಾಗುತ್ತದೆ. ಅಂತಹ ವ್ಯಕ್ತಿಗಳು ಪ್ರೇರಿತ ಕೆಲಸಗಾರರಾಗುತ್ತಾರೆ ಮತ್ತು ಅವರ ಪ್ರೇರಣೆ ಅಧ್ಯಾತ್ಮಿಕ ಶಕ್ತಿ ಮತ್ತು ಸಕಾರಾತ್ಮಕ ಯೋಚನೆಗಳಿಂದ ಬಲವರ್ಧನೆಗೊಂಡು ಹುಟ್ಟಿರುತ್ತದೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ http://www.vedicvision.org/conceptofrajdharmaid18.html[ಶಾಶ್ವತವಾಗಿ ಮಡಿದ ಕೊಂಡಿ]