ವಿಷಯಕ್ಕೆ ಹೋಗು

ರಾಘವೇಂದ್ರ ಹೆಗಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಯಾಂಡ್ ಆರ್ಟಿಸ್ಟ್ ರಾಘವೇಂದ್ರ ಹೆಗಡೆ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಕಲಾವಿದ ರಾಘವೇಂದ್ರ ಹೆಗಡೆ ಕರ್ನಾಟಕದ ಏಕಮೇವ ಮರಳುಚಿತ್ರ ಕಲಾವಿದರು. ಹಲವಾರು ಪ್ರಸಿದ್ದ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಚಿತ್ರಕಲಾವಿದರೂ ಆಗಿರುವ ಅವರು ಸ್ಥಳದಲ್ಲೇ ನೀಡುವ ವಿಷಯದ ಮೇಲೆ ಸದ್ಯಸ್ಪೂರ್ತಿಯಿಂದ ಚಿತ್ರರಚನೆ ಮಾಡಬಲ್ಲರು[]. ಜಾಗತಿಕ ಸಮಾವೇಶಗಳು, ಲೋಕಾರ್ಪಣೆಗಳು, ಸಿನಿಮಾ, ಧಾರಾವಾಹಿ, ಅವಧಾನ, ಪ್ರವಚನ, ಸಂಗೀತ ಮುಂತಾದ ನೂರಾರು ಕಾರ್ಯಕ್ರಮಗಳಲ್ಲಿ ಚಿತ್ರ, ಮರಳುಚಿತ್ರ ಪ್ರದರ್ಶನ ನೀಡಿರುತ್ತಾರೆ.[][]

ಹಿನ್ನೆಲೆ, ಕುಟುಂಬ ಹಾಗೂ ಜೀವನ

[ಬದಲಾಯಿಸಿ]

ಹುಟ್ಟೂರು ಸಿರ್ಸಿ ಸಮೀಪದಲ್ಲಿರುವ ಹೇರೂರು ಕಡ್ನಮನೆ. ಹುಟ್ಟಿದ್ದು ಮಾರ್ಚ ೧೪ ೧೯೮೦. ಹುಟ್ಟೂರಲ್ಲೇ ಇವರ ಪ್ರಾಥಮಿಕ ಶಿಕ್ಷಣ. ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ಬಿ.ಎಫ಼್.ಎ.ಪದವಿ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಎಂ.ಎಫ಼್.ಎ. ತಂದೆ ಗಜಾನನ ಹೆಗಡೆ ಕೃಷಿಕರು ಮತ್ತು ಹವ್ಯಾಸಿ ಯಕ್ಷಗಾನ ಭಾಗವತರು. ತಾಯಿ ಯಮುನಾ. ಸೋದರ ರವೀಂದ್ರ ಹೆಗಡೆ ಕೃಷಿಕರು. ಶಿಲ್ಪಕಲೆ, ಚಿತ್ರಕಲೆ, ರಂಗಭೂಮಿ, ಸಂಘಟನೆ, ಸಂದರ್ಭ ಚಿತ್ರಗಳನ್ನು ಹಲವು ಪುಸ್ತಕಗಳಿಗೆ ಬರೆದಿರುತ್ತಾರೆ. ಹೈಸ್ಕೂಲ್ ಚಿತ್ರಕಲಾ ಶಿಕ್ಷಕರಾಗಿದ್ದ ಬಿ.ಎಮ್.ಚಿತ್ರಗಿಮಠ ರವರು ರಾಘವೇಂದ್ರ ಹೆಗಡೆಯವರಲ್ಲಿನ ಕಲಾಸಕ್ತಿಯನ್ನು ಕಂಡು ಪ್ರೋತ್ಸಾಸಿದವರು. ಬೆಂಗಳೂರಿಗೆ ತಮ್ಮ ಸ್ನಾತಕೋತ್ತರ ಪದವಿಗಾಗಿ ಬಂದ ರಾಘವೇಂದ್ರ ಹೆಗಡೆ ಹಲವು ಕಲಾಮಾದ್ಯಮಗಳಿಗೆ ತಮ್ಮನ್ನು ತೆರೆದುಕೊಂಡರು. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ರಾಘವೇಂದ್ರ ಹೆಗಡೆ ಪತ್ನಿ ಅರ್ಚನಾ ಹೆಗಡೆ(ಆರ್ಕಿಟೆಕ್ಟ್) ಅವಳಿ ಮಕ್ಕಳಾದ ಭಕ್ತಿ, ಸೂಕ್ತಿಯೊಂದಿಗೆ ಜೀವಿಸುತ್ತಿದ್ದಾರೆ.

ಕಲಾಕ್ಷೇತ್ರ

[ಬದಲಾಯಿಸಿ]

ರಾಘವೇಂದ್ರ ಹೆಗಡೆ ತಮ್ಮ ಸ್ನಾತಕೋತ್ತರ ಪದವಿ ಮುಗಿಸಿ ಹಲವು ಕಾಲೇಜುಗಳಲ್ಲಿ ಅಥಿತಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.[] ಗಾರ್ಡನ್ ಸಿಟಿ ಕಾಲಾಜಿನಲ್ಲಿ ಫ಼್ಯಾಷನ್ ಡಿಸೈನಿಂಗ್ ನಲ್ಲಿ ನವೀನ ಆಭರಣ ತಯಾರಿಕೆಯನ್ನು, ಆರ್. ವಿ. ಕಾಲೇಜಿನ ಆರ್ಕಿಟೆಕ್ಚರ್ ಬೇಸಿಕ್ ಡಿಸೈನ್ ತರಗತಿಯನ್ನು ವೀಗನ್ ಅಂಡ್ ಲೀ ಕಾಲೇಜಿನಲ್ಲಿ ರೇಖಾಗಣಿತದ ಮಾದರಿಯನ್ನು ಪಾಠ ಮಾಡುತ್ತಿದ್ದರು. ಇದೇ ಸಮಯದಲ್ಲಿ ಕಲಾಗಂಗೋತ್ರಿ ಎಂಬ ರಂಗಭೂಮಿ ತಂಡವನ್ನು ಸೇರಿ ಸಂಸ್ಕೃತ ನಾಟಕ ಮಧ್ಯಮ ವ್ಯಾಯೋಗದಲ್ಲಿ ಪಾತ್ರದಾರಿಯಾದರು. ನಂತರ ಎಸ್.ಎಲ್.ಭೈರಪ್ಪನವರ ಮಂದ್ರ ಕಾದಂಬರಿ ಆಧಾರಿತ ನಾಟಕಕ್ಕೆ ರಂಗ ಸಜ್ಜಿಕೆ, ಈಡಿಪಸ್ ನಾಟಕಕ್ಕೆ ವಸ್ತ್ರ ವಿನ್ಯಾಸವನ್ನು ಮಾಡಿದರು. ಕವಿ ಕೆ.ಎಸ್ ನರಸಿಂಹಸ್ವಾಮಿ ಕವನಗಳ ಆಧರಿತ ಮೈಸೂರು ಮಲ್ಲಿಗೆ ನಾಟಕದಲ್ಲಿ ಅಳಿಯನ ಪಾತ್ರಕ್ಕೆ ಬಣ್ಣ ಹಚ್ಚಿ ನಟನಾಗಿ ನೂರಿಪ್ಪತ್ತಕಿಂತ ಹೆಚ್ಚು ಪ್ರದರ್ಶನವನ್ನು ನಾಡಿನಾದ್ಯಂತ ನೀಡಿದರು. ಇದೇ ಸಮಯದಲ್ಲಿ ಪ್ರಸಿದ್ದ ಶತಾವಧಾನಿ ಡಾ.ರಾ ಗಣೇಶ ರವರ ಅವಧಾನ ಕಾರ್ಯಕ್ರಮದಲ್ಲಿ ಪೃಚ್ಚಕರಾಗಿ ಭಾಗವಹಿಸುತ್ತಿದ್ದರು. ಹತ್ತಕ್ಕಿಂತ ಹೆಚ್ಚು ಪುಸ್ತಕಗಳಿಗೆ. ಮುಖಪುಟ, ಸಂದರ್ಬ ಚಿತ್ರ ರಚನೆ ಮಾಡಿದ್ದಾರೆ. ಬೆಂಗಳೂರಿನ ಪ್ರಸಿದ್ದ ಗರುಡಾ ಮಾಲ್ ನಲ್ಲಿ ಕಲಾಸಲಹೆಗಾರರಾಗಿ ಅಲ್ಲಿ ಹಲವು ಕಲಾಕ್ರತಿಗಳನ್ನು ರಚಿಸಿರುತ್ತಾರೆ. ೨೦೦೭ ರಲ್ಲಿ ಅಂದಿನ ರಾಷ್ಟಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರಿಗೆ ತಮ್ಮ ಕಲಾಕ್ರತಿಯನ್ನು ಕೊಡುಗೆಯಾಗಿ ನೀಡಿದ್ದು ಇಂದಿಗೂ ಅದು ರಾಷ್ಟ್ರಪತಿ ಭವನದ ಸಂಗ್ರಹದಲ್ಲಿದೆ.

೨೦೧೦ರ ಜೂನ್ ೫ ರಂದು ತಮ್ಮ ಮೊದಲ ಮರಳುಚಿತ್ರ ಪ್ರದರ್ಶನವನ್ನು ಗೋಕುಲಂ ಸಂಗೀತ ಶಾಲೆ ಆಯೋಜಿಸುವ ಕಲಾರ್ಣವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೀಡಿದ್ದು ಅದು ಕರ್ನಾಟಕ ಕಂಡ ಮೊದಲ ಮರಳುಚಿತ್ರ ಪ್ರದರ್ಶನ. ೨೦೧೦ರಲ್ಲಿ ಆರಂಭಿಸಿ ಇಂದಿನವರೆಗೆ (೨೦೧೮) ಜಗತ್ತಿನಾದ್ಯಂತ ೫೫೦ ಕ್ಕೂ ಹೆಚ್ಚು ಮರಳುಚಿತ್ರ ಪ್ರದರ್ಶನ ನೀಡಿದ್ದಾರೆ.

ಮರಳುಚಿತ್ರ

[ಬದಲಾಯಿಸಿ]

ಪ್ರಮುಖ ಪ್ರದರ್ಶನಗಳು

[ಬದಲಾಯಿಸಿ]
  • ೨೦೧೧ರಲ್ಲಿ ೪೯ ನೇ ಬೆಂಗಳೂರು ಗಣೇಶ ಉತ್ಸವದಲ್ಲಿ ಸುಮಾರು ೮೦೦೦೦ ಜನರ ಮುಂದೆ ಪ್ರದರ್ಶನ ನೀಡಿದ್ದು.
  • ೨೦೧೨ರಲ್ಲಿ ಖ್ಯಾತ ಗಾಯಕ ಹರಿಹರನ್ ಘಜಲ್ ಗೆ ಮರಳುಚಿತ್ರ ಮಾಡಿದ್ದು.
  • ಐಐಎಸ್ಸಿ ೨೩ನೇ ಅಂತಾರಾಷ್ಟ್ರೀಯ ಸರ್ ಸಿ.ವಿ. ರಾಮನ್ ಸ್ಪೆಕ್ಟೊಸ್ಕೊಪಿ ಸಮಾವೇಶದಲ್ಲಿ
  • ೨೦೧೩ ಐಪಿಎಲ್ವರ್ಕಶಾಪ ಜೋಧ್ಪುರದ ಉಮ್ಮಿದ್ಭವನ ಅರಮನೆಯಲ್ಲಿ
  • ಅಂತಾರಾಷ್ಟ್ರೀಯ ಆಹಾರಮೇಳ ಪಾರ್ಕ್ ಸ್ಕ್ರೇರ್ ಮಾಲ್ ಐಟಿಪಿಎಲ್
  • ಅಂತಾರಾಷ್ಟ್ರೀಯ ರಂಗಉತ್ಸವದಲ್ಲಿ ಮುಲ್ಲಾನಸ್ರುದ್ದೀನ್ ನಾಟಕಕ್ಕೆ ಮರಳುಚಿತ್ರ ರಂಗಶಂಕರದಲ್ಲಿ
  • ೨೦೧೪ ಸೋನುನಿಗಮ್ ಅವರ ಗಾಯನಕ್ಕೆ ಮರಳುಚಿತ್ರ ನಾಗಪುರದಲ್ಲಿ.
  • ನಮ್ಮಬೆಂಗಳೂರು ಅವಾರ್ಡ ಪ್ರೊಗ್ರಾಮ್ ಐದನೇ ಆವೃತ್ತಿಯಲ್ಲಿ ಮರಳುಚಿತ್ರ ಪ್ರದರ್ಶನ
  • ೨೦೧೪ರಲ್ಲಿ ಸೀಮನ್ಸ್, ಇವೈ, ಸಾಪ್ಲ್ಯಾಬ್ಸ್, ಹರ್ಮನ್, ಹಿಂದುಸ್ಥಾನ್ ಯುನಿಲಿವರ್, ಬೆಂಜ್, ಆಡಿ, ಅಕ್ಸೆಂಚರ್, ಜನರಲ್ಮೋಟರ್ಸ್, ವಿಪ್ರೊ ಕಂಪೆನಿಗಳಿಗೆ ಮರಳು ಚಿತ್ರ ಪ್ರದರ್ಶನ ನೀಡಿದರು.
  • ೨೦೧೫ ಉತ್ತರಾಕಂಡ ಸರಕಾರದ ಆಮಂತ್ರಣದ ಮೇರೆಗೆ ಅಲ್ಲಿಯ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಮರಳುಚಿತ್ರಪ್ರದರ್ಶನ ನೀಡಿದರು.
  • ಇಸ್ರೋ ಸೆಟಲೈಟ್ ಸೆಂಟರನಲ್ಲಿ ಮರಳುಚಿತ್ರ ಪ್ರದರ್ಶನ ನೀಡಿದರು.
  • ಇಮ್ಟೆಕ್ಸ್೨೦೧೫ ಮರಳು ಚಿತ್ರಪ್ರದರ್ಶನ ನೀಡಿದರು.
  • ೨೦೧೫ರಲ್ಲಿ ಏರ್ಟೆಲ್, ವೋಲ್ವೊ, ಜಿಇ, ವಿಪ್ರೊ, ತ್ರಿಎಮ್, ಟೆರೆಕ್ಸ್, ಕಾರ್ಗಿಲ್, ಬೊಸ್ಟಿಕ್, ಸಬ್ರೇ, ಲ್ಲಿಯಟ್, ಲಿಶಾ. ಲುಫ್ತಾನ್ಸಾ, ಸೋನಿ, ಬೊಷ್, ಪಿಎಮ್ಸಿ ಮುಂತಾದ ಕಂಪೆನಿಗಳಿಗೆ ಮರಳುಚಿತ್ರ ಪ್ರದರ್ಶನ ನೀಡಿದರು.
  • ೨೦೧೬ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ನಿರ್ದೇಶನದ ಶಾಂತಿ ಸಂಸಾರ ಯುನೆಸ್ಕೊಗಾಗಿನ ಕಾರ್ಯಕ್ರಮದಲ್ಲಿ ಮರಳು ಚಿತ್ರಪ್ರದರ್ಶನ ನೀಡಿದರು.
  • ಗ್ಲೋಬಲ್ ವಾಟರ್ ಮೀಟ್ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ
  • ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಯಲ್ಲಿ ಐದು ಲಕ್ಷ ಜನರ ಮುಂದೆ ಪ್ರದರ್ಶನ ನೀಡಿದ್ದು.
  • ೨೦೧೬ ವಿಜಯಾಬ್ಯಾಂಕ್, ನೋವಾನೊರ್ಡಿಸ್ಕ್, ತಗ್ನಾ, ಮಣಿಪಾಲ್ವಿಶ್ವವಿದ್ಯಾಲಯ, ಎಶ್ಯನ್ಪೇಂಟ್ಸ್, ಎಬಿಬಿ, ಅಕ್ಷಯಪಾತ್ರ[], ಮೈಕ್ರೊಸಾಫ್ಟ್, ಒಪ್ಪೊ, ಟಿವಿಎಸ್, ಹಸ್ಕಿ, ಷಾ ಇಂಡಿಯಾ, ಸ್ಕಾನಿಯಾ ಸಂಸ್ಥೆಗಳಲ್ಲಿ ಪ್ರದರ್ಶನ.
  • ೧೦ಕ್ಕಿಂತ ಹೆಚ್ಚು ಬಾರಿ ಅಂತಾರಾಷ್ಟ್ರೀಯ ವೈದ್ಯ ಸಮಾವೇಶಗಳಲ್ಲಿ ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಪ್ರದರ್ಶನ.
  • ಒಮನ್ ದೇಶದ ಮಸ್ಕತ್ ನಗರದ ಸುಲ್ತಾನ್ ಖೋಬೊಸ್ ವಿಶ್ವವಿದ್ಯಾಲಯದಲ್ಲಿ.
  • ಹಾಂಗ್ ಕಾಂಗ್ ದೇಶದ ಕನ್ನಡ ಸಂಘದ ಕಾರ್ಯಕ್ರಮದಲ್ಲಿ.

ಮರಳು ಚಿತ್ರದಲ್ಲಿ ಸಾಕ್ಷ್ಯಚಿತ್ರ, ಸಿನಿಮಾ

[ಬದಲಾಯಿಸಿ]
  • ಜನಶ್ರೀ ವಾಹಿನಿಯ ನಮ್ಮಊರು ಬೆಂಗಳೂರು ಶೀರ್ಷಿಕೆ ಚಿತ್ರ
  • ಬನ್ನಂಜೆ ಗೋವಿಂದಾಚಾರ್ಯರ ಜೀವನ ಸಾಕ್ಷ್ಯ ಚಿತ್ರ
  • ಕರ್ನಾಟಕ ಕಾಲೇಜು ಧಾರವಾಡ ಸಾಕ್ಷ್ಯ ಚಿತ್ರ
  • ಪದ್ಮವಿಭೂಷಣ ಬಿ.ಕೆ.ಎಸ್.ಅಯ್ಯಂಗಾರ್ ಸಾಕ್ಷ್ಯ ಚಿತ್ರ
  • ಹರಿಕಥಾ ವಿದ್ವಾಂಸ ವೆಂಕಣ್ಣದಾಸರ ಕುರಿತ ಸಾಕ್ಷ್ಯ ಚಿತ್ರ
  • ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕುರಿತ ಸಾಕ್ಷ್ಯ ಚಿತ್ರ
  • ಡಾ.ರಾಜಕುಮಾರ್ ಅವರ ಸಿನಿಮಾಗಳು ಸಾಕ್ಷ್ಯ ಚಿತ್ರ
  • ಶತಾಯು ಆಯುರ್ವೇದ ಸಂಸ್ಥೆ ಸಾಕ್ಷ್ಯ ಚಿತ್ರ
  • ಯೂತ್ ಫಾರ್ ಸೇವಾ ಕುರಿತ ಸಾಕ್ಷ್ಯ ಚಿತ್ರ

ಸಿನಿಮಾ, ಧಾರವಾಹಿ

[ಬದಲಾಯಿಸಿ]
  • ಸಿದ್ದಾರ್ಥ ಅಶುತೋಶ್ ಕುಲ್ಕರ್ಣಿ ಪ್ರಾಧಾನ ಭೂಮಿಕೆಯ ಹಿಂದಿ, ತಮಿಳು, ತೆಲಗು ಭಾಷೆಯಲ್ಲಿ ನಿರ್ಮಾಣವಾದ "ದಿ ಹೌಸ್ ನೆಕ್ಷ್ಟ್ ಡೋರ್"
  • ಡಿಮಾನಿಟೈಸೇಷನ್ ಕಥಾವಸ್ತು ಹೊಂದಿರುವ 'ದಿ ಸ್ಟೇಟ್ಮೆಂಟ್'
  • ವಿನಾಯಕ ಜೋಷಿ ನಿರ್ಮಾಣದ 'ತ್ಯಾಂಕ್ಯು ಅಪ್ಪಾ'
  • ಸರಯೂ ಧಾರವಾಹಿಯ ಟೀಸರ್
  • ಕರ್ನಾಟಕ ಸರ್ಕಾರದ ೫ಕ್ಕಿಂತ ಹೆಚ್ಚು ಜಾಹಿರಾತುಗಳು

ಮರಳು ಚಿತ್ರದ ಮೂಲಕ ಲೋಕಾರ್ಪಣೆಗಳು

[ಬದಲಾಯಿಸಿ]
  • ವೈಟ್ ಫೀಲ್ದ್ ಮ್ಯಾರಿಯೆಟ್ ಹೋಟೆಲ್
  • ಆಪೆ ಮಿನಿ ವಾಹನ
  • ಚೆವರ್ಲೆಟ್ 'ಬೀಟ್' ಕಾರಿನ ಲೋಕಾರ್ಪಣೆ
  • ಆಡಿಕ್ಯುಸೆವೆನ್
  • ಕಣ್ಣಿನ ಪೊರೆ ಚಿಕಿತ್ಸೆ ಮಾಡುವ ಸೆಂಚೂರಿಯನ್ ಯಂತ್ರ
  • 'ಅಮಿಗೊ' ಆಪ್
  • 'ಟೈಟಾನ್' ಹೊಸ ಕಟ್ಟಡ
  • 'ಆರೆಕಲ್ ಇ ಟೆಕ್ ಹಬ್'

ಪ್ರಶಸ್ತಿ ಸನ್ಮಾನಗಳು

[ಬದಲಾಯಿಸಿ]
  • ೨೦೧೬ ಕಲಾವಸಂತ ಪ್ರಶಸ್ತಿ ಗೋಕುಲಂಸಂಗೀತಶಾಲೆಯಿಂದ
  • ೨೦೧೫ ಕರ್ನಾಟಕ ಕ್ರಾಫ್ಟ್ಕೌನ್ಸಿಲ್ನಿಂದ ವಿಶೇಷಗೌರವ
  • ೨೦೧೪ ನಂದಿಕನ್ನಡ ಶ್ರೀ ಪ್ರಶಸ್ತಿ ನಂದಿಗಾರ್ಡನ ಇವರಿಂದ
  • ೨೦೧೩ ಹವ್ಯಕವಿದ್ವತ್ಸನ್ಮಾನ ಅಖಿಲ ಹವ್ಯಕ ಮಹಾಸಭಾ
  • ೨೦೧೩ ಯುವಸಾಧಕ ಪ್ರಶಸ್ತಿ ಇಸ್ರೋ ಬೆಂಗಳೂರು
  • ಇದಲ್ಲದೇ ಹತ್ತಕ್ಕಿಂತ ಹೆಚ್ಚು ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿ ಸನ್ಮಾನಗಳು ಚಿತ್ರಕಲೆ ಮತ್ತು ಶಿಲ್ಪಕಲಾ ಸಾಧನೆಗಾಗಿ ಸಂದಿವೆ.

ಉಲ್ಲೇಖಗಳು

[ಬದಲಾಯಿಸಿ]
  1. ಸುಮಾ ಬಿ.,ಮರಳುಕಲೆಯ ಈ ಬಗೆ, ಪ್ರಜಾವಾಣಿ, ೧೦ ಸೆಪ್ಟೆಂಬರ್ ೨೦೧೨
  2. Manasa Kambanna, Holding the world in a grain of sand, The Hindu, ೦೯ಫೆಬ್ರುವರಿ೨೦೧೯
  3. ಮರಳ ಚಿತ್ರಕಾರನ ಕೈಚಳಕದ ದಾಖಲೆ, ವಿಜಯ ಕರ್ನಾಟಕ, ೧೦ಜನವರಿ೨೦೧೯
  4. Building castles with sand, The New Indian Express, ೨೧ನವೆಂಬರ್ ೨೦೧೮
  5. Giving Every Dream A Chance- as it happened!, Akshayapatra.org


ಹೊರಸಂಪರ್ಕಕೊಂಡಿಗಳು

[ಬದಲಾಯಿಸಿ]