ರಾಂಪುರ (ಮೊಳಕಾಲ್ಮೂರು)
Jump to navigation
Jump to search
ರಾಂಪುರ ಎಂಬ ಊರು ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿಗೆ ಸೇರಿರುತ್ತದೆ ಇಲ್ಲಿ ಬಳ್ಳಾರಿ-ಬೆಂಗಳೂರು ರಾಜ್ಯಹೆದ್ದಾರಿ-19 ಇಲ್ಲಿ ಹಾದುಹೋಗುವುದು ಇಲ್ಲಿನ ವಿಶೇಷ.
''''ಶ್ರೀ ಜಟಂಗಿ ರಾಮೇಶ್ವರ ಬೆಟ್ಟ ಮತ್ತು ಪರಿಸರ''''
ಜಟಂಗಿ ರಾಮೇಶ್ವರ ಎಂಬ ಹೆಸರು ಬೆಟ್ಟ ಮತ್ತು ದೇವಾಲಯಗಳೆರಡನ್ನೂ ಸೂಚಿಸುತ್ತದೆ.ಇದು ಚಿತ್ರದುಗ್ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿಗೆ ಸೇರಿದ ಚಾರಿತ್ರಿಕ ಮತ್ತು ಪ್ರಗೈತಿಹಾಸಿಕ ಕಾಲದ ಪ್ರಸಿದ್ಧ ಎಡೆಯಾಗಿದೆ. ಈ ಬೆಟ್ಟವು ಮೊಳಕಾಲ್ಮೂರಿನಿಂದ ಬಳ್ಳಾರಿ ಮಾಗದಲ್ಲಿ ಸುಮಾರು ೩೦ ಕಿ.ಮೀ.ದೂರದಲ್ಲಿದೆ.ಇದು ಬ್ರಹ್ಮಗಿರಿಯಿಂದ ೫ ಕಿ.ಮೀ ಅಂತರದಲ್ಲಿದ್ದು,ಉತ್ತರ ಅಕ್ಷಾಂಶ ೧೪ಡಿಗ್ರಿ ೫೦' ಮತ್ತು ಪೂವ ರೇಖಾಂಶ ೭೬ಡಿಗ್ರಿ ೫೧'ರಲ್ಲಿ ನೆಲೆಗೊಂಡಿದೆ.ಚಿತ್ರದುಗ ಜಿಲ್ಲೆಯಲ್ಲಿ ಎರಡನೆಯ ಅತೀ ಎತ್ತರದ ಬೆಟ್ಟಶ್ರೇಣಿಯಾಗಿರುವ ಇದು,ಸಮುದ್ರ ಮಟ್ಟದಿಂದ ೩೪೬೯ ಅಡಿಗಳಷ್ಟು ಎತ್ತರವಾಗಿದೆ...
ಜಟಂಗಿ ರಾಮೇಶ್ವರ ದೇವಾಲಯ
ಸಣ್ಣ ಜಟ೦ಗಿ ಬೆಟ್ಟದ ಮೇಲಿರುವ ಅತಿ ಮುಖ್ಯ ಸ್ಮಾರಕವೆಂದರೆ ರಾಮೇಶ್ವರ ದೇವಾಲಯ. ಇದನ್ನು ಜಟಂಗಿ ರಾಮೇಶ್ವರ ಎಂದೇ ಕರೆಯಲಾಗುತ್ತದೆ. ಈ ಸಣ್ಣ ಜಟಂಗಿ ಬೆಟ್ಟದಲ್ಲಿರುವ ರಾಮೇಶ್ವರನನ್ನು ಶಾಸನಗಳು ಬಲ್ಗೆಡಿ ತೀರ್ಥದ ಶ್ರೀರಾಮೇಶ್ವರ, ಬಲ್ಗೊಡಿ ತೀರ್ಥಸ್ಥಾನದ ರಾಮೇಶ್ವರ, ಜಟಾಂಗಿ ರಾಮಯದೇವ, ಜೆಟೋಗಿ ರಾಮಯದೇವ ಎಂದು ಮುಂತಾಗಿ ಕರೆದಿವೆ.