ರಸೀತಿ

ವಿಕಿಪೀಡಿಯ ಇಂದ
Jump to navigation Jump to search
ರಸೀತಿಯ ಒಂದು ಉದಾಹರಣೆ
ರಸೀತಿಯ ಒಂದು ಉದಾಹರಣೆ

ರಸೀತಿ (ರಸೀದಿ, ಪಾವತಿ ಚೀಟಿ)[೧][೨][೩] ಎಂದರೆ ಮಾರಾಟ ಅಥವಾ ಸರಕುಗಳ ಇತರ ವರ್ಗಾವಣೆ ಅಥವಾ ಸೇವೆಯ ನೀಡಿಕೆಯ ನಂತರ ಒಬ್ಬ ವ್ಯಕ್ತಿಗೆ ಸಂದಾಯ ರೂಪದಲ್ಲಿ ಹಣ ಅಥವಾ ಆಸ್ತಿ ಮುಟ್ಟಿತೆಂದು ಹೇಳುವ ಒಂದು ದಸ್ತಾವೇಜು. ಎಲ್ಲ ರಸೀದಿಗಳು ಅವುಗಳ ಮೇಲೆ ಖರೀದಿಯ ದಿನಾಂಕವನ್ನು ಹೊಂದಿರಬೇಕು. ಸಂದಾಯವನ್ನು ಸ್ವೀಕರಿಸುವವನು ಗ್ರಾಹಕನಿಂದ ಕಾನೂನಿನ ಪ್ರಕಾರ ಮಾರಾಟ ತೆರಿಗೆ ಅಥವಾ ವ್ಯಾಟ್‍ನ್ನು ಸಂಗ್ರಹಿಸಬೇಕಾಗಿದ್ದರೆ, ಆ ಮೊತ್ತವನ್ನು ರಸೀದಿಗೆ ಸೇರಿಸಲಾಗುವುದು ಮತ್ತು ಸಂಗ್ರಹವು ಸಂಬಂಧಿತ ತೆರಿಗೆ ಪ್ರಾಧಿಕಾರದ ಪರವಾಗಿ ಆಗಿದೆ ಎಂದು ಪರಿಗಣಿಸಲಾಗುವುದು. ಅನೇಕ ದೇಶಗಳಲ್ಲಿ, ಚಿಲ್ಲರೆ ವ್ಯಾಪಾರಿಯು ಮಾರಾಟವಾದ ಸರಕುಗಳ ಪ್ರದರ್ಶಿತ ಬೆಲೆಯಲ್ಲಿ ಮಾರಾಟ ತೆರಿಗೆ ಅಥವಾ ವ್ಯಾಟ್‍ನ್ನು ಸೇರಿಸಬೇಕಾಗುತ್ತದೆ. ಇದರಿಂದ ತೆರಿಗೆ ಮೊತ್ತವನ್ನು ಮಾರಾಟ ಸ್ಥಳದಲ್ಲಿ ಲೆಕ್ಕಹಾಕಿ ಸರಿಯಾದ ಸಮಯದಲ್ಲಿ ತೆರಿಗೆ ಅಧಿಕಾರಿಗಳಿಗೆ ಪಾವತಿಸಲಾಗುವುದು.

ಉಲ್ಲೇಖಗಳು[ಬದಲಾಯಿಸಿ]

  1. "Packing list definition". Businessdictionary.com. Retrieved 2009-01-29.
  2. Cavinato, Joseph L. (2000). Supply Chain and Transportation Dictionary, 4th Edition. Springer. p. 205. ISBN 0-7923-8444-X.
  3. "ODLIS: Online Dictionary for Library and Information Science". Lu.com. 2007-11-19. Retrieved 2009-01-29.
"https://kn.wikipedia.org/w/index.php?title=ರಸೀತಿ&oldid=925207" ಇಂದ ಪಡೆಯಲ್ಪಟ್ಟಿದೆ