ವಿಷಯಕ್ಕೆ ಹೋಗು

ರವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಂಗಸರ ದೇಹದ ಮೇಲ್ಭಾಗನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆಯನ್ನು ರವಿಕೆ ಎಂದು ಕರೆಯುತ್ತೇವೆ. ಇದನ್ನು ಸಾಮಾನ್ಯವಾಗಿ ಬ್ಲೌಸ್ ಎಂದು ಕರೆಯುತ್ತಾರೆ. ಈ ವಸ್ತ್ರವನ್ನು ಸಾಮಾನ್ಯವಾಗಿ ಹೆಂಗಸರು ಹಾಗು ಹೆಣ್ಣುಮಕ್ಕಳು ಧರಿಸುವುದನ್ನು ಕಾಣಬಹುದು. ಈಗಿನ ಕಾಲದಲ್ಲಿ ಹುಡುಗಿಯರು ಧರಿಸುವ ಉಡುಪುಗಳಿಗೆ ನಾವು ಬ್ಲೌಸ್ ಎಂದು ಕರೆಯುತ್ತೇವೆ. ಕೆಲವು ಮಿಲಿಟರಿ ಉಡುಗೆಗಳನ್ನು ಸಹ ಬ್ಲೌಸ್ ಎಂದು ಕರೆಯುತ್ತಾರೆ. ಬ್ಲೌಸ್ ಎಂಬ ಪದವನ್ನು ಫ್ರೆಂಚ್‍ನಿಂದ ಆಯ್ದುಕೊಳ್ಳಲಾಗಿದೆ. ಫ್ರೆಂಚ್ ಯೋಧರು ಹೊಸ ಜಾಗಗಳಿಗೆ ಬಂದಾಗ ಈ ಬಗೆಯ ಉಡುಪನ್ನು ತಂದಿದ್ದರು. ಅವರು ದೇಹಕವಚವನ್ನು ಬ್ಲೌಸ್ ಎಂದು ಕರೆಯುತ್ತಿದ್ದರು. ಭಾರತದಲ್ಲಿ ರವಿಕೆಯನ್ನು ಮಾತ್ರ ಧರಿಸದೆ ಅದರೊಂದಿಗೆ ಸೀರೆಯನ್ನು ಅಥವ ಪೋಶಾಕ್‍ನ್ನು ಧರಿಸುತ್ತಾರೆ. ರವಿಕೆಯು ಘಾಘ್ರಚೋಲಿಯೊಂದಿಗೂ ಧರಿಸಲಾಗುತ್ತದೆ,

ಇತಿಹಾಸ

[ಬದಲಾಯಿಸಿ]

1890ರ ಮೊದಲು,  ಬ್ಲೌಸ್ ಕೆಲಸದವು ಧರಿಸುವ ವಸ್ತ್ರವಾಗಿದ್ದರಿಂದ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಿರಲಿಲ್ಲ.ಇದನ್ನು ಮೇಲ್ವರ್ಗದವರು ಉಪಯೋಗಿಸತೊಡಗಿದರು. ಇದನ್ನು ರೇಶ್ಮೆ ಅಥವ ಹತ್ತಿಯಿಂದ ತಯಾರಿಸಲಾಗುತ್ತಿತ್ತು. 1990ರನ್ನು ಸಿಂತೆಟಿಕ್ ಫೈಬರ್ ಹಾಗು ಪಾಲಿಯಾಸ್ಟರ್‍ನಿಂದ ತಯಾರಿಸತೊಡಗಿದರು.ಇವಗಳನ್ನು ಎಂಬ್ರಾಯ್ಡರಿಯ ಮೂಲಕ ಇನ್ನು ಶೃಂಗರಿಸುತ್ತಿದ್ದರು.ವಿಕ್ಟೋರಿಯನ್ ಆಳ್ವಿಕೆಯ ಸಮಯದಲ್ಲಿ ಬ್ಲೌಸ್ ಮಹತ್ವದ ಉಡುಗಿಯಾಗಿತ್ತು. ಒಂದು ಬ್ಲೌಸ್ ಮತ್ತು ಸ್ಕರ್ಟ್ ಆಗಿನ ಕಾಲದ ಬ್ರಿಟೀಷ್ ಹೆಂಗಸರ ದಿನದಉಡುಗೆಯಾಗಿತ್ತು.ಮಾತ್ರವಲ್ಲದೆ ಕಚೇರಿ ಕೆಲಸದಲ್ಲಿದ್ದ ಕೆಲವು ಮಹಿಳೆಯರು ಸಹ ಇದನ್ನು ಧರಿಸುತ್ತಿದ್ದರು.ಇದನ್ನು ಟೈಲರ್‍ನಿಂದ ಮಾಡಿಸುತ್ತಿದ್ದಿದ್ದರಿಂದಾಗಿ ಅವರಿಗೆ ಹೇಗ ಬೇಕೋ ಹಾಗೆ ಬದಲಾವಣೇಗೆಗಳನ್ನು ಮಾಡಿಕೊಳ್ಳುತ್ತಿದ್ದರು. ದಿನಬಳಕೆಗಾಗಿ ಹಾಗು ಕ್ಯಾಶುವಲ್ ವೇರ್‍ ಆಗಿಯೂ ಸಹ ಇದನ್ನು ಉಪಯೋಗಿಸುತ್ತಿದ್ದರು.ಗಂಡಸರ ಶರ್ಟ್‍ Archived 2018-03-23 ವೇಬ್ಯಾಕ್ ಮೆಷಿನ್ ನಲ್ಲಿ.ನಲ್ಲಿ ಗುಬ್ಬಿ ಮುಂದಿದ್ದರೆ, ಇದರಲ್ಲಿ ಹಿಂದಿನಿಂದ ಇರುತ್ತದೆ. ಗುಬ್ಬಿಗಳು ಎಡ ಭಾಗದಲ್ಲಿ ಮತ್ತು ತೂತುಗಳು ಬಲಭಾಗದಲ್ಲಿರುತ್ತದೆ.ಇದಕ್ಕೆ ಸಾಕ್ಷಿಯುತವಾದ ಉತ್ತರವಿಲ್ಲದಿದ್ದರೂ ಕೆಲವರ ಪ್ರಕಾರಎರಡು ಲಿಂಗಗಳ ಉಡುಪುಗಳನ್ನು ಗುರುತಿಸಿ ಬೇರ್ಪಡಿಸಲು ದರ್ಜಿಗಳು ಈ ರೀತಿ ಮಾಡಿರಬಹುದುಎಂದು ಹೇಳುತ್ತಾರೆ.ರಾಣಿಯ ಸೇವಕರು ಅವಳಿಗೆ ಬ್ಲೌಸ್‍ಧರಿಸಲು ನೆರವಾಗುತ್ತಿದ್ದರು. ಗುಬ್ಬಿಗಳು ಬೇರೆ ರೀತಿಯಲ್ಲಿರುವ ಕಾರಣ ಅವರಿಗೆ ಹಾಕಲು ಕಷ್ಟವಾಗುತ್ತಿತ್ತು. ಹಾಗಗಿ ಈ ರೀತಿ ಬದಲಾವಣೆಯನ್ನು ಮಾಡಬೇಕಾಯಿತು. ಈಗ ಇವ್ಯಾವು ಚಾಲ್ತಿಯಲ್ಲಿ ಇಲ್ಲ ಹಾಗು ಈಗ ಸಾಂಪ್ರದಾಯಿಕೆ ನೆಲೆಯಲ್ಲಿಕುಪ್ಪಸ ಹಾಗು ಸೀರೆಯನ್ನು ನೋಡುತ್ತಾರೆ.ಹಲವು ಮಹಿಳೆಯರು ಮೇಲಿನ ಗುಬ್ಬಿಯನ್ನು ಹಾಕಲು ಬಯಸುವಿದಿಲ್ಲ. ಕೆಲವರುಇದಕ್ಕೆ ಪಿನ್ನುಗಳನ್ನು ಹಾಗು ಹಲವು ಆಭರಣಗಳನ್ನು ಸೇರಿಸಿಕೊಳ್ಳುತ್ತಾರೆ.ಭಾರತೀಯ ರಂಗದಲ್ಲಿ ನೋಡುವುದಾದರೆ, ಹಿಂದಿನ ಕಾಲದಲ್ಲಿ ಸ್ತನಪಟ್ಟ, ಕುರ್ಪ್ಸಿಕ, ಕಂಚುಕಿ ಎಂದು ಕರೆಯುತ್ತಿದ್ದರು. ರವಿಕೆ, ಸೀರೆಯನ್ನು ಹಳೆಕಾಲದಲ್ಲಿ ಮೂರು ಭಾಗಗಳಾಗಿ ವಿಂಗಡಿಸಿದ್ದರು.‘ಆಂತ್ರೀಯ ಅಂದರೆ ಕೆಳಭಾಗದ ಉಡುಪು, ‘ಉತ್ತರೀಯ’ಅಂದರೆ ಸೆರಗು ಮತ್ತು‘ಸ್ಥನಪಟ್ಟ’ಎಂದು ಮೂರು ಭಾಗಗಳಿದ್ದವು.ಸಂಸ್ಕøತ ಹಾಗು ಪಾಲಿ ಗ್ರಂಥಗಳಲ್ಲಿ ಇದರಉಲ್ಲೇಖವಿದೆ. ಕಲ್ಹನನ 10ನೆ ಶತಮಾನದ ರಾಜತರಂಗಿಣಿ ಗ್ರಂಥದಲ್ಲಿ ಸಹ್ಯಾದ್ರಿ ಭಾಗದರವಿಕೆಯನ್ನು ಕಶ್ಮೀರಕ್ಕೆ ತೆಗೆದುಕೊಂಡು ಹೋಗಲಾಯಿತು ಎಂದು ಹೇಳಿದ್ದಾನೆ. ರವಿಕೆಯನ್ನು ಮುಂದಿನಿಂದ ಧರಿಸಿ ಹಿಂದಿನಿಂದ ಕಟ್ಟುತ್ತಿದ್ದರು.ಈ ರೀತಿಯ ಕಟ್ಟುವಿಕೆ ಈಗಲು ರಾಜಸ್ಥಾನದಲ್ಲಿ ಉಪಯೋಗಿಸಲ್ಪಡುತ್ತಿದೆ.ಗುಜರಾತ್ ಹಾಗು ಮಾಹರಾಷ್ಟ್ರದಲ್ಲಿ ದೊರೆತಿರುವ ಕ್ರೈಸ್ತ ಪೂರ್ವ ಕಲಾಕೃತಿಗಳಲ್ಲಿ ರವಿಕೆ ಪ್ರಪ್ರಥಮ ಉಲ್ಲೇಖವಿದೆ. ದಕ್ಷಿಣ ಭಾರತದಲ್ಲಿ ಸಂಗಮ ವಂಶವಿದ್ದಾಗ ಒಂದು ವಸ್ತ್ರವನ್ನು ರವಿಕೆಗೆ ಮತ್ತು ಸೆರಗಿಗೆ ಉಪಯೋಗಿಸುತ್ತಿದ್ದರು. ಹಲವು ಕಲಾಕೃತಿಗಳು ಹಾಗು ವರ್ಣಚಿತ್ರಗಳ ಪ್ರಕಾರ ಮೊದಲನೆಯ ಶತಮಾನದಲ್ಲಿ ಸ್ಥನಪಟ್ಟ ಕ್ರಮೇಣ ರವಿಕೆಯಾಗಿ ಮಾರ್ಪಾಡುಗೊಂಡಿರುವುದು ಕಾಣಬಹುದು. ಉತ್ತರ ಭಾರತದಾದ್ಯಂತ ಚೋಲಿ, ಘಾಗ್ರಚೋಲಿ, ಬ್ರಜ್, ಹಾಗು ನೇಪಾಳದಲ್ಲಿ ಚೋಲೋ ಎಂದುಕರೆಯುತ್ತಾರೆ. ರವಿಕೆ ಹಾಗು ಚೋಲೋ, ಇವೆರಡನ್ನು ಮುಂಭಾಗದಲ್ಲಿ ಕಟ್ಟಲಾಗುತ್ತಿತ್ತು. ಉತ್ತರ ಭಾರತದಲ್ಲಿ ರವಿಕೆಯ ಮೇಲೆ ಇನ್ನೊಂದು ಉಡುಪನ್ನು ಧರಿಸುತ್ತಿದ್ದರು.ಇದನ್ನು ಪೋಶಾಕ್‍ ಎಂದು ಕರೆಯುತ್ತಾರೆ.ರವಿಕೆಯ ಬಟ್ಟೆ ಮಾತ್ವಲ್ಲದೆ ಅದನ್ನು ಹೊಲಿಯುವ ರೀತಿ ಮತ್ತು ಅದರ ಕಲಾಕೃತಿಯೂ ಕೂಡ ಬಹಳ ಮುಖ್ಯ. ನವರಾತ್ರಿಯ ಸಮಯದಲ್ಲಿ ಶೀಶಾ ಎಂಬ್ರಾಯ್ಡಿರಿಯ ರವಿಕೆ ಬಹಳ ಹೆಸರುವಾಸಿ.ಇದನ್ನು ಲೆಹೆಂಗಾದೊಂದಿಗೆ ಧರಿಸುತ್ತಾರೆ.ಗುಜರಾತ್‍ನ ಅಲೆಮಾರಿ ಜನಾಂಗವಾದ ರಾಬರಿಗಳು ತಯಾರಿಸುವ ಕುಚ್‍ರೀತಿಯಡಿಸೈನ್ ಬಹಳ ಕೀರ್ತಿಯನ್ನು ಪಡೆದಿದೆ.

ಋತುಸಮಯದಲ್ಲಿ

[ಬದಲಾಯಿಸಿ]

ದಕ್ಷಿಣ ಭಾರತದ ಕೆಲ ಭಾಗಗಳಲ್ಲಿ ನಡಯುವ ಈ ವಿಷೇಷ ಸಮಾರಂಭದಲ್ಲಿ ಹುಡುಗಿ ಬೆಳವಣೆಗೆಯನ್ನು ಹೆಮ್ಮೆಯಿಂದಆಚರಿಸಲಾಗುತ್ತದೆ. ಸಮಾರಂಭದ ಮೊದಲ ಭಾಗದಲ್ಲಿ ಹುಡುಗಿಯು ಲಂಗದಾವಣಿ ಧರಿಸಿರುತ್ತಾಳೆ.ಇದೆ ವೇಳ ಅವಳಿಗೆ ಅವಳ ಮೊದಲನೆ ಸೀರೆಯನ್ನು ಕೊಡಲಾಗುತ್ತದೆ.ಆಮೇಲೆ ಎರಡೆನೆ ಭಾಗದಲ್ಲಿ ಅವಳು ರವಿಕೆ ಸಮೇತ ಸೀರೆಯುಟ್ಟು ಸಭೆಗೆ ಬರುವುದು ವಾಡಿಕೆ.ಈ ರೀತಿಯ ಮಾಡುವುದರಿಂದ ಅವಳು ಹೆಣ್ಣಾಗಿ ಪರಿವರ್ತನೆಗೊಳ್ಳುತ್ತಾಳೆ ಎಂದು ನಂಬಿತ್ತಾರೆ.ಹುಡುಗಿಯ ನಾಮಕರಣದ ಸಮಯದಲ್ಲಿ ಲಂಗ ದಾವಣಿಯನ್ನುಕೊಟ್ಟರೆ, ಋತುಪರ್ಣದ ಸಮಯದಲ್ಲಿರವಿಕೆ ಮತ್ತು ಸೀರೆಯನ್ನು ಕೊಡಲಾಗುತ್ತದೆ. ನಾಮಕರಣದ ಸಮಯದಲ್ಲಿ ಮೊದಲೆಯಅನ್ನಪ್ರಾಶನವಾದರೆಇಲ್ಲಿಕೊನೆಯದಾಗಿರುತ್ತದೆ.

ಕಾಲ ಬದಲಾಗುತ್ತಾಇದ್ದ ಹಾಗೆ ರವಿಕೆಯನ್ನು ಸೀರೆಗೆ ಉಪಯೋಗಿಸುವ ಬಟ್ಟೆಯಿಂದ ಮಾಡಲಾಗುತ್ತದೆ. ಸೀರೆ ತಯಾರಿಸುವಾಗರವಕೆಗೆ ಬೇಕಾಗುವಷ್ಟು ಉದ್ದವನ್ನು ಬಿಟ್ಟಿರುತ್ತಾರೆ.ಇದರಿಂದ ಬೇಕಾದಗಾತ್ರದಲ್ಲಿರವಿಕೆಯನ್ನು ಹೊಲಿಯುತ್ತಾರೆ. ಹಲವು ಡಿಸೈನರ್‍ಗಳು ರವಿಕೆಯನ್ನು ಹೊಸ ರೀತಿಯಲ್ಲಿಕಂಡುಅದಕ್ಕೆಒಂದು ನವೀನ ಆಯಾಮವನ್ನುಕೊಡುತ್ತಿದ್ದಾರೆ. ದಕ್ಷಿಣ ಏಶಿಯಾದ ಪಾಪ್ ಸಂಸ್ಕøತಿಯಿಂದ ಪ್ರೇರೇಪಿತಗೊಂಡು ಈ ಹೊಸತನವನ್ನುಕಂಡುಕೊಂಡಿದ್ದಾರೆ. ಹಲವು ಭಗೆಯಕತ್ತು ವೈಶಿಷ್ಟ್ಯಗಳನ್ನು ರವಿಕೆಯಲ್ಲಿತಂದಿದ್ದಾರೆ.ಆಗಿನ ಕಾಲದಏರ್‍ಕತ್ತು ಹೊಂದಿದ್ದ ರವಿಕೆಗಳು ಈಗ ಪುನಃ ಚಾಲ್ತಿಗೆ ಬಂದಿದ್ದುಎಲ್ಲಉಡಲುಇಷ್ಟಪಡುವ ವಸ್ತುವಾಗಿದೆ.ಕೋಲ್ಡ್ ಶೋಲ್ಡರ್ ರವಿಕೆಗಳು ಬಹಳ ಬಳಕೆಯಲ್ಲಿದೆ. ಹೆಗಲ ಭಾಗದಲ್ಲಿರವಿಕೆಯುತೆರೆದಿರುವಕಾರಣ ಹೆಗಲು ತೋರುತ್ತಿರುತ್ತದೆ. ಮೊಣಕೈಅಂಚಿನವರೆಗೂ ರವಿಕೆಗಳನ್ನು ಧರಿಸುತ್ತಾರೆ. ಸ್ಲೀವ್‍ಲೆಸ್ ರವಿಕೆಗಳಲ್ಲಿ ಪಟ್ಟಿ ತೆಳ್ಳಗಿರುವುದು ಇನ್ನೋಂದುರೀತಿಯರವಿಕೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.craftsvilla.com/womens-clothing/blouses/
  2. https://www.maurices.com/p/clothing/tops/perfect-blouses/N-11543
  3. https://www.flipkart.com/women/blouses/pr?sid=2oq,c1r,3pj,vx5 Archived 2019-05-25 ವೇಬ್ಯಾಕ್ ಮೆಷಿನ್ ನಲ್ಲಿ.
"https://kn.wikipedia.org/w/index.php?title=ರವಿಕೆ&oldid=1238968" ಇಂದ ಪಡೆಯಲ್ಪಟ್ಟಿದೆ