ರಜ಼ಿಯಾ ಶೇಖ್
ವೈಯುಕ್ತಿಕ ಮಾಹಿತಿ | ||||||||||||||
---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತೀಯ | |||||||||||||
ಜನನ | ೧೯೫೭ ಗುಜರಾತ್, ಭಾರತ | |||||||||||||
Sport | ||||||||||||||
ದೇಶ | ಭಾರತ | |||||||||||||
ಕ್ರೀಡೆ | ಟ್ರಾಕ್ ಅಂಡ್ ಫೀಲ್ಡ್ | |||||||||||||
ಸ್ಪರ್ಧೆಗಳು(ಗಳು) | ಜಾವಲಿನ್ ಥ್ರೋ | |||||||||||||
ಪದಕ ದಾಖಲೆ
|
ರಜಿಯಾ ಶೇಖ್ ಭಾರತದ ಮಾಜಿ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದು, ಅವರು ಜಾವೆಲಿನ್ ಥ್ರೋನಲ್ಲಿ ಸ್ಪರ್ಧಿಸಿದ್ದಾರೆ. ಅವರು 1987 ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ನಡೆದ ಜಾವಲಿನ್ ಸ್ಪರ್ದೆಯಲ್ಲಿ 50 ಮೀಟರ್ ತಡೆಗೋಡೆ ದಾಟಿದ ಮೊದಲ ಭಾರತೀಯ ಮಹಿಳೆ. [೧] ಏಷ್ಯನ್ ಕ್ರೀಡಾಕೂಟದ ಎರಡು ಆವೃತ್ತಿಗಳಲ್ಲಿ ( 1982 ರ ದೆಹಲಿ ಮತ್ತು 1986 ರ ಸಿಯೋಲ್ )ಅವರು ಭಾರತವನ್ನು ಪ್ರತಿನಿಧಿಸಿದ್ದರು.
ವೃತ್ತಿ
[ಬದಲಾಯಿಸಿ]1986 ರಲ್ಲಿ ದೆಹಲಿಯಲ್ಲಿ ನಡೆದ ಪ್ಲೇಮೇಕರ್ಸ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ 21 ವರ್ಷದ ಎಲಿಜಬೆತ್ ಡೇವನ್‌ಪೋರ್ಟ್‌ನ ದಾಖಲೆಯನ್ನು 47.70 ಮೀಟರ್ ದೂರಕ್ಕೆ ಎಸೆಯುವ ಮೂಲಕ ಮುರಿದಿದ್ದಾರೆ. [೨]
ಕೊಲ್ಕತ್ತಾದಲ್ಲಿ ೧೯೮೯ ರಲ್ಲಿ ನಡೆದ ದಕ್ಷಿಣ ಏಷಿಯನ್ ಕ್ರೀಡಾಕೂಟದಲ್ಲಿ ರಜಿಯಾ ಶೇಖ್ ೫೦.೩೮ ಮೀಟರ್ ಗಳಷ್ಟು ದೂರ ಜಾವಲಿನ್ ಎಸೆದು ಹೊಸ ದಾಖಲೆ ನಿರ್ಮಿಸಿದ್ದಲ್ಲದೆ, ತನ್ನದೇ ೪೭.೮೦ ಮೀಟರ್ ಗಳ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.ಈ ಕ್ರೀಡಾಕೂಟದಲ್ಲಿ ರಜಿಯಾ ಚಿನ್ನದ ಪದಕವನ್ನೂ ಗೆದ್ದಿದ್ದಾರೆ.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಆಯ್ಕೆಯಾದ ಕೆಲವೇ ಕೆಲವು ಕ್ರೀಡಾಪಡುಗಳಲ್ಲಿ ಇವರೂ ಒಬ್ಬರು. ಕಾಮನೆವೆಲ್ತ್ ಕ್ರೀಡಾಪಟುಗಳ ವಿಭಾಗದಿಂದ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಏಷಿಯನ್ ಆಲ್ ಸ್ಟಾರ್ ಅಥ್ಲೆಟಿಕ್ ಗೇಮ್ಸ್ ನ ತಾಂತ್ರಿಕ ಅಧಿಕಾರಿಯಾಗಿ ನೇಮಕಗೊಂಡರು.
ಇದುವರೆಗೂ ರಜಿಯಾ ಶೇಖ್ ೨೭ ಚಿನ್ನದ ಹಾಗೂ ೧೦ ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ.
ಪ್ರಸ್ತುತ ಜೂನಿಯರ್ ವಿಭಾಗದಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Tere, Tushar (3 August 2010). "This former int'l athlete awaits call from CWG organizers". The Times of India (in ಇಂಗ್ಲಿಷ್). Retrieved 9 October 2019.
- ↑ Krishnan, Ram Murali. "Sriram celebrates 40 years of his historic record in 800m". indiansportsnews.com (in ಬ್ರಿಟಿಷ್ ಇಂಗ್ಲಿಷ್). Archived from the original on 9 October 2019. Retrieved 9 October 2019.