ವಿಷಯಕ್ಕೆ ಹೋಗು

ಯೋಹಾನ್ ಗೂಟೆನ್‌ಬರ್ಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೋಹಾನ್ ಗೂಟೆನ್‌ಬರ್ಗ್
ಜನನ
Johannes Gensfleisch zur Laden Gutenberg

c. 1398
ಮರಣFebruary 3, 1468 (aged 70)
ರಾಷ್ಟ್ರೀಯತೆಜರ್ಮನ್
ವೃತ್ತಿ(ಗಳು)Engraver, inventor, and printer
ಗಮನಾರ್ಹ ಕೆಲಸಗಳುThe invention of the movable-type printing press

ಯೋಹಾನ್ ಗೂಟೆನ್‌ಬರ್ಗ್(c. 1398 – ಫೆಬ್ರವರಿ 3, 1468) ಜರ್ಮನ್ ಉಪಜ್ಞೆಕಾರ. ಯುರೋಪಿನಲ್ಲಿ ಮುದ್ರಣತಂತ್ರವನ್ನು ಪ್ರಥಮವಾಗಿ ಆವಿಷ್ಕರಿಸಿದವನೆಂದು ಪ್ರತೀತಿ ಮುದ್ರಣ. ಬಿಡಿ ಅಕ್ಷರಗಳನ್ನು ಎರಕ ಹೊಯ್ದು ಮೊಳೆಗಳನ್ನು ತಯಾರಿಸಿ ಅವುಗಳ ಯುಕ್ತ ಜೋಡಣೆಯಿಂದ ಮುದ್ರಣಫಲಕವನ್ನು ತಯಾರಿಸಿ ಬೇಕಾದಷ್ಟು ಪ್ರತಿಗಳನ್ನು ಮುದ್ರಿಸುವ ಯೋಜನೆಯೇ ಗೂಟೆನ್‍ಬರ್ಗ್ ತಂತ್ರ. ಇದರ ಅನುಸಾರ ಮುದ್ರಿತವಾದ ಗೂಟೆನ್‍ಬರ್ಗ್ ಬೈಬಲ್ಲುಗಳು ಇಂದಿಗೂ ಮುದ್ರಣ ಕಲೆಯ ಪರಮೋಚ್ಛ ಸ್ಥಿತಿಯ ಉತ್ಕೃಷ್ಟ ಉದಾಹರಣೆ ಎಂದು ಪರಿಣತರ ಅಭಿಪ್ರಾಯ. ಆದ್ದರಿಂದ ಗೂಟೆನ್ಬರ್ಗ್ನಿಂದ ಮುದ್ರಣತಂತ್ರ ಪ್ರಾರಂಭವಾದದ್ದು ಮಾತ್ರವಲ್ಲ, ಆ ಕಲೆ ತನ್ನ ಅತ್ಯುನ್ನತ ಮಟ್ಟದಲ್ಲಿಯೇ ವಿಕಾಸವಾಯಿತು. ಪುಟವೊಂದರ 42 ಸಾಲುಗಳ ಎರಡು ಕಾಲಮುಗಳಿರುವ 1282 ಪುಟಗಳ ಗೂಟೆನ್‍ಬರ್ಗ್ ಬೈಬಲ್ಲಿನ 300 ಪ್ರತಿಗಳನ್ನು ಈತ ಮುದ್ರಿಸಿದ್ದ. ಕೈಬರೆಹದ ಪುಸ್ತಕಗಳ ಮೂಲಕ ಮಾತ್ರ ಜ್ಞಾನ ಪ್ರಸಾರ ನಡೆಯುತ್ತಿದ್ದ ದಿನಗಳಲ್ಲಿ ಸಹಜವಾಗಿ ಜ್ಞಾನ ಶ್ರೀಮಂತರ ಹಾಗೂ ಪ್ರಬಲಿಗಳ ಸೊತ್ತಾಗಿತ್ತು. ಪುಸ್ತಕ ಭಂಡಾರಗಳು ವಿರಳ ಸಂಖ್ಯೆಯಲ್ಲಿದ್ದವು. ಮುದ್ರಣ ತಂತ್ರ ಬಳಕೆಗೆ ಬಂದದ್ದರಿಂದ ಒಂದೇ ವಸ್ತುವಿನ ಖಚಿತ ಬಹು ಪ್ರತೀಕರಣಗಳು ಸುಲಭ ಸಾಧ್ಯವಾಯಿತು. ಹೀಗಾಗಿ ಜ್ಞಾನಪ್ರಸಾರಕ್ಕೆ ಬೃಹತ್ ಪ್ರಮಾಣ ಕುಮ್ಮಕ್ಕು ಲಭ್ಯವಾಯಿತು. ಗೂಟೆನ್‍ಬರ್ಗ್‌ನ ಹಿರಿಮೆ ಮತ್ತು ಸಾಧನೆ ಇರುವುದು ಈ ದಿಶೆಯಲ್ಲಿ. ಒಂದು ಶತಮಾನದ ತರುವಾಯ (ಎಂದರೆ 16-17 ನೆಯ ಶತಮಾನ) ಉದಯಿಸಿದ ವೈಜ್ಞಾನಿಕಾಂದೋಲನದ ನಾಂದಿಯನ್ನು ಗೂಟೆನ್‍ಬರ್ಗ್‌ನ ಸಿದ್ಧಿಯಲ್ಲಿ ಗುರುತಿಸಬಹುದು.

ಬಾಲ್ಯ

[ಬದಲಾಯಿಸಿ]

ಯೋಹಾನ್ ಗೊಟೆನ್‍ಬರ್ಗ್‌ನ ಬಾಲ್ಯ, ವಿದ್ಯೆ ಮುಂತಾದ ವೈಯಕ್ತಿಕ ವಿವರಗಳು ಖಚಿತವಾಗಿ ತಿಳಿದಿಲ್ಲ. ಮೈನ್ಜ್ ನಗರದಲ್ಲಿ ಸು. 1395ರಲ್ಲಿ ಜನಿಸಿದ. ಮೈನ್ಜ್ ನಗರದ ಮೂಲವಾಸಿಗಳಾದ ಈ ಕುಟುಂಬ ಕಾರಣಾಂತರದಿಂದ ಸ್ಟ್ರಾರ್ಸ್‌ಬರ್ಗ್ ನಗರಕ್ಕೆ ಬಂದು ನೆಲೆಸಿತ್ತು. ಯೋಹಾನನ ಬಾಲ್ಯ ಸಂದದ್ದು ಈ ನಗರದಲ್ಲಿ. ಅಕ್ಕಸಾಲಿಯಾಗಿ ಇವನು ವೃತ್ತಿಶಿಕ್ಷಣ ಪಡೆದ. ಇದೇ ಮುಂದೆ ಅವನಿಗೆ ಅಚ್ಚಿನ ಮೊಳೆಗಳನ್ನು ತಯಾರಿಸುವುದಕ್ಕೂ ಕೊರೆಯುವುದಕ್ಕೂ ಬೇಕಾದ ಮೂಲಜ್ಞಾನವನ್ನು ಒದಗಿಸಿತು. ಅಕ್ಷರಗಳನ್ನು ವಿಪರ್ಯಯವಾಗಿ ಸಮಗಾತ್ರದ ಲೋಹಮೊಳೆಗಳ ತುದಿಗಳಲ್ಲಿ ಕೊರೆಯುವುದು, ಪಾಠಾನುಸಾರ ಈ ಮೊಳೆಗಳನ್ನು ಜೋಡಿಸಿ ನಿರ್ದಿಷ್ಟ ಮುದ್ರಣಫಲಕವನ್ನು ತಯಾರಿಸು ವುದು. ಇದರೆ ಮೇಲೆ ಯುಕ್ತ ಪ್ರಮಾಣದಲ್ಲಿ ಶಾಯಿಯನ್ನು ಸವರಿ ಸೂಕ್ತ ಕಾಗದದ ಮೇಲೆ ಈ ಫಲಕವನ್ನು ಒತ್ತುವುದರ ಮೂಲಕ ಮುದ್ರಿತಪ್ರತಿಯನ್ನು ಸಿದ್ಧಪಡಿಸುವುದು-ಇವು ಗೂಟೆನ್ ಬರ್ಗ್ ಕನಸು ಕಂಡು ಸುಮಾರು ಇಪ್ಪತ್ತು ವರ್ಷಗಳ ನಿರಂತರ ಪ್ರಯತ್ನದಿಂದ ನನಸಾಗಿಸಿದ ಸಾಹಸಗಳು.

ಗೂಟೆನ್‍ಬರ್ಗ್ ಬೈಬಲ್, Library of Congress, Washington, D.C.

ಹೀಗೆ ಗೂಟೆನ್ಬರ್ಗ್ ಇತಿಹಾಸ ನಿರ್ಮಾಪಕ ಉಪಜ್ಞೆಕಾರನಾಗಿದ್ದರೂ ವ್ಯಾವಹಾರಿಕವಾಗಿ ಅವನು ಸೋಲನ್ನೇ ಅನುಭವಿಸುತ್ತಿದ್ದ. ತನ್ನ ಮುದ್ರಣ ತಂತ್ರವನ್ನು ಕಾರ್ಯಗತಗೊಳಿಸಲು ಅವನು ಸಾಲಮಾಡಿ ಮುಂದುವರಿಸಿದ. ಆದರೆ ಮುದ್ರಣ ಪ್ರಾಯೋಗಿಕವಾಗಿ ಯಶಸ್ವಿ ಆದಾಗಲೂ ಈತನಿಗೆ ಅದರ ಆರ್ಥಿಕ ಲಾಭ ಸಿದ್ಧಿಸಲಿಲ್ಲ. ಕಾಲವಿನ್ನೂ ಪಕ್ವವಾಗಿರದಿದ್ದುದೇ ಇದರ ಕಾರಣ. ಹೀಗಾಗಿ ನ್ಯಾಯಾಲಯದ ಪ್ರಕರಣಗಳನ್ನು ಈತ ಎದುರಿಸಬೇಕಾಯಿತು. ಅಲ್ಲಿ ತನ್ನ ಸಮಸ್ತ ಯಂತ್ರಗಳನ್ನೂ ಸಾಲಗಾರರಿಗೆ 1455ರಲ್ಲಿ ಕಳೆದುಕೊಳ್ಳುವ ದುಸ್ಥಿತಿಗೆ ಈಡಾದ. ಸಾಲಗಾರನಾಗಿಯೇ ಇವನು ಸು. 1468ರ ಫೆಬ್ರವರಿ 3 ರಂದು ಮೈನ್ಜ್‍ನಲ್ಲಿ ನಿಧನ ಹೊಂದಿದ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • English homepage of the Gutenberg-Museum Mainz, Germany.
  • The Digital Gutenberg Project Archived 2008-07-25 ವೇಬ್ಯಾಕ್ ಮೆಷಿನ್ ನಲ್ಲಿ.: the Gutenberg Bible in 1,300 digital images, every page of the University of Texas at Austin copy.
  • Treasures in Full – Gutenberg Bible Archived 2013-10-10 ವೇಬ್ಯಾಕ್ ಮೆಷಿನ್ ನಲ್ಲಿ. View the British Library's Digital Versions Online
  • Texts on Wikisource:
    • "Gutenberg, Johann" . Encyclopædia Britannica (11th ed.). 1911. {{cite encyclopedia}}: Cite has empty unknown parameters: |separator= and |HIDE_PARAMETER= (help)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: