ಯೋನಿಮುಖದ ಸೋಂಕುಗಳು
ಗೋಚರ
ಉರಿಯೂತದಿಂದಾಗಿ ಯೋನಿಮುಖದ ಪ್ರದೇಶವೆಲ್ಲ ಬಾತು, ಕೆಂಪಾಗಿ ಒಸರುವಿಕೆ ಕಾಣಿಸಿಕೊಳ್ಳುತ್ತದೆ. ಉರಿತ ಮತ್ತು ತುರಿಕೆಯಿದ್ದು, ಆ ಭಾಗವನ್ನು ಮುಟ್ಟಿದರೆ ನೋವಾಗುತ್ತಿರುತ್ತದೆ.
ಸೋಂಕಿನ ಲಕ್ಷಣಗಳು
[ಬದಲಾಯಿಸಿ]- ಯೋನಿಮುಖದ ಉರಿತವು ಗುಂಜೆಲುದಿಮ್ಮು ಹಾಗೂ ಹಿರಿಯ ಯೋನಿದುಟಿಗಳ ರೋಮಕೋಶಿಕೆಯುರಿತ, ಕೀವು ಗುಳ್ಳೆಪಡೆ, ತೀಡು ಗಳಲೆಗಳಿಂದಾಗಿ ಕಾಣಿಸಿಕೊಳ್ಳಬಹುದು.
- ಯೋನಿಯ ಮೈಜಿಡ್ಡಿನ ಜಿಟ್ಟಿಯ ಅಥವಾ ಗಾಯಗಳ ಸೋಂಕಿನಿಂದಾಗಿ ಅಥವಾ ವಿವಿಧ ರತಿರೋಗಗಳ ಲಕ್ಷಣಗಳಲ್ಲೊಂದಾಗಿ ಕಾಣಿಸಿಕೊಳ್ಳಬಹುದು.
- ಚಿಕ್ಕ ಮಕ್ಕಳಲ್ಲಿ ಅಥವಾ ಮುಪ್ಪಿನಲ್ಲಿ ಕಂಡುಬರುವ ಯೋನಿಮುಖದುರಿತ ಸಂಕೀರ್ಣದ ಭಾಗವೆನಿಸಿ ಕಾಣಿಸಬಹುದು.
- ಯೋನಿಮುಖದಲ್ಲಿನ ಮೂತ್ರನಾಳ ಬದಿಯ ಅಥವಾ ಮೂತ್ರನಾಳದಡಿಯ ಬಾರ್ಥೊಲಿನ್ ಗ್ರಂಥಿಗಳ ಸೋಂಕು ಕಾರಣವಾಗಿರಬಹುದು.
- ಮಣಿಮಾಲಣಬೆ ಬೇನೆ, ಲೋಮಕುಂಟಿ ಬೇನೆಗಳೂ ಯೋನಿಮುಖದುರಿತದ ಸಹಭಾಗಿಗಳು.
- ಯೋನಿಮುಖದ ಚರ್ಮವು ಉರಿಗೆಂಜ, ಸಿಬ್ಬು ಮೊದಲಾದ ಸೋಂಕುಗಳಿಂದಲೂ ಬಾಧಿತವಾಗಬಹುದು.[೧]
ಸೋಂಕು ನಿವಾರಿಸುವ ಬಗ್ಗೆ
[ಬದಲಾಯಿಸಿ]- ಮರ್ಮಭಾಗವನ್ನು ಸ್ವಚ್ಛವಾಗಿತ್ತುಕೊಳ್ಳುಬೇಕು.
- ಸ್ವಚ್ಛವಾದ ಒಳ ಉಡುಪುಗಳನ್ನು ಧರಿಸುವುದು.
- ಮುಟ್ಟಿನ ಸಮಯದಲ್ಲಿ ಹಾಗೂ ಬಿಳಿಸೆರಗು, ಅಥವಾ ಬೇರಾವುಕದೇ ಯೋನಿಯುರಿತವಿದ್ದಲ್ಲಿ ಈ ಒಳಸ್ವಚ್ಛತೆಯನ್ನು ಕಾದಿಟ್ಟುಕೊಳ್ಳುವುದು ರೂಢಿಯಾಗಬೇಕು.
- ಸೋಂಕು ತಗುಲಿದಾಗ ನಂಜುರೋಧಕ ದ್ರಾವಣಗಳಿಂದ ತೊಳೆದು, ಮೆತ್ತನೆಯ ಬಟ್ಟೆಯಿಂದ ಒಣಗಿಸಬೇಕು.
- ಸಮಂಜಸವಾದ ಜೀವಿರೋಧಕ ಹಾಗೂ ಬೂಷ್ಟು ರೋಧಕಗಳನ್ನು ಸೋಂದು ತಗುಲಿದ ಭಾಗಕ್ಕೆ ಅಥವಾ ದೇಹದೊಳಬಳಕೆಯಿಂದ ಯೋನಿಮುಖದ ಸೋಂಕುನ್ನು ನಿವಾರಿಸಬಹುದು.
- ಬೆದೆಜನಕದ ಕೊರತೆಯಿಂದಾಗೆ ಮಕ್ಕಳಲ್ಲಿ ಮತ್ತು ಮುಪ್ಪಿನವರಲ್ಲಿ ಈ ಉರಿ ಕಂಡು ಬಂದರೆ ಬೆದೆಜನಕದಿಂದ ಕೂಡಿದ ಮುಲಾಮು, ಮಾತ್ರೆಗಳನ್ನು ಕೆಲವು ವಾರೆ ಉಪಯೋಗಿಸಬಹುದು.