ಯೂಬಿಸಾಫ್ಟ್
ಯೂಬಿಸಾಫ್ಟ್ ಮನರಂಜನೆ ಎಸ್ಎ ಫ್ರಾನ್ಸ್ ನ ಮೊನ್ಟ್ರಿಯುವಿಲ್ ನಲ್ಲಿ ಪ್ರಧಾನ ಕಚೇರಿಯನ್ನು ಹೊ೦ದಿರುವ ಫ್ರೆಂಚ್ ನ ಬಹುರಾಷ್ಟ್ರೀಯ ವೀಡಿಯೊ ಗೇಮ್ ಅಭಿವೃದ್ಧಿಪಡಿಸುವ ಮತ್ತು ಪ್ರಕಾಶಕ ಮತ್ತು ವಿತರಿಸುವ ಕ೦ಪನಿಯಾಗಿದೆ, ಇದು ಅಸ್ಯಾಸಿನ್ಸ್ ಕ್ರೀಡ್, ಫಾರ್ ಕ್ರೈ, ಘೋಸ್ಟ್ ರೆಕಾನ್, ಜಸ್ಟ್ ಡಾನ್ಸ್, ರೈನ್ಬೋ ಸಿಕ್ಸ್, ಪ್ರಿನ್ಸ್ ಆಫ್ ಪರ್ಷಿಯಾ, ರೆಮ್ಯಾನ್ ಮತ್ತು ಸ್ಪಿಂಟರ್ ಸೆಲ್ ಸೆರಿದ೦ತೆ ಹಲವಾರು ಮೆಚ್ಚುಗೆಯ ವಿಡಿಯೋ ಗೇಮ್ ಫ್ರ್ಯಾಂಚೈಸೀಗಳಿಗೆ ಆಟಗಳನ್ನು ಅಭಿವೃದ್ಧಿಪಡೀಸುವಲ್ಲಿ ಹೆಸರುವಾಸಿಯಾಗಿದೆ.[೧]
ಕಂಪನಿ ವಿವರಗಳು
[ಬದಲಾಯಿಸಿ]ಯೂಬಿಸಾಫ್ಟ್ ವಿಶ್ವದ ಮೂರನೇ ಅತಿದೊಡ್ಡ ವಿಡಿಯೋ ಆಟಗಳ ಸ್ವತಂತ್ರ ಪ್ರಕಾಶಕರಾಗಿದ್ದಾರೆ. ಯೂಬಿಸಾಫ್ಟ್ ಮನರಂಜನೆ ಎಸ್.ಎ ೧೯ ದೇಶಗಳಲ್ಲಿ ೨೯ ಸ್ಟುಡಿಯೋಗಳನ್ನು ಒಳಗೊ೦ಡು ತನ್ನ ವಿಶ್ವವ್ಯಾಪ್ತತೆಯನ್ನು ಹೊಂದಿದೆ. ಕಂಪನಿಯು ೨೬ ದೇಶಗಳಲ್ಲಿ ತನ್ನ ಅಂಗಸಂಸ್ಥೆಗಳನ್ನು ಹೊಂದಿದೆ. ೨೧೦೦ ಸಿಬ್ಬಂದಿವರ್ಗವನ್ನು ಹೊಂದಿರುವ ಕೆನಡಾದ ಮಾಂಟ್ರಿಯಲ್ ಯೂಬಿಸಾಫ್ಟ್ ನ ಅತಿದೊಡ್ಡ ಅಭಿವೃದ್ಧಿ ಸ್ಟುಡಿಯೋವಾಗಿದೆ.
ಯೂಬಿಸಾಫ್ಟ್ ೨೦೦೮-೨೦೦೯ ವರ್ಷದಲ್ಲಿ € ೧.೨೫೬ ಬಿಲಿಯನ್ ಆದಾಯವನ್ನು ಗಳಿಸುವ ಮೂಲಕ ಕಂಪನಿಯ ಇತಿಹಾಸದಲ್ಲೆ ಮೊದಲ ಬಾರಿಗೆ ೧ ಶತಕೋಟಿ ಯುರೋ ಮೈಲಿಗಲ್ಲನ್ನು ತಲುಪಿತು. ಯೂಬಿಸಾಫ್ಟ್ ಕಂಪನಿಯು ತನ್ನ ಆಟಗಳನ್ನು ಆಧರಿಸಿ ಕಾರ್ಯಕ್ರಮಗಳನ್ನು ಹಾಗೂ ಚಲನಚಿತ್ರಗಳನ್ನು ರಚಿಸಲು ಯೂಬಿಸಾಫ್ಟ್ ಮೋಷನ್ ಪಿಕ್ಚರ್ಸ್ ಎಂಬ ತನ್ನದೇ ಚಲನಚಿತ್ರ ವಿಭಾಗದವನ್ನು ಹುಟ್ಟುಹಾಕಿದರು.
ಉಲ್ಲೇಖಗಳು
[ಬದಲಾಯಿಸಿ]