ವಿಷಯಕ್ಕೆ ಹೋಗು

ಯೂಪ್ಲಿಕ್ಟಿಸ್ ಕೇರಳ (ಕಪ್ಪೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೂಪ್ಲಿಕ್ಟಿಸ್ ಕೇರಳ ಅಥವಾ ಕೇರಳ ಚಿಮ್ಮುವ ಕಪ್ಪೆ - ಇದು Dicroglossidae ಕುಟುಂಬಕ್ಕೆ ಸೇರಿದ ಚಿಮ್ಮುವ ಕಪ್ಪೆಯ ಒಂದು ಜಾತಿ[]. ಇದು ಯೂಪ್ಲಿಕ್ಟಿಸ್ ಪ್ರಭೇದಕ್ಕೆ ಸೇರಿದೆ. ಮೊದಲಬಾರಿಗೆ ಕೇರಳದ ತಟ್ಟೆಕಾಡು ಪ್ರದೇಶದ ಪಕ್ಶಿಧಾಮದ ಸುತ್ತಲಿನಲ್ಲಿ ಪತ್ತೆಯಾಗಿದ್ದು ಕೇರಳದ ಜೀವವೈವಿಧ್ಯದ ಗೌರವಾರ್ಥವಾಗಿ ಆ ಹೆಸರು ಇಡಲಾಗಿದೆ. ಪಾಲಕ್ಕಾಡ್ ಪ್ರದೇಶದ ಪಶ್ಚಿಮ ಘಟ್ಟಗಳ ತಪ್ಪಲಿನ ಸಿಹಿನೀರಿನ ಸ್ಥಳಗಳಲ್ಲಿ ಇದು ಪತ್ತೆಯಾಯಿತು. ಈ ಕುರಿತ ಅಧ್ಯಯನ ವರದಿಯು ನ್ಯೂಝಿಲ್ಯಾಂಡಿನ ಅಂತಾರಾಷ್ಟ್ರೀಯ ಜರ್ನಲ್ ಝೂಟಾಕ್ಸಾದಲ್ಲಿ ಪ್ರಕಟವಾಗಿದೆ.[]

ವಾಸಸ್ಥಳ ಮತ್ತು ಭೌಗೋಳಿಕ ವ್ಯಾಪ್ತಿ

[ಬದಲಾಯಿಸಿ]

ಇವು ಸಿಹಿನೀರಿನ ಮೂಲಗಳ ಬಳಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಯೂಪ್ಲಿಕ್ಟಿಸ್ ಕುಟುಂಬದ ಕಪ್ಪೆಗಳು ಅರೇಬಿಯಾ ಪರ್ಯಾಯ ದ್ವೀಪಗಳು, ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಮಯನ್ಮಾರ್ ಮತ್ತು ಥ್ಯಲ್ಯಾಂಡಗಳಲ್ಲಿ ವ್ಯಾಪಿಸಿವೆ. ಹೊಸ ಅಧ್ಯಯನದ ಪ್ರಕಾರ ಇವು ಭಾರತೀಯ ಮೂಲದವು ಎಂದು ಸಾಬೀತಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.[][]

ಸಂಶೋಧನಾ ತಂಡ

[ಬದಲಾಯಿಸಿ]

ಜೂಆಲಜಿಕಲ್ ಸರ್ವೇ ಆಫ್ ಇಂಡಿಯಾ, ಮೌಂಟ್ ಕಾರ್ಮೆಲ್ ಕಾಲೇಜು ಬೆಂಗಳೂರು ಮತ್ತು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಮತ್ತು ರಿಸರ್ಚ್ ಭುವನೇಶ್ವರ ಸಂಸ್ಥೆಗಳ ಒಂಡು ತಂಡವು ಈ ಕಪ್ಪೆಯನ್ನು ಪತ್ತೆ ಮಾಡಿತು. [] ದಿನೇಶ್ ಕೆಪಿ, ಚನ್ನಕೇಶವಮೂರ್ತಿ ಬಿ ಎಚ್, ಪಿ. ದೀಪಕ್, ಎ. ಘೋಶ್ ಮತ್ತು ಕೆ ದ್ಯುತಿ ಇವರುಗಳು ಈ ತಂಡದಲ್ಲಿ ಇದ್ದವರು.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2022-02-28. Retrieved 2022-02-28.
  2. https://mapress.com/zt/article/view/zootaxa.4990.2.7
  3. https://www.prajavani.net/india-news/new-species-of-frog-found-in-kerala-841829.html
  4. https://amphibiansoftheworld.amnh.org/Amphibia/Anura/Dicroglossidae/Dicroglossinae/Phrynoderma/Phrynoderma-kerala
  5. https://www.thehindu.com/news/cities/Kochi/new-species-of-skittering-frog-discovered-from-surroundings-of-thattekkad-bird-sanctuary/article34917143.ece