ಯೂತ್ ಫಾರ್ ಹೆರಿಟೇಜ್ ಫೌಂಡೇಶನ್
ಸಂಕ್ಷಿಪ್ತ ಹೆಸರು | YfHF |
---|---|
ಸ್ಥಾಪನೆ | 26 ಜನವರಿ 2014 |
ಸ್ಥಾಪಿಸಿದವರು | ವಿಕ್ರಂಜಿತ್ ಸಿಂಗ್ ರೂಪರಾಜ್ |
ಶೈಲಿ | ಎನ್.ಜಿ.ಓ |
Purpose | ಪರಂಪರೆಗಳ ಅರಿವು ಮೂಡಿಸುವುದು |
ಪ್ರಧಾನ ಕಚೇರಿ | ನವದೆಹಲಿ |
ಅಧಿಕೃತ ಜಾಲತಾಣ | Youth for Heritage Foundation |
ಯೂತ್ ಹೆರಿಟೇಜ್ ಫೌಂಡೇಶನ್ ಎನ್ನುವುದು ಲಾಭಕ್ಕೋಸ್ಕರ ಕೆಲಸ ಮಾಡದ ಒಂದು ಎನ್.ಜಿ.ಓ. ಇದನ್ನು ೧೮೬೦ರ ಸೊಸೈಟಿ ನೋಂದಣಿ ಕಾಯ್ದೆಯ ಅನ್ವಯ ನೋಂದಣಿ ಮಾಡಲಾಗಿದೆ. ಇದನ್ನು ೨೦೦೯ ರಲ್ಲಿ ಹವ್ಯಾಸಿ ಯೋಜನೆಯಾಗಿ ರೂಪಿಸಲಾಗಿತ್ತು. ಆ ಯೋಜನೆ ಈಗ ಪ್ರಖ್ಯಾತವಾಗಿದೆ.
ಇತಿಹಾಸ
[ಬದಲಾಯಿಸಿ]ಅಕ್ಟೋಬರ್ ೨೦೦೯ರಲ್ಲಿ ವಿಕ್ರಂಜಿತ್ ಸಿಂಗ್ ರೂಪರಾಜ್ ಎನ್ನುವ ಮಾಹಿತಿ ತಂತ್ರಜ್ಞ ದೆಹಲಿಯ ಐತಿಹಾಸಿಕ ಕಟ್ಟಡಗಳನ್ನು ನೋಡಲು ಪ್ರವಾಸ ಹೋಗುತ್ತಾರೆ. ಅಲ್ಲಿನ ಹಲವಾರು ತಾಣಗಳ ಬಗೆಗಿನ ಮಾಹಿತಿಗೆ ಅಂತರ್ಜಾಲದಲ್ಲಿ ಉಲ್ಲೇಖಗಳಿಲ್ಲದೇ ಇರುವುದನ್ನು ಅವರು ಗಮನಿಸಿದರು. ಆಗ ಅವರು "ದಿದರ್-ಇ-ದಿಲ್ಲಿ" ಎನ್ನುವ ಹವ್ಯಾಸಿ ಯೋಜನೆಯೊಂದನ್ನು ಪ್ರಾರಂಭಿಸಿದರು. ಈ ಯೋಜನೆಯ ಮೂಲಕ ದೆಹಲಿಯ ಪಾರಂಪರಿಕ ತಾಣಗಳ ಬಗೆಗಿನ ಮಾಹಿತಿಯನ್ನು ಕಲೆಹಾಕಲು ಪ್ರಾರಂಭಿಸಿದರು. ಅವರು ಈ ರೀತಿ ಕಲೆಹಾಕಿದ ಮಾಹಿತಿಯನ್ನು ತಮ್ಮ ವೆಬ್ ಸೈಟ್ monumentsofdelhi.com Archived 2024-03-01 ವೇಬ್ಯಾಕ್ ಮೆಷಿನ್ ನಲ್ಲಿ. [೧] ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ದೊರಕುವಂತೆ ಮಾಡಿದರು.
ಅಕ್ಟೋಬರ್ ೨೦೧೦ರಲ್ಲಿ ವಿಕ್ರಂಜಿತ್ "ದೆಹಲಿ ಪಾರಂಪರಿಕ ಜ್ಞಾನ ಕ್ಲಬ್" ಎನ್ನುವ ಅಂತರ್ಜಾಲದ ಗುಂಪನ್ನು ಸೃಷ್ಠಿಸಿದರು. ಈ ಗುಂಪು ಪಾರಂಪರಿಕ ತಾಣಗಳಲ್ಲಿನ ಓಡಾಟದ ಚಟುವಟಿಕೆಗಳನ್ನು ಪ್ರಾರಂಭಿಸಿತು. ಇದರಲ್ಲಿನ ಸದಸ್ಯರ ಸಲಹೆಯ ಮೇರೆಗೆ ಈ ಗುಂಪಿನ ಹೆಸರನ್ನು "ಪಾರಂಪರಿಕ ಫೋಟೋಗ್ರಫಿ ಕ್ಲಬ್" ಎಂದು ಬದಲಾಯಿಸಲಾಯಿತು. ಅದಾದ ಏಳು ವರ್ಷಗಳಲ್ಲಿ ಈ ಫೇಸ್ಬುಕ್ ಗುಂಪಿಗೆ ೨೧,೦೦೦ ಜನರು ಸೇರಿದ್ದರು. ಹಾಗಾಗಿ ಈ ಗುಂಪು ಭಾರತದಲ್ಲಿನ ಪಾರಂಪರಿಕ ತಾಣಗಳ ಫೋಟೋಗ್ರಾಫ್ಗಳ ಒಂದು ದೊಡ್ಡ ಸಂಗ್ರಹವಾಗಿ ಮಾರ್ಪಟ್ಟಿದೆ.
೨೦೧೩ರಲ್ಲಿ ಈ ಕ್ಲಬ್ ಪಾರಂಪರಿಕ ತಾಣಗಳಲ್ಲಿ ಆ ತಾಣಗಳ ಬಗೆಗಿನ ಮಾಹಿತಿ ನೀಡುವ ನಡಿಗೆಗಳನ್ನು ಆಯೋಜಿಸಿತು. ಈ ನಡಿಗೆಗಳನ್ನು ಪಾರಂಪರಿಕ ದರ್ಬಾರ್ ಎಂದು ಕರೆಯಲಾಯಿತು. ಮೊದಮೊದಲು ಈ ದರ್ಬಾರುಗಳನ್ನು ದೆಹಲಿಯಲ್ಲೇ ಆಯೋಜಿಸಲಾಯಿತು. ೨೦೧೪ರಲ್ಲಿ ಈ ಗುಂಪನ್ನು ಸೊಸೈಟಿ ಕಾಯ್ದೆಯಡಿ "ಯೂತ್ ಫಾರ್ ಹೆರಿಟೇಜ್ ಫೌಂಡೇಶನ್" ಎಂದು ನೋಂದಣಿ ಮಾಡಲಾಯಿತು. ರೂಪರಾಯ್ ಅವರು ಇದರ ಮೊದಲ ಚೇರ್ಮನ್ ಆದರು.
ಚಟುವಟಿಕೆಗಳು
[ಬದಲಾಯಿಸಿ]ಈ ಸೊಸೈಟಿ ಪಾರಂಪರಿಕ ತಾಣಗಳ ಬಗೆಗಿನ ಅರಿವು ಮೂಡಿಸುವುದು ಮತ್ತು ಪಾರಂಪರಿಕ ತಾಣಗಳನ್ನು ಜನಪ್ರಿಯಗೊಳಿಸುವ ಕೆಲಸವನ್ನು ಮಾಡುತ್ತದೆ. ಈ ಸಲುವಾಗಿ ಇದು ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳ ಜೊತೆಗೆ ಕೆಲಸ ಮಾಡುತ್ತದೆ.
ಹೆರಿಟೇಜ್ ಫೋಟೋಗ್ರಫಿ ಕ್ಲಬ್
[ಬದಲಾಯಿಸಿ]ಹೆರಿಟೇಜ್ ಫೌಂಡೇಶನ್ನಿನ ಅತೀ ದೊಡ್ಡ ಅಂಗಸಂಸ್ಥೆ ಹೆರಿಟೇಜ್ ಫೋಟೋಗ್ರಫಿ ಕ್ಲಬ್ ಆಗಿದೆ. [೨] ಭಾರತದಲ್ಲಿನ ಹಲವಾರು ಪಾರಂಪರಿಕ ತಾಣಗಳಲ್ಲಿ ಪಾರಂಪರಿಕ ಫೋಟೋಗ್ರಫಿ ನಡಿಗೆಗಳನ್ನು ಇದು ಆಯೋಜಿಸುತ್ತದೆ. ಹೆಚ್ಚು ಪ್ರಖ್ಯಾತವಾಗಿಲ್ಲದ ಈ ಪಾರಂಪರಿಕ ತಾಣಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು , ಆ ತಾಣಗಳ ವಾಸ್ತುಶಿಲ್ಪ, ಇತಿಹಾಸ ಮುಂತಾದ ವಿಷಯಗಳ ಬಗ್ಗೆ ತಿಳಿಸುವುದು ಈ ಸಂಸ್ಥೆಯ ಚಟುವಟಿಕೆಗಳ ಮುಖ್ಯ ಉದ್ದೇಶ .[೩]
ಪಾರಂಪರಿಕ ದರ್ಬಾರ್ ಗಳು
[ಬದಲಾಯಿಸಿ]ಯೂತ್ ಫಾರ್ ಹೆರಿಟೇಜ್ ಫೌಂಡೇಶನ್ ಅವರು ಸಾಂಸ್ಕೃತಿಕ ಉಪನ್ಯಾಸ ಸರಣಿಗಳನ್ನು ೨೦೧೩ರಲ್ಲಿ ಪ್ರಾರಂಭಿಸಿತು. ಈ ಸರಣಿಯ ಮೊದಲನೆಯ ಕಾರ್ಯಕ್ರಮ ಮೆಹ್ರೂಲಿಯಲ್ಲಿನ ಜಫರ್ ಮಹಲ್ ನಲ್ಲಿ ನಡೆಯಿತು. ಇದರಲ್ಲಿ ಸೂಫಿಸಂ ಬಗ್ಗೆ ಮಾತನಾಡಲಾಯಿತು. ೨೦೧೪ರ ನಂತರ ಈ ಉಪನ್ಯಾಸ ಸರಣಿಗಳನ್ನು ಇಂಡಿಯಾ ಹ್ಯಾಬಿಟಾಟ್ ಸೆಂಟರಿನ ಕಾಸುರಿನ ಮತ್ತು ಗುಲ್ಮೊಹರ್ ಹಾಲಿನಲ್ಲಿ ನಡೆಸಲಾಗುತ್ತಿದೆ. ಪ್ರತೀ ತಿಂಗಳು ಒಬ್ಬ ಹೊಸ ಉಪನ್ಯಾಸಕ ಮತ್ತು ವಿಷಯಗಳನ್ನು ಆರಿಸಲಾಗುತ್ತದೆ. ಪುಷ್ಪೇಷ್ ಪಂತ್, ಕೆ.ಕೆ ಮೊಹಮ್ಮದ್, ರಾಜಾ ರುಮಿ, ಫೈಸಲ್ ಅಲ್ಕಾಲಿ, ಸೊಹಾಲ್ ಹಷ್ಮಿ, ಆರ್.ವಿ.ಸ್ಮಿತ್, ಡಾ| ಷರೀಪ್ ಹುಸೇನ್ ಕುಸೇಮಿ, ಡಾ| ಎನ್.ಚೌಧರಿ ಮುಂತಾದ ಮಹನೀಯರು ಇಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. [೪]
ಉಲ್ಲೇಖಗಳು
[ಬದಲಾಯಿಸಿ]- ↑ "Delhiites take to walks in a big way ಪಾರಂಪರಿಕ ತಾಣಗಳಲ್ಲಿನ ಓಡಾಟಕ್ಕೆ ದೆಹಲಿಗರ ಬೃಹತ್ ಚಾಲನೆ". ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಲೇಖನ.
- ↑ ರಾಶಿ ವದೇರ ಅವರ ಲೇಖನ. "A Hobby Run - 8 Hobby Clubs in Delhi". ಲಿಟಲ್ ಬ್ಲಾಕ್ ಬುಕ್ ನವದೆಹಲಿ.
- ↑ "10 Guided Tours To Explore Delhi". What's Hot! ಎಂಬ ಶೀರ್ಷಿಕೆಯಲ್ಲಿ ಟೈಮ್ಸ್ ಸಿಟಿ ತಾಣದಲ್ಲಿನ ಲೇಖನ.
- ↑ ಆರ್.ವಿ. ಸ್ಮಿತ್ ಅವರ ಲೇಖನ. "Clio on a sunny afternoon". ದಿ ಹಿಂದೂ ದಿನಪತ್ರಿಕೆ.