ವಿಷಯಕ್ಕೆ ಹೋಗು

ಯು.ಎಸ್.ಎಸ್.ಡಿ. ತಂತ್ರಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುಎಸ್‌ಎಸ್‌ಡಿ, ತಂತ್ರಜ್ಞಾನ []ಬಳಸಿ, ಒಂದು ಮಿಸ್ಡ್ ಕಾಲ್ ಕೊಟ್ಟರೆ ಪಠ್ಯರೂಪದ ಸಂದೇಶಸಿಗುತ್ತದೆ. ಮೊಬೈಲ್ ಫೋನ್ ಬಳಕೆದಾರರಿಗೆ ಸಂವಹನ ಆಯ್ಕೆಗಳು ಬಗೆಬಗೆಯವು. ತಾಂತ್ರಿಕವಾಗಿ ಸಂವಹನಗಳಪಟ್ಟಿ ದೊದ್ದದು. ಕರೆಮಾಡಿ ಮಾತನಾಡಿ, ಐವಿಆರ್‌ಎಸ್ ವ್ಯವಸ್ಥೆ ಬಳಸಿ, ಕಳುಹಿಸಿ ಇಲ್ಲವೇ ಸುಮ್ಮನೆ ಬಳಸುವ ಪ್ರತಿಯೊಂದು ವಿಧಾನದಲ್ಲೂ ಸೌಲಭ್ಯಗಳಿವೆ. ಎಸ್ಸೆಮ್ಮೆಸ್ಸಿನ ಬಗ್ಗೆ ತಿಳಿಯುವುದಾದರೆ,'ಶುಭೋದಯ, ಶುಭರಾತ್ರಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸುವ, ಬಸ್ಸು-ವಿಮಾನ ಇತ್ಯಾದಿಗಳ ಪ್ರಯಾಣ ವಿವರ ತಿಳಿಯುವ, ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳುವಂತಹ ಕೆಲಸಗಳಿಗೆಲ್ಲ ಇದನ್ನು ಬಳಸಬಹುದು.ಇಂತಹ ಪ್ರತಿಯೊಂದು ವಿಧದ ಸಂವಹನದಲ್ಲೂ ಹಲವು ಸಾಧ್ಯತೆಗಳಿರುತ್ತವೆ. ನಮ್ಮ ಮೊಬೈಲಿನ ಪ್ರೀಪೇಯ್ಡ್ ಖಾತೆಯಲ್ಲಿ ದುಡ್ಡೆಷ್ಟಿದೆ ಎನ್ನುವುದನ್ನು, ಪೋಸ್ಟ್‌ಪೇಯ್ಡ್ ಖಾತೆಯ ಇಂದಿನ ಬಾಕಿ ಎಷ್ಟು ಎಂದು ತಿಳಿಯುವುದೂ ಸಾಧ್ಯವಿದೆ. ಈ ವ್ಯವಸ್ಥೆ ಎಸ್ಸೆಮ್ಮೆಸ್ಸಿಗಿಂತ ಸ್ವಲ್ಪ ಭಿನ್ನವಾಗಿರುವುದನ್ನು ನಾವು ನೋಡಬಹುದು.

ಎಸ್ಸೆಮ್ಮೆಸ್ ಗಿಂತ ಭಿನ್ನ

[ಬದಲಾಯಿಸಿ]

ಸ್ಪರ್ಧೆಯಲ್ಲಿ ಭಾಗವಹಿಸುವ ಸಮಯದಲ್ಲಿ, ವಾಯುಯಾನದ ಸಮಯ ತಿಳಿದುಕೊಳ್ಳಲು, ನಾವು ಸಂಖ್ಯೆಯೊಂದಕ್ಕೆ ಎಸ್ಸೆಮ್ಮೆಸ್ ಕಳುಹಿಸುತ್ತೇವೆ; ಆದರೆ ಮೊಬೈಲ್ ಖಾತೆಯಲ್ಲಿ ದುಡ್ಡೆಷ್ಟಿದೆ ಎಂದು ತಿಳಿಯಲು ನಾವು ಬಳಸುವ ಸಂಖ್ಯೆಯಲ್ಲಿ *, # ಮುಂತಾದ ಚಿಹ್ನೆಗಳೆಲ್ಲ ಇರುತ್ತವೆ ಎನ್ನುವುದು ನಮ್ಮ ಗಮನಕ್ಕೆ ಬರುವ ಮೊದಲ ವ್ಯತ್ಯಾಸ.ಇಲ್ಲಿ ನಾವು ಪಡೆಯುವ ಇಲ್ಲವೇ ಕಳುಹಿಸುವ ಮಾಹಿತಿಯನ್ನು ಎಸ್ಸೆಮ್ಮೆಸ್ಸಿನ ಹಾಗೆ ಮತ್ತೆ ನೋಡಲು ಸಾಧ್ಯವಾಗುವುದಿಲ್ಲ ಎನ್ನುವ ವಿಷಯವನ್ನು ಮರೆಯಬಾರದು.ಹೀಗೆ ಉಪಯೋಗಿಸಲ್ಪಡುವ ಹೆಸರನ್ನು 'ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ', ಅಥವಾ ಯುಎಸ್‌ಎಸ್‌ಡಿ. ಎಂದು ಕರೆಯಲಾಗುತ್ತದೆ. ಜಿಎಸ್‌ಎಂ ಮೊಬೈಲ್ ಸೇವೆ ಒದಗಿಸುವ ಸಂಸ್ಥೆ, ಹಾಗೂ ಗ್ರಾಹಕರ ನಡುವೆ ಮಾಹಿತಿ ಸಂವಹನಕ್ಕೆಂದು ಬಳಕೆಯಾಗುವ ಶಿಷ್ಟಾಚಾರಕ್ಕೆ (ಪ್ರೋಟೋಕಾಲ್, ಅಂತರಜಾಲದಲ್ಲಿ ಎಚ್‌ಟಿಟಿಪಿ ಇದ್ದಂತೆ) ಇದೊಂದು ಉತ್ತಮ ಉದಾಹರಣೆಯಾಗಿದೆ.

ಯುಎಸ್‌ಎಸ್‌ಡಿ

[ಬದಲಾಯಿಸಿ]
  • ಯುಎಸ್‌ಎಸ್‌ಡಿ ಅತ್ಯಂತ ಸರಳ ತಂತ್ರಜ್ಞಾನ. ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯೊಂದು ತನ್ನ ಗ್ರಾಹಕರಿಗೆ ಅಗತ್ಯ ಮಾಹಿತಿ ಒದಗಿಸಲು ಯುಎಸ್‌ಎಸ್‌ಡಿ ಆಧಾರಿತ ಸೇವೆಯನ್ನು ನಿರ್ದಿಷ್ಟ ಕ್ರಮದಲ್ಲಿ ಚಿಹ್ನೆ ಹಾಗೂ ಅಂಕಿಗಳನ್ನು ಒತ್ತುವ ಮೂಲಕ (ಉದಾ: *೧೨೧#) ನಾವು ಆ ಸೇವೆಯನ್ನು ಪಡೆದುಕೊಳ್ಳಬಹುದು. ಒಂದುಬಾರಿ ಈ ಸೇವೆಯನ್ನು ಬಳಸಿದಮೇಲು ಲಭ್ಯ. ನಿರ್ದಿಷ್ಟ ಅಂಕಿಗಳನ್ನು ಒತ್ತುವ ಮೂಲಕ ಪರದೆಯ ಮೇಲೆ ಕಾಣುವ ಆಯ್ಕೆಗಳನ್ನು (ಉದಾ: ಬಿಲ್ ಆಗದಿರುವ ಮೊತ್ತ, ಹಿಂದಿನ ಬಿಲ್ ವಿವರ, ಸೇವೆಗಳ ನಿಲುಗಡೆ/ಸೇರ್ಪಡೆ ಇತ್ಯಾದಿ) ಬಳಸಬಹುದು. ನಾವೇ ನಿರ್ಗಮನದ ಗುಂಡಿ ಒತ್ತುವವರೆಗೆ ಯುಎಸ್‌ಎಸ್‌ಡಿ ಸಂಪರ್ಕ ತೆರೆಯಮೇಲೆ ಇರುತ್ತದೆ.ಪ್ರತಿಕ್ರಿಯೆಗಾಗಿ ಎಸ್ಸೆಮ್ಮೆಸ್ಸಿನ ತರಹ ಕಾಯಬೇಕಾದ ಅಗತ್ಯವಿಲ್ಲ.
  • ಯುಎಸ್‌ಎಸ್‌ಡಿ ಸೇವೆಗಳಲ್ಲಿ ಬಹುಸಂಖ್ಯೆಯ ಆಯ್ಕೆಗಳಿರುವ ಅಗತ್ಯವಿಲ್ಲ. ಪ್ರೀಪೇಯ್ಡ್ ಖಾತೆಯಲ್ಲಿರುವ ಹಣ ಎಷ್ಟೆಂದು ತಿಳಿಯಲು *೧೨೩# ನಂತಹ ಆಯ್ಕೆಗಳನ್ನು ಬಳಸುತ್ತೇವೆ. ಬ್ಯಾಲೆನ್ಸ್ ತಿಳಿಸುವುದೊಂದೇ ಅದರ ಮುಖ್ಯ ಗುರಿಯಾದ್ದರಿಂದ ಅಲ್ಲಿ ಹೆಚ್ಚಿನ ಆಯ್ಕೆಗಳಿಲ್ಲ.
  • ಪ್ರೀಪೇಯ್ಡ್ ಸಂಖ್ಯೆ ಬಳಸಿ ದೂರವಾಣಿ ಕರೆ ಮಾಡಿದ ನಂತರ ಇಷ್ಟು ಹಣ ಖರ್ಚಾಯಿತು ಎಂದು ಬರುವ ಸಂದೇಶದ ಮಾಹಿತಿ ನೀಡುವ ವ್ಯವಸ್ಥೆಯೂ ಇಂತಹ ಸೇವೆಯನ್ನೇ ಬಳಸುತ್ತದೆ.

ಯುಎಸ್‌ಎಸ್‌ಡಿ ಉಪಯೋಗಗಳು

[ಬದಲಾಯಿಸಿ]

ಮೊಬೈಲ್ ಸೇವೆಯಲ್ಲದೆ 'ಸ್ಮಾರ್ಟ್‌ಫೋನ್ ಬಳಕೆದಾರರಲ್ಲದವರಿಗೆ' ವಿಶ್ವವ್ಯಾಪಿ ಜಾಲದಿಂದ ಅಗತ್ಯ ಮಾಹಿತಿ ತಲುಪಿಸಲು ಹಲವು ಮೊಬೈಲ್ ಸಂಸ್ಥೆಗಳು ಯುಎಸ್‌ಎಸ್‌ಡಿ ಬಳಸುತ್ತವೆ. ದತ್ತಾಂಶ ಸೇವೆಗಳಿಗೆ (ಡೇಟಾ) ಖರ್ಚುಮಾಡದೆ ವಿಕಿಪೀಡಿಯಾದಿಂದ ಮಾಹಿತಿ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವ 'ವಿಕಿಪೀಡಿಯಾ ಜೀರೋ' ಕಾರ್ಯಕ್ರಮದಲ್ಲೂ ಯುಎಸ್‌ಎಸ್‌ಡಿ ಬಳಕೆ ಸಾಧ್ಯತೆಗಳು ಅಪಾರ.

ಇಂದಿನ ಸ್ಮಾರ್ಟ್ ಫೊನ್ ಯುಗದಲ್ಲಿ

[ಬದಲಾಯಿಸಿ]

ಸ್ಮಾರ್ಟ್‌ಫೋನುಗಳು ಈಗ ಹೆಚ್ಚು ಬಳಕೆಯಲ್ಲಿವೆ. ಹಳೆಯ ತಂತ್ರಜ್ಞಾನದಂತೆ ಕಾಣುವ ಯುಎಸ್‌ಎಸ್‌ಡಿ- ಆಕರ್ಷಕ ಚಿತ್ರಗಳನ್ನು ಬಳಸುವ, ಸ್ಪರ್ಶಸಂವೇದಿ ಪರದೆ (ಟಚ್‌ಸ್ಕ್ರೀನ್) ಹಾಗೂ ಮೊಬೈಲ್ ಪ್ರಾಸೆಸರಿನ ಸಕಲ ಸಾಧ್ಯತೆಗಳನ್ನೂ ಬಳಸಿಕೊಳ್ಳುವ ಹಳೆಯ ಕಾಲದ ಪಠ್ಯಾಧಾರಿತ ವ್ಯವಸ್ಥೆಯಾಗಿದ್ದು ಉಪಯುಕ್ತವಾಗುವ ಬಗ್ಗೆ ಹಲವರಿಗೆ ಅಪನಂಬಿಕೆಯಿದೆ.

ಬ್ಯಾಂಕಿಂಗ್ ವಲಯದಲ್ಲಿ

[ಬದಲಾಯಿಸಿ]

ಬ್ಯಾಂಕಿಂಗ್‌ನಂತಹ ಅಗತ್ಯ ಸೇವೆಗಳನ್ನು ಕಟ್ಟಕಡೆಯ ಗ್ರಾಹಕನವರೆಗೂ ಬಹಳ ಸುಲಭವಾಗಿ ತಲುಪಿ, 'ಯುಎಸ್‌ಎಸ್‌ಡಿ' ನೆರವು []ಅತಿ ಮುಖ್ಯ . ಜಿಪಿಆರ್‌ಎಸ್/೩ಜಿ ಮುಂತಾದ ಪ್ರತ್ಯೇಕ ಅಂತರಜಾಲ ಸಂಪರ್ಕ ಬಳಸದ, ವಿಶೇಷ ತಂತ್ರಾಂಶ (ಆಪ್) ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದ ಯುಎಸ್‌ಎಸ್‌ಡಿ ವ್ಯವಸ್ಥೆಯನ್ನು ಹಲವಾರು.ಬ್ಯಾಂಕುಗಳು ಈಗಾಗಲೇ ಬಳಸುತ್ತಿವೆ. ಬ್ಯಾಂಕುಗಳಷ್ಟೇ ಅಲ್ಲ, ಇತರ ಸಂಸ್ಥೆಗಳು ನಿರ್ವಹಿಸುವ ಮೊಬೈಲ್ ಆಧರಿತ ಹಣ ವರ್ಗಾವಣೆ ವ್ಯವಸ್ಥೆಗಳಲ್ಲೂ (ಉದಾ: ಏರ್‌ಟೆಲ್ ಮನಿ, ಎಂ-ಪೆಸಾ ಇತ್ಯಾದಿ) ಯುಎಸ್‌ಎಸ್‌ಡಿಯದು ಮಹತ್ವದ ಪಾತ್ರ. ಆಫ್ರಿಕಾದ ಅನೇಕ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಈಗಾಗಲೇ ಯಶಸ್ವಿಯಾಗಿ ಬಳಸಿರುವ, ಬಳಸುತ್ತಿರುವ ಇಂತಹ ವ್ಯವಸ್ಥೆಗಳು ಇದೀಗ ನಮ್ಮ ದೇಶದಲ್ಲೂ ಪ್ರಚಲಿತಕ್ಕೆ ಬರುತ್ತಿವೆ. ಎಲ್ಲ ನಾಗರಿಕರಿಗೂ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಒದಗಿಸುವ ಮಹತ್ವಾಕಾಂಕ್ಷೆ ನನಸಾಗಿಸುವ ನಿಟ್ಟಿನಲ್ಲಿ 'ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯ' (ಎನ್‌ಪಿಸಿಐ) ರೂಪಿಸಿರುವ 'ನ್ಯಾಶನಲ್ ಯೂನಿಫೈಡ್ ಯುಎಸ್‌ಎಸ್‌ಡಿ ಪ್ಲಾಟ್‌ಫಾರ್ಮ್‌'ನಂತಹ (ಎನ್‌ಯುಯುಪಿ) ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ಉಲ್ಲೇಖಗಳು

[ಬದಲಾಯಿಸಿ]
  1. ಇ-ಜ್ಞಾನ,ಟಿ.ಜಿ.ಶ್ರೀನಿಧಿ,'ಯುಎಸ್‌ಎಸ್‌ಡಿ: ಗೊತ್ತಿದ್ದೂ ಅಪರಿಚಿತ ಈ ತಂತ್ರಜ್ಞಾನ'
  2. "infobip.com, 'USSD Interactive Services Available on any mobile phone". Archived from the original on 2014-12-21. Retrieved 2015-01-06.