ವಿಷಯಕ್ಕೆ ಹೋಗು

ಆಧಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಯುಐಡಿ ಇಂದ ಪುನರ್ನಿರ್ದೇಶಿತ)
ಆಧಾರ್
ದೇಶಭಾರತ
ಮಂತ್ರಾಲಯವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತ
ಮುಖ್ಯ ವ್ಯಕ್ತಿಗಳು
ಜಾರಿಯಗಿದ್ದು28 ಜನವರಿ 2009; 5771 ದಿನ ಗಳ ಹಿಂದೆ (2009-೦೧-28)[]
Funding೧೧,೩೬೬ ಕೋಟಿ (ಯುಎಸ್$೨.೫೨ ಶತಕೋಟಿ) (up to the month of August 2019)[]
ಸಧ್ಯದ ಸ್ಥಿತಿIncrease 1.31 billion holders as of October 2021[]
ಅಧೀಕೃತ ಜಾಲತಾಣuidai.gov.in

ಆಧಾರ್ ಎಂಬುದು ೧೨ ಅಂಕೆಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು ಭಾರತ ಸರ್ಕಾರದ ವತಿಯಿಂದ ಇತ್ತೀಚೆಗಷ್ಟೇ ಅಂತಿಮಗೊಳಿಸಲ್ಪಟ್ಟ ಒಂದು ಉಪಕ್ರಮವಾಗಿದ್ದು, ಭಾರತದ ಎಲ್ಲಾ ವಯಸ್ಕ ನಾಗರಿಕರು ಮತ್ತು ನಿವಾಸಿಗಳಿಗೆ ಸಂಬಂಧಿಸಿದಂತಿರುವ ಒಂದು ಕೇಂದ್ರೀಕೃತ ಗುರುತಿಸುವಿಕೆಯ ವ್ಯವಸ್ಥೆಯನ್ನು ಸೃಷ್ಟಿಸುವ ಮತ್ತು ನಿರ್ವಹಿಸುವ ಉದ್ದೇಶ ಇದರ ಹಿಂದಿದೆ; ಇದನ್ನು ಒಂದು ವೈವಿಧ್ಯಮಯವಾದ ಗುರುತಿಸುವಿಕೆಯ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ಇನ್ಫೋಸಿಸ್‌‌ನ ಹಿಂದಿನ ಸಹ-ಸಭಾಪತಿಯಾದ ನಂದನ್ ನಿಲೇಕಣಿಯವರನ್ನು ಭಾರತದ ವಿಶಿಷ್ಟ ಗುರುತಿಸುವಿಕೆಯ ಪ್ರಾಧಿಕಾರದ (ಯುನಿಕ್‌ ಐಡೆಂಟಿಫಿಕೇಶನ್‌ ಅಥಾರಿಟಿ ಆಫ್‌ ಇಂಡಿಯಾ) ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಅವರು ಓರ್ವ ಮಂತ್ರಿಯ ದರ್ಜೆಯನ್ನು ಹೊಂದಲಿದ್ದಾರೆ.[] ಇನ್ಫೋಸಿಸ್‌ ಟೆಕ್ನಾಲಜೀಸ್‌ನ ನಿರ್ದೇಶಕ ಮಂಡಳಿಯಿಂದ ಕೆಳಗಿಳಿಯಲು ಅವರು ನಿರ್ಧರಿಸಿದ್ದಾರೆ.[] ಈ ಪ್ರಾಧಿಕಾರವನ್ನು ಯೋಜನಾ ಆಯೋಗದ ಆಶ್ರಯ ಅಡಿಯಲ್ಲಿನ ಒಂದು ಸೇರಿಸಿದ ಕಚೇರಿಯನ್ನಾಗಿ ಘೋಷಿಸಲಾಗಿದೆ. ಹಿಂದಿ ಭಾಷೆಯಲ್ಲಿ ಬೆಂಬಲ ಎಂಬ ಅರ್ಥವನ್ನು ನೀಡುವ ಮತ್ತು 'ಆಧಾರ್‌' ಎಂಬುದಾಗಿ ಕರೆಯಲ್ಪಟ್ಟಿರುವ ಯೋಜನೆಗೆ ಸಂಬಂಧಿಸಿದಂತೆ ಒಂದು ಹೊಸ ಹೆಸರು ಮತ್ತು ಲಾಂಛನವನ್ನು ಅವರು ಪ್ರಕಟಿಸಿದ್ದಾರೆ.[]

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಥವಾ UIDAI, ಭಾರತೀಯ ನಿವಾಸಿಗಳಿಗೆಲ್ಲಾ ೧೨ ಅಂಕಗಳ ಸಂಖ್ಯೆಯುಳ್ಳ 'ಗುರುತಿನ-ಪತ್ರ' ನೀಡುವ ಮಹದಾಂಕ್ಷೆಯ ಯೋಜನೆ ’ಆಧಾರ್, ಏಪ್ರಿಲ್ ೨೬, ೨೦೧೦ ರಂದು, ಪುನರ್ನಿರ್ಮಾಣವಾಗಿದೆ. ಯೋಜನೆಯ ಅನುಷ್ಠಾನಕ್ಕೆ ಅನುಕೂಲವಾಗುವಂತೆ ೨೦೧೧ ನೇ ಇಸವಿಯ ಜನಗಣತಿಯ ವೇಳೆಯಲ್ಲಿ 'ಪ್ರತಿಯೊಬ್ಬ ಭಾರತೀಯನ ಎಲ್ಲಾ ಹತ್ತು ಬೆರಳುಗಳ ಬೆರಳಚ್ಚುಗಳನ್ನು ಪಡೆಯಲಾಗುತ್ತದೆ', ಹಾಗೂ 'ಕಣ್ಣಿನ ಸ್ಕ್ಯಾನಿಂಗ್' ಮಾಡಲಾಗುತ್ತದೆ. 'ಪ್ರತಿಯೊಬ್ಬರನ್ನೂ ಹದಿನಾರು ಅಂಕೆಗಳ ಒಂದು ಸಂಖ್ಯೆ ಮೂಲಕ ಗುರುತಿಸಲಾಗುವಂತೆ ವ್ಯವಸ್ಥೆ ಮಾಡಲಾಗಿದೆ'. ಮುಂದಿನ ನಾಲ್ಕೈದು ವರ್ಷಗಳಲ್ಲಿ ಕನಿಷ್ಟಪಕ್ಷ ಭಾರತದ ೬೦ ಕೋಟಿ ಜನತೆ, ಮೇಲೆತಿಳಿಸಿರುವ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಧಾಖಲಿಸಿರುವ ಗುರುತು ಚೀಟಿಯನ್ನು ಪಡೆಯಲಿದ್ದಾರೆ. ಎಲ್ಲಾ ಪ್ರಮುಖ ದಾಖಲಾತಿಗಳಲ್ಲೂ ಅದು ಮುಖ್ಯಸ್ಥಾನ ಪಡೆದುಕೊಳ್ಳಲಿದೆ.

ವಿಶಿಷ್ಟ ಗುರುತಿನ ಪ್ರಾಧಿಕಾರ

[ಬದಲಾಯಿಸಿ]

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಒಂದು ಶಾಸನಬದ್ಧ ಪ್ರಾಧಿಕಾರ ಮತ್ತು ಸರ್ಕಾರಿ ಇಲಾಖೆಯಾಗಿದ್ದು, ಆಧಾರ್ ಕಾಯಿದೆ 2016 ರ ನಿಬಂಧನೆಗಳನ್ನು ಅನುಸರಿಸಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಯ ಅಡಿಯಲ್ಲಿ ಭಾರತ ಸರ್ಕಾರವು 12 ಜುಲೈ 2016 ರಂದು ಸ್ಥಾಪಿಸಲಾಗಿದೆ.[]

ಸ್ವರೂಪ

[ಬದಲಾಯಿಸಿ]

ಭಾರತದ ಒಂದು ಶತಕೋಟಿಗೂ ಮಿಕ್ಕಿದ ನಾಗರಿಕರ ಹಾಗೂ ಭವಿಷ್ಯದಲ್ಲಿ ಜನನವಾಗಲಿರುವ ಮಕ್ಕಳ ಗಣನೆಯನ್ನು ಸರಿಹೊಂದಿಸುವ ದೃಷ್ಟಿಯಿಂದ, ಸದರಿ ಗುರುತಿನ ವ್ಯವಸ್ಥೆಯು ಒಂದು ಬೃಹತ್‌‌ ಅಕ್ಷರಸಂಖ್ಯಾಯುಕ್ತ ಸರಣಿಯಾಗಿ ಮಾರ್ಪಡುವ ಸಾಧ್ಯತೆಯಿದೆ. 16 ಕೆಬಿ ಅಥವಾ 64 ಕೆಬಿ ಸಾಮರ್ಥ್ಯದ ಒಂದು ಸಂಗ್ರಹಣಾ ಬಿಲ್ಲೆಯನ್ನು ಈ ಕಾರ್ಡಿನಲ್ಲಿ ಅಳವಡಿಸುವ ಸಾಧ್ಯತೆಯಿದೆ. ಒಂದು ಛಾಯಾಚಿತ್ರ ಮತ್ತು ಜೀವಸಂಖ್ಯಾಶಾಸ್ತ್ರದ ದತ್ತಾಂಶವನ್ನು ಸೇರ್ಪಡೆ ಮಾಡುವ ಪ್ರಕ್ರಿಯೆಯನ್ನು ಹಂತಹಂತವಾಗಿ ಯೋಜಿಸಲಾಗುವುದು.[]

ಉದ್ದೇಶ ಮತ್ತು ಬಳಕೆ

[ಬದಲಾಯಿಸಿ]

ಭಾರತೀಯ ನಾಗರಿಕರನ್ನು ಗುರುತಿಸುವುದಕ್ಕಾಗಿ ಸದರಿ IDಯನ್ನು ಮೂಲಭೂತವಾಗಿ ಸಿದ್ಧಗೊಳಿಸಲಾಗುತ್ತಿದ್ದು, ಇದರಿಂದ ಅಕ್ರಮ ವಲಸೆಗಾರರು ಮತ್ತು ಭಯೋತ್ಪಾದಕರನ್ನು ಗುರುತಿಸಲು ಸಾಧ್ಯವಾಗುತ್ತದೆಯಾದ್ದರಿಂದ ದೇಶಕ್ಕೆ ಹಾಗೂ ಭಾರತೀಯ ನಾಗರಿಕರಿಗೆ ಉತ್ತಮ ಭದ್ರತೆಯನ್ನು ಒದಗಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಭಾರತೀಯ ನಾಗರಿಕರಿಗೆ ಗುರುತಿನ ಪ್ರತಿಷ್ಠಾಪನೆಯ ಸುಗಮತೆಯನ್ನು ಒದಗಿಸುವಲ್ಲಿನ ಅದರ ಸಾಮರ್ಥ್ಯದಲ್ಲಿ ಈ IDಯ ನಿಜವಾದ ಶಕ್ತಿಯು ಅಡಗಿದೆ; ವೈವಿಧ್ಯಮಯವಾದ ಸರ್ಕಾರಿ ಮತ್ತು ಖಾಸಗಿ-ವಲಯ ಸೇವೆಗಳಿಗೆ ಭಾರತೀಯ ನಾಗರಿಕರು ಸಂಪರ್ಕ ಹೊಂದಲು ಇದು ಅವಕಾಶ ಕಲ್ಪಿಸುತ್ತದೆ.

ಹೊಸ ID ವ್ಯವಸ್ಥೆಯಿಂದ ನಾಗರಿಕರಿಗೆ ದೊರಕುವ ಸಂಭವನೀಯ ಪ್ರಯೋಜನಗಳಲ್ಲಿ ಈ ಕೆಳಗಿನವು ಸೇರಿವೆ: 1) ಅರ್ಹತೆ ಹೊಂದಿರುವ ಜನರು ಆಹಾರ, ಶಕ್ತಿ, ಶಿಕ್ಷಣ, ಇತ್ಯಾದಿ ಸವಲತ್ತುಗಳನ್ನು ಸ್ವೀಕರಿಸುವಂತಾಗಲು ಈ ವಲಯಗಳ ಮೇಲೆ ನೀಡುವ ಅನುದಾನಗಳು. 2) ಬ್ಯಾಂಕ್‌ ಖಾತೆಗಳ ತೆರೆಯುವಿಕೆ 3) ಹೊಸ ದೂರವಾಣಿ, ಮೊಬೈಲ್‌ ಅಥವಾ ಅಂತರಜಾಲ ಸಂಪರ್ಕಗಳನ್ನು ಪಡೆಯುವಿಕೆ, 4) ಹೊಸ ದೀಪ ಅಥವಾ ಅನಿಲ ಸಂಪರ್ಕಗಳು 5) ರಹದಾರಿಯೊಂದನ್ನು (ಪಾಸ್‌ಪೋರ್ಟ್‌) ಪಡೆಯುವಿಕೆ 6) ಇದೇ ಕಾರ್ಡು ಒಂದು ಚಾಲನಾ ಪರವಾನಗಿಯಂತೆಯೂ ಕಾರ್ಯನಿರ್ವಹಿಸಬಹುದು ನೀವು ಮಾಡಿದ ಸಂಚಾರಿ ಉಲ್ಲಂಘನೆಯ ದಾಖಲೆಗಳನ್ನು ಶೇಖರಿಸಿಟ್ಟುಕೊಳ್ಳಬಹುದು 7) ಇದು ನಿಮ್ಮ ಮತದಾರರ ಕಾರ್ಡ್‌ ಆಗಿಯೂ ಪಾತ್ರವಹಿಸಬಹುದು 8) ಇದರಿಂದ ಕುಟುಂಬ ವಂಶಾನ್ವೇಷಣೆಯ ಜಾಡುಹಿಡಿಯಬಹುದು

ವಿಶಿಷ್ಟ ಗುರುತಿನ ಸಂಖ್ಯೆಗಳ ನೀಡುವಿಕೆಗೆ ಸಂಬಂಧಿಸಿದಂತೆ ಕೇಂದ್ರಸರ್ಕಾರದ ವತಿಯಿಂದ ಸ್ಥಾಪಿಸಲ್ಪಟ್ಟಿರುವ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದೊಂದಿಗಿನ (ಯುನಿಕ್‌ ಐಡೆಂಟಿಫಿಕೇಶನ್‌ ಅಥಾರಿಟಿ ಆಫ್‌ ಇಂಡಿಯಾ-UIDAI) ಒಂದು MoUಗೆ (ಒಡಂಬಡಿಕೆಯ ಜ್ಞಾಪಕಪತ್ರಕ್ಕೆ) ವಿಜಯಾ ಬ್ಯಾಂಕ್‌ ಸಹಿಹಾಕಿದೆ. ಒಡಂಬಡಿಕೆಯ ಜ್ಞಾಪಕ ಪತ್ರಕ್ಕೆ (MoU) ನಿನ್ನೆ ಸಹಿಹಾಕುವುದರೊಂದಿಗೆ UIDAIನ ಪ್ರಯತ್ನಗಳಲ್ಲಿ ವಿಜಯಾ ಬ್ಯಾಂಕ್‌ ಓರ್ವ ಪಾಲುದಾರ ಎನಿಸಿಕೊಂಡಿದೆ ಎಂಬುದಾಗಿ ವಿಜಯಾ ಬ್ಯಾಂಕ್‌ ಸಭಾಪತಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆಲ್ಬರ್ಟ್‌ ಟೌರೋ ಹೇಳಿಕೆಯೊಂದರಲ್ಲಿ ಇಂದು ತಿಳಿಸಿದರು. ಒಂದು ನೋಂದಣಿ ಸಂಸ್ಥೆಯಾಗಿ ಬ್ಯಾಂಕ್‌ UID ಯೋಜನೆಯಲ್ಲಿ ನಿವಾಸಿಗಳನ್ನು ದಾಖಲಿಸಿಕೊಳ್ಳಬಹುದಾಗಿದೆ ಮತ್ತು ಯೋಜನೆಯ ಹಲವಾರು ಹಂತಗಳ ಸಂದರ್ಭದಲ್ಲಿ ಪ್ರಾಧಿಕಾರಕ್ಕೆ ನೆರವಾಗಬಹುದಾಗಿದೆ ಎಂಬುದಾಗಿಯೂ ಈ ಸಂದರ್ಭದಲ್ಲಿ ಟೌರೋ ತಿಳಿಸಿದರು. ಗುರುತಿಸಲ್ಪಟ್ಟ ಸ್ಥಳಗಳು ಮತ್ತು ಜಿಲ್ಲೆಗಳಲ್ಲಿ UID ಯೋಜನೆಯ ಅನುಷ್ಠಾನವಾಗುವದರ ಕುರಿತು ಮೇಲ್ವಿಚಾರಣೆ ನಡೆಸಲು ಪ್ರಧಾನ ತಂಡವೊಂದನ್ನು ಬ್ಯಾಂಕ್‌ ಸ್ಥಾಪಿಸಲಿದೆ. ಇದಕ್ಕಾಗಿ ವಿಜಯಾ ಬ್ಯಾಂಕ್‌ನ ಇತರ ಘಟಕಗಳು, ಖಾತೆ ಹೊಂದಿರುವವರು, ತಂತ್ರಜ್ಞಾನ ಒದಗಿಸುವವರು, BC ಸೇವೆ ಒದಗಿಸುವವರು ಮತ್ತು ಇತರ ಸಹಯೋಗಿಗಳು ತಮ್ಮ ಸಹಕಾರ ಹಸ್ತವನ್ನು ನೀಡಲಿದ್ದಾರೆ. ಹೊಸ ಗ್ರಾಹಕರಿಗೆ ಸಂಬಂಧಿಸಿದಂತಿರುವ UID ದಾಖಲಾತಿಯೊಂದಿಗೆ ತನ್ನ ಹಣಕಾಸಿನ ಒಳಗೂಡಿಸುವಿಕೆ ಯೋಜನೆಯನ್ನು ಅಚ್ಚುಕಟ್ಟಾಗಿ ಜೋಡಿಸಲು ವಿಜಯಾ ಬ್ಯಾಂಕ್‌ ಯೋಜಿಸಿದೆ. ತನ್ನ ಚಾಲ್ತಿಯಲ್ಲಿರುವ ಗ್ರಾಹಕರಿಗೆ ಸಂಬಂಧಿಸಿದಂತಿರುವ ಆಧಾರ್‌ ಸಂಖ್ಯೆಗಳ ನೀಡಿಕೆಯನ್ನೂ ಸಹ ಇದು ಸರಾಗಗೊಳಿಸಲಿದ್ದು, ಕಿರು ATMಗಳಂಥ ಹಲವಾರು ವಿತರಣಾ ವಾಹಿನಿಗಳೆಲ್ಲೆಡೆ 'ಆಧಾರ್‌' ಆಧರಿತ ಸೇವೆಗಳನ್ನು ಒದಗಿಸುವಲ್ಲಿ ಇದು ಬ್ಯಾಂಕ್‌ಗೆ ನೆರವಾಗಲಿದೆ.

ವಿಶಿಷ್ಟ ಗುರುತಿನ ಸಂಖ್ಯೆಗಳ ನೀಡುವಿಕೆಗೆ ಸಂಬಂಧಿಸಿದಂತೆ ಕೇಂದ್ರಸರ್ಕಾರದ ವತಿಯಿಂದ ಸ್ಥಾಪಿಸಲ್ಪಟ್ಟಿರುವ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದೊಂದಿಗಿನ (ಯುನಿಕ್‌ ಐಡೆಂಟಿಫಿಕೇಶನ್‌ ಅಥಾರಿಟಿ ಆಫ್‌ ಇಂಡಿಯಾ-UIDAI) ಒಂದು MoUಗೆ (ಒಡಂಬಡಿಕೆಯ ಜ್ಞಾಪಕಪತ್ರಕ್ಕೆ) ವಿಜಯಾ ಬ್ಯಾಂಕ್‌ ಸಹಿಹಾಕಿದೆ. ಒಡಂಬಡಿಕೆಯ ಜ್ಞಾಪಕ ಪತ್ರಕ್ಕೆ (MoU) ನಿನ್ನೆ ಸಹಿಹಾಕುವುದರೊಂದಿಗೆ UIDAIನ ಪ್ರಯತ್ನಗಳಲ್ಲಿ ವಿಜಯಾ ಬ್ಯಾಂಕ್‌ ಓರ್ವ ಪಾಲುದಾರ ಎನಿಸಿಕೊಂಡಿದೆ ಎಂಬುದಾಗಿ ವಿಜಯಾ ಬ್ಯಾಂಕ್‌ ಸಭಾಪತಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆಲ್ಬರ್ಟ್‌ ಟೌರೋ ಹೇಳಿಕೆಯೊಂದರಲ್ಲಿ ಇಂದು ತಿಳಿಸಿದರು. ಒಂದು ನೋಂದಣಿ ಸಂಸ್ಥೆಯಾಗಿ ಬ್ಯಾಂಕ್‌ UID ಯೋಜನೆಯಲ್ಲಿ ನಿವಾಸಿಗಳನ್ನು ದಾಖಲಿಸಿಕೊಳ್ಳಬಹುದಾಗಿದೆ ಮತ್ತು ಯೋಜನೆಯ ಹಲವಾರು ಹಂತಗಳ ಸಂದರ್ಭದಲ್ಲಿ ಪ್ರಾಧಿಕಾರಕ್ಕೆ ನೆರವಾಗಬಹುದಾಗಿದೆ ಎಂಬುದಾಗಿಯೂ ಈ ಸಂದರ್ಭದಲ್ಲಿ ಟೌರೋ ತಿಳಿಸಿದರು. ಗುರುತಿಸಲ್ಪಟ್ಟ ಸ್ಥಳಗಳು ಮತ್ತು ಜಿಲ್ಲೆಗಳಲ್ಲಿ UID ಯೋಜನೆಯ ಅನುಷ್ಠಾನವಾಗುವದರ ಕುರಿತು ಮೇಲ್ವಿಚಾರಣೆ ನಡೆಸಲು ಪ್ರಧಾನ ತಂಡವೊಂದನ್ನು ಬ್ಯಾಂಕ್‌ ಸ್ಥಾಪಿಸಲಿದೆ. ಇದಕ್ಕಾಗಿ ವಿಜಯಾ ಬ್ಯಾಂಕ್‌ನ ಇತರ ಘಟಕಗಳು, ಖಾತೆ ಹೊಂದಿರುವವರು, ತಂತ್ರಜ್ಞಾನ ಒದಗಿಸುವವರು, BC ಸೇವೆ ಒದಗಿಸುವವರು ಮತ್ತು ಇತರ ಸಹಯೋಗಿಗಳು ತಮ್ಮ ಸಹಕಾರ ಹಸ್ತವನ್ನು ನೀಡಲಿದ್ದಾರೆ. ಹೊಸ ಗ್ರಾಹಕರಿಗೆ ಸಂಬಂಧಿಸಿದಂತಿರುವ UID ದಾಖಲಾತಿಯೊಂದಿಗೆ ತನ್ನ ಹಣಕಾಸಿನ ಒಳಗೂಡಿಸುವಿಕೆ ಯೋಜನೆಯನ್ನು ಅಚ್ಚುಕಟ್ಟಾಗಿ ಜೋಡಿಸಲು ವಿಜಯಾ ಬ್ಯಾಂಕ್‌ ಯೋಜಿಸಿದೆ. ತನ್ನ ಚಾಲ್ತಿಯಲ್ಲಿರುವ ಗ್ರಾಹಕರಿಗೆ ಸಂಬಂಧಿಸಿದಂತಿರುವ ಆಧಾರ್‌ ಸಂಖ್ಯೆಗಳ ನೀಡಿಕೆಯನ್ನೂ ಸಹ ಇದು ಸರಾಗಗೊಳಿಸಲಿದ್ದು, ಕಿರು ATMಗಳಂಥ ಹಲವಾರು ವಿತರಣಾ ವಾಹಿನಿಗಳೆಲ್ಲೆಡೆ 'ಆಧಾರ್‌' ಆಧರಿತ ಸೇವೆಗಳನ್ನು ಒದಗಿಸುವಲ್ಲಿ ಇದು ಬ್ಯಾಂಕ್‌ಗೆ ನೆರವಾಗಲಿದೆ.

ಅನುಷ್ಠಾನ

[ಬದಲಾಯಿಸಿ]

ಮೊದಲ ಹಂತದಲ್ಲಿ, ಆಂಧ್ರಪ್ರದೇಶ, ಗುಜರಾತ್‌‌, ಪಶ್ಚಿಮ ಬಂಗಾಳ, ಕೇರಳ, ಗೋವಾ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳ ತೀರಪ್ರದೇಶದ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರಿಗೆ UIDಯನ್ನು ನೀಡಲಾಗುತ್ತದೆ. ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಅಂಡಮಾನ್‌ & ನಿಕೋಬಾರ್‌ ದ್ವೀಪಗಳು, ದಾದರ್‌ ಮತ್ತು ನಗರ್‌ ಹವೇಲಿ ಮಾತ್ರವೇ ಅಲ್ಲದೇ ಲಕ್ಷದ್ವೀಪವನ್ನೂ ಸಹ ಮೊದಲ ಹಂತದ ಯೋಜನೆಯಲ್ಲಿ ಪರಿಗಣಿಸಲಾಗುವುದು. 2010ರ ಆರಂಭದ ವೇಳೆಗೆ ಮೊದಲ ಗುಂಪಿನ ಕಾರ್ಡುಗಳು ವಿತರಿಸಲ್ಪಡುತ್ತವೆ ಎಂದು ನಿರೀಕ್ಷಿಸಲಾಗಿದೆ.[]

2011ರ ಫೆಬ್ರುವರಿ ವೇಳೆಗೆ ಆಧಾರ್‌ (UID) ಸಂಖ್ಯೆಯು ಅನುಷ್ಠಾನಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಭವಿಷ್ಯದಲ್ಲಿ PAN ಕಾರ್ಡುಗಳ ನೀಡುವಿಕೆಗೆ ಸಂಬಂಧಿಸಿದಂತೆ UIDಯ ಬಳಕೆಯನ್ನು ಕಡ್ಡಾಯಗೊಳಿಸುವುದರ ಕುರಿತಾಗಿಯೂ ಹಣಕಾಸು ಖಾತೆ ಅಧಿಕಾರಿಗಳು ಭರವಸೆಯನ್ನು ಹೊಂದಿದ್ದು, ಇದು ನಕಲಿ PAN ಕಾರ್ಡುಗಳ ಹಬ್ಬುವಿಕೆಯನ್ನು ನಿಗ್ರಹಿಸುವಲ್ಲಿ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

ಯೋಜನೆಯ ಆರಂಭ

[ಬದಲಾಯಿಸಿ]

UPA ಅಧ್ಯಕ್ಷೆ ಸೋನಿಯಾ ಗಾಂಧಿ, ಭಾರತದ ಪ್ರಧಾನ ಮಂತ್ರಿ ಮನ್‌ಮೋಹನ್‌ ಸಿಂಗ್‌, ಅಶೋಕ್ ಚವ್ಹಾಣ್, K. ಶಂಕರ್‌ನಾರಾಯಣನ್‌ ಮತ್ತು UIDAI ಮುಖ್ಯಸ್ಥ ನಂದನ್‌ ನಿಲೇಕಣಿ ಇವರುಗಳಿಂದ ಆಧಾರ್‌ ಯೋಜನೆಯು ಇತ್ತೀಚೆಗಷ್ಟೇ ಆರಂಭಿಸಲ್ಪಟ್ಟಿತು; ಮಹಾರಾಷ್ಟ್ರದ ತೆಂಬ್ಲಿ ಎಂಬ ಹಳ್ಳಿಯಲ್ಲಿ 10 ಆದಿವಾಸಿಗಳಿಗೆ ಈ ವಿಶಿಷ್ಟ IDಯನ್ನು ಒದಗಿಸುವ ಮೂಲಕ ಇದಕ್ಕೆ ಚಾಲನೆ ದೊರೆಯಿತು ಎಂಬುದು ಗಮನಾರ್ಹ ಅಂಶ.

ಭಾರತದಲ್ಲಿನ ಸದರಿ ವಿಶಿಷ್ಟ ID ಯೋಜನೆಗಳ ಪ್ರಯೋಜನಗಳು ಮತ್ತು ಸಕಾರಾತ್ಮಕ ಫಲಿತಾಂಶಗಳ ಕುರಿತಾಗಿ UPA ಅಧ್ಯಕ್ಷೆ ಮತ್ತು ಭಾರತದ ಪ್ರಧಾನ ಮಂತ್ರಿಯವರು ಈ ಸಂದರ್ಭದಲ್ಲಿ ಮಾತನಾಡಿದರು.

ನಾಲ್ಕು-ವರ್ಷ-ವಯಸ್ಸಿನ ಹಿತೇಶ್ ಸೋನವಾನೆ ಎಂಬಾತ ಪ್ರಧಾನ ಮಂತ್ರಿಯವರಿಂದ UID ಕಾರ್ಡನ್ನು ಸ್ವೀಕರಿಸಿದ ಅತಿಕಿರಿಯ ಸದಸ್ಯ ಎನಿಸಿಕೊಂಡರೆ, ರಂಜನಾ ಸೋನವಾನೆ ಎಂಬುವವರು ಆಧಾರ್‌ ಯೋಜನೆಯ ಮೂಲಕ UID / ವಿಶಿಷ್ಟ ID ಕಾರ್ಡನ್ನು ಪಡೆಯುವಲ್ಲಿನ ಮೊದಲ ಭಾರತೀಯಳು ಎನಿಸಿಕೊಂಡರು.

ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಕಾಯಿದೆ- ೨೦೧೦

[ಬದಲಾಯಿಸಿ]

ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಕಾಯಿದೆ- ೨೦೧೦ ಸಂಸದ್ ನಲ್ಲಿ ಸಿದ್ಧವಾಗುತ್ತಿದೆ.

  • ಸಂಖ್ಯೆಯ ದುರ್ಬಳಕೆ ತಡೆಗೆ ತೆಗೆದುಕೊಂಡ ವಿಶೇಷ ಕ್ರಮದ ನಿಟ್ಟಿನಲ್ಲಿ, ಒಂದು ಕರಡು ಮಸೂದೆ ಸಿದ್ಧವಾಗುತ್ತಿದೆ. ಪ್ರತಿಕ್ರಿಯೆಗಾಗಿ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟಿಸಲಾಗಿದೆ. ಜತೆಗೆ ಪ್ರಾಧಿಕಾರವನ್ನು ಸಂವಿಧಾನಿಕ ಸಂಸ್ಥೆಯನ್ನಾಗಿ ಮಾನ್ಯ ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ ವಿಶಿಷ್ಟ ಗುರುತಿನ ಸಂಖ್ಯೆಯ ದುರುಪಯೋಗ, ಸಾರ್ವಜನಿಕರ ವೈಯಕ್ತಿಕ ವಿವರಗಳನ್ನು ಬಹಿರಂಗ ಪಡಿಸದೇ ಇರುವ ಸಲುವಾಗಿ ಮಸೂದೆ ಮಾಹಿತಿ ಭದ್ರತೆ ಮತ್ತು ರಹಸ್ಯವನ್ನು ಕಾಯ್ದುಕೊಳ್ಳಲಾಗುವುದು
  • ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ನೀಡುವ ವಿಶಿಷ್ಟ ಗುರುತಿನ ಸಂಖ್ಯೆಯನ್ನು ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕ್ಕೆ ಒಳಪಡಿಸಲು ಸಿದ್ಧತೆ ನಡೆಸಿದೆ. ದುರುಪಯೋಗ ಸಾಬೀತಾದರೆ ಒಂದು ಕೋಟಿ ರೂಪಾಯಿ ವರೆಗೆ ದಂಡ ವಿಧಿಸಲು ಅವಕಾಶ ಇದೆ. ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
  • ವಿಶಿಷ್ಟ ಗುರುತಿನ ಸಂಖ್ಯೆಯ ದುರುಪಯೋಗ, ಸಾರ್ವಜನಿಕರ ವೈಯಕ್ತಿಕ ವಿವರಗಳನ್ನು ಬಹಿರಂಗ ಪಡಿಸದೇ ಇರುವ ಸಲುವಾಗಿ ಮಸೂದೆ ಮಾಹಿತಿ ಭದ್ರತೆ ಮತ್ತು ರಹಸ್ಯವನ್ನು ಕಾಯ್ದುಕೊಳ್ಳಲಾಗುವುದು
  • ಪ್ರಾಧಿಕಾರದಲ್ಲಿದ್ದುಕೊಂಡು ಅಲ್ಲಿರುವ ಮಾಹಿತಿಯನ್ನು ಬಹಿರಂಗಗೊಳಿಸಿದರೆ, ವೈಯಕ್ತಿಕ ವಿವರಗಳನ್ನು ಬಹಿರಂಗ ಪಡಿಸಿದರೆ, ಅಕ್ರಮವಾಗಿ ಕಾರ್ಯ ನಿರ್ವಸಿದರೆ ಅಂತಹ ಅಪರಾಧಗಳಿಗೆ ಕಠಿಣ ಕ್ರಮ, ದಂಡ ವಿಧಿಸಲು ಉದ್ದೇಶಿತ ಕರಡು ಮಸೂದೆಯಲ್ಲಿ ಅವಕಾಶ ಇದೆ.
  • ಒಂದೊಮ್ಮೆ ಪ್ರಾಧಿಕಾರದ ಕೆಲಸ ವಹಿಸಿಕೊಂಡ ಕಂಪನಿಯೇ ಈ ಕೃತ್ಯ ಎಸಗಿದರೆ ಒಂದು ಲಕ್ಷದ ವರೆಗೆ ದಂಡ ವಿಧಿಸಲು ಅವಕಾಶ ಇದೆ. ಮಾಹಿತಿ ಬ್ಯಾಂಕ್‌ಗೆ ಅಕ್ರಮ ಪ್ರವೇಶ ಮಾಡಲು ಯತ್ನಿಸಿದರೆ ಅಂತಹವರಿಗೆ ಮೂರು ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ಒಂದು ಕೋಟಿ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶ ಇದೆ.
  • ಆದರೆ ನಿಗದಿತ ನ್ಯಾಯಾಲಯಗಳು ಇಂತಹ ಮಾಹಿತಿ ಕೇಳಿದರೆ ಅದನ್ನು ನೀಡಬಹುದಾಗಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಮಾತ್ರ ವೈಯಕ್ತಿಕ ವಿಷಯಗಳ ಮಾಹಿತಿಯನ್ನು ನೀಡಲಾಗುವುದು. ಅದೂ ಸಂಬಂಧಿಸಿದ ಇಲಾಖೆಯ ಸಚಿವಾಲಯದಿಂದ ಅನುಮತಿ ಪಡೆದರೆ ಮಾತ್ರವೇ ಮಾಹಿತಿ ನೀಡಲಾಗುವುದು.
  • ಕರಡು ಮಸೂದೆ ಬಗ್ಗೆ ಸಾರ್ವಜನಿಕರಿಂದ ಬರುವ ಅಭಿಪ್ರಾಯಗಳನ್ನು ಆಧರಿಸಿ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.ವಿಶಿಷ್ಟ ಗುರುತಿನ ಸಂಖ್ಯೆಯನ್ನು ಮೊದಲಿಗೆ ೨೦೧೦ ರ ಆಗಸ್ಟ್ ಮತ್ತು ೨೦೧೧ ರ ಫೆಬ್ರುವರಿ ನಡುವೆ ಸಾರ್ವಜನಿಕರಿಗೆ ನೀಡಲಾಗುವುದು. ಮುಂದಿನ ನಾಲ್ಕು ವರ್ಷಗಳಲ್ಲಿ ಆರು ಕೋಟಿ ಜನರಿಗೆ ಈ ಸಂಖ್ಯೆಯನ್ನು ನೀಡುವ ಉದ್ದೇಶ ಪ್ರಾಧಿಕಾರಕ್ಕೆ ಇದೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ರಾಷ್ಟ್ರೀಯ ಗುರುತಿನ ಸಂಖ್ಯೆ
  • ಸಾಮಾಜಿಕ ಭದ್ರತೆ ಸಂಖ್ಯೆ
  • ಬಹು-ಉದ್ದೇಶದ ರಾಷ್ಟ್ರೀಯ ಗುರುತಿನ ಕಾರ್ಡ್
  • ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ

ವಿಶೇಷ ಮಾಹಿತಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ "About UIDAI". UIDAI. Archived from the original on 23 ಜುಲೈ 2017. Retrieved 25 July 2017.
  2. "UIDAI Finance and Budge Section". UIDAI. Archived from the original on 27 ಮೇ 2018. Retrieved 29 May 2018.
  3. "Aadhaar Dashboard". UIDAI. Retrieved 7 September 2021.
  4. 10.2
  5. ೫.೦ ೫.೧ [೧]
  6. [೨]
"https://kn.wikipedia.org/w/index.php?title=ಆಧಾರ್&oldid=1233926" ಇಂದ ಪಡೆಯಲ್ಪಟ್ಟಿದೆ